BSA

ಡಿಜಿಟಲ್ ಪ್ರಪಂಚದ ಮೇಲೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರಭಾವ (ಭಾಗ 3) – BSA

ಈ ವಾರದ ಲೇಖನದಲ್ಲಿ, ಸೈಬರ್ ಅಥವಾ ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರುವ ಭಾರತೀಯ ಸಾಕ್ಷಿ ಅಧಿನಿಯಮ್ (BSA), 2023 ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.

ಕಳೆದ ಮೂರು ಲೇಖನಗಳಲ್ಲಿ, ನಾನು ಡಿಜಿಟಲ್ ಅಥವಾ ಸೈಬರ್ ಜಗತ್ತನ್ನು ನಿಯಂತ್ರಿಸುವ ವಿವಿಧ ಭಾರತದ ಕಾನೂನುಗಳ ಕುರಿತು ಮತ್ತು ಡಿಜಿಟಲ್ ಪ್ರಪಂಚದ ಮೇಲೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರಭಾವದ ಬಗ್ಗೆ ತಿಳಿಸಿಕೊಟ್ಟಿದ್ದೆ. ಕಳೆದ ಲೇಖನದಲ್ಲಿ ನಿರ್ದಿಷ್ಟವಾಗಿ ನಾನು ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ಹೇಳಿದ್ದೆ. ನೀವು ಅವುಗಳನ್ನು ನನ್ನ ಬ್ಲಾಗ್ www.cybermithra.in ನಲ್ಲಿ ಓದಬಹುದು. ಈ ವಾರದ ಲೇಖನದಲ್ಲಿ, ಸೈಬರ್ ಅಥವಾ ಡಿಜಿಟಲ್ ಪ್ರಪಂಚದ ಮೇಲೆ ಪ್ರಭಾವ ಬೀರುವ ಭಾರತೀಯ ಸಾಕ್ಷಿ ಅಧಿನಿಯಮ್ (BSA), 2023 ನಲ್ಲಿ ಪರಿಚಯಿಸಲಾದ ಬದಲಾವಣೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ. ಭಾರತೀಯ ಸಾಕ್ಷಿ ಅಧಿನಿಯಮ್ (BSA), 2023 ಎಂಬುದು ಹೊಸ ಸಾಕ್ಷ್ಯ ಕಾಯ್ದೆಯಾಗಿದ್ದು, ಅದು ಭಾರತೀಯ ಸಾಕ್ಷ್ಯ ಕಾಯಿದೆ, 1872 ರ ಜಾಗದಲ್ಲಿ ಜುಲೈ 1, 2024 ರಿಂದ ಜಾರಿಗೆ ಬಂದಿರುತ್ತದೆ ಮತ್ತು ಅದು ಆ ದಿನಾಂಕದಿಂದ ದಾಖಲಾದ ಎಲ್ಲಾ ಹೊಸ ಕ್ರಿಮಿನಲ್ ಪ್ರಕರಣಗಳಿಗೆ ಅನ್ವಯಿಸುತ್ತದೆ.

ಭಾರತೀಯ ಸಾಕ್ಷಿ ಅಧಿನಿಯಮ್ (BSA), 2023 ನಲ್ಲಿ ಭಾರತೀಯ ಸಾಕ್ಷಿ ಕಾಯಿದೆ (IEA), 1872 ರಲ್ಲಿ ನಮೂದಿಸಿರುವ ಬಹಳಷ್ಟು  ವಿಷಯಗಳನ್ನು ಉಳಿಸಿಕ್ಕೊಳಲಾಗಿದೆ. BSA ಯಲ್ಲಿನ ಎಲೆಕ್ಟ್ರಾನಿಕ್ ಪುರಾವೆಗಳಿಗೆ ಸಂಬಂಧಿಸಿದ ನಿಬಂಧನೆಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಸೆಮಿಕಂಡಕ್ಟರ್ ಮೆಮೊರಿಯಲ್ಲಿ ಅಥವಾ ಯಾವುದೇ ಇಲೆಕ್ಟ್ರಾನಿಕ್/ಸಂವಹನ ಸಾಧನಗಳಲ್ಲಿ (ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು) ಸಂಗ್ರಹವಾಗಿರುವ ಮಾಹಿತಿಯನ್ನು ಪುರಾವೆಯಾಗಿ ಸೇರಿಸಲಾಗಿದೆ. BSA ನಲ್ಲಿ ಇಲೆಕ್ಟ್ರಾನಿಕ್ ಸಾಕ್ಷ್ಯ ಸ್ವೀಕಾರಕ್ಕಾಗಿ ಸ್ಪಷ್ಟವಾದ ನಿಯಮಗಳನ್ನು ಒದಗಿಸುವ ಮೂಲಕ ಕಾನೂನು ಪ್ರಕ್ರಿಯೆಗಳ ದಕ್ಷತೆ ಮತ್ತು ನಿಖರತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಡಿಜಿಟಲ್ ಯುಗದಲ್ಲಿ ಸಂಬಂಧಿತ ಎಲೆಕ್ಟ್ರಾನಿಕ್ ಪುರಾವೆಗಳ ಬಳಕೆಯನ್ನು ಸಹ ಇದು ಸುಗಮಗೊಳಿಸುತ್ತದೆ. ಡಿಜಿಟಲ್ ಅಥವಾ ಸೈಬರ್ ಜಗತ್ತಿನ ಮೇಲೆ ಪರಿಣಾಮ ಬೀರುವ ಕೆಲವು ಪ್ರಮುಖ ಬದಲಾವಣೆಗಳು ಇಂತಿವೆ :-

  • ವ್ಯಾಖ್ಯಾನ : “ಡಾಕ್ಯುಮೆಂಟ್” ನ ವ್ಯಾಖ್ಯಾನವು ಈಗ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ದಾಖಲೆಗಳನ್ನು ಒಳಗೊಂಡಿದೆ ಮತ್ತು “ಸಾಕ್ಷ್ಯ” ದ ವ್ಯಾಖ್ಯಾನವು ಈಗ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ನೀಡಲಾದ ಮಾಹಿತಿಯನ್ನು ಒಳಗೊಂಡಿದೆ.
  • ಎಲೆಕ್ಟ್ರಾನಿಕ್ ದಾಖಲೆಗಳ ಪಾತ್ರ : IEA ಅಡಿಯಲ್ಲಿ, ಎಲೆಕ್ಟ್ರಾನಿಕ್ ದಾಖಲೆಗಳನ್ನು ದ್ವಿತೀಯ ಸಾಕ್ಷಿಯಾಗಿ ವರ್ಗೀಕರಿಸಲಾಗಿತ್ತು ಆದರೆ  BSA ಅಡಿಯಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳನ್ನು ಪ್ರಾಥಮಿಕ ಪುರಾವೆಯಾಗಿ ವರ್ಗೀಕರಿಸಲಾಗಿದೆ, ಮತ್ತು ಅದಕ್ಕೆ ಸಾಂಪ್ರದಾಯಿಕ ಕಾಗದದ ದಾಖಲೆಗಳೊಂದಿಗೆ ಪ್ರಾಥಮಿಕ ಸಾಕ್ಷ್ಯ ವರ್ಗೀಕರಣವನ್ನು ನೀಡಲಾಗಿದೆ. ಆಧುನಿಕ ಸಮಾಜದಲ್ಲಿ ಎಲೆಕ್ಟ್ರಾನಿಕ್ ಸಂವಹನ ಮತ್ತು ಸಂಗ್ರಹಣೆಯ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನು ಇದು ಅಂಗೀಕರಿಸುತ್ತದೆ.
  • ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನೀಡಿದ ಹೇಳಿಕೆಗಳನ್ನು ಪುರಾವೆಯಾಗಿ ಸೇರಿಸುವುದು : ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನೀಡಿದ ಹೇಳಿಕೆಗಳನ್ನು ಸೇರಿಸಲು ‘ಸಾಕ್ಷ್ಯ’ದ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಇದು ಸಾಕ್ಷಿಗಳು, ಆರೋಪಿತ ವ್ಯಕ್ತಿಗಳು, ತಜ್ಞರು ಮತ್ತು ಬಲಿಪಶುಗಳ ಹೇಳಿಕೆಗಳನ್ನು ಮತ್ತು ಹಾಜರಾತಿಯನ್ನು ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಹೊರಹಾಕಲು ಅಥವಾ ರೆಕಾರ್ಡ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ನ್ಯಾಯಾಲಯದ ಪ್ರಕರಣದಲ್ಲಿ ಬಾಗಿಯಾದ ವಿವಿಧ ಪಾಲುದಾರರಿಗೆ ವೆಚ್ಚ, ಸಮಯ ಮತ್ತು ಸಂಪನ್ಮೂಲಗಳ ಬಳಕೆಯನ್ನು ತಗ್ಗಿಸುವುದರಿಂದ ಇದು ಸ್ವಾಗತಾರ್ಹ ಬದಲಾವಣೆಯಾಗಿದೆ.
  • ದೃಢೀಕರಣದ ಪ್ರಮಾಣಪತ್ರ : IEA ದಲ್ಲಿ, ಯಾವುದೇ ಎಲೆಕ್ಟ್ರಾನಿಕ್ ಪುರಾವೆಗಳಿಗೆ ದೃಢೀಕರಣದ ಪ್ರಮಾಣಪತ್ರವನ್ನು ನೀಡಲು ಅನುಸರಿಸಬೇಕಾದ ಪ್ರಕ್ರಿಯೆಯನ್ನು ಸೆಕ್ಷನ್ 65A ಮತ್ತು 65B ರಲ್ಲಿ ವಿವರಿಸಲಾಗಿತ್ತು. BSB ನಲ್ಲಿ, ಇದು ಈಗ ಸೆಕ್ಷನ್ 62 ಮತ್ತು 63 ರಲ್ಲಿ  ದೃಢೀಕರಣದ ಪ್ರಮಾಣಪತ್ರವನ್ನು ನೀಡುವ ಪ್ರಕ್ರಿಯೆಯನ್ನು ವಿವರಿಸಲಾಗಿದೆ ಮತ್ತು ಇದರಲ್ಲಿ CD ಯ ಹೊರತಾಗಿ USB ಪೆನ್ ಡ್ರೈವ್ ಅಥವಾ ಹಾರ್ಡ್ ಡಿಸ್ಕ್ ನಂತಹ ಸೆಮಿಕಂಡಕ್ಟರ್ ಸ್ಟೋರೇಜ್ ಅನ್ನು ಸೇರಿಸಿ  ಈ ಪ್ರಕ್ರಿಯೆಯನ್ನು ಸರಳ ಮತ್ತು ಪ್ರಾಯೋಗಿಕವಾಗಿ ಮಾಡುವಂತ  ಗಮನಾರ್ಹ ಬದಲಾವಣೆಗಳನ್ನು ಒಳಗೊಂಡಿದೆ.
  • ಕಾನೂನು ಪುಸ್ತಕಗಳ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ರೂಪ ಈಗ ಪ್ರಸ್ತುತವಾಗಿದೆ : ಭಾರತ ಅಥವಾ ರಾಜ್ಯಗಳವಿವಿಧ ಸರ್ಕಾರದ ಅಧಿಕಾರದ ಅಡಿಯಲ್ಲಿ ಮುದ್ರಿಸಲು ಅಥವಾ ಪ್ರಕಟಿಸಲು ಉದ್ದೇಶಿಸಿರುವ ಕಾನೂನು ಪುಸ್ತಕಗಳ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ರೂಪಗಳು ಮತ್ತು ಅಂತಹ ಯಾವುದೇ ಕಾನೂನು ಮತ್ತು ಅಂತಹ ನ್ಯಾಯಾಲಯಗಳ ತೀರ್ಪಿನ ಯಾವುದೇ ವರದಿಯನ್ನು ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ರೂಪದಲ್ಲಿ ಒಳಗೊಂಡಿರುವ ಪುಸ್ತಕಗಳು ಈಗ ನ್ಯಾಯಾಲಯಗಳಲ್ಲಿ ಸಾಕ್ಷಿಯನ್ನಾಗಿ ಬಳಸಬಹುದು.
  • ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಸಹಿ : BSA ಯ ಸೆಕ್ಷನ್ 85 (ಇದು ಎಲೆಕ್ಟ್ರಾನಿಕ್ ಸಹಿಗಳನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ ಒಪ್ಪಂದಗಳ ಬಗ್ಗೆ ಮಾತನಾಡುತ್ತದೆ) ಮತ್ತು 86 (ಇದು ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಎಲೆಕ್ಟ್ರಾನಿಕ್ ಸಹಿಗಳ ಬಗ್ಗೆ ಮಾತನಾಡುತ್ತದೆ), ಈಗ ‘ಎಲೆಕ್ಟ್ರಾನಿಕ್ ಸಹಿ’ ಜೊತೆಗೆ ‘ಡಿಜಿಟಲ್ ಸಹಿ’ ಗಳನ್ನು ಮಾನ್ಯ ಮಾಡುತ್ತದೆ.
BSA

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ