smartphone

ಸ್ಮಾರ್ಟ್‌ಫೋನ್ ಎರವಲು ಪಡೆಯಲು ಮತ್ತು ನಿಮ್ಮ ಹಣವನ್ನು ಕದಿಯಲು ಅಪರಾಧಿಗಳು ನಕಲಿ ತುರ್ತು ಪರಿಸ್ಥಿತಿಗಳನ್ನು ಬಳಸುತ್ತಿದ್ದಾರೆ

ಈ ಅಂಕಣದಲ್ಲಿ ನಾನು ಸ್ಮಾರ್ಟ್‌ಫೋನ್ ಎರವಲು ಪಡೆಯಲು ಅಪರಾಧಿಗಳು ನಕಲಿ ತುರ್ತು ಪರಿಸ್ಥಿತಿಗಳನ್ನು ಬಳಸುತ್ತಿದ್ದಾರೆ ಮತ್ತು ನಿಮ್ಮ ಹಣವನ್ನು ಕದಿಯುವ ವಿವಿಧ ಮಾರ್ಗಗಳ ಬಗ್ಗೆ ವಿವರಿಸಿದ್ದೇನೆ, ಅದನ್ನು ಹೇಗೆ ಮಾಡುತ್ತಾರೆ, ಅದರಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು ಮತ್ತು ಅದರ ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಅಥವಾ ಇತರ ಪರಿಹಾರಗಳ ಬಗ್ಗೆ ಮಾತನಾಡಲಿದ್ದೇನೆ.

ಫಾರ್ಮಾ ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿರುವ ರಾಜಾ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದರು ಆಗ ಮಹಿಳೆಯೊಬ್ಬರು ತನ್ನ ಮೊಬೈಲ್ ಬ್ಯಾಟರಿ ಖಾಲಿಯಾದ ಕಾರಣ ತನ್ನ ಪತಿಗೆ ಕರೆ ಮಾಡಲು ರಾಜನ ಫೋನ್ ಎರವಲು ನೀಡುವಂತೆ ವಿನಂತಿಸುತ್ತಾರೆ. ರಾಜಾ ಅವರಿಗೆ ಫೋನ್ ಕೊಡುತ್ತಾರೆ, ಅವರು ಯಾವುದೋ ನಂಬರ್ ಡಯಲ್ ಮಾಡಿ ಮಾತನಾಡಿ ಫೋನ್ ರಾಜಾಗೆ ಹಿಂತಿರುಗಿಸುತ್ತಾರೆ. ನಂತರ ರಾತ್ರಿ ರಾಜಾ ಅವರ ಫೋನ್ ಪರಿಶೀಲಿಸಿದಾಗ ಅವರಿಗೆ ಒಂದು ಲಕ್ಷ ರೂಪಾಯಿ ವ್ಯವಹಾರದ ಎಸ್‌ಎಂಎಸ್ ಸಂದೇಶ ಸಿಕ್ಕುತ್ತದೆ, ಅದರ ಬಗ್ಗೆ ಅವರಿಗೆ ಸುಳಿವು ಇರಲಿಲ್ಲ. ಪೊಲೀಸ್ ತನಿಖೆಯಲ್ಲಿ, ರಾಜಾ ಅವರ ಫೋನಿನಲ್ಲಿ ಆಟೋಮ್ಯಾಟಿಕ್ ಕರೆ ಫಾರ್ವರ್ಡ್ ಮಾಡಲಾಗಿದೆ  ಎಂದು ಕಂಡು ಬರುತ್ತದೆ.

ಮತ್ತೊಂದು ಘಟನೆಯಲ್ಲಿ, ಸೈಬರ್ ಅಪರಾಧಿಗಳು ತುರ್ತು ಕರೆ ಮಾಡಲು ಫೋನ್ ಎರವಲು ಪಡೆದರು ಮತ್ತು ನಂತರ ವ್ಯಾಲೆಟ್ ಹಣ ವರ್ಗಾವಣೆ ಅಥವಾ ವೈಯಕ್ತಿಕ (ಆಧಾರ್, ಪ್ಯಾನ್ ಇತ್ಯಾದಿ) ಮತ್ತು ಆರ್ಥಿಕವಾಗಿ (ಖಾತೆ, ಕ್ರೆಡಿಟ್/ಡೆಬಿಟ್ ಕಾರ್ಡ್, OTP ಇತ್ಯಾದಿ) ಸೂಕ್ಷ್ಮ ಡೇಟಾವನ್ನು ಸ್ಮಾರ್ಟ್‌ಫೋನ್‌ನಿಂದ ಕದ್ದಿದ್ದಾರೆ, ನಂತರ ಅದನ್ನು ಬಳಸಿ ಸೈಬರ್ ಅಪರಾಧಗಳನ್ನು ಮಾಡುತ್ತಾರೆ.

ಮತ್ತೊಂದು ಘಟನೆಯಲ್ಲಿ, ಸೈಬರ್ ಅಪರಾಧಿಗಳು ಮಾಲ್‌ವೇರ್ ಅಥವಾ ಅಪ್ಲಿಕೇಶನ್ ಅನ್ನು ಎರವಲು ಪಡೆದ ಸ್ಮಾರ್ಟ್ ಫೋನಿನಲ್ಲಿ ಸ್ಥಾಪಿಸಿರುತ್ತಾರೆ, ಅದು ಒಳಬರುವ sms ಸಂದೇಶಗಳನ್ನು ಅಥವಾ ಕೀಸ್ಟ್ರೋಕ್‌ಗಳನ್ನು ನಿರ್ದಿಷ್ಟ ಸಂಖ್ಯೆಗೆ ಫಾರ್ವರ್ಡ್ ಮಾಡುತ್ತದೆ, ನಂತರ ಅದನ್ನು ಬಳಸಿಕೊಂಡು ಅನೇಕ ಸೈಬರ್ ಅಪರಾಧಗಳನ್ನು ಮಾಡಲಾಗುತ್ತದೆ.

ಕರೆ ಫಾರ್ವರ್ಡ್ ಮಾಡುವ ಹಗರಣದಲ್ಲಿ, ಅಪರಾಧಿಗಳು ** ಅನ್ನು ಡಯಲ್ ಮಾಡಿ ನಂತರ 401(jio)/21(ಏರ್‌ಟೆಲ್ ಅಥವಾ ವೊಡಾಫೋನ್ ಅಥವಾ bsnl ನೆಟ್‌ವರ್ಕ್ ಫೋನ್‌ಗಳಿಗೆ) ನಂತಹ ಸಂಖ್ಯೆಯನ್ನು ** ನಂತರ ಡಯಲ್ ಮಾಡಿ, ಕರೆಗಳನ್ನು ಫಾರ್ವರ್ಡ್ ಮಾಡಬೇಕಾದ ಫೋನ್ ಸಂಖ್ಯೆಯನ್ನು ನಮೂದಿಸಿ, # ನೊಂದಿಗೆ ಕೊನೆಗೊಳ್ಳುವ ಮತ್ತು ಆ ಸಂಖ್ಯೆಯನ್ನು (ಉದಾ: **21**9812345678#) ಡಯಲ್ ಮಾಡುತ್ತಾರೆ. ಅದರ ನಂತರ ಎಲ್ಲಾ ಒಳಬರುವ ಕರೆಗಳು ಆ ನಿರ್ದಿಷ್ಟ ಸಂಖ್ಯೆಗೆ ಫಾರ್ವರ್ಡ್ ಮಾಡಲಾಗುತ್ತದೆ ಅಥವಾ ಕರೆ ಆಟೋ ಫಾರ್ವರ್ಡ್ ಮಾಡಲು ಫೋನಿನ ಕರೆ ಸೆಟ್ಟಿಂಗ್‌ಗಳನ್ನು ಮಾರ್ಪಡಿಸಲಾಗುತ್ತದೆ. ಸೈಬರ್ ಅಪರಾಧಿಗಳು ನಂತರ ವಾಯ್ಸ್ ಒಟಿಪಿ ಬಳಸಿ ಬಲಿಪಶುವಿನಿಂದ ಹಣವನ್ನು ಲೂಟಿ ಮಾಡುತ್ತಾರೆ.

ಇಂತಹ ಸ್ಮಾರ್ಟ್‌ಫೋನ್ ಸೈಬರ್ ಅಪರಾಧಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು :-

  • ಯಾವುದೇ ಕಾರಣಕ್ಕೂ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಅಪರಿಚಿತರಿಗೆ ನೀಡಬೇಡಿ.
  • ನೀವು ಅಪರಿಚಿತರಿಗೆ ಕರೆ ಮಾಡಲು ನೀಡಬೇಕಾದರೆ, ನೀವೇ ಸಂಖ್ಯೆಯನ್ನು ಡಯಲ್ ಮಾಡಿ ನಂತರ ಸ್ಪೀಕರ್ ಫೋನ್ ಅನ್ನು ಆನ್ ಮಾಡಿ ಮತ್ತು ಪರದೆಯನ್ನು ಆಫ್ ಮಾಡಿ ಕೊಡಿ.
  • ಅಪರಿಚಿತರಿಂದ ಸಂದೇಶ ಅಥವಾ ಮೇಲ್‌ನಲ್ಲಿ ಒದಗಿಸಲಾದ ಯಾವುದೇ ಹೈಪರ್‌ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ ಅಥವಾ ಯಾವುದೇ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಡಿ.
  • ಯಾವುದೇ ಕಾರಣಕ್ಕಾಗಿ ನೀವು ಸ್ವಲ್ಪ ಸಮಯದವರೆಗೆ ಯಾವುದೇ ಒಳ ಕರೆಗಳನ್ನು ಸ್ವೀಕರಿಸದಿದ್ದರೆ, ನಿಮ್ಮ ಫೋನ್‌ನಲ್ಲಿ *#62# ಅನ್ನು ಡಯಲ್ ಮಾಡುವ ಮೂಲಕ ಆಟೋ ಕರೆ ಫಾರ್ವರ್ಡ್ ಮಾಡುವಿಕೆಯನ್ನು ಹೊಂದಿಸಲಾಗಿದೆಯೇ ಎಂದು ಪರಿಶೀಲಿಸಿ.
  • ಫೈಲ್ ಎಕ್ಸ್‌ಪ್ಲೋರರ್, ಎಸ್‌ಎಂಎಸ್, ವಾಟ್ಸಾಪ್, ಗ್ಯಾಲರಿ, ಶಾಪಿಂಗ್, ಬ್ಯಾಂಕಿಂಗ್ ಮತ್ತು ಯುಪಿಐ/ವಾಲೆಟ್ ಅಪ್ಲಿಕೇಶನ್‌ಗಳಂತಹ ಮುಖ್ಯ ಮತ್ತು ಸೂಕ್ಷ್ಮ ಅಪ್ಲಿಕೇಶನ್‌ಗಳನ್ನು ತೆರೆಯಲು ಯಾವಾಗಲೂ ಪಾಸ್‌ವರ್ಡ್ ಹೊಂದಿಸಿ.
  • ಅಪ್ಲಿಕೇಶನ್ ಬೆಂಬಲಿಸಿದರೆ ಕಂಡಿತಾ ಬಹು ಅಂಶದ ದೃಢೀಕರಣ(multifactor authentication)ವನ್ನು ಸಕ್ರಿಯಗೊಳಿಸಿ.

ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ :-

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಆಟೋ ಕರೆ ಫಾರ್ವರ್ಡ್ ಮಾಡುವುದನ್ನು ಸಕ್ರಿಯಗೊಳಿಸಿದ್ದರೆ ಕೂಡಲೇ ನಿಷ್ಕ್ರಿಯಗೊಳಿಸಿ. ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು ಸೋರಿಕೆಯಾಗಿದ್ದರೆ, ಆ ಕಾರ್ಡ್‌ಗಳನ್ನು ಬ್ಲಾಕ್ ಮಾಡಿ. ಸ್ಥಾಪಿಸಲಾದ ಯಾವುದೇ ಹೊಸ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ಮಾಲ್‌ವೇರ್ ಬಗ್ಗೆ ಇನ್ನು ಅನುಮಾನವಿದ್ದರೆ, ಸಾಧನವನ್ನು ಫ್ಯಾಕ್ಟರಿ ರಿಸೆಟ್ ಅಥವಾ ಫಾರ್ಮ್ಯಾಟ್ ಮಾಡಿ.

ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್‌ಗಳ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್‌ಗಳ ಪ್ರಕಾರ ದಾಖಲಿಸಬಹುದು :

  • ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 378(ಕಳ್ಳತನ), 419 (ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿಯ ವಿತರಣೆಯನ್ನು ಪ್ರೇರೇಪಿಸುವುದು), ಸೆಕ್ಷನ್ 424(ಕಾನೂನುಬಾಹಿರವಾಗಿ ಡೇಟಾವನ್ನು ಹೊರತೆಗೆಯುವುದು), ಮತ್ತು ಸೆಕ್ಷನ್ 441 (ಕ್ರಿಮಿನಲ್ ಅತಿಕ್ರಮಣ).
  • ಮಾಹಿತಿ ತಂತ್ರಜ್ಞಾನ ಕಾಯಿದೆ (IT) ಕಾಯಿದೆ 2000/08 ಸೆಕ್ಷನ್ 43 (ಕಂಪ್ಯೂಟರ್, ಕಂಪ್ಯೂಟಿಂಗ್ ಸಾಧನ ಇತ್ಯಾದಿಗಳಿಗೆ ಹಾನಿಗಾಗಿ ದಂಡ ಮತ್ತು ಪರಿಹಾರ), ಸೆಕ್ಷನ್ 65 (ಕಂಪ್ಯೂಟರ್ ಅನ್ನು ಹಾಳುಮಾಡುವುದು), ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳಿಗೆ ಶಿಕ್ಷೆ – ಡೇಟಾ ಕಳ್ಳತನ ಮಾಡುವ ವ್ಯಕ್ತಿ, ಸಿಸ್ಟಮ್‌ಗೆ ವೈರಸ್ ಹರಡುವುದು, ಡೇಟಾ ನಾಶಪಡಿಸುವುದು, ಹ್ಯಾಕಿಂಗ್ , ಅಥವಾ ಅಧಿಕೃತ ವ್ಯಕ್ತಿಗೆ ಕಂಪ್ಯೂಟರ್ ಅಥವಾ ನೆಟ್‌ವರ್ಕ್‌ಗೆ ಪ್ರವೇಶವನ್ನು ನಿರಾಕರಿಸುವುದು), ಸೆಕ್ಷನ್ 66C (ಇದು ಗುರುತಿನ ಕಳ್ಳತನಕ್ಕೆ ದಂಡವನ್ನು ಸೂಚಿಸುತ್ತದೆ ಮತ್ತು ವ್ಯಕ್ತಿಯ ಗುರುತಿನ ಮಾಹಿತಿಯನ್ನು ಮೋಸದಿಂದ ಅಥವಾ ಅಪ್ರಾಮಾಣಿಕವಾಗಿ ಬಳಸುವುದಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 66D (ಕಂಪ್ಯೂಟರ್ ಸಂಪನ್ಮೂಲಗಳನ್ನು ಬಳಸಿಕೊಂಡು ಸೋಗು ಹಾಕುವ ಮೂಲಕ ವಂಚನೆಗೆ ಶಿಕ್ಷೆ).
ಸ್ಮಾರ್ಟ್ಫೋನ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ