ಗೂಗಲ್ ಸರ್ಚ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಹುಷಾರ್!

ಗೂಗಲ್ ಸರ್ಚ್ ಅಥವಾ SEO ಪಾಯಿಸನಿಂಗ್ ಎಂಬ ಹೊಸ ಮಾದರಿಯ ಸೈಬರ್ ವಂಚನೆಯ ಮಾದರಿಗಳ ಬಗ್ಗೆ ಈ ಅಂಕಣ ತಿಳಿಸಿಕೊಡವುದಲ್ಲದೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ.

ಈ ಕೆಳಗಿನ ಇತ್ತೀಚಿನ ಮೂರು ಸುದ್ದಿಯನ್ನು ಓದಿ:

೧. ರಾಜಸ್ಥಾನದ ಒಬ್ಬಳು ಮಹಿಳೆ SBI ಕಸ್ಟಮರ್ ಕೇರ್ ನಂಬರಿಗಾಗಿ ಗೂಗಲ್ ಸರ್ಚ್ ಮಾಡಿದಳು ಮತ್ತು ದೊರೆತ ಮೊದಲ ದೂರವಾಣಿ ಸಂಖ್ಯೆಗೆ ದೂರವಾಣಿ ಕರೆ ಮಾಡಿದಳು, ಆಕಡೆ SBI ಉದ್ಯೋಗಿಯೆಂದು ಗುರುತಿಸಿಕೊಂಡ ವ್ಯಕ್ತಿಯೊಬ್ಬ ಅವಳಿಂದ ದೊರೆತ ಮಾಹಿತಿಯಿಂದ ನಾಲ್ಕು ಲಕ್ಷ ಲೂಟಿ ಮಾಡಿದನು.

೨. ವ್ಯಕ್ತಿಯೊಬ್ಬ ಗೂಗಲ್ ಸರ್ಚ್ ಮುಖಾಂತರ ದೊರೆತ ICICI ಬ್ಯಾಂಕಿನ ಜಾಲತಾಣದ ವಿಳಾಸವನ್ನು ತೆರೆದು ತನ್ನ ಯೂಸರ್ ಐಡಿ ಮತ್ತು ಪಾಸ್ವರ್ಡನ್ನು ನಮೂದಿಸಿದನು, ಅದು ನಕಲಿ ಜಾಲತಾಣವಾಗಿತ್ತು. ಖದೀಮರು ದೊರೆತ ಮಾಹಿತಿಯಿಂದ ಮೂರು ಲಕ್ಷದಷ್ಟು ಲೂಟಿ ಮಾಡಿದ್ದರು.

೩. ದೆಹಲಿಯ ವ್ಯಕ್ತಿಯೊಬ್ಬ ಹರಿದ್ವಾರದಲ್ಲಿ ಹೋಟೆಲಿನ ಗೂಗಲ್ ಸರ್ಚ್ ಮುಖಾಂತರ ದೊರೆತ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮ್ಯಾನೇಜರ್ ಹೇಳಿದ ಸಂಖ್ಯೆಗೆ ಮುಂಗಡ ಬುಕಿಂಗ್ ಗಾಗಿ ಹತ್ತು ಸಾವಿರ ರೂ ಕಳುಹಿಸಿದನು, ಅಲ್ಲಿ ಹೋದ ಮೇಲೆ ಅವನಿಗೆ ಮೋಸದ  ಅರಿವಾಯಿತು.

ಇವೆಲ್ಲವೂ ಗೂಗಲ್ ಸರ್ಚ್ ಅಥವಾ SEO ಪಾಯಿಸನಿಂಗ್ ಎಂಬ ಹೊಸ ಮಾದರಿಯ ಸೈಬರ್ ವಂಚನೆಯ ಮಾದರಿಗಳು. 

ಗೂಗಲ್ ಸರ್ಚ್ ವಂಚನೆ ಹೇಗೆ ಕೆಲಸ ಮಾಡುತ್ತದೆ :

ಸೈಬರ್ ಖದೀಮರು ಮೊದಲು ಪ್ರಮುಖ ಜಾಲತಾಣಗಳನ್ನೇ ಹೋಲುವಂತ ತದ್ರೂಪು ನಕಲಿ ಜಾಲತಾಣಗಳನ್ನು ಸೃಷ್ಟಿಸುತ್ತಾರೆ ಮತ್ತು ಅಸಲಿ ಜಾಲತಾಣದ URLಗೆ ಹತ್ತಿರದ URLನ್ನು(www.icicibank.com ಬದಲು www.icici-bank.com) ನಕಲಿ ಜಾಲತಾಣವನ್ನು ನೊಂದಾಯಿಸುತ್ತಾರೆ ಹಾಗು ಅಸಲಿ ಕಸ್ಟಮರ್ ಕೇರ್ ಸಂಖ್ಯೆಯ ಬದಲು ತಮ್ಮ ದೂರವಾಣಿ ಸಂಖ್ಯೆಯನ್ನು ಕೊಡುತ್ತಾರೆ. ಅದನ್ನು ಗೂಗಲ್ ಆಡ್ಸ್ ಹಾಗು ಸರ್ಚ್ ಇಂಜಿನ್ ಆಪ್ಟಿಮೈಝೆಶನ್(SEO) ಪದ್ದತಿಯನ್ನು ಉಪಯೋಗಿಸಿ ಯಾರಾದರು ಅಸಲಿ ಜಾಲತಾಣದ ಬಗ್ಗೆ ಏನೇ ಗೂಗಲ್ ಸರ್ಚ್ ಮಾಡಿದರೂ  ಈ ನಕಲಿ ಜಾಲತಾಣವೇ ಗೂಗಲ್ ಸರ್ಚ್ ನ ಮೊದಲ ಉತ್ತರವಾಗಿ ಬರುವಂತೆ ಮಾಡುತ್ತಾರೆ. ಜನರು ಗೂಗಲ್ ಸರ್ಚ್ ನ ಮೊದಲ ಉತ್ತರವಾಗಿ ಬರುವ ಜಾಲತಾಣ ಅಥವಾ ಮಾಹಿತಿಯೇ ಸರಿಯೆಂದು ತಿಳಿದು ಮೋಸಹೋಗುತ್ತಾರೆ.

ಗೂಗಲ್ ಸರ್ಚ್ ವಂಚನೆಯಿಂದ ಸುರಕ್ಷಿತವಾಗಲು ನೀವು :-

  • ಯಾವಾಗಲು ನಿಮ್ಮ ಬ್ಯಾಂಕಿನ ಜಾಲತಾಣದ URL ಅಥವಾ ಕಸ್ಟಮರ್ ಕೇರ್ ಸಂಖ್ಯೆಯನ್ನು ನಿಮ್ಮ ಪಾಸ್ಬುಕ್ ಅಥವಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡಿನಲ್ಲಿ ಮುದ್ರಿತವಾದ ಮಾಹಿತಿಯನ್ನೇ ಉಪಯೋಗಿಸಿ ಹಾಗು ಗೂಗಲ್ ಸರ್ಚ್ ಉಪಯೋಗಿಸಬೇಡಿ.
  • ಬ್ಯಾಂಕಿಂಗ್ ಹಾಗು ಪೇಮೆಂಟ್ ವೆಬ್ಸೈಟ್ಗಳು ಸೆಕ್ಯೂರ್(ಬ್ರೌಸರ್ರ್ನಲ್ಲಿ https ಯಿಂದ ಶುರುವಾಗ್ತಾ ಇದೆಯ ಅಥವಾ ಬೀಗ ಮುದ್ರೆ)  ಇದೆಯ ಎಂದು ಪರೀಕ್ಷಿಸಿ.
  • ನಿಮ್ಮ ಬ್ಯಾಂಕ್ , ಇಮೇಲ್ ಮತ್ತಿತರ ಮುಖ್ಯ ವೆಬ್ಸೈಟುಗಳಲ್ಲಿ ಡಬಲ್ ಫ್ಯಾಕ್ಟರ್ ಆಥೆಂಟಿಕೇಷನ್ ಇದ್ದರೆ ತಕ್ಷಣ ಅದನ್ನು ಅಳವಡಿಸಿ.
  • ನಿಮಗೆ ಜಾಲತಾಣದ URL ಅಥವಾ ಮುಖಪುಟದಲ್ಲಿ ಏನಾದರೂ ಸಂಶಯ ಬಂದರೆ, ಕೂಡಲೇ ಸೂಕ್ಷ್ಮವಾಗಿ ಇದು ಅಸಲಿ ಜಾಲತಾಣವೇ  ಎಂದು ಪರೀಕ್ಷಿಸಿ.
  • ನೀವು ಕರೆ ಮಾಡಿದಾಗ ಆಕಡೆ ವ್ಯಕ್ತಿ ನಿಮಗೆ ಯೂಸರ್ ಐಡಿ, ಪಾಸ್ವರ್ಡ್, ಕಾರ್ಡಿನ ಫೋಟೋ ಅಥವಾ ಮಾಹಿತಿ, OTP, ಏನಾದರು ಇನ್ಸ್ಟಾಲ್ ಅಥವಾ ಹೈಪೆರಿಲಿಂಕ್ ಕ್ಲಿಕ್ ಮಾಡಲಿಕ್ಕೆ ಹೇಳಿದರೆ ಕೂಡಲೇ ಕರೆ ಬಂದ್ ಮಾಡಿ, ಅಸಲಿ ಕಸ್ಟಮರ್ ಕೇರ್ ಉದ್ಯೋಗಿಗಳು ಇದಾವುದನ್ನು ಕೇಳುವುದಿಲ್ಲ. 
  • ಜಾಲತಾಣ ಯಾವುದಾದರೂ ಅನವಶ್ಯಕ ಪರ್ಮಿಷನ್ ಕೇಳಿದರೆ ಅಥವಾ ಪ್ರೋಗ್ರಾಮ್ ಇನ್ಸ್ಟಾಲ್ ಮಾಡಲು ಹೋದರೆ ಕೂಡಲೇ ಅದನ್ನು ಮುಚ್ಚಿ ಹೊರಬನ್ನಿ.

ನೀವು ಗೂಗಲ್ ಸರ್ಚ್ ವಂಚನೆಗೆ ಬಲಿಯಾಗಿದ್ದರೆ :

ಮೋಸದ ಸಂಶಯ ಬಂದ ಕೂಡಲೇ ನಿಮ್ಮ ಅಕೌಂಟಿನ ಪಾಸ್ವರ್ಡ್ ಬದಲಿಸಿ ಮತ್ತು ಅಸಲಿ ಕಸ್ಟಮರ್ ಕೇರ್ ನಂಬರಿಗೆ ಕರೆ ಮಾಡಿ ದೂರು ದಾಖಲಿಸಿ ಮತ್ತು ನಿಮ್ಮ ವಂಚನೆಗೆ ಸಂಬಂಧಪಟ್ಟ ಬ್ಯಾಂಕ್ ಅಕೌಂಟನ್ನು ಅಥವಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡನ್ನು ತಾತ್ಕಾಲಿಕವಾಗಿ ಬಂದ್ ಮಾಡಿರಿ. ೧೯೩೦ ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರನ್ನು ದಾಖಲಿಸಿ. ನೀವು ಗೂಗಲ್ ಬಳಿಯಲ್ಲಿಯೂ ನಿಮ್ಮ ವಂಚನೆಯ ಬಗ್ಗೆ ದೂರು ದಾಖಲಿಸಬಹುದು.

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ