online jobs fraud

ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ವಂಚನೆಗಳು. ಎಚ್ಚರ !

online jobs fraud / ಆನ್‌ಲೈನ್ ಅರೆಕಾಲಿಕ ಉದ್ಯೋಗ : ಅದು ಏನು, ಅದನ್ನು ಹೇಗೆ ನಡೆಸಲಾಗುತ್ತದೆ, ಮುನ್ನೆಚ್ಚರಿಕೆಗಳೇನು ಮತ್ತು ಮುಂದಿನ ಹಂತಗಳು. ಇದರ ಬಗ್ಗೆ ಈ ಅಂಕಣ ಸುಲಭ ಭಾಷೆಯಲ್ಲಿ ತಿಳಿಸಿ ಕೊಡುತ್ತದೆ.

ಇತ್ತೀಚಿನ ಕೆಲವು ಸುದ್ದಿಗಳನ್ನು ನೋಡೋಣ :

 • ನಕಲಿ ವಿದೇಶಿ ಉದ್ಯೋಗ ಹಗರಣದಲ್ಲಿ ದೆಹಲಿ ಮಹಿಳೆ ಸುಮಾರು ₹ 9 ಲಕ್ಷ ಕಳೆದುಕೊಂಡಿದ್ದಾರೆ. 
 • ಆ್ಯಪ್ ಆಧಾರಿತ ಸಿನಿಮಾ ರೇಟಿಂಗ್ ಹಗರಣದಲ್ಲಿ ಗುರುಗ್ರಾಮದ ಮಹಿಳೆ ₹76 ಲಕ್ಷ ಕಳೆದುಕೊಂಡಿದ್ದಾರೆ.
 • ಇನ್ಸ್ಟಾಗ್ರಾಮ್ನಲ್ಲಿ ವರ್ಕ್ ಫ್ರಮ್ ಹೋಮ್ ಜಾಬ್(ಮನೆಯಿಂದ ಕೆಲಸ) ಹೆಸರಿನಲ್ಲಿ ದೆಹಲಿಯ ವ್ಯಕ್ತಿ 9.32 ಲಕ್ಷ ರೂ.ಗೆ ಕಳೆದುಕೊಂಡಿದ್ದಾರೆ.
 • ಸರಕಾರಿ ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಜನರ ಬಳಿ ಹಣ ಕಸಿದುಕೊಂಡು ವಂಚಿಸಿದ್ದಾರೆ.

ಇವೆಲ್ಲವೂ ಈಗಷ್ಟೇ ಕಾಲೇಜು ಮುಗಿಸಿ ಉದ್ಯೋಗದ ಅನ್ವೇಷಣೆಯಲ್ಲಿ ಇರುವವರು, ಅರೆಕಾಲಿಕ ಉದ್ಯೋಗಾಕಾಂಕ್ಷಿಗಳು ಮತ್ತು ಯುವ ಉದ್ಯೋಗಿಗಳನ್ನೇ ಆನ್ಲೈನ್ ಉದ್ಯೋಗ ವಂಚಕರು ಉದ್ಯೋಗದ ಆಮಿಷವೊಡ್ಡಿ ನಡೆಸಿರುವ ವಂಚನೆಗಳು.

ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ವಂಚನೆ ಹೇಗೇ ಮಾಡುತ್ತಾರೆ:-  

 • ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಉದ್ಯೋಗ ಮಾಹಿತಿ ಒದಗಿಸುವ ಜಾಲತಾಣಗಳಲ್ಲಿ ಉದ್ಯೋಗದ ಅಥವಾ ಮನೆಯಿಂದಲೇ ಕೆಲಸ ಮಾಡಿ ಹಣ ಸಂಪಾದಿಸುವ ಅಥವಾ ಅರೆಕಾಲಿಕ ಉದ್ಯೋಗಗಳ ಬಗ್ಗೆ ವರ್ಣರಂಜಿತ ಜಾಹಿರಾತುಗಳನ್ನು ಹಾಕುತ್ತಾರೆ. ಆಸಕ್ತಿ ಇರುವ ವ್ಯಕ್ತಿಗಳು ವಂಚಕರು ಕೊಟ್ಟಿರುವ ಹೈಪರ್ ಲಿಂಕ್ ಅನ್ನು ಒತ್ತುತ್ತಾರೆ ಅಥವಾ ಅಲ್ಲಿ ನಮೂದಿಸಿರುವ ಸಂಖ್ಯೆಗೆ ಕರೆ ಮಾಡುತ್ತಾರೆ. ವಂಚಕರು ಮೊದಲು ನೋಂದಣಿ ಹೆಸರಿನಲ್ಲಿ ಹಣ ಕೀಳುತ್ತಾರೆ, ಮೊದಮೊದಲು ಕೆಲವು ಸಣ್ಣ ಕಾರ್ಯಗಳನ್ನು ಕೊಟ್ಟು ಅದಕ್ಕೆ ಸಣ್ಣ ಮೊತ್ತವನ್ನು ಕೊಡುತ್ತಾರೆ ಅಥವಾ ತಪ್ಪುಗಳ ಬಗ್ಗೆ ಮಾತಾಡಿ ಅಥವಾ ನಕಲಿ ಸಂದರ್ಶನವನ್ನೇರ್ಪಡಿಸಿ ಅಥವಾ ನಕಲಿ ಉದ್ಯೋಗಪತ್ರವನ್ನು ತೋರಿಸಿ ನಿಮ್ಮ ನಂಬಿಕೆ ಗಳಿಸುತ್ತಾರೆ, ನಂತರ ಹಿನ್ನಲೆ ಪರಿಶೀಲನೆ, ಲಂಚ, ಸಂಸ್ಕರಣಾ ಶುಲ್ಕ ಮತ್ತಿತರ ಶುಲ್ಕಗಳ ಹೆಸರಿನಲ್ಲಿ ಉದ್ಯೋಗಾಭಿಲಾಷಿಗಳಿಂದ ಹಣವನ್ನು ಸುಲಿಯುತ್ತಾರೆ.
 • ‘ವಿಡಿಯೋಗಳನ್ನು ಲೈಕ್ ಮಾಡಿ ಹಣ ಸಂಪಾದಿಸಿ’ ವಂಚನೆ, ಇದರಲ್ಲಿ ನಿಮಗೆ ಅವರು ಕೊಟ್ಟಿರುವ ಪ್ರತಿ ವಿಡಿಯೋವನ್ನು ನೀವು ಲೈಕ್ ಮಾಡಿದರೆ ನಿಮಗೆ ಐವತ್ತು ರೂಪಾಯಿ ಪ್ರತಿ ಲೈಕ್’ಗೆ ಕೊಡುತ್ತೇವೆ ಎನ್ನುತ್ತಾರೆ, ನಂತರ ಹೆಚ್ಚಿನ ವಿಡಿಯೋಗಳಿಗೆ ಅಥವಾ ಹೆಚ್ಚಿನ ದರಕ್ಕೆ ನಿಮ್ಮಿಂದ ಹಣವನ್ನು ಸುಲಿಯುತ್ತಾರೆ.

ನಿಮಗೇ ಇದು ವಂಚನೆ ಎಂದು ತಿಳಿಯುವ ಹೊತ್ತಿಗೆ ನೀವು ವಂಚಕರಿಗೆ ತುಂಬ ಹಣವನ್ನು ವರ್ಗಾಯಿಸಿರುತ್ತಿರಿ.

ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-     

 • ಯಾವಾಗಲೂ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ, ‘ತಾಳ್ಮೆ, ಶೂನ್ಯ ವಿಶ್ವಾಸ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
 • ಪರ್ಸನಲ್ ಇಮೇಲ್ ವಿಳಾಸದಿಂದ ಆಫರ್ ಬಂದರೆ ಎಚ್ಚರ ವಹಿಸಿ.
 • ಉದ್ಯೋಗ ಆಫರ್ನಲ್ಲಿ ಸಾಮಾನ್ಯ ಕಾಗುಣಿತ ಮತ್ತು ವ್ಯಾಕರಣ ದೋಷಗಳಿವೆಯೇ ಪರಿಶೀಲಿಸಿ.
 • ನಂಬಲು ಸಾಧ್ಯವಿಲ್ಲದಷ್ಟು ವೇತನದ ಆಫರ್ ಇದ್ದರೆ ಎಚ್ಚರಿಕೆ ಇರಲಿ.
 • ‘ಉದ್ಯೋಗದ ಅನುಭವ ಇರುವ ಅಗತ್ಯವಿಲ್ಲ’ ಅಥವಾ ‘ಸಂದರ್ಶನದ ಅವಶ್ಯಕತೆ ಇಲ್ಲ’ ಇತ್ಯಾದಿ ಅಂಶಗಳಿದ್ದರೆ ಎಚ್ಚರವಿರಲಿ.
 • ಯಾವ ಪ್ರತಿಷ್ಠಿತ ಸಂಸ್ಥೆಯು, ಉದ್ಯೋಗಾಭಿಲಾಷಿಗಳಿಂದ ಯಾವುದೇ ಕಾರ್ಯಕ್ಕೂ ಹಣವನ್ನು ಕೇಳುವುದಿಲ್ಲ, ಹಾಗಾಗಿ ಯಾರಿಗೂ ಯಾವುದೇ ಮುಂಗಡ ಶುಲ್ಕವನ್ನು ಪಾವತಿಸಬೇಡಿ.
 • ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಮತ್ತು ಪಾನ್ ಬದಲು ಡ್ರೈವಿಂಗ್ ಲೈಸನ್ಸ್ ಅಥವಾ ವೋಟರ್ ID ಬಳಸಿ ಹಾಗು ಯಾರೊಂದಿಗೂ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡಿನ ಚಿತ್ರವನ್ನು ಹಂಚಿಕೊಳ್ಳಬೇಡಿ.

ನೀವು ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ವಂಚನೆಗೆ ಒಳಗಾಗಿದ್ದರೆ:-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ಯಾರೊಂದಿಗಾದರೂ ನೀವು ಆಧಾರ್ ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡನ್ನು uidai.gov.in ಜಾಲತಾಣದಲ್ಲಿ ಲಾಕ್ ಮಾಡಿ. ನಕಲಿ ಖಾತೆ ಅಥವಾ ಪ್ರೊಫೈಲ್ ಬಗ್ಗೆ ಆಯಾ ಸಾಮಾಜಿಕ ಮಾಧ್ಯಮ ವೆಬ್ಸೈಟ್ನಲ್ಲಿ ಹಾಗು ನಕಲಿ ಜಾಲತಾಣಗಳ ಬಗ್ಗೆ ಅದರ ಹೋಸ್ಟಿಂಗ್ ಸೇವಾ ಪೂರೈಕೆದಾರರೊಂದಿಗೆ ದೂರು ನೀಡಿ ಮತ್ತು ಅದನ್ನು ನಿರ್ಬಂಧಿಸಲು ಹೇಳಿ. ಸಂಭಂದಿತ ಬ್ಯಾಂಕಿಗೆ ಕರೆ ಮಾಡಿ ಹಣವನ್ನು ಫ್ರೀಜ್ ಮಾಡಲು ದೂರು ದಾಖಲಿಸಿ.

ಆನ್‌ಲೈನ್ ಅರೆಕಾಲಿಕ ಉದ್ಯೋಗಗಳ ವಂಚನೆ

Playಆನ್ಲೈನ್ ಅರೆಕಾಲಿಕ ಉದ್ಯೋಗಗಳ ಹೆಸರಿನಲ್ಲಿ ನಡೆಯುವ ವಂಚನೆಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳು

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ