ತಿ ವ್ಯಕ್ತಿಗೂ ತನ್ನ ತಲೆ (ಮೆದಳು) ಬಳಸಿ ಸ್ವತಂತ್ರವಾಗಿ ಯೋಚಿಸುವ ಹಕ್ಕು ಇದೆ ಮತ್ತು ಆ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು, ಅದಕ್ಕೆ ಸರಕಾರ/ಕಾನೂನು ರಕ್ಷಣೆ ಬೇಕು. ಇದನ್ನೇ ನಾನು ನನ್ನ ಈ ಲೇಖನದಲ್ಲಿ ಪ್ರತಿಪಾದಿಸುತ್ತಿರುವುದು.
ಈ ಲೇಖನದಲ್ಲಿ ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ದೊಡ್ಡ ಮಟ್ಟದ ಡಿಜಿಟಲ್ ಪ್ರಯೋಗವಾದ E-Courts ಅಪ್ಲಿಕೇಶನ್, ಭಾರತೀಯ ನ್ಯಾಯಾಂಗದಲ್ಲಿ AIಯ ಪಾತ್ರ, SUPACE ಮತ್ತು SUVAS ಎಂಬ ಎರಡೂ ಪ್ರಮುಖ ವ್ಯವಸ್ಥೆಗಳ ಅವಲೋಕನ, SUPACE ಮತ್ತು SUVAS ನಲ್ಲಿ AIಯ ಪಾತ್ರ ಹಾಗು ಜನಸಾಮಾನ್ಯರು, ವಕೀಲರು ಮತ್ತು ನ್ಯಾಯಾಧೀಶರು ಅವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಿದ್ದೇನೆ.