Chinese Loan App frauds

ಚೈನೀಸ್ ಸಾಲದ ಆಪ್ ಜಾಲಕ್ಕೇ ಬಿದ್ದೀರಿ ಜೋಕೇ!!!

ಈ ಅಂಕಣ ಹೊಸ ಸೈಬರ್ ಕ್ರೈಂ ಚೈನೀಸ್ ಲೋನ್ ಅಥವಾ ಸಾಲದ ಮೊಬೈಲ್ ಆಪ್ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ

ನೀವೆಲ್ಲರೂ ಸುದ್ದಿಯಲ್ಲಿ ನೋಡಿರುವಂತೆ ನೂರಾರು ಚೈನೀಸ್ ಮೂಲದ ಸಾಲ ಕೊಡುವ ಮೊಬೈಲ್ ಆಪ್ಗಳನ್ನು ಭಾರತ ಸರ್ಕಾರ ಆರ್ಥಿಕ ಭದ್ರತೆಯ ಕಾರಣದಿಂದ ನಿಷೇಧಿಸಲು ಆದೇಶ ಹೊರಡಿಸಿತ್ತು. ಕಳೆದ ಮೂರು ವರ್ಷದಲ್ಲಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಚೀನಾ ಮೂಲದ ವ್ಯಕ್ತಿಗಳು ಉದ್ಯೋಗದ ಆಸೆ ತೋರಿಸಿ ಸ್ಥಳೀಯ ಉದ್ಯೋಗ ಆಕಾಂಕ್ಷಿಗಳಿಂದ ದಾಖಲೆಗಳನ್ನು ಪಡೆದು ಪ್ರತಿಯೊಬ್ಬರ ಹೆಸರಿನಲ್ಲಿ ನೂರಾರು ನಕಲಿ ಕಂಪನಿಗಳನ್ನು ನೋಂದಣಿ ಮಾಡಿಸಿ ಕ್ಯಾಷ್ ಮಾಸ್ಟರ್, ಆಪ್ನ ಪೈಸಾ ಸೇರಿದಂತೆ ಹಲವು ಸಾಲದ ಆ್ಯಪ್ ಅಭಿವೃದ್ಧಿಪಡಿಸಿದ್ದರು. ಹಣಕಾಸಿನ ಅಗತ್ಯವಿರುವ ಜನರು, ಎಲ್ಲಿಯೂ ಸಾಲ ಸಿಗದೆ ಇದ್ದಾಗ ಈ ಆಪ್ಗಳ ಸುಲಭ ಸಾಲದ ಜಾಲಕ್ಕೆ ಬೀಳುತ್ತಾರೆ.  ಅವರಿಗೆ ಹೆಚ್ಚಿನ ಬಡ್ಡಿ(ವರ್ಷಕ್ಕೆ ಶೇ 300ರವರೆಗೂ ಅಧಿಕ) ದರ, ಸಂಸ್ಕರಣಾ ಹಾಗು ಇತರ ಶುಲ್ಕ ವಿಧಿಸುವುದಲ್ಲದೇ ಸಾಲ ಪಾವತಿ ಮಾಡಿದವರಿಂದಲೂ ಬ್ಲಾಕ್ಮೇಲ್ ಮಾಡಿ ಹೆಚ್ಚಿನ ಹಣವನ್ನು ಸುಲಿಯುತ್ತಾರೆ ಹಾಗು ಸಾಲ ಮರುಪಾವತಿ ಮಾಡದವರಿಗೆ ಮರ್ಯಾದೆಯನ್ನು ಸಾಮಾಜಿಕ ಜಾಲ ತಾಣದಲ್ಲಿ ತೆಗೆಯುತ್ತೇನೆಂದು ಬೆದರಿಸುತ್ತಾರೆ. ಸಾಲ ಮರುಪಾವತಿಸಲಾಗದೇ ಮರ್ಯಾದೆಗೆ ಅಂಜಿ ಕೆಲವರು ಆತ್ಮಹತ್ಯೆಗೆ ಶರಣಾದರು. ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳು ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ಗಮನಕ್ಕೆ ತಂದು ಎಚ್ಚರಿಸಿದ್ದವು.

ಚೈನೀಸ್ ಸಾಲದ ಆಪ್ ವಂಚನೆ ಹೇಗೆ ನಡೆಸಲಾಗುತ್ತದೆ :-

ವಂಚಕ ಸಾಲದ ಆಪ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಸುಲಭವಾಗಿ, ವೇಗವಾಗಿ, ನಿಮ್ಮ ಸಿಬಿಲ್ ಸ್ಕೋರ್ ನೋಡದೆ, ಪತ್ರ ವ್ಯವಹಾರವಿಲ್ಲದೆ ಹಾಗು ಏನೂ ಅಡವಿಡದೆ ಸಣ್ಣ ಮೊತ್ತದ(೫೦೦೦- ೧ ಲಕ್ಷ) ಕಡಿಮೆ ಅವಧಿಯ(೫-೩೦ದಿನದ) ಸಾಲ ಕೊಡುವುದಾಗಿ ಜಾಹಿರಾತುಗಳನ್ನು ನೀಡುತ್ತಾರೆ.  ಹಣಕಾಸಿನ ಅಗತ್ಯವಿರುವ ಜನರು, ಇಂತಹ ಮೊಬೈಲ್ ಆಪ್ಗಳನ್ನು ಇನ್ಸ್ಟಾಲ್ ಮಾಡುತ್ತಾರೆ.  ಲೋನ್ ಆಪ್‌ಗಳು ಲೋನ್ ಬಯಸುವ ಮೊಬೈಲ್​ನಲ್ಲಿರುವ ಎಲ್ಲಾ ಸಂಪರ್ಕ ಸಂಖ್ಯೆ ಹಾಗು ಚಿತ್ರಗಳನ್ನು ಕದಿಯುತ್ತದೆ. ಸಂಸ್ಕರಣಾ ಹಾಗು ಇತರ ಶುಲ್ಕಗಳು ಮತ್ತು ಬಡ್ಡಿಯನ್ನು ಹಿಡಿದು ಉಳಿದ ಹಣವನ್ನು ಸಾಲವಾಗಿ ಸಾಲಗಾರನ ಅಕೌಂಟಿನಲ್ಲಿ ಹಾಕುತ್ತಾರೆ, ಇದು ಸಾಲದ ಅರ್ಧಕ್ಕಿಂತ ಕಡಿಮೆ ಮೊತ್ತದ್ದಾಗಿರುತ್ತದೆ.  ಸಾಲ ಕೊಟ್ಟ ಕೆಲ ದಿನದ ನಂತರವೆ ಸಾಲ ಸಂಪೂರ್ಣವಾಗಿ ಹಿಂದಿರುಗಿಸಲು ಕಾಟ ಕೊಡಲು ಶುರು ಮಾಡುತ್ತಾರೆ, ನೀವೇನಾದರೂ ಹಣ ಹಿಂದುರಿಗಿಸದಿದ್ದರೆ ನಿಮಗೆ ಅವಾಚ್ಯ ಶಬ್ದಗಳಲ್ಲಿ ಬೆದರಿಕೆಯನ್ನೊಡ್ಡುತ್ತಾರೆ ಮತ್ತು ನಿಮ್ಮ ಬಗ್ಗೆ ಇಲ್ಲಸಲ್ಲದ ಅಪವಾದಗಳುಳ್ಳ ಸಂದೇಶವನ್ನು ಜೊತೆಗೆ ನಿಮ್ಮ ಮಾರ್ಫ್ ಮಾಡಿದ ಚಿತ್ರಗಳನ್ನು ನಿಮ್ಮ ಕುಟುಂಬ ಹಾಗು ಸ್ನೇಹಿತರಿಗೆ ಕಳಿಹಿಸುತ್ತೇನೆಂದು ಬ್ಲಾಕ್ ಮೇಲ್  ಮಾಡುತ್ತಾರೆ. ಮಾನಕ್ಕೆ ಅಂಜಿ ನೀವು ಹಣ ಮರುಪಾವತಿಸಿದರೂ ಯಾವುದಾದರೊಂದು ಶುಲ್ಕದ ನೆಪವೊಡ್ಡಿಇನ್ನು ಹೆಚ್ಚು ಹಣ ಸುಲಿಯುತ್ತಾರೆ.

ಚೈನೀಸ್ ಸಾಲದ ಆಪ್ ವಂಚನೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು :-

  • RBI ನೋಂದಾಯಿತ ಸಂಸ್ಥೆಯಿಂದಷ್ಟೆ ಸಾಲ ಪಡೆಯಿರಿ.
  • ಸಾಲ ಪಡೆಯುವ ಮುನ್ನ ಬಡ್ಡಿ ದರ, ಮರುಪಾವತಿ ಅವಧಿ, ಸಂಸ್ಕರಣಾ ಹಾಗು ಇತರ ಶುಲ್ಕಗಳ ವಿವರವನ್ನು ಸಾಲ ಪಡೆಯುವ ಮುನ್ನವೆ  ಒಪ್ಪಂದಕ್ಕೆ ಬನ್ನಿ.
  • ಸಾಲ ಕೊಡುವ ಮೊಬೈಲ್ ಆಪಿನಾ ವಿಮರ್ಶೇ ಹಾಗು ಇತರ ಗ್ರಾಹಕರ ಅನುಭವದ ಬಗ್ಗೆ ತಿಳಿದುಕೊಳ್ಳಿ, ಕೆಟ್ಟ ರೇಟಿಂಗ್ ಅಥವಾ ಅನುಭವಗಳಿದ್ದರೆ ಸಾಲ ತೆಗೆದುಕೊಳ್ಳಬೇಡಿ.
  • ಸಾಲ ಕೊಡುವ ಮೊಬೈಲ್ ಆಪ್ ಸಂಸ್ಥೆಯ ಕಾಯಂ ವಿಳಾಸ, ಗ್ರಾಹಕ ಆರೈಕೆ ಕೇಂದ್ರದ ಸಂಖ್ಯೆ ಇಲ್ಲದ ಸಂಸ್ಥೆಯಿಂದ ಸಾಲ ತೆಗೆದುಕೊಳ್ಳಬೇಡಿ.
  • ವಾಟ್ಸಪ್ಪ್ ಅಥವಾ ಟೆಲಿಗ್ರಾಂ ಮೂಲಕ ದೊರೆತ ಯಾವುದೆ ಸಾಲದ ಆಪ್ಗಳನ್ನು ಇನ್ಸ್ಟಾಲ್ ಮಾಡಬೇಡಿ.
  • ಅಸಲು  ಸಾಲದ ಆಪ್ ಗಳು ಅಥವಾ ಸಂಸ್ಥೆಗಳು ನಿಮ್ಮ ಖಾಸಗಿ ಮಾಹಿತಿಗಳಾದ ಸಂಪರ್ಕ ಸಂಖ್ಯೆ ಹಾಗು ಚಿತ್ರಗಳ ಆಕ್ಸೆಸ್ ಅನುಮತಿಯನ್ನು ಕೇಳುವುದಿಲ್ಲ, ಒತ್ತಾಯ ಮಾಡಿದರೆ ಅಂಥ ಸಂಸ್ಥೆಯಿಂದ ದೂರ ಇರಿ.

ನೀವು ಚೈನೀಸ್ ಸಾಲದ ಆಪ್ ವಂಚನೆಗೆ ತುತ್ತಾಗಿದ್ದರೆ :-

ನೀವು ೧೯೩೦ ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರನ್ನು ದಾಖಲಿಸಿ, ಬೆದರಿಕೆ ಕರೆಗಳನ್ನು ಎದುರಿಸಲು ಅವರ ಸಹಾಯ ಪಡೆಯಿರಿ. RBI ಮತ್ತು ದೇಶದ ಸರ್ವೋಚ್ಛ ನ್ಯಾಯಾಲಯವು ಹಲವು ಪ್ರಕರಣಗಳಲ್ಲಿ ಸಾಲಗಾರರ ಹಿತ ರಕ್ಷಣೆ  ಹಾಗು ಸಾಲ ವಸೂಲಾತಿ ದಿಕ್ಸೂಚಿಗಳನ್ನು ಹೊರಡಿಸಿವೆ, ನೀವು ಅದನ್ನು ಕರೆಗಾರರಿಗೆ ಉಲ್ಲೇಖಿಸಿ ಧೈರ್ಯವಾಗಿ ಎದುರಿಸಿರಿ. ಇದು ಅನಧಿಕೃತ ಸಲವಾಗಿರುವುದರಿಂದ ಅವರು ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ, ಬರಿ ನಿಮ್ಮ ಮಾನ ಕಳೆಯುತ್ತೇವೆಂದು ಹೆದರಿಸಬಹುದು ಹಾಗಾಗಿ ನೀವು ದೈರ್ಯವಾಗಿ ನಿಮ್ಮ ಕುಟುಂಬ ಹಾಗು ಸ್ನೇಹಿತರಿಗೆ ಅವರ ವಂಚನೆ ಬಗ್ಗೆ ತಿಳಿಸಿ ಅವರ ಬೆದರಿಕೆಯನ್ನು ವಿಫಲಗೊಳಿಸಬಹುದು.

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

1 thought on “ಚೈನೀಸ್ ಸಾಲದ ಆಪ್ ಜಾಲಕ್ಕೇ ಬಿದ್ದೀರಿ ಜೋಕೇ!!!

Leave a Reply

Your email address will not be published. Required fields are marked *