Mysore.ai

“MYSORE.AI” – ವಿಶ್ವದ ಮೊದಲ ಹಸಿರು AI ಚಾಟ್‌ಬಾಟ್

ಈ ಅಂಕಣದಲ್ಲಿ ನಾನು ಮೈಸೂರಿನ ವಿಗ್ಯಾನ್ ಲ್ಯಾಬ್ಸ್ ಸೃಷ್ಟಿಸಿರುವ “Mysore.ai” ವಿಶ್ವದ ಮೊದಲ ಹಸಿರು AI ಚಾಟ್‌ಬಾಟ್ ಬಗ್ಗೆ ತಿಳಿಸಿಕೊಡಲಿದ್ದೇನೆ.

ಇನ್ನು ಮುಂದಿನದು ನಾಲ್ಕನೇ ಔದ್ಯಮಿಕ ಕ್ರಾಂತಿಯಾದ AI(ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಯುಗ. AI ಅಥವಾ ಕೃತಕ ಬುದ್ದಿಮತ್ತೆ 1950 ರಲ್ಲಿ ಅಲನ್ ಟ್ಯೂರಿಂಗ್ ಅವರು ಪ್ರಕಟಿಸಿದ ಪ್ರಬಂಧದ ಮೂಲಕ ಜಗತ್ತಿಗೆ ಪರಿಚಯವಾದರೂ, 2022ರ ನವೆಂಬರ್ 30 ರಂದು OpenAI ಅಭಿವೃದ್ಧಿಪಡಿಸಿದ AI ಬೆಂಬಲಿತ ಚಾಟ್‌ಬಾಟ್(ನುಡಿಮಾದರಿ) ChatGPT ಮೂಲಕ ವಿಶ್ವದಾದ್ಯಂತ AI ಜನಸಾಮಾನ್ಯರಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಮಾಡಿತು. ನಂತರದ ಎರಡು ವರ್ಷಗಳು ಅಮೇರಿಕ ದೇಶದ ಸಂಸ್ಥೆಗಳಿಂದ ವಿಕಸಿತವಾದ AI ಬೆಂಬಲಿತ ಚಾಟ್‌ಬಾಟ್ ಗಳಾದ ChatGPT(OpenAI), Llama(Meta), Gemeni(Google) ಮತ್ತು CoPilot(Microsoft) ಎಲ್ಲರ ಬಾಯಲ್ಲೂ ರರಾಜಿಸಿದವು. ಅದಕ್ಕೆ ಸರಿಯಾಗಿ 2025ರ ಆರಂಭದಲ್ಲಿ ಅಮೆರಿಕಾದ ಅಧ್ಯಕ್ಷ ಟ್ರಂಪ್ ಐನೂರು ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು AI ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಘೋಷಣೆ ಮಾಡಿದಾಗ ಎಲ್ಲರೂ ನಾಲ್ಕನೇ ಔದ್ಯಮಿಕ ಕ್ರಾಂತಿಯಲ್ಲೂ ಅಮೆರಿಕಾದ್ದೇ ಮೇಲಗೈ ಇರುತ್ತದೆ ಎಂದು ನಿರ್ಧರಿಸಿದರು.

ಇಂತಹ AI ತಂತ್ರಜ್ಞಾನದ ಬೆಳವಣಿಗೆಗೆ ನಿರಂತರವಾಗಿ ವಿಶ್ಲೇಷಣಾ ಶಕ್ತಿಯನ್ನು ಒದಗಿಸುವ NVIDIA ಸಂಸ್ಥೆಯ GPU ಚಿಪ್ಪುಗಳು ಬೇಕು, ದೊಡ್ಡ ಡಾಟಾಸೆಂಟರ್ಗಳು ಬೇಕು, ತುಂಬ ವಿದ್ಯುತ್ತು, ನೀರು, ತಂತ್ರಜ್ಞರು ಮತ್ತು ಹಣ ಬೇಕು ಎಂದು ವಿಶ್ವವು ನಂಬಲು ಶುರು ಮಾಡಿದಾಗ, ಚೀನಾದ ಸಂಸ್ಥೆಯೊಂದು deepseek ಎಂಬ AI ಬೆಂಬಲಿತ ಚಾಟ್‌ಬಾಟ್ ಅನ್ನು ವಿಶ್ವಕ್ಕೆ ಪರಿಚಯಿಸಿತು. ಅದರ ವಿಶೇಷಣವೇನೆಂದರೆ ಇದಕ್ಕೆ ತಗುಲಿದ ವೆಚ್ಚ ಮತ್ತು ಸಮಯ ಮೇಲೆ ಹೇಳಿದ ಅಮೆರಿಕಾದ AI ಬೆಂಬಲಿತ ಚಾಟ್‌ಬಾಟ್ ಗಳಿಗಿಂತ ನೂರುಪಾಲು ಕಡಿಮೆ ಮತ್ತು ಇದನ್ನು GPU ಇಲ್ಲದ ಅಥವಾ ಕಡಿಮೆ GPU ಹೊಂದಿದ ಸಾಮಾನ್ಯ ಕಂಪ್ಯೂಟರ್ ನಲ್ಲೂ ಓಡಿಸಬಹುದು ಮತ್ತು ಇದು ಓಪನ್ ಸೊರ್ಸ್ ಆಗಿರುವುದರಿಂದ ಉಚಿತವಾಗಿ ಬಳಸಬಹುದು. ಇದು AI ಬೆಂಬಲಿತ ಚಾಟ್‌ಬಾಟ್ ತಂತ್ರಜ್ಞಾನದಲ್ಲೇ ಒಂದು ಮಹತ್ವದ ತಿರುವಾಗಿದ್ದು, ಭಾರತದಂತ ಅನೇಕ ದೇಶಗಳ ತಂತ್ರಜ್ಞರು ನಾವು ಸಹ ಅಮೆರಿಕಾದ AI ಬೆಂಬಲಿತ ಚಾಟ್‌ಬಾಟ್ ತಂತ್ರಜ್ಞಾನದ ಬಳಕೆದಾರರಲ್ಲದೆ deepseek ತರಹ ಕಡಿಮೆ ಸಂಪನ್ಮೂಲಗಳನ್ನು ಬಳಸಿ ತಮ್ಮದೇ AI ಅಪ್ಲಿಕೇಶನ್ ಗಳನ್ನು ಸೃಷ್ಟಿಸಬಹುದು. ಈ ದಾರಿಯಲ್ಲಿ ನಾನು ನಮ್ಮದೇ ಊರಾದ ಮೈಸೂರಿನ ವಿಗ್ಯಾನ್ ಲ್ಯಾಬ್ಸ್ ಸಂಸ್ಥೆ ಸೃಷ್ಟಿಸಿದ “mysuru.ai” ಅಥವಾ “mysore.ai” AI ಬೆಂಬಲಿತ ಚಾಟ್‌ಬಾಟ್ ಬಗ್ಗೆ ತಿಳಿಸಿಕೊಡಲಿದ್ದೇನೆ. “mysore.ai” ಅನ್ನು ಕಳೆದ 15 ಫೆಬ್ರವರಿ 2025 ರಂದು CyberShield Mysuru ವಿಚಾರಗೋಷ್ಠಿಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಇದನ್ನು ನೀವೆಲ್ಲರೂ ನಿಮ್ಮ ಫೋನ್ ಅಥವಾ ಕಂಪ್ಯೂಟರ್ ನ ವೆಬ್ ಬ್ರೌಸರ್ ನಲ್ಲಿ  www.mysore.ai URL ಲಿಂಕ್ ಮೂಲಕ ಉಚಿತವಾಗಿ ಬಳಸಬಹುದು.

“mysore.ai” ವೈಶಿಷ್ಟ್ಯಗಳು :-

  • ವಿಶ್ವದ ಮೊದಲ ಸುಸ್ಥಿರ ಹಸಿರು AI ಚಾಟ್‌ಬಾಟ್: ಸೌರಶಕ್ತಿಯಿಂದ ಶಕ್ತಿಯನ್ನು ಪಡೆಯುವ ಮತ್ತು ಶೂನ್ಯ ನೀರನ್ನು ಬಳಸುವ ಡೇಟಾಸೆಂಟರ್‌ನಲ್ಲಿ ಇದು ಕಾರ್ಯನಿರ್ವಹಿಸುತ್ತದೆ.
  • ಇದು ಮೈಕ್ರೋ ಡೇಟಾ ಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ: ಇದು ಶೂನ್ಯ GPU ಅನ್ನು ಬಳಸುತ್ತದೆ ಮತ್ತು ಸಣ್ಣ ಮನೆಯ ಗಾತ್ರದ ಡೇಟಾಸೆಂಟರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
  • ಮೈಸೂರಿನಲ್ಲಿ ಸಂಪೂರ್ಣವಾಗಿ ಹೋಸ್ಟ್ ಮಾಡಲಾಗಿದೆ:  ನೀವು ಇದಕ್ಕೆ ಕೊಡುವ ಪ್ರಶ್ನೆಗಳು ಮತ್ತು ಪ್ರಾಂಪ್ಟ್ ಗಳು ಮೈಸೂರಿನಿಂದ ಹೊರಹೋಗುವುದಿಲ್ಲ, ಹಾಗಾಗಿ ನಿಮ್ಮ ಡೇಟಾ ಸುರಕ್ಷಿತವಾರುತ್ತದೆ ಮತ್ತು ಅದನ್ನು ಯಾವುದೇ ವಾಣಿಜ್ಯ ವ್ಯವಹಾರಗಳಿಗೆ ಬಳಸಲಾಗುವುದಿಲ್ಲಾ.
  • ಲಾಗಿನ್ ಅಗತ್ಯವಿಲ್ಲ: ಪ್ರಸ್ತುತ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯಂತಹ ಯಾವುದೇ ವೈಯಕ್ತಿಕ ವಿವರಗಳನ್ನು ನೀಡದೆ ಇದನ್ನು ಬಳಸಬಹುದು.
  • ಡೀಪ್‌ಸೀಕ್ ಮತ್ತು ಲಾಮಾವನ್ನು ಬೆಂಬಲಿಸುತ್ತದೆ: ಇದು ಮೈಸೂರಿನಲ್ಲಿ ಹೋಸ್ಟ್ ಮಾಡಲಾದ ವಿಶ್ವಪ್ರಸಿದ್ಧ ಡೀಪ್‌ಸೀಕ್ ಮತ್ತು ಮೆಟಾದ ಲಾಮಾ ಜನರೇಟಿವ್ AI ನುಡಿಮಾದರಿಗಳನ್ನು ಆಂತರಿಕವಾಗಿ ಕರೆಯುತ್ತದೆ.
  • ಬಳಸಲು ಉಚಿತ: ಯಾವುದೇ ಪ್ರಮಾಣದ ಪ್ರಶ್ನೆಗಳು ಅಥವಾ ಪ್ರಾಂಪ್ಟ್‌ಗಳಿಗೆ ಇದನ್ನು ಬಳಸಲು ಉಚಿತವಾಗಿದೆ ಮತ್ತು ಇದನ್ನು ನಿಮ್ಮ ಫೋನ್ ಮತ್ತು ಕಂಪ್ಯೂಟರ್ ಎರಡರಿಂದಲೂ ಇದನ್ನು ಬಳಸಬಹುದು.

ವಿಗ್ಯಾನ್ ಲ್ಯಾಬ್ಸ್ ಸಂಸ್ಥೆಯು “mysore.ai” ಮೊದಲ ಆವೃತ್ತಿಯಲ್ಲೇ ಕಡಿಮೆ ಸಂಪನ್ಮೂಲ ಮತ್ತು ಸಮಯದಲ್ಲಿ ಆಧುನಿಕ ತಂತ್ರಜ್ಞಗಳಾದ ಡಾಟಾಸೆಂಟರ್ ಮತ್ತು AI ಬೆಂಬಲಿತ ಚಾಟ್‌ಬಾಟ್ ನಲ್ಲಿ ಅನೇಕ ಹೊಸ ತಂತ್ರಜ್ಞಾನಗಳ ಪರಿಶೋಧನೆ ಮಾಡಿದ್ದು, ಅದಕ್ಕೆ ಅನೇಕ ಪೇಟೆಂಟ್ ಗಳನ್ನೂ ಸಹ ಪಡೆದಿರುತ್ತಾರೆ. ಅವರು ಮುಂಬರುವ ಆವೃತ್ತಿಗಳಲ್ಲಿ ಅನೇಕ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುವ ಗುರಿ ಹೊಂದಿರುತ್ತಾರೆ. ಅದರ ಬಗ್ಗೆ ವಿಗ್ಯಾನ್ ಲ್ಯಾಬ್ಸ್ ಸಂಸ್ಥೆಯ ಸಿಇಓ ಆದ ಶ್ರೀನಿವಾಸ್ ವರದರಾಜನ್ ಅವರು ಹೀಗೆ ಹೇಳುತ್ತಾರೆ – “ವಿಗ್ಯಾನ್ ಲ್ಯಾಬ್ಸ್ ಒಂದು ದಶಕಕ್ಕೂ ಹೆಚ್ಚು ಕಾಲ ಪೃಥ್ವಿ ಸ್ನೇಹಿ ಕ್ಲೌಡ್ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದೆ, ಇದು ಈಗಾಗಲೇ 1000 ಗಿಗಾವ್ಯಾಟ್‌ಗಳ ಶಕ್ತಿಯನ್ನು ಉಳಿಸಿದೆ. “Mysore.ai” ನಮ್ಮ ಹಲವಾರು ವರ್ಷದ ಸಂಶೋಧನೆ ಮತ್ತು ವಿವಿಧ ಅಭಿವೃದ್ಧಿಯ ನಾವೀನ್ಯತೆಗಳ ಅಭಿವ್ಯಕ್ತಿಯಾಗಿದೆ. ಇದು ಸಂಪೂರ್ಣವಾಗಿ ಸೌರಶಕ್ತಿಯಿಂದ ಚಾಲಿತವಾದ ವಿಶ್ವದ ಮೊದಲ ಹಸಿರು AI ಆಗಿರುತ್ತದೆ”.

Mysore.AI

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ