ಫೋನ್ ನಲ್ಲಿ ‘Yes’ ಅಂದ್ರೆ ಹಣ ಕಾಲಿ. ಹೊಸ ಸೈಬರ್ ವಂಚನೆಯ ಬಗ್ಗೆ ನಿಮಗೆಷ್ಟು ಗೊತ್ತು?
ಇಂದಿನ ಡಿಜಿಟಲ್ ಬ್ಯಾಂಕಿಂಗ್ ಯುಗದಲ್ಲಿ ಫೋನ್, ಆಪ್ ಮತ್ತು ಆನ್ಲೈನ್ ಸೇವೆಗಳು ನಮ್ಮ ಜೀವನವನ್ನು ಸುಲಭವಾಗಿಸಿದ್ದರೂ, ಅವು ಹೊಸ ರೀತಿಯ ಅಪಾಯಗಳನ್ನೂ ಹುಟ್ಟಿ ಹಾಕಿದೆ. ಇತ್ತೀಚೆಗೆ ಭಾರತದಲ್ಲಿ “Yes Scam” ಎಂಬ ವಾಯ್ಸ್ ರೆಕಾರ್ಡಿಂಗ್ ಫ್ರಾಡ್ ಹೆಚ್ಚು ಚರ್ಚೆಯಲ್ಲಿದೆ. ಕೇವಲ ನಿಮ್ಮ ದ್ವನಿ, ಅದರಲ್ಲೂ ವಿಶೇಷವಾಗಿ “ಹೌದು” (Yes) ಎಂಬ ಒಂದೇ ಒಂದು ಪದ ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂದರೆ ನೀವು ನಂಬುತ್ತೀರಾ? ಆದರೆ ಇದು ಸತ್ಯ. ಈ ವಂಚನೆಯಲ್ಲಿ ವಿಶೇಷವಾಗಿ OTP ನೀಡದೆ, ಲಿಂಕ್ ಕ್ಲಿಕ್ ಮಾಡಿಸದೇ, ನಿಮ್ಮ ಧ್ವನಿಯನ್ನು ಮತ್ತು ನಿಮ್ಮ ಒಪ್ಪಿಗೆಯ ಶಬ್ದವನ್ನೇ ಬಳಸಿ ನಿಮ್ಮನ್ನು ಅಥವಾ ನಿಮ್ಮವರನ್ನು ವಂಚಿಸಲು ಬಳಸುತ್ತಾರೆ. ಈ ಅಂಕಣದಲ್ಲಿ ನಾನು ಸರಳ ಬಾಷೆಯಲ್ಲಿ ಈ ವಂಚನೆ ಹೇಗೆ ನಡೆಯುತ್ತದೆ, ಇದರಿಂದ ಬಚಾವಾಗಲು ನೀವು ಏನು ಮಾಡಬೇಕು ಮತ್ತು ನೀವೇನಾದರು ಈ ವಂಚನೆಗೆ ಬಲಿಯಾದರೆ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡಲಿದ್ದೇನೆ.
‘Yes’ ವಂಚನೆ ಎಂದರೇನು? ಹೇಗೆ ಕೆಲಸ ಮಾಡುತ್ತದೆ?
ಇದು ತುಂಬಾ ಸರಳವಾಗಿ ಪ್ರಾರಂಭವಾಗುತ್ತದೆ. ನಿಮಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬರುತ್ತದೆ. ನೀವು ಫೋನ್ ರಿಸೀವ್ ಮಾಡಿದ ತಕ್ಷಣ, ಆ ಕಡೆಯಿಂದ “ಹಲೋ, ನಾನು ಮಾತನಾಡುತ್ತಿರುವುದು ನಿಮಗೆ ಕೇಳಿಸುತ್ತಿದೆಯೇ?” ಅಥವಾ “ನೀವು ಇಂಥವರೇ ಅಲ್ವಾ?” ಎಂಬಂತಹ ಸಾಮಾನ್ಯ ಪ್ರಶ್ನೆಗಳನ್ನು ಕೇಳುತ್ತಾರೆ. ಸಹಜವಾಗಿಯೇ ನಾವು “ಹೌದು” (Yes) ಎಂದು ಉತ್ತರಿಸುತ್ತೇವೆ. ಇಲ್ಲಿಯೇ ಮೋಸ ಅಡಗಿರುವುದು. ವಂಚಕರು ನಿಮ್ಮ ಈ “ಹೌದು” ಎಂಬ ಧ್ವನಿಯನ್ನು ಸೈಬರ್ ಖದೀಮರು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ ಈ ರೆಕಾರ್ಡಿಂಗ್ ಅನ್ನು ದುರುಪಯೋಗಪಡಿಸಿಕೊಂಡು :
- ನೀವು ಅನುಮತಿ ನೀಡಿದಂತೆ ತೋರಿಸುತ್ತಾರೆ
- ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಧ್ವನಿ ದೃಢೀಕರಣವಾಗಿ ಬಳಸುತ್ತಾರೆ
- ಸಾಲ ಪಡೆಯಲು, ಕ್ರೆಡಿಟ್ ಕಾರ್ಡ್ ಪಡೆಯಲು ಅಥವಾ ಹಣವನ್ನು ವರ್ಗಾಯಿಸಲು ಬಳಸುತ್ತಾರೆ
- ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು, ನಿಮ್ಮ ಧ್ವನಿಯನ್ನು ತದ್ರೂಪಾಗಿ ಸೃಷ್ಟಿಸುತ್ತಾರೆ (Voice Cloning). ನಂತರ ಈ ಧ್ವನಿಯನ್ನು ಬಳಸಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಕರೆ ಮಾಡಿ, “ನಾನು ಸಂಕಷ್ಟದಲ್ಲಿದ್ದೇನೆ, ಹಣ ಬೇಕು” ಎಂದು ಹೇಳಿ ಅವರಿಂದ ಹಣ ಪಡೆಯುತ್ತಾರೆ. ಇದರ ಬಗ್ಗೆ ಹಿಂದೆ ದೀರ್ಘವಾಗಿ ಬರೆದಿದ್ದೆ, ಅದನ್ನು ಓದಲು ನೀವು ನನ್ನ ದ್ವಿಭಾಷಾ ಬ್ಲಾಗ್ www.cybermithra.in ಸಂದರ್ಶಿಸಿ.
‘Yes’ ವಂಚನೆ ಎಂದರೇನು? ಹೇಗೆ ಕೆಲಸ ಮಾಡುತ್ತದೆ?
ಇದು ತುಂಬಾ ಸರಳವಾಗಿ ಪ್ರಾರಂಭವಾಗುತ್ತದೆ. ನಿಮಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬರುತ್ತದೆ. ನೀವು ಫೋನ್ ರಿಸೀವ್ ಮಾಡಿದ ತಕ್ಷಣ, ಆ ಕಡೆಯಿಂದ “ಹಲೋ, ನಾನು ಮಾತನಾಡುತ್ತಿರುವುದು ನಿಮಗೆ ಕೇಳಿಸುತ್ತಿದೆಯೇ?” ಅಥವಾ “ನೀವು ಇಂಥವರೇ ಅಲ್ವಾ?” ಎಂಬಂತಹ ಸಾಮಾನ್ಯ ಪ್ರಶ್ನೆಗಳನ್ನು ಕೇಳುತ್ತಾರೆ. ಸಹಜವಾಗಿಯೇ ನಾವು “ಹೌದು” (Yes) ಎಂದು ಉತ್ತರಿಸುತ್ತೇವೆ. ಇಲ್ಲಿಯೇ ಮೋಸ ಅಡಗಿರುವುದು. ವಂಚಕರು ನಿಮ್ಮ ಈ “ಹೌದು” ಎಂಬ ಧ್ವನಿಯನ್ನು ಸೈಬರ್ ಖದೀಮರು ರೆಕಾರ್ಡ್ ಮಾಡಿಕೊಳ್ಳುತ್ತಾರೆ. ನಂತರ ಈ ರೆಕಾರ್ಡಿಂಗ್ ಅನ್ನು ದುರುಪಯೋಗಪಡಿಸಿಕೊಂಡು :
- ನೀವು ಅನುಮತಿ ನೀಡಿದಂತೆ ತೋರಿಸುತ್ತಾರೆ
- ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಧ್ವನಿ ದೃಢೀಕರಣವಾಗಿ ಬಳಸುತ್ತಾರೆ
- ಸಾಲ ಪಡೆಯಲು, ಕ್ರೆಡಿಟ್ ಕಾರ್ಡ್ ಪಡೆಯಲು ಅಥವಾ ಹಣವನ್ನು ವರ್ಗಾಯಿಸಲು ಬಳಸುತ್ತಾರೆ
- ಇಂದಿನ ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI) ಬಳಸಿಕೊಂಡು, ನಿಮ್ಮ ಧ್ವನಿಯನ್ನು ತದ್ರೂಪಾಗಿ ಸೃಷ್ಟಿಸುತ್ತಾರೆ (Voice Cloning). ನಂತರ ಈ ಧ್ವನಿಯನ್ನು ಬಳಸಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಕರೆ ಮಾಡಿ, “ನಾನು ಸಂಕಷ್ಟದಲ್ಲಿದ್ದೇನೆ, ಹಣ ಬೇಕು” ಎಂದು ಹೇಳಿ ಅವರಿಂದ ಹಣ ಪಡೆಯುತ್ತಾರೆ.
‘Yes’ ವಂಚನೆಯಿಂದ ಬಚಾವಾಗಲು ನೀವು :-
- ಅಪರಿಚಿತರಿಂದ ಬರುವ ಕರೆಗಳನ್ನು ಸ್ವೀಕರಿಸಬೇಡಿ, ತುರ್ತು ಕರೆಗಳಾಗಿದ್ದರೆ ಅವರು ಮೆಸೇಜ್ ಮಾಡುತ್ತಾರೆ ಅಥವಾ ವಾಯ್ಸ್ ಮೇಲ್ ಬಿಡುತ್ತಾರೆ.
- ‘ಹೌದು’ ಅಥವಾ ‘Yes’ ಪದವನ್ನು ಬಳಸಬೇಡಿ, ಅಥವಾ ಅದರೊಂದಿಗೆ ಮರುಪ್ರಶ್ನೆ ಹಾಕುವ ಅಭ್ಯಾಸ ಬೆಳೆಸಿಕೊಳ್ಳಿ.
- ಸ್ಪ್ಯಾಮ್ ಕರೆಗಳನ್ನು ಗುರುತಿಸುವ ಮತ್ತು ಬ್ಲಾಕ್ ಮಾಡುವ ಒಳ್ಳೆ ರೇಟಿಂಗ್/ವಿಮರ್ಶೆಗಳಿರುವ ಕಾಲ್ ಬ್ಲಾಕಿಂಗ್ ಆಪ್ ಬಳಸಿ.
- ಸಂದೇಹಾಸ್ಪದ ಕರೆ ಬಂದರೆ ತಕ್ಷಣ ಕರೆ ಕತ್ತರಿಸಿ ಅಥವಾ ಪರಿಶೀಲಿಸಿದ ನಂತರವೇ ಉತ್ತರಿಸಿ.
- ತುರ್ತು ಸಂದರ್ಭಗಳಿಗೆ ಒಂದು ರಹಸ್ಯ ಪದವನ್ನು ನಿಗದಿಪಡಿಸಿ. ಅದನ್ನು ಹೇಳದಿದ್ದರೆ, ಮೋಸ ಎಂದು ತಿಳಿಯಿರಿ.
- ಹಣ ಕಳಿಸುವ ಮುಂಚೆ ನೀವು ಆ ವ್ಯಕ್ತಿಗೆ ಅಥವಾ ಅವರ ಹತ್ತಿರದವರಿಗೆ ಕರೆ ಮಾಡಿ ದೃಡೀಕರಿಸಿ.
- ಬ್ಯಾಂಕಿಂಗ್ ಟ್ರಾನ್ಸ್ಯಾಕ್ಷನ್ಗಳನ್ನು ನಿಯಮಿತವಾಗಿ ಪರಿಶೀಲಿಸಿ. ಅನಿರೀಕ್ಷಿತ ಚಟುವಟಿಕೆ ಕಂಡರೆ ತಕ್ಷಣ ವಿಚಾರಿಸಿ.
- ಫೋನ್ನಲ್ಲಿ ಆಧಾರ್ ಸಂಖ್ಯೆ, PAN, ಖಾತೆ ಸಂಖ್ಯೆ, CVV, OTP, ಅಥವಾ ಯಾವುದೇ ವೈಯಕ್ತಿಕ ಮಾಹಿತಿಯನ್ನು ಕೊಡಬೇಡಿ.
ನೀವು ‘Yes’ ವಂಚನೆಗೆ ಒಳಗಾಗಿದ್ದರೆ ಏನು ಮಾಡಬಹುದು :-
ನೀವು ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮ್ಮ ಬ್ಯಾಂಕ್ಗೆ ತಕ್ಷಣ ಕರೆ ಮಾಡಿ, ನಡೆದ ವಿಷಯ ತಿಳಿಸಿ ಮತ್ತು ನಿಮ್ಮ ಖಾತೆ ಹಾಗೂ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಮತ್ತು ಪಾಸ್ವರ್ಡ್/ಪಿನ್ ಬದಲಾಯಿಸಿ. ಟೆಲಿಕಾಂ ಇಲಾಖೆಯ sancharsaathi.gov.in ಪೋರ್ಟಲ್ನಲ್ಲಿರುವ ‘ಚಕ್ಷು’ (Chakshu) ಆಯ್ಕೆಯಲ್ಲಿ ಈ ವಂಚನೆಯ ಕರೆಯ ಬಗ್ಗೆ ವರದಿ ಮಾಡಿ.