aadhaar pan link frauds

ಆಧಾರ್ ಪಾನ್ ಜೋಡಣೆ ಸಂಭಂದಿತ ಹೊಸ ವಂಚನೆಯ ಬಗ್ಗೆ ಹುಷಾರಾಗಿರಿ !

ಈ ಅಂಕಣ ಹೊಸ ಸೈಬರ್ ಕ್ರೈಂ ಆಧಾರ್- ಪಾನ್ ಜೋಡಣೆ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.

ದೇಶದಲ್ಲಿ ಇತ್ತೀಚಿಗೆ ಭಾರೀ ಚರ್ಚೆ ನಡೆಯುತ್ತಿದ್ದ ವಿಚಾರ ಆಧಾರ್ ಕಾರ್ಡ್ ಮತ್ತು ಪರ್ಮನೆಂಟ್ ಅಕೌಂಟ್ ನಂಬರ್(ಪಾನ್) ಕಾರ್ಡ್​ ಲಿಂಕ್ ಅಥವಾ ಜೋಡಣೆ​ ಮಾರ್ಚ್ 31ರೊಳಗೆ ಮಾಡುವುದು, ಇಲ್ಲದಿದ್ದರೆ ನಿಷ್ಕ್ರಿಯಗೊಂಡ ಪಾನ್ ಕಾರ್ಡನ್ನು ಪುನಃ ಸಕ್ರಿಯಗೊಳಿಸಲು ೧೦೦೦ ರೂಪಾಯಿ ದಂಡ ಕಟ್ಟಿ. ಈ ಗಡುವನ್ನು ಜೂನ್ 30ರವರೆಗೂ ವಿಸ್ತರಿಸಲಾಗಿದೆ. ಒಂದು ವೇಳೆ ಜೋಡಣೆ ಮಾಡದಿದ್ದರೆ ಪಾನ್ ಕಾರ್ಡ್‌ ರದ್ದಾಗಲಿದೆ, ಬ್ಯಾಂಕಿಂಗ್ ವ್ಯವಹಾರಗಳು ಸಾಧ್ಯವಾಗುವುದಿಲ್ಲ. ಅಲ್ಲದೇ ಆದಾಯ ತೆರಿಗೆ ಪಾವತಿ ಮಾಡುವಾಗ ಶೇ 10ರಷ್ಟು ತೆರಿಗೆ ಹೆಚ್ಚು ಪಾವತಿ ಮಾಡಬೇಕು ಎಂಬ ಕಾರಣಕ್ಕಾಗಿ ಜನರು ಸಹ ಆತಂಕಗೊಂಡಿದ್ದರು. ಆದ್ದರಿಂದ ಕೊನೆಯ ದಿನಗಳಲ್ಲಿ ಉಂಟಾಗಿದ್ದ ಆತಂಕವನ್ನೇ ಬಂಡವಾಳವನ್ನಾಗಿಸಿ ವಂಚಕರು ವಿವಿಧ ರೀತಿಯ ಸೈಬರ್ ಅಪರಾಧಗಳನ್ನು ಎಸಗಿದರು. ನೀವು ನನ್ನ ಆಧಾರ್ ವಂಚನೆಗಳು ಮತ್ತು ಪಾನ್ ವಂಚನೆಗಳು ಅಂಕಣವನ್ನು ಹೆಚ್ಚಿನ ವಿವರಗಳಿಗಾಗಿ ಸಂದರ್ಶಿಸಿ.

ಆಧಾರ್ ಪಾನ್ ಜೋಡಣೆ ವಂಚನೆ ಹೇಗೇ ಮಾಡುತ್ತಾರೆ :-

ನಿಮಗೆ sms ಅಥವಾ ವಾಟ್ಸಪ್ಪ್ ಮೆಸೇಜ್ ಬರುತ್ತದೆ – “ನೀವು ಆಧಾರ್ ಮತ್ತು ಪಾನ್ ಜೋಡಣೆ ಮಾಡಲು ಕೂಡಲೇ ಈ ಸಂಖ್ಯೆಗೆ ಕರೆ ಮಾಡಿ, ಇಲ್ಲದಿದ್ದರೆ ನಿಮ್ಮ ಪಾನ್  ಕಾರ್ಡನ್ನು ನಿಷ್ಕ್ರಿಯಗೊಳಿಸಲಾಗುವುದು”. ನೀವು ಹೆದರಿಕೊಂಡು ಕೊಟ್ಟಿರುವ ಸಂಖ್ಯೆಗೆ ಕರೆ ಮಾಡುತ್ತೀರ, ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಸರಕಾರಿ ಅಧಿಕಾರಿಯೆಂದು ಗುರಿತಿಸಿಕೊಂಡು ತಮಗೆ ಜೋಡಣೆ ಮಾಡಲು ಸಹಾಯ ಮಾಡುತ್ತೇನೆಂದು ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಚಿತ್ರಗಳನ್ನು ತನ್ನ ಮೊಬೈಲ್ ಸಂಖ್ಯೆಗೆ ವಾಟ್ಸಾಪ್ ಮಾಡಿಸಿಕೊಳ್ಳುತ್ತಾನೆ, ನಂತರ ನಿಮ್ಮಿಂದ OTP ಪಡೆದು ಈ ಕೆಳಗಿನ ವಿಧದಲ್ಲಿ ನಿಮ್ಮನ್ನು ವಂಚಿಸುತ್ತಾನೆ :

 • ಸಂಸ್ಕರಣಾ ಶುಲ್ಕ ಅಂತ ಹೇಳಿ ಮುನ್ನೂರರಿಂದ ಸಾವಿರ ರೂಪಾಯಿವರಗೆ ತನ್ನ ನಂಬರಿಗೆ UPI ಮಾಡಿರೆನ್ನುತ್ತಾರೆ.
 • ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಉಪಯೋಗಿಸಿ ಹೊಸ ಬ್ಯಾಂಕ್ ಖಾತೆಯನ್ನು ತೆಗೆಯುತ್ತಾನೆ, ಮತ್ತು ಅದನ್ನು ಮನಿ ಲಾಂಡರಿಂಗಾಗಿ ಉಪಯೋಗಿಸುತ್ತಾನೆ, ನಂತರದ ಪೋಲೀಸರ ತನಿಖೆಯಲ್ಲಿ ನೀವು ಸಿಕ್ಕಿಬೀಳುತ್ತೀರಿ.
 • ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಬಳಿಸಿ ಸಾಲವನ್ನು ಅಥವಾ ಕ್ರೆಡಿಟ್ ಕಾರ್ಡನ್ನು ಪಡೆಯುತ್ತಾರೆ, ಅದನ್ನು ನೀವು ತೀರಿಸಬೇಕಾಗುತ್ತದೆ.
 • ನಿಮ್ಮ ಪಾನ್ ಕಾರ್ಡ್ ಬಳಿಸಿ ವಂಚಕರು ಮಾಡಿದ ದೊಡ್ಡ ಮೊತ್ತದ ಹಣದ ಕಳ್ಳ ವ್ಯವಹಾರಗಳಿಗೆ ನೀವು ಉತ್ತರಿಸಬೇಕಾಗುತ್ತದೆ.

ಆಧಾರ್ ಪಾನ್ ಜೋಡಣೆ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-

 • ಆಧಾರ್ ಮತ್ತು ಪಾನ್ ಕಾರ್ಡನ್ನು ಜೋಡಿಸಲು ನೀವು www.incometax.gov.in ಜಾಲತಾಣವನ್ನು ಉಪಯೋಗಿಸಿ. ಕರೆಯ ಅಥವಾ ಬೇರಾವ ಜಾಲತಾಣದ ಮೂಲಕ ಜೋಡಣೆ ಸಾದ್ಯವಿಲ್ಲಾ.
 • ಯಾರೊಂದಿಗೂ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡಿನ ಚಿತ್ರವನ್ನು ಹಂಚಿಕೊಳ್ಳಬೇಡಿ, ಹಾಗೊಂದು ರೀತಿ ಕೊಡಲೇಬೇಕಾದರೆ ಅದರ ಜೆರಾಕ್ಸ್ ಕಾಪಿಯ ಚಿತ್ರವನ್ನು ಕೊಡಿ ಮತ್ತು ಯಾವ ಕಾರಣಕ್ಕೆ ಕೊಡುತ್ತಿರುವಿರೆಂದು ದಿನಾಂಕದೊಂದಿಗೆ ಬರೆಯಿರಿ.
 • ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಮತ್ತು ಪಾನ್ ಬದಲು ಡ್ರೈವಿಂಗ್ ಲೈಸನ್ಸ್ ಅಥವಾ ವೋಟರ್ ID ಬಳಸಿ.
 • ನಿಮ್ಮ ಸಿಬಿಲ್ ಸ್ಕೋರ್ ಮತ್ತು ವರದಿಯನ್ನು ಹಾಗು incometax ಜಾಲತಾಣದಲ್ಲಿ AIS ವರದಿಯನ್ನು ನಿಯಮಿತವಾಗಿ ಅನಿರೀಕ್ಷಿತ ಟ್ರಾನ್ಸಾಕ್ಷನ್ ಬಗ್ಗೆ ಪರೀಕ್ಷಿಸುತ್ತಿರಿ.
 • ನಿಮ್ಮ ಆಧಾರ್ ಕಾರ್ಡಿನ ಬಯೋಮೆಟ್ರಿಕ್ ದೃಡೀಕರಣವನ್ನು ಆಧಾರ್ ಜಾಲತಾಣದಲ್ಲಿ ಲಾಕ್ ಮಾಡಿ, ಬೇಕೆಂದಾಗ ಅನ್ಲಾಕ್ ಮಾಡಿ.
 • ನೀವು ಆಧಾರ್ ಕಾರ್ಡಿನ ವರ್ಚುಯಲ್ ID ಯನ್ನು ಬೇಕೆಂದಾಗ ಆಧಾರ್ ಜಾಲತಾಣದಲ್ಲಿ ಸೃಷ್ಟಿಸಿ ದೃಡೀಕರಣಕ್ಕಾಗಿ ಬಳಸಿ ನಂತರ ಬದಲಿಸಬಹುದು.
 • ನೀವು ಆಧಾರ್ ಕಾರ್ಡ್ ಪಡೆದ ಮೇಲೆ ಪಾನ್ ಕಾರ್ಡ್ ಮಾಡಿಸಿದ್ದರೆ, ಪುನಃ ಜೋಡಣೆಯ ಅವಶ್ಯಕತೆ ಇರುವುದಿಲ್ಲ. 

ನೀವು ಆಧಾರ್ ಪಾನ್ ಜೋಡಣೆ ವಂಚನೆಗೆ ಒಳಗಾಗಿದ್ದರೆ :-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ನಿಮ್ಮ ಆಧಾರ್ ಕಾರ್ಡನ್ನು uidai.gov.in ಜಾಲತಾಣದಲ್ಲಿ ಲಾಕ್ ಮಾಡಿ. ಅಕೌಂಟ್ ತೆರೆದ ಅಥವಾ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕಿನಲ್ಲೂ ದೂರು ದಾಖಲಿಸಿ ಹಾಗು ಕಾನೂನು ಕ್ರಮ ಜರಗಿಸಿ.

ಆಧಾರ್ ಪಾನ್ ಜೋಡಣೆ
ಮೇಲಿನ ಪಾನ್-ಆಧಾರ್ ಲಿಂಕ್ ವಂಚನೆಯ ಬಗ್ಗೆ ಪ್ರತಿನಿಧಿ (#pratinidhi) ದಿನ ಪತ್ರಿಕೆಯಲ್ಲಿ ಮುದ್ರಿತವಾದ ನನ್ನ ಅಂಕಣ. ನಿಮಗೇ ಉಪಯುಕ್ತವೆನ್ನಿಸಿದರೆ ಈ ಪೋಸ್ಟರನ್ನು ನಿಮ್ಮ ಕುಟುಂಬ ಹಾಗು ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ