statistics

2024ರಲ್ಲಿ ಭಾರತೀಯರನ್ನು ಕಾಡಿದ ಪ್ರಮುಖ  ಸೈಬರ್ ಅಪರಾಧಗಳ ಅಂಕಿ ಅಂಶಗಳು

ಈ ಅಂಕಣದಲ್ಲಿ ನಾನು ಈ ವರ್ಷದಲ್ಲಿ ಭಾರತೀಯರನ್ನು ಕಾಡಿದ ಪ್ರಮುಖ ಸೈಬರ್ ಅಪರಾಧಗಳ ಅಂಕಿ ಅಂಶಗಳು, ಘಟನೆಗಳು, ಪ್ರಕಾರಗಳ ಬಗ್ಗೆ ಮತ್ತು ಭಾರತ ಸರ್ಕಾರ ತೆಗೆದುಕ್ಕೊಂಡ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಈಗ ನಾವು ಡಿಸೆಂಬರ್ ನ ಮೂರನೇ ವಾರದಲ್ಲಿದ್ದೇವೆ, ಎರಡು ವಾರಗಳಲ್ಲಿ 2024 ಕೊನೆಗೊಳ್ಳಲಿದೆ, ಈ ಅಂಕಣದಲ್ಲಿ ನಾನು ಈ ವರ್ಷದಲ್ಲಿ ಭಾರತೀಯರನ್ನು ಕಾಡಿದ ಪ್ರಮುಖ ಸೈಬರ್ ಅಪರಾಧಗಳ ಅಂಕಿಅಂಶಗಳು, ಘಟನೆಗಳು, ಪ್ರಕಾರಗಳ ಬಗ್ಗೆ ಮತ್ತು ಭಾರತ ಸರ್ಕಾರ ತೆಗೆದುಕ್ಕೊಂಡ ಕ್ರಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ನಾನು ಆ ಸೈಬರ್ ಅಪರಾಧಗಳ ಪ್ರಕಾರಗಳ ಬಗ್ಗೆ ಈ ಹಿಂದೆ ಸುದೀರ್ಘವಾಗಿ ಬರೆದಿದ್ದೇನೆ, ನೀವು ಅದನ್ನು ನನ್ನ ಈ ಬ್ಲಾಗ್ ಜಾಲತಾಣದಲ್ಲಿ ಓದಬಹುದು.

ಒಂದು ವರದಿಯ ಪ್ರಕಾರ, 2024 ರಲ್ಲಿ ಸೈಬರ್ ಅಪರಾಧವು ಜಗತ್ತಿನಲ್ಲಿ 15% ವೇಗದಲ್ಲಿ ಹೆಚ್ಚುತಿದ್ದು ಅದು ಈಗ 9.5 USD ಟ್ರಿಲಿಯನ್ ಮೊತ್ತದ ಉದ್ಯಮವಾಗಿದೆ, ಅಂದರೆ ಇದು ಭಾರತದ 2024 ರ ಜಿಡಿಪಿಯ ಮೊತ್ತದ ಎರಡರಷ್ಟುಕ್ಕಿಂತಲೂ ಹೆಚ್ಚು. ಇಂಡಿಯನ್ ಸೈಬರ್ ಕ್ರೈಂ ಕೋ-ಆರ್ಡಿನೇಷನ್ ಸೆಂಟರ್ (I4C) ಪ್ರಕಾರ ಭಾರತದಲ್ಲಿ, ಸೈಬರ್ ಅಪರಾಧದಿಂದ ಸೆಪ್ಟೆಂಬರ್ ವರಗೆ ವರದಿ ಮಾಡಿರುವ ಆದ ನಷ್ಟವು 11,333 ಕೋಟಿ ರೂಪಾಯಿಗಳಾಗಿದ್ದು, ನಿಜವಾದ ಮೊತ್ತ ಇದರ ಎರಡರಿಂದ ಮೂರರಷ್ಟು ಇದ್ದರು ಆಶರ್ಯ ಪಡಬೇಕಾಗಿಲ್ಲ. ಅದೇ ವರದಿಯ ಪ್ರಕಾರ, ವರದಿಯಾದ ಸೈಬರ್ ಅಪಾರದಗಳ ಪ್ರಕಾರ ನೋಡಿದರೆ ಸ್ಟಾಕ್ ಟ್ರೇಡಿಂಗ್ ಸೈಬರ್ ಅಪರಾಧಗಳು ಅಗ್ರಸ್ಥಾನದಲ್ಲಿದ್ದು, ಅದರಿಂದ ಜನಸಾಮಾನ್ಯರಿಗೆ 4,636 ಕೋಟಿ ರೂಪಾಯಿಗಳ ನಷ್ಟವಾಗಿರುತ್ತದೆ. ನಂತರದ ಸ್ಥಾನ ಹೂಡಿಕೆ ಕುರಿತಾದ ಸೈಬರ್ ಅಪರಾಧವಾಗಿದ್ದು, ಅದರಿಂದ ಜನರಿಗೆ 3,216 ಕೋಟಿ ರೂಪಾಯಿಗಳ ನಷ್ಟವಾಗಿರುತ್ತದೆ. ಮೂರನೇ ಸ್ಥಾನದಲ್ಲಿ ಡಿಜಿಟಲ್ ಅರೆಸ್ಟ್(ಬಂಧನ) ಸೈಬರ್ ಅಪರಾಧವಿದ್ದು, ಇದರಿಂದ ಜನರಿಗೆ 1,616 ಕೋಟಿ ರೂಪಾಯಿಗಳ ನಷ್ಟವಾಗಿರುತ್ತದೆ. ಅದೇ I4C ವರದಿಯ ಪ್ರಕಾರ ನಮ್ಮ ಕರ್ನಾಟಕ ರಾಜ್ಯ ದೇಶದಲ್ಲೇ ಹಣ ಕಳೆದುಕ್ಕೊಂಡ ರಾಜ್ಯಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು, ಅದು ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ 2,047.2 ಕೋಟಿಯಷ್ಟು ಹಣವನ್ನು ವಿವಿಧ ಸೈಬರ್ ಅಪರಾಧಕ್ಕೆ ಕಳೆದುಕೊಂಡಿರುತ್ತದೆ ಮತ್ತು ಇದು ಕಳೆದ ವರ್ಷಕ್ಕೆ ಹೋಲಿಸಿದರೆ 137% ಹೆಚ್ಚಿರುತ್ತದೆ. ರಾಜಸ್ತಾನದ ಭರತ್ಪೂರ್ ಮತ್ತು ಉತ್ತರ ಪ್ರದೇಶದ ಮಥುರ 2024 ರಲ್ಲಿ ಸೈಬರ್ ಅಪರಾದಿಗಳ ನೆಚ್ಚಿನ ಕೇಂದ್ರಗಳಾಗಿವೆ, ಇದರಿಂದ ಹರ್ಯಾಣದ ನೂಹ್ ಮತ್ತು ಝಾರ್ಕಂಡ್ ನ ಜಾಂತಾರ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.  

 ಮೇಲೆ ವರದಿಯಾದ ಸಂಖ್ಯೆಗಳು  ಆತಂಕಕಾರಿಯಾಗಿದ್ದು, ಅದಕ್ಕೆ ಉತ್ತರವಾಗಿ ಭಾರತ ಸರಕಾರವು ಕಳೆದ ವರ್ಷದಲ್ಲಿ ಸೈಬರ್ ಅಪರಾಧವನ್ನು ತಡೆಗಟ್ಟಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಅದರಲ್ಲಿ ಪ್ರಮುಖವಾದವು – ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಸೈಬರ್ ಅಪರಾಧಕ್ಕೆ ಬಳಸಲಾಗುತ್ತಿದ್ದ 6.69 ಲಕ್ಷ ಸಿಮ್ ಕಾರ್ಡ್ ಮತ್ತು 1.32 ಲಕ್ಷ  ಮೊಬೈಲ್ ಫೋನ್ (IMEI) ಗಳನ್ನು ಹಾಗು 1700 skype ಮತ್ತು 59 ಸಾವಿರ ವಾಟ್ಸಪ್ಪ್ ಅಕೌಂಟ್ ಗಳನ್ನು ಬ್ಲಾಕ್ ಮಾಡಲಾಗಿದೆ. ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳೊಂದಿಗೆ AI ಆಧಾರಿತ ಸೈಬರ್ ಅಪರಾಧಿಗಳ ಶಂಕಿತ ಪಟ್ಟಿ ತಯಾರಿಸಿದ್ದು, ಅದರ ಸಹಾಯದಿಂದ ಈ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಶಂಕಿತ 5.6 ಲಕ್ಷ ಹಣಕಾಸು ವಹಿವಾಟುಗಳನ್ನು ತಡೆಹಿಡಿದಿದ್ದು, ಅದರಿಂದ  1400 ಕೋಟಿ ರೂಪಾಯಿಯಷ್ಟು ಹಣವನ್ನು ಸೈಬರ್ ಅಪರಾಧಿಗಳಿಗೆ ಹೋಗುವುದನ್ನು ತಡೆಹಿಡಿಯಲಾಗಿದೆ. ಇದಲ್ಲದೆ ಖಾಸಗಿ ಸಂಸ್ಥೆಯಾದ ಏರ್ಟೆಲ್ AI ಆಧಾರಿತ ಪ್ರೋಗ್ರಾಮ್ ಸಹಾಯದಿಂದ 8 ಬಿಲಿಯನ್ ಸ್ಪ್ಯಾಮ್ ದೂರವಾಣಿ ಕರೆಗಳನ್ನು  ಮತ್ತು 800 ಮಿಲಿಯನ್ ಶಂಕಿತ ಮೆಸೇಜ್ ಗಳನ್ನು ತಡೆದಿದೆ ಮತ್ತು 252 ಮಿಲಿಯನ್ ಗ್ರಾಹಕರಿಗೆ ಶಂಕಿತ ಕರೆಗಳ ಬಗ್ಗೆ ಮುನ್ನೆಚ್ಚರಿಕೆ ಸಂದೇಶವನ್ನು ಕೊಟ್ಟಿದೆ. ಇದರಿಂದ ಅನೇಕ ಸೈಬರ್ ಅಪರಾಧಗಳು ಆಗದಂತೆ ತಡೆಹಿಡಿಯಲಾಗಿದೆ. 

2024 ರಲ್ಲಿ ಆದ ಪ್ರಮುಖ ಸೈಬರ್ ಅಪರಾಧಗಳ ಘಟನೆಗಳ ಪಟ್ಟಿಯಲ್ಲಿ WazirX ಕ್ರಿಪ್ಟೋ ಎಕ್ಸ್ಚೇಂಜ್ ನಲ್ಲಿ ಆದ 230 USD ಮಿಲಿಯನ್ ಕಳ್ಳತನ  ಮೊದಲ ಸ್ಥಾನದಲ್ಲಿ ಬರುತ್ತದೆ, ಎರಡನೇ ಸ್ಥಾನದಲ್ಲಿ BSNL ನಲ್ಲಿ ನಡೆದ ಲಕ್ಷಾಂತರ ಗ್ರಾಹಕರ ಮತ್ತು Boat ಇಂಡಿಯಾ ಸಂಸ್ಥೆಯ ಸರ್ವರ್ ನಿಂದ 75 ಲಕ್ಷ ಗ್ರಾಹಕರ ಮಾಹಿತಿಯನ್ನು ಕದ್ದು ಇಂಟರ್ನೆಟ್ ನಲ್ಲಿ ಹರಾಜಿಗೆ ಇಡಲಾಗಿತ್ತು. ಮೋತಿಲಾಲ್ ಓಸ್ವಾಲ್ ಮತ್ತು ಪಾಲಿ ಕ್ಯಾಬ್ ಸಂಸ್ಥೆಯ ಮೇಲೆ ನಡೆದ ರಾನ್ಸಮ್‌ವೇರ್ ದಾಳಿ ಮೂರನೇ ಸ್ಥಾನದಲ್ಲಿರಿತ್ತದೆ. ಹಾಗೆ ಅಂಕಿ ಅಂಶಗಳ ಪ್ರಕಾರ 2024 ರಲ್ಲಿ ಭಾರತದಲ್ಲಿ ನಡೆದ ಪ್ರಮುಖ ಸೈಬರ್ ಅಪರಾಧಗಳ ಪಟ್ಟಿಯಲ್ಲಿ ಸೋಶಿಯಲ್ ಇಂಜಿನಿಯರಿಂಗ್ ಸೈಬರ್ ಅಪರಾಧಗಳು ಮೊದಲ ಸ್ಥಾನದಲ್ಲಿ ಮುಂದುವರೆದಿದ್ದು, ಟ್ರೇಡಿಂಗ್ ಮತ್ತು ಹೂಡಿಕೆ ಸಂಬಂದಿತ ಸೈಬರ್ ಅಪರಾಧಗಳು ಎರಡನೇ ಸ್ಥಾನದಲ್ಲಿದ್ದು ಮತ್ತು ಹೊಸ ಸೈಬರ್ ಅಪರಾಧವಾದ ಡಿಜಿಟಲ್ ಅರೆಸ್ಟ್ ಮೂರನೇ ಸ್ಥಾನದಲ್ಲಿದೆ.

ಅಂಕಿ ಅಂಶಗಳು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ