ಸೈಬರ್ಮಿತ್ರ ಬ್ಲಾಗಿಗೆ ಸುಸ್ವಾಗತ
ಈ ಬ್ಲಾಗ್ ಸೈಬರ್ ಕ್ರೈಮ್ಗಳು, ಸೈಬರ್ ಕಾನೂನು ಮತ್ತು ಸೈಬರ್ ಸುರಕ್ಷತೆಯ ಕುರಿತು ಮಾಹಿತಿ, ಶಿಕ್ಷಣ ಮತ್ತು ಜಾಗೃತಿಯನ್ನು ಸರಳ ಪದಗಳಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ, ಇದನ್ನು ಯಾವುದೇ ತಾಂತ್ರಿಕ ಅಥವಾ ಕಾನೂನು ಹಿನ್ನೆಲೆಯಿಲ್ಲದ ಸಾಮಾನ್ಯ ಜನರು ಅರ್ಥಮಾಡಿಕೊಳ್ಳಬಹುದು.ಈ ಬ್ಲಾಗ್ ಸೈಬರ್ ಕ್ರೈಮ್ಗಳ ಕುರಿತು ವಾರಕ್ಕೊಮ್ಮೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಲೇಖನವನ್ನು ಪ್ರಕಟಿಸುವ ಗುರಿಯನ್ನು ಹೊಂದಿದೆ, ಅಲ್ಲಿ ಆ ಸೈಬರ್ ಕ್ರೈಮ್ ಏನು, ಅದು ಹೇಗೆ ನಡೆಯುತ್ತದೆ, ಅದರಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಒಬ್ಬ ಬಲಿಪಶುವಾದರೆ ಮುಂದಿನ ಕ್ರಮಗಳ ಮತ್ತು ಕಾನೂನು ಆಯ್ಕೆಗಳ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನಿಸುತ್ತದೆ.
ಸೈಬರ್ಮಿತ್ರದ ಹಿಂದಿರುವ ಜನರ ಬಗ್ಗೆ ತಿಳಿಯಲು ದಯವಿಟ್ಟು ಭೇಟಿ ನೀಡಿ “ನಮ್ಮ ಬಗ್ಗೆ”
ಕನ್ನಡದಲ್ಲಿ ಮುದ್ರಿತವಾದ ಅಂಕಣಗಳು :-
- ಒಂದು ಸೈಬರ್ ಅಪರಾಧದ ಕುರಿತು ಸಾಪ್ತಾಹಿಕ ಮಾಹಿತಿ ಶಿಕ್ಷಣ ಲೇಖನಗಳು – ಕನ್ನಡ ಅಂಕಣಗಳು
- ಒಂದು ಸೈಬರ್ ಅಪರಾಧದ ಕುರಿತು ಸಾಪ್ತಾಹಿಕ ಮಾಹಿತಿ ಶಿಕ್ಷಣ youtube ವಿಡಿಯೋ ಅಂಕಣ – ವಿಡಿಯೋ ಅಂಕಣ
ಇತ್ತೀಚಿಗೆ ಮುದ್ರಿತವಾದ ಅಂಕಣಗಳು :-
- ಚುನಾವಣಾ ಆಯೋಗದ ‘SIR 2026’ ಹೆಸರಲ್ಲಿ ನಡೀತಿದೆ ಸೈಬರ್ ವಂಚನೆಗಳು
SIR 2026 ನೆಪದಲ್ಲಿ ಸೈಬರ್ ವಂಚಕರು, ಸಾಮಾನ್ಯ ಜನರ ಮುಗ್ಧತೆ, ಗೊಂದಲ, ಅಜ್ಞಾನ ಮತ್ತು ಆತಂಕವನ್ನು ದುರುಪಯೋಗಿಸಿಕೊಂಡು ಯಾವೆಲ್ಲಾ ದಾರಿಗಳ ಮೂಲಕ ನಿಮ್ಮನ್ನು ತಲುಪುತ್ತಾರೆ? ನೀವೆಲ್ಲ ಹೇಗೆ ಎಚ್ಚರದಿಂದಿರಬೇಕು ಮತ್ತು ದುರದೃಷ್ಟವಶಾತ್ ವಂಚನೆಗೊಳಗಾದರೆ ಏನು ಮಾಡಬೇಕು ಎಂಬುದರ ಬಗ್ಗೆ ನಾನು ಈ ಅಂಕಣದಲ್ಲಿ ತಿಳಿಸಿಕೊಡಲಿದ್ದೇನೆ. - ಇಂಟರ್ನೆಟ್ನಲ್ಲಿ ಸಿಕ್ಕಿದರೆ ಉಚಿತವೇ? ಸಾಮಾಜಿಕ ಮಾಧ್ಯಮದಲ್ಲಿ ಕಾಪಿರೈಟ್ ಸ್ಟ್ರೈಕ್!
ಈ ಲೇಖನದಲ್ಲಿ ಕಾಪಿರೈಟ್ ಸ್ಟ್ರೈಕ್ ಎಂದರೇನು? ಅದು ಏಕೆ ಬರುತ್ತದೆ? ಭಾರತದ ಕಾನೂನು ಏನು ಹೇಳುತ್ತದೆ? ಅದರಿಂದ ಹೇಗೆ ರಕ್ಷಿಸಿಕೊಳ್ಳಬೇಕು? ನಿಮ್ಮ ಪ್ರತಿಕ್ರಿಯೆ ಏನಿರಬೇಕು ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ. - ಬೌದ್ಧಿಕ ಆಸ್ತಿ ಹಕ್ಕುಗಳು: ನಮ್ಮ ಆಲೋಚನೆಗಳಿಗೂ ಆಸ್ತಿಯ ಮೌಲ್ಯವಿದೆ!
ಈ ಲೇಖನದಲ್ಲಿ ನಾನು ಬೌದ್ಧಿಕ ಆಸ್ತಿ ಹಕ್ಕುಗಳು ಎಂದರೇನು? ವಿವಿಧ ರೀತಿಯ ಬೌದ್ಧಿಕ ಆಸ್ತಿ ಹಕ್ಕುಗಳ ಬಗ್ಗೆ ಸ್ಟೂಲವಾಗಿ ತಿಳಿಸಿಕೊಡಲಿದ್ದೇನೆ. - ನನ್ನ ಮುಖ, ನನ್ನ ಧ್ವನಿ… ನನ್ನ ಹಕ್ಕು! AI ಯುಗದಲ್ಲಿ ವ್ಯಕ್ತಿತ್ವ ಕಳ್ಳತನದ ಭೀತಿ
ಈ ಲೇಖನದಲ್ಲಿ “ವ್ಯಕ್ತಿತ್ವ ಹಕ್ಕು” ಎಂದರೇನು ಮತ್ತು ನಮ್ಮ ಭಾರತದ ಕಾನೂನು ಏನು ಹೇಳುತ್ತದೆ ಎಂಬುದರ ಬಗ್ಗೆ ತಿಳಿಸಿಕೊಟ್ಟಿದ್ದೆ, ನಮ್ಮ ದೇಶದ ನ್ಯಾಯಾಲಯಗಳು ಈ ವ್ಯಕ್ತಿತ್ವದ ಹಕ್ಕಿನ ಬಗ್ಗೆ ಏನು ಹೇಳುತ್ತದೆ ಮತ್ತು ಈ ಹಕ್ಕಿನ ವ್ಯಾಪ್ತಿ ಉಲ್ಲಂಘನೆಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುವೆ. - ಕರ್ನಾಟಕದ “ಜವಾಬ್ದಾರಿಯುತ ಡಿಜಿಟಲ್ ಬಳಕೆ” ಕರಡು ನೀತಿ ಅವಲೋಕನ
ಈ ಲೇಖನದಲ್ಲಿ ನಾನು ಈ ಕರಡು ನೀತಿಯ ಹಿನ್ನಲೆ, ಪ್ರಮುಖ ಉದ್ದೇಶ ಮತ್ತು ಗುರಿಗಳು, ಈ ಕರಡು ನೀತಿಯ ಸಾಧಕ ಬಾಧಕಗಳೇನು ಮತ್ತು ಈ ವಿಷಯದ ಕುರಿತು ಬೇರೆ ಸರಕಾರಗಳು ಮತ್ತು ದೇಶಗಳು ಏನು ಮಾಡುತ್ತಿವೆ ಹಾಗು ನನ್ನ ಮತ್ತು ಇತರ ತಜ್ಞರ ಅಭಿಪ್ರಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.


Sir nange calling nalli join aagi baro video calling bagge details kodthira, athara video cal maddaga hack agatta
they cannot hack your device through video call, but can capture your video and edit it and then sextort you in worst case. Check my sextrotion video or article for more details.