ಘಿಬ್ಲಿ Phibli

ಘಿಬ್ಲಿ ಸೈಬರ್ ವಂಚನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಈ ಲೇಖನದಲ್ಲಿ, ಈ ಘಿಬ್ಲಿ ರೀತಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವರ ಅರಿವಿಲ್ಲದೆ ಒಡ್ಡುವ ವಿವಿಧ ಸೈಬರ್ ಭದ್ರತೆ ಮತ್ತು ಗೌಪ್ಯತೆ ಅಪಾಯಗಳ ಬಗ್ಗೆ ನಾನು ತಿಳಿಸಿಕೊಡಲಿದ್ದೇನೆ.

ಘಿಬ್ಲಿ(Ghibli) ಕಲೆ ಅಥವಾ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್ ಆಗಿದ್ದು, ಅವು ನಮ್ಮ ಸ್ನೇಹಿತರ ಮತ್ತು ಬಂದುಗಳ ಹೆಚ್ಚಿನ ಭಾವಚಿತ್ರ ಫೋಟೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಪ್ರೊಫೈಲ್ ಪುಟಗಳಲ್ಲಿ ರರಾಜಿಸಿರುವುದನ್ನು ನೀವು ಗಮನಿಸಿರಬಹುದು. ಆದರೆ ಇದೇ ಸಮಯದಲ್ಲಿ, ಚಂಡೀಗಢ, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಂತಹ ಅನೇಕ ಸೈಬರ್ ಭದ್ರತಾ ಸಂಸ್ಥೆಗಳು, ತಜ್ಞರು ಮತ್ತು ಏಜೆನ್ಸಿಗಳು ಘಿಬ್ಲಿ ಅಥವಾ ಅಂತಹುದೇ AI ಆಧಾರಿತ ಜಪಾನೀಸ್ ಶೈಲಿಯ ಅನಿಮೇಟೆಡ್ ಭಾವಚಿತ್ರಗಳ ಬಳಕೆಯ ವಿರುದ್ಧ ಅನೇಕ ಎಚ್ಚರಿಕೆ ಸಂದೇಶ ನೀಡಿವೆ. ಅವು ನಿಮ್ಮ ವೈಯಕ್ತಿಕ ಇನ್‌ಪುಟ್‌ಗಳು ಮತ್ತು ನಿಮ್ಮ ಸ್ಮಾರ್ಟ್ ಫೋನ್ ನ ವ್ಯಾಪಕ ಶ್ರೇಣಿಯ ಅನುಮತಿಗಳ ಸಹಾಯದೊಂದಿಗೆ ಬಳಕೆದಾರರ ಪ್ರೊಫೈಲಿಂಗ್, ಗುರುತಿನ ಕಳ್ಳತನದಂತ ವಂಚನೆಗಳು ಮತ್ತು ಡೇಟಾ ದುರುಪಯೋಗಕ್ಕೆ ಗುರಿಯಾಗುವಂತೆ ಮಾಡುತ್ತದೆ. ಅವು ವಿಶೇಷವಾಗಿ ಭಾರತದ ಹೊರಗೆ ಹೋಸ್ಟ್ ಮಾಡಲಾಗಿದ್ದು,  ಈ AI-ಆಧಾರಿತ ಪ್ಲಾಟ್‌ಫಾರ್ಮ್‌ಗಳು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ನ ಕ್ಯಾಮೆರಾ, ಮೈಕ್ರೊಫೋನ್, ಸಂಪರ್ಕ ಪಟ್ಟಿ, ಫೋಟೋ ಗ್ಯಾಲರಿ ಮತ್ತು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿ ವಿನಂತಿಸುತ್ತವೆ ಮತ್ತು ಅದನ್ನು ಬಳಸಿ ನಿಮ್ಮ ಡೇಟಾ ಕದಿಯುತ್ತದೆ. ಅದಲ್ಲದೆ ಅವು ಬಳಕೆದಾರರು ಹೇಗೆ ಮತ್ತು ಏನು ಟೈಪ್ ಮಾಡುತ್ತಾರೆ ಎಂಬುದನ್ನು ಟ್ರ್ಯಾಕ್ ಮಾಡುವ  ಮಾಲ್ವೇರ್ ಕೋಡ್ ಅನ್ನು ಸ್ಥಾಪಿಸುತ್ತದೆ ಮತ್ತು ಅದನ್ನು ಬಳಸಿ ನೀವು ಟೈಪ್ ಮಾಡುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಮಾಹಿತಿಯನ್ನು ಕದ್ದು ನಿಮ್ಮ ಹಣವನ್ನು ಕದಿಯುತ್ತಾರೆ. ಈ ಲೇಖನದಲ್ಲಿ, ಈ ಘಿಬ್ಲಿ ರೀತಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವರ ಅರಿವಿಲ್ಲದೆ ಒಡ್ಡುವ ವಿವಿಧ ಸೈಬರ್ ಭದ್ರತೆ ಮತ್ತು ಗೌಪ್ಯತೆ ಅಪಾಯಗಳ ಬಗ್ಗೆ ನಾನು ತಿಳಿಸಿಕೊಡಲಿದ್ದೇನೆ.

ಸ್ಟುಡಿಯೋ ಘಿಬ್ಲಿ ಎಂಬುದು ಜಪಾನಿನ ಒಂದು ಪ್ರಸಿದ್ಧ ಅನಿಮೇಷನ್ ಸ್ಟುಡಿಯೋ ಆಗಿದ್ದು, ಸ್ಪಿರಿಟೆಡ್ ಅವೇ, ಮೈ ನೈಬರ್ ಟೊಟೊರೊ ಮುಂತಾದ ಚಲನಚಿತ್ರಗಳಿಗೆ, ಅಂತಹ ಉತ್ತಮ ಗುಣಮಟ್ಟ ಮತ್ತು ಕಲಾತ್ಮಕತೆಗೆ ಚಲನಚಿತ್ರ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಇವರ  ಅಪ್ಲಿಕೇಶನಿಂದ ತಯಾರಿಸಿದ ಚಲನಚಿತ್ರಗಳು ವಿಮರ್ಶಾತ್ಮಕ ಮತ್ತು ಜನಪ್ರಿಯ ಪ್ರಶಂಸೆಯನ್ನು ಗಳಿಸಿದವು ಮತ್ತು ಇತರ ಅನಿಮೇಷನ್ ಸ್ಟುಡಿಯೋಗಳ ಮೇಲೆ ತುಂಬ ಪ್ರಭಾವ ಬೀರಿದವು. ಇತ್ತೀಚಿಗೆ ಓಪನ್ AI ಸಂಸ್ಥೆ ತನ್ನ ChatGPT ಅಪ್ಲಿಕೇಶನ್ ಬಳಕೆದಾರರಿಗಾಗಿ ಅದನ್ನು ಬಿಡುಗಡೆ ಮಾಡಿದಾಗ ಘಿಬ್ಲಿ ಕಲೆ ಅಥವಾ ಚಿತ್ರಗಳು ತುಂಬ ಪ್ರಸಿದ್ಧವಾದವು ಅಥವಾ ಟ್ರೆಂಡ್ ಆದವು. ಈ ಶೈಲಿಯು, ಚಿತ್ರಗಳಿಗೆ ಕೈಯಿಂದ ಚಿತ್ರಿಸಿದ ವಿವರಗಳ ಸ್ಪರ್ಶವನ್ನು ನೀಡುತ್ತದೆ ಮತ್ತು ಅವುಗಳನ್ನು ಹೆಚ್ಚು ರೋಚಕ ಮತ್ತು ಅಭಿವ್ಯಕ್ತಿಶೀಲವಾಗಿಸಲು ರೋಮಾಂಚಕ ಬಣ್ಣದ ಪ್ಯಾಲೆಟ್‌ಗಳ ಬಳಕೆಯನ್ನು ನೀಡುತ್ತದೆ, ಇದು ದೃಷ್ಟಿಗೆ ಆಕರ್ಷಕವಾಗಿಸುತ್ತದೆ ಮತ್ತು ಸಾಮಾನ್ಯ ಜನರು ಕನಿಷ್ಠ ಜ್ಞಾನ ಅಥವಾ ಶ್ರಮದಿಂದ ತಮ್ಮ ಸೃಜನಶೀಲ ಭಾಗವನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಒಂದು ವರದಿಯ ಪ್ರಕಾರ, ಮುಖ ಗುರುತಿಸುವಿಕೆ ತಂತ್ರಜ್ಞಾನದ  ಜಾಗತಿಕ ಮಾರುಕಟ್ಟೆಯು 2025 ರ ವೇಳೆಗೆ $5.73 ಬಿಲಿಯನ್ ತಲುಪುವ ಮತ್ತು 16.79% CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ, ಇದು 2031 ರ ವೇಳೆಗೆ $14.55 ಬಿಲಿಯನ್ ತಲುಪುತ್ತದೆ ಎಂಬ ನಿರೀಕ್ಷೆಯಿದೆ.

ಘಿಬ್ಲಿ ಕಲೆ ಅಪ್ಲಿಕೇಶನ್ ಬಳಸಿ ನಡೆಸುವ ಸೈಬರ್ ಅಪರಾಧಗಳು ಇಂತಿವೆ :-

  • ಘಿಬ್ಲಿ ಕಲೆ ಮತ್ತು ಅದರಿಂದ ರಚಿತವಾದ ಉಚಿತ ಚಿತ್ರಗಳ ಡೌನ್‌ಲೋಡ್‌ಗಳನ್ನು ನೀಡುವ ಅನೇಕ ವೆಬ್‌ಸೈಟ್‌ಗಳು ಸಾಮಾನ್ಯವಾಗಿ ದುರುದ್ದೇಶಪೂರಿತ ಸೈಬರ್ ಚಟುವಟಿಕೆಗಳಿಗೆ ಕಾರಣವಾಗಿದೆ. ಉದಾಹರಣೆಗೆ ಅವು ಬಳಕೆದಾರರಿಗೆ ತಿಳಿಯದಂತೆಯೇ ಅವರ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ಸಾಧನಗಳಿಗೆ ವೈರಸ್‌ಗಳು, ಮಾಲ್‌ವೇರ್ ಸೇರಿದಂತೆ ವಿವಿಧ ಹಾನಿಕಾರಕ ಸಾಫ್ಟ್‌ವೇರ್‌ ಗಳ ಸೋಂಕು ತಗುಲಿಸಬಹುದು, ಇದು ಸಂಭಾವ್ಯ ಡೇಟಾ ಮತ್ತು ಸಂಪತ್ತಿನ ನಷ್ಟಕ್ಕೆ ಕಾರಣವಾಗಬಹುದು.
  • ಸೈಬರ್ ಸ್ಕ್ಯಾಮರ್‌ಗಳು ಫಿಶಿಂಗ್ ಹಗರಣಗಳಲ್ಲಿ ಜನಪ್ರಿಯ ಘಿಬ್ಲಿ ಪಾತ್ರಗಳು ಮತ್ತು ಕಲೆಯನ್ನು ಬಾಜಿಗಾಗಿ ಬಳಸಬಹುದು. ಈ ಮೋಸದ ಅಭಿಯಾನಗಳು ಸಾಮಾನ್ಯವಾಗಿ ನಕಲಿ ಸ್ಪರ್ಧೆಗಳು, ಕೊಡುಗೆಗಳು ಅಥವಾ ಘಿಬ್ಲಿ ಕಲೆಗಾಗಿ ಉಚಿತ ಡೌನ್‌ಲೋಡ್ ಲಿಂಕ್‌ಗಳನ್ನು ನೀಡುತ್ತವೆ. ನೀವೇನಾದರು ಈ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದರೆ, ನೀವು ವೈಯಕ್ತಿಕ ಡೇಟಾ, ಹಣಕಾಸಿನ ಮಾಹಿತಿಯ ಕಳ್ಳತನ, ಅಥವಾ ನಕಲಿ ಸರಕುಗಳನ್ನು ತಲುಪಿಸುವುದು ಅಥವಾ ಪಾವತಿಯ ನಂತರ ಸಂಪೂರ್ಣವಾಗಿ ಕಣ್ಮರೆಯಾಗುವುದು ಮಾಡಬಹುದು.
  • “ಉಚಿತ” ಡಿಜಿಟಲ್ ಘಿಬ್ಲಿ ಚಿತ್ರದೊಳಗೆ ಅಡಗಿರುವ ರಾನ್ಸಮ್‌ವೇರ್ ಮತ್ತು ಸ್ಪೈವೇರ್‌ಗಳ ಹಾವಳಿ ಇನ್ನೂ ಹೆಚ್ಚು ಕಳವಳಕಾರಿಯಾಗಿದೆ – ಉದಾಹರಣೆಗೆ ವಾಲ್‌ಪೇಪರ್‌ಗಳು, ಸ್ಕ್ರೀನ್‌ಸೇವರ್‌ಗಳು ಅಥವಾ ಅನಿಮೇಷನ್ ಪ್ಯಾಕ್‌ಗಳನ್ನು ಡೌನ್‌ಲೋಡ್ ಮಾಡಿದ ನಂತರ, ನಮ್ಮ ಕಂಪ್ಯೂಟರ್ ನಲ್ಲಿರುವ ಫೈಲ್‌ಗಳು ಲಾಕ್ ಮಾಡಬಹುದು, ಬ್ರೌಸರ್/ಬಳಕೆದಾರರ ಡೇಟಾವನ್ನು ಕದಿಯಬಹುದು ಅಥವಾ ಬಳಕೆದಾರರ ವೈಯಕ್ತಿಕ ಫೈಲ್‌ಗಳಲ್ಲಿರುವ ವಿಷಯವನ್ನು ಬಳಸಿ ಅನೇಕ ಸೈಬರ್ ಅಪರಾಧಗಳನ್ನು ಮಾಡಲು ಬಳಸಬಹುದು.
  • ಸೈಬರ್ ಅಪರಾಧಿಗಳು ಜನಪ್ರಿಯ ಘಿಬ್ಲಿ ಕಲಾವಿದರಂತೆ ನಟಿಸುತ್ತಾರೆ, ಘಿಬ್ಲಿ ಚಿತ್ರಗಳ ರಿಚಿಸುವ ನೆಪದಲ್ಲಿ ಹಣವನ್ನು ಪಾವತಿಸುವಂತೆ ಮಾಡಿ  ಮೋಸಗೊಳಿಸುತ್ತಾರೆ ಅಥವಾ ಅದರ ನೆಪದಲ್ಲಿ ನಿಮ್ಮ ಖಾಸಗಿ ವಿವರಗಳನ್ನು ಕದಿಯುತ್ತಾರೆ ಮತ್ತು ಅದನ್ನು ಬಳಸಿ ನಿಮನ್ನು ಮೋಸಗೊಳಿಸುತ್ತಾರೆ.
  • ಸೈಬರ್ ಅಪರಾಧಿಗಳು, ಘಿಬ್ಲಿ ಚಿತ್ರಗಳಿಗಾಗಿ ಬಳಕೆದಾರರು ಅಪ್‌ಲೋಡ್ ಮಾಡಿದ ಚಿತ್ರಗಳನ್ನು ಮತ್ತು ಆ ಚಿತ್ರಗಳಲ್ಲಿನ ಮೆಟಾ ಡೇಟಾವನ್ನು ಬಳಸಿಕೊಂಡು ಡೀಪ್ ಫೇಕ್ ಗಳು, ಗುರುತಿನ ಕಳ್ಳತನಗಳಂತಹ ವಿವಿಧ ಸೈಬರ್ ಅಪರಾಧಗಳನ್ನು ಮಾಡುತ್ತಾರೆ.
ಘಿಬ್ಲಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ