QR code scam

QR ಕೋಡ್ ಹಗರಣದ ಬಗ್ಗೆ ಎಚ್ಚರದಿಂದಿರಿ, ಇಲ್ಲದಿದ್ದರೆ ಹಣವನ್ನು ಕಳೆದುಕೊಳ್ಳಿ!

ಈ ಅಂಕಣ ಹೊಸ ಸೈಬರ್ ಕ್ರೈಂ QR code ವಂಚನೆಗಳ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ

ಕ್ವಿಕ್ ರೆಸ್ಪಾನ್ಸ್ (QR) ಕೋಡ್ಗಳು 25 ವರ್ಷಗಳಿಂದಲೂ ಚಾಲ್ತಿಯಲ್ಲಿ ಇದೆ, ಭಾರತದಲ್ಲಿ ಕರೋನ ಮತ್ತು UPI ಕ್ರಾಂತಿಯ ಕಾರಣದಿಂದ ದೈನಂದಿನ ಜೀವನದಲ್ಲಿ ಅವುಗಳ ಬಳಕೆಯು ಸ್ಫೋಟಗೊಂಡಿದೆ. ಹಲವಾರು ಉಚಿತ ಆನ್ಲೈನ್ ಪರಿಕರಗಳನ್ನು ಬಳಸಿಕೊಂಡು ಯಾರಾದರೂ QR ಕೋಡ್ ಅನ್ನು ರಚಿಸಬಹುದು ಮತ್ತು ತಮ್ಮ ವ್ಯವಹಾರಗಳಿಗೆ ಬಳಸಬಹುದು – ವಂಚಕರಿಗೂ ಅವುಗಳನ್ನು ಬಳಸಿ ವಂಚಿಸುವುದು ಸಹ ಇಂದು ಸುಲಭವಾಗಿದೆ. QR ಕೋಡ್ಗಳನ್ನು ಬಳಸಿಕೊಂಡು ನಡೆಸಿದ ಕೆಲವು ವಂಚನೆಗಳ ಬಗ್ಗೆ ಇತ್ತೀಚಿನ ವರದಿಗಳನ್ನು ನೋಡೋಣ:

  • ವಂಚಕರು ಕೇದಾರನಾಥ-ಬದರಿನಾಥ ದೇವಸ್ಥಾನದಲ್ಲಿ ಭಕ್ತರನ್ನು, ನಕಲಿ QR ಕೋಡ್ಗಳನ್ನು ಅಳವಡಿಸಿ ದೇಣಿಗೆಯನ್ನು ಲೂಟಿ ಮಾಡುತ್ತಿದ್ದಾರೆ.
  • ಪುಣೆಯ ರೆಸ್ಟೋರೆಂಟ್ನಲ್ಲಿ QR ಕೋಡ್ ವಂಚನೆಗೆ 50 ವರ್ಷದ ಮಹಿಳೆ 41000 ರೂ ಕಳೆದುಕೊಂಡಿದ್ದಾಳೆ.
  • ಟೆರಿಟೋರಿಯಲ್ ಆರ್ಮಿ ಉದ್ಯೋಗಗಳ ನೇಮಕಾತಿ ಶಾಖೆಯೊಂದರಲ್ಲಿ ಶುಲ್ಕಕ್ಕಾಗಿ ನಕಲಿ QR ಕೋಡ್ ಬಳಸಿ ವಂಚನೆ. 

QR ಕೋಡ್ ಹಗರಣ ಹೇಗೆ ನಡೆಸಲಾಗುತ್ತದೆ :-

ವಂಚಕರು ಪ್ರಮುಖ ಸಂಸ್ಥೆಗಳು ಅಥವಾ ದೇವಾಲಯಗಳು ಅಥವಾ ರೆಸ್ಟೋರೆಂಟ್ಗಳ ಮುದ್ರಿತ ಕರಪತ್ರಗಳ ಮೇಲೆ ನಕಲಿ QR ಕೋಡ್ ಗಳನ್ನು ಅಳವಡಿಸುತ್ತಾರೆ ಅಥವಾ ಇಮೇಲ್ ಗಳು, ಸಾಮಾಜಿಕ ಮಾಧ್ಯಮ ಸಂದೇಶಗಳು ಮತ್ತು ಅಂಚೆಯಲ್ಲಿ ನಕಲಿ QR ಕೋಡ್ ಅನ್ನು ಸಮೀಕ್ಷೆ, ಲಾಟರಿ, ರಿಯಾಯಿತಿ ಕೂಪನ್, ಉಚಿತ ಸದಸ್ಯತ್ವ ಇತ್ಯಾದಿ ರೂಪದಲ್ಲಿ ಕಳುಹಿಸುತ್ತಾರೆ. ಬಲಿಪಶು QR ಕೋಡ್ಅನ್ನು ಸ್ಕ್ಯಾನ್ ಮಾಡಿದ ನಂತರ, ಅವನು ಈ ಕೆಳಗಿನ ವಿಧಾನಗಳಲ್ಲಿ ವಂಚನೆಗೆ ಒಳಗಾಗುತ್ತಾನೆ :

  • QR ಕೋಡ್ ಕೀಲಾಗರ್ ನಂತಹ ವೈರಸ್ ಅನ್ನು ಹೊಂದಿರಬಹುದು, ಅದು ಎಲ್ಲಾ ಕೀ ಸ್ಟ್ರೋಕ್ ಗಳನ್ನು  ಅಥವಾ ಅದು ಸ್ಮಾರ್ಟ್ ಫೋನಲ್ಲಿ ಸಂಗ್ರಹವಾಗಿರುವ ಎಲ್ಲಾ ವಿಷಯಗಳನ್ನು ವಂಚಕರಿಗೆ ಕಳುಹಿಸುತ್ತದೆ, ಅವರು ಅದನ್ನು ಬಳಸಿ ನಾನು ಹಿಂದಿನ ವಾರಗಳಲ್ಲಿ ವಿವರಿಸಿದ ಸಾಮಾಜಿಕ ಎಂಜಿನಿಯರಿಂಗ್ ವಂಚನಾ ವಿಧಾನದಿಂದ ಬಲಿಪಶುವಿನ ಬ್ಯಾಂಕಿನ ಖಾತೆಯನ್ನು ಲೂಟಿ ಅಥವಾ ಬ್ಲ್ಯಾಕ್ಮೇಲ್ ಮಾಡಬಹುದು.
  • QR ಕೋಡ್ ಬಳಕೆದಾರರನ್ನು ಜಾಲತಾಣ ವೊಂದಕ್ಕೆ ನಿರ್ದೇಶಿಸುತ್ತದೆ, ಅಲ್ಲಿ ಅವರು ನಿಮ್ಮ ಪ್ಯಾನ್ ಅಥವಾ ಆಧಾರ್ ಸಂಖ್ಯೆಗಳು ಅಥವಾ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು ಅಥವಾ ಬ್ಯಾಂಕ್ ಲಾಗಿನ್ ವಿವರಗಳಂತಹ ಗೌಪ್ಯ ಮಾಹಿತಿಯನ್ನು ಹಂಚಿಕೊಳ್ಳಲು ಪ್ರೇರೇಪಿಸುತ್ತಾರೆ, ನಂತರ ಅದನ್ನು ಬಲಿಪಶುವನ್ನು ಲೂಟಿ ಮಾಡಲು ಬಳಸುತ್ತಾರೆ.
  • ಯುಪಿಐ ಪಾವತಿಗಳನ್ನು ಸ್ವೀಕರಿಸಲು ವಂಚಕರು ನಿಮಗೆ ಕ್ಯೂಆರ್ ಕೋಡ್ ಅನ್ನು ಕಳುಹಿಸುತ್ತಾರೆ, ಆದರೆ ಅದು ಹಣ ಸ್ವೀಕರಿಸುವ ಬದಲು, ನಿಮ್ಮಿಂದ ನಿಗದಿತ ಮೊತ್ತದೊಂದಿಗೆ ಯುಪಿಐ ಹಣ ಕಳುಹಿಸುವ ಪಾವತಿ ಲಿಂಕ್ ಆಗಿರುತ್ತದೆ ಮತ್ತು ಅವರು ನಿಮಗೆ ಪಾವತಿಯನ್ನು ಸ್ವೀಕರಿಸಲು ಅಧಿಕೃತ ಪಿನ್ ಆಗಿ OTP ಅನ್ನು ನಮೂದಿಸಲು ಪ್ರೇರೇಪಿಸುತ್ತಾರೆ, ನೀವು OTP ಯನ್ನು ನಮೂದಿಸಿದ ಕೂಡಲೇ ನಿಮ್ಮ ಖಾತೆಗೆ ಹಣ ಬರುವ ಬದಲು ಹೋಗುತ್ತದೆ.

QR ಕೋಡ್ ವಂಚನೆಯಿಂದ ನಿಮ್ಮನ್ನು ನೀವು ಹೇಗೆ ರಕ್ಷಿಸಿಕೊಳ್ಳಬಹುದು :-

  • ಹಣವನ್ನು ಸ್ವೀಕರಿಸಲು ಎಂದಿಗೂ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಡಿ. ಈ ಬಗ್ಗೆ ಈ ಹಿಂದೆ SBI ಎಚ್ಚರಿಕೆ ನೀಡಿತ್ತು.
  • ವಿನೋದಕ್ಕಾಗಿ ಅಥವಾ ಲಾಟರಿ ಅಥವಾ ರಿಯಾಯಿತಿ ವೋಚರ್ ಗಳ ಲಾಭಗಳಿಗಾಗಿ QR ಕೋಡ್ಗಳನ್ನು ಸ್ಕ್ಯಾನ್ ಮಾಡಬೇಡಿ, ಇದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿ.
  • UPI ವಹಿವಾಟುಗಳಿಗಾಗಿ ಕನಿಷ್ಠ ಹಣವಿರುವ ಬ್ಯಾಂಕ್ ಖಾತೆಯನ್ನು ಬಳಸಿ ಮತ್ತು UPI ಉದ್ದೇಶಗಳಿಗಾಗಿ ನಿಮ್ಮ ಮುಖ್ಯ ಖಾತೆಯನ್ನು ಬಳಸಬೇಡಿ.
  • QR ಕೋಡ್ ಮಾರ್ಪಾಡಾಗಿರಬಹುದು ಎಂದು ಅನ್ನಿಸಿದರೆ ಅಥವಾ ಅನುಮಾನಾಸ್ಪದವಾಗಿದ್ದರೆ, ಸ್ಕ್ಯಾನ್ ಮಾಡುವ ಮೊದಲು ಯಾವಾಗಲೂ ಪರಿಶೀಲಿಸಿ ಅಥವಾ ಸ್ಕ್ಯಾನ್ ಮಾಡಬೇಡಿ.
  • ಉತ್ತಮ ಆಂಟಿವೈರಸ್ ಸಾಫ್ಟ್ವೇರ್ ಅನ್ನು ಸ್ಥಾಪಿಸಿ ಮತ್ತು ಅದನ್ನು ನಿಯಮಿತವಾಗಿ ನವೀಕರಿಸುತ್ತಿರಿ.
  • QR ಕೋಡ್ ಅನ್ನು ಸ್ಕ್ಯಾನ್ ಮಾಡಲು ನಿಮ್ಮನ್ನು ಕೇಳುವ ಅಪರಿಚಿತರಿಗೆ ‘ಆಗುವಿದಿಲ್ಲ’ ಎಂದು ಹೇಳಿ.
  • ಅಧಿಕೃತ ಮೂಲದಿಂದ ಬಂದ ಹೊರತು QR ಕೋಡ್ನಿಂದ ನಿರ್ದೇಶಿಸಲಾದ ಫಾರ್ಮ್ಗಳು ಅಥವಾ ವೆಬ್ಸೈಟ್ಗಳಲ್ಲಿ ನಿಮ್ಮ ಗೌಪ್ಯ ವಿವರಗಳನ್ನು ಎಂದಿಗೂ ನಮೂದಿಸಬೇಡಿ.

QR ಕೋಡ್ ವಂಚನೆಗೆ ಒಳಗಾಗಿದ್ದರೆ :-

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ಸಲ್ಲಿಸಿ. ನೀವು ಯಾರೊಂದಿಗಾದರೂ ಆಧಾರ್ ಅನ್ನು ಹಂಚಿಕೊಂಡಿದ್ದರೆ, uidai.gov.in ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿ. ಆಯಾ ಸಾಮಾಜಿಕ ಮಾಧ್ಯಮ ವೆಬ್ಸೈಟ್ನಲ್ಲಿನ ನಕಲಿ ಖಾತೆ ಅಥವಾ ಪ್ರೊಫೈಲ್ ಬಗ್ಗೆ ಮತ್ತು ಅದರ ಹೋಸ್ಟಿಂಗ್ ಸೇವಾ ಪೂರೈಕೆದಾರರೊಂದಿಗೆ ನಕಲಿ QR ಕೋಡ್ ಮತ್ತು ವೆಬ್ಸೈಟ್ಗಳ ಬಗ್ಗೆ ದೂರು ನೀಡಿ ಮತ್ತು ಅದನ್ನು ನಿರ್ಬಂಧಿಸಲು ಹೇಳಿ. ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್ಗೆ ಕರೆ ಮಾಡಿ ಮತ್ತು ದೂರು ನೀಡಿ. ಬಹಿರಂಗಗೊಂಡ ಬ್ಯಾಂಕಿಂಗ್ ಖಾತೆಗಳ ಪಾಸ್ವರ್ಡ್ಗಳು/ಪಿನ್ಗಳನ್ನು ಬದಲಾಯಿಸಿ. QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಮಾಲ್ವೇರ್/ವೈರಸ್ ದಾಳಿಯ ಬಗ್ಗೆ ನಿಮಗೆ ಸಂದೇಹವಿದ್ದರೆ, ಸಾಧನವನ್ನು ಫಾರ್ಮ್ಯಾಟ್ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *