ಏರ್‌ಟೆಲ್

ಏರ್‌ಟೆಲ್ ತರಲಿದೆ ಸ್ಪ್ಯಾಮ್ ಕಾಲ್ ಮತ್ತು ಮೆಸೇಜ್ ಗಳಿಂದ ಮುಕ್ತಿ ??

ಈ ಅಂಕಣದಲ್ಲಿ ನಾನು ಏರ್‌ಟೆಲ್ ಕಂಪನಿಯು ತನ್ನ ಸ್ವಾಮ್ಯದ AI ಅಲ್ಗಾರಿದಮ್ ಬಳಸಿಕ್ಕೊಂಡು ಹೇಗೆ ಸ್ಪ್ಯಾಮ್ ಕರೆಗಳು ಮತ್ತು SMS ಗಳನ್ನು ತಡೆಯಲು ಪ್ರಯತ್ನಿಸುತ್ತಿದೆ.

ಈ ಸೆಪ್ಟೆಂಬರ್ 26 ರ ಬೆಳಿಗ್ಗೆಯಿಂದ, ಏರ್‌ಟೆಲ್ ಚಂದಾದಾರರು ಆಂತರಿಕ AI ಅಲ್ಗಾರಿದಮ್ ಸಹಾಯದಿಂದ ಸ್ಪ್ಯಾಮ್ ಅಥವಾ ವಂಚನೆ ಎಂದು ಪತ್ತೆಯಾದ ಸಂಖ್ಯೆಯಿಂದ ಕರೆ ಬಂದಾಗಲೆಲ್ಲಾ ತಮ್ಮ ಡಯಲರ್ ಸ್ಕ್ರೀನ್‌ಗಳಲ್ಲಿ ‘ಶಂಕಿತ ಸ್ಪ್ಯಾಮ್’ ಬ್ಯಾನರ್ ಅನ್ನು ಮತ್ತು ಸಂಭಾವ್ಯ ದುರುದ್ದೇಶಪೂರಿತ ಲಿಂಕ್‌ಗಳನ್ನು ಹೊಂದಿರುವ SMS ಗಳನ್ನು ‘ಶಂಕಿತ ಸ್ಪ್ಯಾಮ್’ ಎಂಬ ಫ್ಲ್ಯಾಗ್ ನೋಡಲು ಪ್ರಾರಂಭಿಸಿದರು. ಇದನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಏರ್‌ಟೆಲ್ ಚಂದಾದಾರರಿಗೆ ಸಕ್ರಿಯಗೊಳಿಸಲಾಗಿದೆ.

ಈ ಏರ್‌ಟೆಲ್ ಕಂಪನಿಯು AI ಅಲ್ಗಾರಿದಮ್ ಹೇಗೆ ಕೆಲಸ ಮಾಡುತ್ತದೆ?

ಅವುಗಳನ್ನು ಪತ್ತೆಹಚ್ಚುವ ಸಲುವಾಗಿ, ಏರ್‌ಟೆಲ್ ಪ್ರತಿ ಕರೆ ಮತ್ತು SMS ಎರಡು ಸ್ಪ್ಯಾಮ್ ಫಿಲ್ಟರ್‌ಗಳ(ನೆಟ್‌ವರ್ಕ್ ಲೇಯರ್‌ ಮತ್ತು ಐಟಿ ಸಿಸ್ಟಮ್ಸ್ ಲೇಯರ್‌) ಮೂಲಕ ಹಾದುಹೋಗುವಂತೆ ಮಾಡುತ್ತದೆ. ಏರ್‌ಟೆಲ್ ಕಂಪನಿಯು ತನ್ನ ಸ್ವಾಮ್ಯದ AI ಅಲ್ಗಾರಿದಮ್ ಸುಮಾರು 2 ಮಿಲಿಸೆಕೆಂಡ್‌ಗಳಲ್ಲಿ ಕರೆ ಮತ್ತು SMSಗಳಿಗೆ ಸಂಬಂಧಿಸಿದ 250 ವಿಭಿನ್ನ ನಿಯತಾಂಕಗಳನ್ನು(parameters) ವಿಶ್ಲೇಷಿಸುತ್ತದೆ ಎಂದು ಹೇಳಿಕೊಂಡಿದೆ. ಅವುಗಳಲ್ಲಿ ಕರೆಗಳ ವೇಗ, ಸ್ಮಾರ್ಟ್ ಫೋನ್ ಬದಲಾವಣೆಯ ಆವರ್ತನ(frequency), ಕರೆಗಳನ್ನು ಮಾಡುವ ವಿಭಿನ್ನ ಸ್ಥಳಗಳು, ಉತ್ತರಿಸದ ಕರೆಗಳ ಸಂಖ್ಯೆಗಳು, DND ದೂರುಗಳು, ಒಳಬರುವ ಮತ್ತು ಹೊರಹೋಗುವ ಕರೆ ಪ್ರವೃತ್ತಿಗಳು, ಮಾಡಿದ ಕರೆಗಳ ಪ್ರಮಾಣ, SIM ಕಾರ್ಡ್‌ಗಳ ಬದಲಾವಣೆ, ಖರೀದಿಯ ಸ್ಥಳ, ಅತಿ ಕಡಿಮೆ ಅವಧಿಯ ಕರೆಗಳ ಸಂಖ್ಯೆ, ರೋಬೋಕಾಲಿಂಗ್ ಸಾಧನಗಳು, ನೆಟ್‌ವರ್ಕ್‌ನಲ್ಲಿ SIM ಕಾರ್ಡ್‌ಗಳ ಬಳಕೆ ಅವಧಿ, ಒಂದೇ KYC ನಲ್ಲಿ ನೋಂದಾಯಿಸಲಾದ SIM ಕಾರ್ಡ್‌ಗಳ ಸಂಖ್ಯೆ, ಸೈಬರ್ ಸೆಲ್‌ಗಳಿಂದ ಇನ್‌ಪುಟ್‌ಗಳು ಮತ್ತು ಸರಕಾರಿ ಅನುಮಾನಾಸ್ಪದ ಮತ್ತು ನಿಷೇಧಿತ ಪಟ್ಟಿ ಡೇಟಾಬೇಸ್ ಒಳಗೊಂಡಿರುವ ಈ ಕೆಲವು ಸೂಚಕಗಳನ್ನು ಏರ್‌ಟೆಲ್ ಕಂಪನಿಯ AI ಅಲ್ಗಾರಿದಮ್ ಅಧ್ಯಯನ ಮಾಡುತ್ತದೆ. ಈ ಮಾಹಿತಿಯನ್ನು ತಿಳಿದಿರುವ ಸ್ಪ್ಯಾಮ್ ಮಾದರಿಗಳ ವಿರುದ್ಧ ಪರಿಶೀಲಿಸಲಾಗುತ್ತದೆ, ದೊರೆತ ಫಲಿತಂಶದ ಪ್ರಕಾರ ಸಿಸ್ಟಮ್ ಶಂಕಿತ ಸ್ಪ್ಯಾಮ್ ಕರೆಗಳು ಮತ್ತು SMS ಗಳನ್ನು ನಿಖರವಾಗಿ ಫ್ಲ್ಯಾಗ್ ಮಾಡುತ್ತದೆ. AI ಅಲ್ಗಾರಿದಮ್ ಸಂದೇಶಗಳನ್ನು ಓದುವುದಿಲ್ಲಾ, ಹಾಗಾಗಿ ಇಲ್ಲಿ ಸಂದೇಶದ ಗೌಪ್ಯತೆಯನ್ನು ಕೂಡ ಕಾಪಾಡಲಾಗುತ್ತದೆ.

ಏರ್‌ಟೆಲ್ ಕಂಪನಿಯ ಆಂತರಿಕ ಪರೀಕ್ಷೆ ವರದಿಗಳ ಪ್ರಕಾರ, ಇದು ಸ್ಪ್ಯಾಮ್ ಕರೆಗಳಲ್ಲಿ 97% ಮತ್ತು ಸ್ಪ್ಯಾಮ್ SMS ಗಳಲ್ಲಿ 99.5% ಪತ್ತೆಮಾಡುವ ನಿಖರತೆಯನ್ನು ಹೊಂದಿದೆಯಂತೆ. ಮತ್ತೊಂದು ವರದಿಯ ಪ್ರಕಾರ, ಏರ್‌ಟೆಲ್‌ನ AI ಅಲ್ಗಾರಿದಮ್ 115 ಮಿಲಿಯನ್ ಸ್ಪ್ಯಾಮ್ ಕರೆಗಳನ್ನು, 3.6 ಮಿಲಿಯನ್ ಸ್ಪ್ಯಾಮ್ ಸಂದೇಶಗಳನ್ನು ಮೊದಲ ದಿನವೇ ಪತ್ತೆಮಾಡಿದೆ. ಇದು ನಿಜವಾದರೆ, ಏರ್‌ಟೆಲ್ ಕಂಪನಿಯ ಎಲ್ಲಾ ಚಂದಾದಾರರು ಈ ವಿಷಯದಲ್ಲಿ ನೆಮ್ಮದಿಯನ್ನು ಕಾಣಬಹುದು. ಈ ವಿಷಯವಾಗಿ, ರಿಲಯನ್ಸ್ ಜಿಯೊ ಕೂಡ ಈ ತಿಂಗಳು ನಡೆದ ತನ್ನ ಕಂಪನಿ AGM ನಲ್ಲಿ “ಜಿಯೊ ಬ್ರೈನ್” ಎಂಬ AI ಅಲ್ಗಾರಿದಮ್ ತಯಾರಿಸುತ್ತಿದ್ದು ಅದನ್ನು ಶೀಘ್ರದಲ್ಲೇ ತನ್ನ ಎಲ್ಲಾ ಚಂದಾದಾರರಿಗೂ ಕೊಡಲಿದೆ ಎಂದು ಘೋಷಿಸಿತ್ತು. BSNL ಮತ್ತು Vodaphone ಇದರ ಬಗ್ಗೆ ಏನು ಮಾಡುತ್ತಿದೆ ಎಂಬುದರ ಬಗ್ಗೆ ಎಲ್ಲೂ ಸುದ್ದಿಯಿಲ್ಲಾ, ಆದರೆ TRAI ಕಳೆದ ಆಗಸ್ಟ್ ೭ರಂದು ಸ್ಪ್ಯಾಮ್ ತಡೆಗಟ್ಟಲು ಎಲ್ಲಾ ದೂರವಾಣಿ ಪೂರೈಕೆದಾರರಿಗೂ ಆದೇಶವನ್ನು ಮಾಡಿತ್ತು.

ಹೆಚ್ಚಿನ ಮಾಹಿತಿಗಾಗಿ ಏರ್‌ಟೆಲ್ ನ ವಿಡಿಯೋವನ್ನು ನೋಡಿ : https://www.youtube.com/watch?v=7FdepARTeVg

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ