ಸೈಬರ್ಮಿತ್ರ ಬ್ಲಾಗಿಗೆ ಸುಸ್ವಾಗತ
ಈ ಬ್ಲಾಗ್ ಸೈಬರ್ ಕ್ರೈಮ್ಗಳು, ಸೈಬರ್ ಕಾನೂನು ಮತ್ತು ಸೈಬರ್ ಸುರಕ್ಷತೆಯ ಕುರಿತು ಮಾಹಿತಿ, ಶಿಕ್ಷಣ ಮತ್ತು ಜಾಗೃತಿಯನ್ನು ಸರಳ ಪದಗಳಲ್ಲಿ ಒದಗಿಸುವ ಗುರಿಯನ್ನು ಹೊಂದಿದೆ, ಇದನ್ನು ಯಾವುದೇ ತಾಂತ್ರಿಕ ಅಥವಾ ಕಾನೂನು ಹಿನ್ನೆಲೆಯಿಲ್ಲದ ಸಾಮಾನ್ಯ ಜನರು ಅರ್ಥಮಾಡಿಕೊಳ್ಳಬಹುದು.ಈ ಬ್ಲಾಗ್ ಸೈಬರ್ ಕ್ರೈಮ್ಗಳ ಕುರಿತು ವಾರಕ್ಕೊಮ್ಮೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಲೇಖನವನ್ನು ಪ್ರಕಟಿಸುವ ಗುರಿಯನ್ನು ಹೊಂದಿದೆ, ಅಲ್ಲಿ ಆ ಸೈಬರ್ ಕ್ರೈಮ್ ಏನು, ಅದು ಹೇಗೆ ನಡೆಯುತ್ತದೆ, ಅದರಿಂದ ತನ್ನನ್ನು ಹೇಗೆ ರಕ್ಷಿಸಿಕೊಳ್ಳುವುದು ಮತ್ತು ಒಬ್ಬ ಬಲಿಪಶುವಾದರೆ ಮುಂದಿನ ಕ್ರಮಗಳ ಮತ್ತು ಕಾನೂನು ಆಯ್ಕೆಗಳ ಬಗ್ಗೆ ಜನರಿಗೆ ತಿಳಿಸಲು ಪ್ರಯತ್ನಿಸುತ್ತದೆ.
ಸೈಬರ್ಮಿತ್ರದ ಹಿಂದಿರುವ ಜನರ ಬಗ್ಗೆ ತಿಳಿಯಲು ದಯವಿಟ್ಟು ಭೇಟಿ ನೀಡಿ “ನಮ್ಮ ಬಗ್ಗೆ”
ಕನ್ನಡದಲ್ಲಿ ಮುದ್ರಿತವಾದ ಅಂಕಣಗಳು :-
- ಒಂದು ಸೈಬರ್ ಅಪರಾಧದ ಕುರಿತು ಸಾಪ್ತಾಹಿಕ ಮಾಹಿತಿ ಶಿಕ್ಷಣ ಲೇಖನಗಳು – ಕನ್ನಡ ಅಂಕಣಗಳು
- ಒಂದು ಸೈಬರ್ ಅಪರಾಧದ ಕುರಿತು ಸಾಪ್ತಾಹಿಕ ಮಾಹಿತಿ ಶಿಕ್ಷಣ youtube ವಿಡಿಯೋ ಅಂಕಣ – ವಿಡಿಯೋ ಅಂಕಣ
ಇತ್ತೀಚಿಗೆ ಮುದ್ರಿತವಾದ ಅಂಕಣಗಳು :-
- ಕನ್ನಡದ ಬೆಳವಣಿಗೆಗೆ ಕೃತಕ ಬುದ್ಧಿಮತ್ತೆಯ ಕೊಡುಗೆ
ಈ ಹೊಸ ಯುಗದಲ್ಲಿ, AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ? AI ಅನ್ನು ಕನ್ನಡದ ಬೆಳವಣಿಗೆಗೆ ಹೇಗೆ ಬಳಸಬಹುದು? ಭಾರತ/ಕರ್ನಾಟಕ ಸರಕಾರ ಹಾಗು ಇಲ್ಲಿನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು AI ಅನ್ನು ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ - AI, ಡೀಪ್ಫೇಕ್ ಹಾವಳಿ : ನಿಮ್ಮ ಸುರಕ್ಷತೆಗಾಗಿ ಭಾರತದ ಹೊಸ ‘AI ಕಾನೂನು’
ಈ ಅಂಕಣದಲ್ಲಿ ನಾನು ಡೀಪ್ಫೇಕ್ ಪಿಡುಗನ್ನು ತಡೆಗಟ್ಟಲು ಮತ್ತು ಸುರಕ್ಷಿತ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಅನುಭವಕ್ಕಾಗಿ ಭಾರತ ಸರಕಾರವು ಬಿಡುಗಡೆ ಮಾಡಿರುವ ಹೊಸ ಕರಡು AI ಕಾನೂನಿನ ಬಗ್ಗೆ ತಿಳಿಸಿಕೊಡಲಿದ್ದೇನೆ. - ಹಣಕಾಸು ಕ್ಷೇತ್ರದಲ್ಲಿ AI ಕ್ರಾಂತಿ : ಸುರಕ್ಷಿತ ಡಿಜಿಟಲ್ ಬ್ಯಾಂಕಿಂಗ್ಗಾಗಿ RBI ಸೂತ್ರಗಳು
ಈ ಲೇಖನದಲ್ಲಿ ಅದರ ಏಳು ಮೂಲ ತತ್ವಗಳೇನು ಮತ್ತು ಆ ತತ್ವಗಳನ್ನು ಸಾಕಾರಗೊಳಿಸಲು RBI ನಿಯಂತ್ರದಲ್ಲಿ ಬರುವ ಎಲ್ಲ ಹಣಕಾಸು ಸಂಸ್ಥೆಗಳು ಮಾಡಬೇಕಾದ ಪ್ರಮುಖ ಕೆಲಸಗಳ ಮತ್ತು ಆ ತತ್ವಗಳನ್ನು ಅನುಷ್ಠಾನಗೊಳಿಸಲು ಸೂಚಿಸಿರುವ ಆರು ಪ್ರಮುಖ ಸ್ತಂಭಗಳ ಬಗ್ಗೆ ಮತ್ತು ಜನ ಸಾಮಾನ್ಯರಿಗೆ ಇದರಿಂದ ಆಗುವ ಉಪಯೋಗಗಳ ಕಿರು ಪರಿಚಯ ನೀಡಲಿದ್ದೇನೆ. - ದಸರಾ, ನವದುರ್ಗೆಯರು ಮತ್ತು ಸೈಬರ್ ರಾಕ್ಷಸರು!
ಈ ಲೇಖನದಲ್ಲಿ ನಾನು ದಸರ ಹಬ್ಬದ ಈ ಸಂದರ್ಭದಲ್ಲಿ, ನವ ದುರ್ಗೆಯರ ಉದಾಹರಣೆ ಬಳಸಿ ಸೈಬರ್ ಅಪರಾಧಗಳನ್ನು ತಡೆಗಟ್ಟುವ ಉಪಾಯಗಳ ಬಗ್ಗೆ ತಿಳಿಸಿಕೊಡಲಿದ್ದೇನೆ - E-Courts ನಿಂದ AI ವರೆಗೆ: ಭಾರತದ ನ್ಯಾಯ ವ್ಯವಸ್ಥೆಯ ಹೊಸ AI ಯುಗ
ಈ ಲೇಖನದಲ್ಲಿ ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ದೊಡ್ಡ ಮಟ್ಟದ ಡಿಜಿಟಲ್ ಪ್ರಯೋಗವಾದ E-Courts ಅಪ್ಲಿಕೇಶನ್, ಭಾರತೀಯ ನ್ಯಾಯಾಂಗದಲ್ಲಿ AIಯ ಪಾತ್ರ, SUPACE ಮತ್ತು SUVAS ಎಂಬ ಎರಡೂ ಪ್ರಮುಖ ವ್ಯವಸ್ಥೆಗಳ ಅವಲೋಕನ, SUPACE ಮತ್ತು SUVAS ನಲ್ಲಿ AIಯ ಪಾತ್ರ ಹಾಗು ಜನಸಾಮಾನ್ಯರು, ವಕೀಲರು ಮತ್ತು ನ್ಯಾಯಾಧೀಶರು ಅವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಿದ್ದೇನೆ.


Sir nange calling nalli join aagi baro video calling bagge details kodthira, athara video cal maddaga hack agatta
they cannot hack your device through video call, but can capture your video and edit it and then sextort you in worst case. Check my sextrotion video or article for more details.