Site icon Welcome to CYBER MITHRA

ಘಿಬ್ಲಿ ಸೈಬರ್ ವಂಚನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

ಘಿಬ್ಲಿ Phibli

ಘಿಬ್ಲಿ(Ghibli) ಕಲೆ ಅಥವಾ ಚಿತ್ರಗಳು ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್ ಆಗಿದ್ದು, ಅವು ನಮ್ಮ ಸ್ನೇಹಿತರ ಮತ್ತು ಬಂದುಗಳ ಹೆಚ್ಚಿನ ಭಾವಚಿತ್ರ ಫೋಟೋಗಳನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಪ್ರೊಫೈಲ್ ಪುಟಗಳಲ್ಲಿ ರರಾಜಿಸಿರುವುದನ್ನು ನೀವು ಗಮನಿಸಿರಬಹುದು. ಆದರೆ ಇದೇ ಸಮಯದಲ್ಲಿ, ಚಂಡೀಗಢ, ತಮಿಳುನಾಡು ಮತ್ತು ಕರ್ನಾಟಕ ಪೊಲೀಸರಂತಹ ಅನೇಕ ಸೈಬರ್ ಭದ್ರತಾ ಸಂಸ್ಥೆಗಳು, ತಜ್ಞರು ಮತ್ತು ಏಜೆನ್ಸಿಗಳು ಘಿಬ್ಲಿ ಅಥವಾ ಅಂತಹುದೇ AI ಆಧಾರಿತ ಜಪಾನೀಸ್ ಶೈಲಿಯ ಅನಿಮೇಟೆಡ್ ಭಾವಚಿತ್ರಗಳ ಬಳಕೆಯ ವಿರುದ್ಧ ಅನೇಕ ಎಚ್ಚರಿಕೆ ಸಂದೇಶ ನೀಡಿವೆ. ಅವು ನಿಮ್ಮ ವೈಯಕ್ತಿಕ ಇನ್‌ಪುಟ್‌ಗಳು ಮತ್ತು ನಿಮ್ಮ ಸ್ಮಾರ್ಟ್ ಫೋನ್ ನ ವ್ಯಾಪಕ ಶ್ರೇಣಿಯ ಅನುಮತಿಗಳ ಸಹಾಯದೊಂದಿಗೆ ಬಳಕೆದಾರರ ಪ್ರೊಫೈಲಿಂಗ್, ಗುರುತಿನ ಕಳ್ಳತನದಂತ ವಂಚನೆಗಳು ಮತ್ತು ಡೇಟಾ ದುರುಪಯೋಗಕ್ಕೆ ಗುರಿಯಾಗುವಂತೆ ಮಾಡುತ್ತದೆ. ಅವು ವಿಶೇಷವಾಗಿ ಭಾರತದ ಹೊರಗೆ ಹೋಸ್ಟ್ ಮಾಡಲಾಗಿದ್ದು,  ಈ AI-ಆಧಾರಿತ ಪ್ಲಾಟ್‌ಫಾರ್ಮ್‌ಗಳು ನಿಮ್ಮ ಸ್ಮಾರ್ಟ್ ಫೋನ್ ಅಥವಾ ಕಂಪ್ಯೂಟರ್ ನ ಕ್ಯಾಮೆರಾ, ಮೈಕ್ರೊಫೋನ್, ಸಂಪರ್ಕ ಪಟ್ಟಿ, ಫೋಟೋ ಗ್ಯಾಲರಿ ಮತ್ತು ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸಲು ಅನುಮತಿ ವಿನಂತಿಸುತ್ತವೆ ಮತ್ತು ಅದನ್ನು ಬಳಸಿ ನಿಮ್ಮ ಡೇಟಾ ಕದಿಯುತ್ತದೆ. ಅದಲ್ಲದೆ ಅವು ಬಳಕೆದಾರರು ಹೇಗೆ ಮತ್ತು ಏನು ಟೈಪ್ ಮಾಡುತ್ತಾರೆ ಎಂಬುದನ್ನು ಟ್ರ್ಯಾಕ್ ಮಾಡುವ  ಮಾಲ್ವೇರ್ ಕೋಡ್ ಅನ್ನು ಸ್ಥಾಪಿಸುತ್ತದೆ ಮತ್ತು ಅದನ್ನು ಬಳಸಿ ನೀವು ಟೈಪ್ ಮಾಡುವ ಯೂಸರ್ ಐಡಿ ಮತ್ತು ಪಾಸ್ವರ್ಡ್ ಮಾಹಿತಿಯನ್ನು ಕದ್ದು ನಿಮ್ಮ ಹಣವನ್ನು ಕದಿಯುತ್ತಾರೆ. ಈ ಲೇಖನದಲ್ಲಿ, ಈ ಘಿಬ್ಲಿ ರೀತಿಯ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ಅವರ ಅರಿವಿಲ್ಲದೆ ಒಡ್ಡುವ ವಿವಿಧ ಸೈಬರ್ ಭದ್ರತೆ ಮತ್ತು ಗೌಪ್ಯತೆ ಅಪಾಯಗಳ ಬಗ್ಗೆ ನಾನು ತಿಳಿಸಿಕೊಡಲಿದ್ದೇನೆ.

ಸ್ಟುಡಿಯೋ ಘಿಬ್ಲಿ ಎಂಬುದು ಜಪಾನಿನ ಒಂದು ಪ್ರಸಿದ್ಧ ಅನಿಮೇಷನ್ ಸ್ಟುಡಿಯೋ ಆಗಿದ್ದು, ಸ್ಪಿರಿಟೆಡ್ ಅವೇ, ಮೈ ನೈಬರ್ ಟೊಟೊರೊ ಮುಂತಾದ ಚಲನಚಿತ್ರಗಳಿಗೆ, ಅಂತಹ ಉತ್ತಮ ಗುಣಮಟ್ಟ ಮತ್ತು ಕಲಾತ್ಮಕತೆಗೆ ಚಲನಚಿತ್ರ ನಿರ್ಮಾಣಕ್ಕೆ ಹೆಸರುವಾಸಿಯಾಗಿದೆ. ಇವರ  ಅಪ್ಲಿಕೇಶನಿಂದ ತಯಾರಿಸಿದ ಚಲನಚಿತ್ರಗಳು ವಿಮರ್ಶಾತ್ಮಕ ಮತ್ತು ಜನಪ್ರಿಯ ಪ್ರಶಂಸೆಯನ್ನು ಗಳಿಸಿದವು ಮತ್ತು ಇತರ ಅನಿಮೇಷನ್ ಸ್ಟುಡಿಯೋಗಳ ಮೇಲೆ ತುಂಬ ಪ್ರಭಾವ ಬೀರಿದವು. ಇತ್ತೀಚಿಗೆ ಓಪನ್ AI ಸಂಸ್ಥೆ ತನ್ನ ChatGPT ಅಪ್ಲಿಕೇಶನ್ ಬಳಕೆದಾರರಿಗಾಗಿ ಅದನ್ನು ಬಿಡುಗಡೆ ಮಾಡಿದಾಗ ಘಿಬ್ಲಿ ಕಲೆ ಅಥವಾ ಚಿತ್ರಗಳು ತುಂಬ ಪ್ರಸಿದ್ಧವಾದವು ಅಥವಾ ಟ್ರೆಂಡ್ ಆದವು. ಈ ಶೈಲಿಯು, ಚಿತ್ರಗಳಿಗೆ ಕೈಯಿಂದ ಚಿತ್ರಿಸಿದ ವಿವರಗಳ ಸ್ಪರ್ಶವನ್ನು ನೀಡುತ್ತದೆ ಮತ್ತು ಅವುಗಳನ್ನು ಹೆಚ್ಚು ರೋಚಕ ಮತ್ತು ಅಭಿವ್ಯಕ್ತಿಶೀಲವಾಗಿಸಲು ರೋಮಾಂಚಕ ಬಣ್ಣದ ಪ್ಯಾಲೆಟ್‌ಗಳ ಬಳಕೆಯನ್ನು ನೀಡುತ್ತದೆ, ಇದು ದೃಷ್ಟಿಗೆ ಆಕರ್ಷಕವಾಗಿಸುತ್ತದೆ ಮತ್ತು ಸಾಮಾನ್ಯ ಜನರು ಕನಿಷ್ಠ ಜ್ಞಾನ ಅಥವಾ ಶ್ರಮದಿಂದ ತಮ್ಮ ಸೃಜನಶೀಲ ಭಾಗವನ್ನು ಪ್ರದರ್ಶಿಸಲು ಅನುವು ಮಾಡಿಕೊಡುತ್ತದೆ. ಒಂದು ವರದಿಯ ಪ್ರಕಾರ, ಮುಖ ಗುರುತಿಸುವಿಕೆ ತಂತ್ರಜ್ಞಾನದ  ಜಾಗತಿಕ ಮಾರುಕಟ್ಟೆಯು 2025 ರ ವೇಳೆಗೆ $5.73 ಬಿಲಿಯನ್ ತಲುಪುವ ಮತ್ತು 16.79% CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ, ಇದು 2031 ರ ವೇಳೆಗೆ $14.55 ಬಿಲಿಯನ್ ತಲುಪುತ್ತದೆ ಎಂಬ ನಿರೀಕ್ಷೆಯಿದೆ.

ಘಿಬ್ಲಿ ಕಲೆ ಅಪ್ಲಿಕೇಶನ್ ಬಳಸಿ ನಡೆಸುವ ಸೈಬರ್ ಅಪರಾಧಗಳು ಇಂತಿವೆ :-

Exit mobile version