pan frauds

ಪಾನ್ ವಂಚನೆಗಳು: ಒಂದು ಪಾನ್ – ಹಲವು ವಂಚನೆಗಳು !!!

ಈ ಅಂಕಣ ಪಾನ್ ಉಪಯೋಗಿಸಿ ನಡೆಸುವ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ

ನಿಮಗೆಲ್ಲ ತಿಳಿದಿರುವಂತೆ ಆದಾಯ ತೆರಿಗೆ ಇಲಾಖೆಯಿಂದ ವಿತರಿಸಲಾಗುವ ಹತ್ತು ಅಂಖ್ಯೆಯ ಪಾನ್(ಪರ್ಮನೆಂಟ್ ಅಕೌಂಟ್ ನಂಬರ್) ತೆರಿಗೆ ಸಂಬಂಧಿತ, ಸಾಲ, ಬಂಡವಾಳ ಹೂಡಿಕೆ, ಆಸ್ತಿ ಅಥವಾ ಆಭರಣ ಅಥವಾ ವಾಹನ ಖರೀದಿ ಮತ್ತು ಮಾರಾಟ ಉದ್ದೇಶಗಳಿಗಾಗಿ ಮಾತ್ರವಲ್ಲದೆ ಗುರುತಿನ ಚೀಟಿಯಾಗಿಯೂ ಬಳಸಲಾಗುತ್ತದೆ.  ಭಾರತ ಸರಕಾರ ಪಾನ್ ಸುರಕ್ಷತೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ಧರೊ, ಸೈಬರ್ ಖದೀಮರು ಜನರ ಹಾಗು ಸಂಸ್ಥೆಗಳ ಬೇಜವಾಬ್ಧಾರಿತನ, ಸೋಂಬೇರುತನ, ಉದಾಸೀನತೆ ಹಾಗು ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಪಾನ್ ಗುರುತಿನ ಚೀಟಿಯನ್ನು ಮಾಧ್ಯಮವನ್ನಾಗಿಸಿ ಅನೇಕ ಸೈಬರ್ ಕ್ರೈಂ ಎಸಗಿದ್ದಾರೆ.

ಪಾನ್ ವಂಚನೆ ಹೇಗೇ ಮಾಡುತ್ತಾರೆ :-

ಯಾವುದಾದರು ಸರಕಾರಿ ಯೋಜನೆಯ ಪ್ರಯೋಜನಕ್ಕಾಗೋ, ಹೋಟೆಲ್ ರೂಮ್, ಕೆಲಸ, ಬ್ಯಾಂಕ್ ಖಾತೆ, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ಸಾಲ ಮಂಜೂರಾತಿಗೋ ಅಥವಾ KYC ಗಾಗಿ ನಿಮ್ಮ ಹೆಸರು ಮತ್ತು ವಯಸ್ಸು ದೃಡೀಕರಣೆಗಾಗೋ ನಿಮ್ಮಿಂದ ಪಾನ್ ಕಾರ್ಡಿನ ಫೋಟೋ ಅಥವಾ ಸ್ಕ್ಯಾನ್ ಅಥವಾ ಜೆರಾಕ್ಸ್ ಪ್ರತಿಯನ್ನು ನಿಮ್ಮಿಂದ ಪಡೆಯುತ್ತಾರೆ. ಆ ಪ್ರತಿಯನ್ನು ಬಳಸಿ ಈ ಕೆಳಗಿನ ವಂಚನೆಗಳನ್ನು ಮಾಡುತ್ತಾರೆ :

 • ನಿಮ್ಮ ಪಾನ್ ಕಾರ್ಡ್ ಬಳಿಸಿ ವಂಚಕರು ಮಾಡಿದ ದೊಡ್ಡ ಮೊತ್ತದ ಹಣದ ಕಳ್ಳ ವ್ಯವಹಾರಗಳಿಗೆ ನೀವು ಉತ್ತರಿಸಬೇಕಾಗುತ್ತದೆ.
 • ನಿಮ್ಮ ಪಾನ್ ಕಾರ್ಡ್ ಬಳಿಸಿ ಸಾಲವನ್ನು ಅಥವಾ ಕ್ರೆಡಿಟ್ ಕಾರ್ಡನ್ನು ಪಡೆಯುತ್ತಾರೆ, ಅದನ್ನು ನೀವು ತೀರಿಸಬೇಕಾಗುತ್ತದೆ.
 • ನಿಮ್ಮ ಪಾನ್ ಕಾರ್ಡ್ ಬಳಿಸಿ ಆಭರಣವನ್ನೋ, ವಿದೇಶದ ಪ್ರಯಾಣವನ್ನೋ ಅಥವಾ ಹೆಚ್ಚಿನ ಮೊತ್ತದ ಕಪ್ಪು ಹಣ ಸಂದಾಯವನ್ನೋ ಮಾಡುತ್ತಾರೆ ಅಥವಾ ಶೆಲ್ ಕಂಪನಿ ತೆರೆಯುತ್ತಾರೆ, ನೀವು ಆದಾಯ ತೆರಿಗೆ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತದೆ.
 • ನಿಮ್ಮ ಪಾನ್ ಕಾರ್ಡ್ ಬಳಿಸಿ ಹೋಟೆಲ್ ಕೊಠಡಿಯನ್ನು ಅಥವಾ ಕಾರನ್ನು ಬಾಡಿಗೆಗೆ  ಪಡೆಯುತ್ತಾರೆ ಅಥವಾ ಸಿಮ್ ಕಾರ್ಡ್ ಖರೀದಿಸುತ್ತಾರೆ, ನೀವು ಅಲ್ಲಿ ನಡೆದ ಕಾನೂನುಬಾಹಿರ ಚಟುವಟಿಕೆಗೇ ಉತ್ತರಿಸಬೇಕಾಗುತ್ತದೆ.

ಪಾನ್ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-

 • ಯಾರೊಂದಿಗೂ ನಿಮ್ಮ ಪಾನ್ ಕಾರ್ಡಿನ ಚಿತ್ರವನ್ನು ಹಂಚಿಕೊಳ್ಳಬೇಡಿ, ಹಾಗೊಂದು ರೀತಿ ಕೊಡಲೇಬೇಕಾದರೆ ಅದರ ಜೆರಾಕ್ಸ್ ಕಾಪಿಯ ಚಿತ್ರವನ್ನು ಕೊಡಿ ಮತ್ತು ಯಾವ ಕಾರಣಕ್ಕೆ ಕೊಡುತ್ತಿರುವಿರೆಂದು ದಿನಾಂಕದೊಂದಿಗೆ ಬರೆಯಿರಿ.
 • ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ದೃಢೀಕರಣಕ್ಕಾಗಿ ಪಾನ್ ಬದಲು ಡ್ರೈವಿಂಗ್ ಲೈಸನ್ಸ್ ಅಥವಾ ವೋಟರ್ ID ಬಳಸಿ. 
 • ನಿಮ್ಮ ಮೊಬೈಲಿನಲ್ಲಿ ಅಥವಾ ಕಂಪ್ಯೂಟರಿನಲ್ಲಿ ಪಾನ್ ಕಾರ್ಡಿನ ಚಿತ್ರ ಅಥವಾ ಸ್ಕ್ಯಾನ್ನ್ಡ್ ಕಾಪಿಯನ್ನು ಹಾಗು ಪರ್ಸಿನಲ್ಲಿ ಪಾನ್ ಕಾರ್ಡ್ ಇಟ್ಟುಕೊಳ್ಳಬೇಡಿ.
 • ನೀವು ಪಾನ್ ಸಂಖ್ಯೆಯನ್ನು ನಮೂದಿಸುವ ಜಾಲತಾಣ ಸೆಕ್ಯೂರ್(ಬ್ರೌಸರ್ರ್ನಲ್ಲಿ https ಯಿಂದ ಶುರುವಾಗ್ತಾ ಇದೆಯ ಅಥವಾ ಬೀಗ ಮುದ್ರೆ)  ಇದ್ದರೆ ಮಾತ್ರ ನಮೂದಿಸಿ.
 • ನಿಮ್ಮ ಸಿಬಿಲ್ ಸ್ಕೋರ್ ಮತ್ತು ವರದಿಯನ್ನು ಹಾಗು ಆದಾಯ ತೆರಿಗೆ ಜಾಲತಾಣದಲ್ಲಿ ಫಾರ್ಮ್ 26A ಹಾಗು AIS ವರದಿಯನ್ನು ನಿಯಮಿತವಾಗಿ ಅನಿರೀಕ್ಷಿತ ಟ್ರಾನ್ಸಾಕ್ಷನ್ ಬಗ್ಗೆ ಪರೀಕ್ಷಿಸುತ್ತಿರಿ.
 • ನೀವು ನಿಮ್ಮ ಪಾನ್ ಸಂಖ್ಯೆಯನ್ನು ಅಥವಾ ಅದಕ್ಕೆ ಸಂಬಂದಪಟ್ಟ OTPಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
 • ಪಾನ್ ಅಪ್ಡೇಟ್ ಮಾಡಲು ನಿಮಗೆ ಬರುವ sms ಅಥವಾ ವಾಟ್ಸಪ್ಪ್ ಸಂದೇಶದಲ್ಲಿರುವ ಲಿಂಕನ್ನು ಕ್ಲಿಕ್ ಮಾಡಬೇಡಿ ಮತ್ತು ಅಲ್ಲಿ ನಮೂದಿಸಿರುವ ಸಂಖ್ಯೆಗೆ ಕರೆ ಮಾಡಬೇಡಿ. ವಿಳಾಸ ಅಥವಾ ದೂರವಾಣಿ ಸಂಖ್ಯೆಯನ್ನು ಅಪ್ಡೇಟ್ ಮಾಡಲು ಅನುಮೋದಿತ ಸಂಸ್ಥೆ ಅಥವಾ ಜಾಲತಾಣ ಮಾತ್ರ ಉಪಯೋಗಿಸಿ.

ನೀವು ಪಾನ್ ವಂಚನೆಗೆ ಒಳಗಾಗಿದ್ದರೆ :-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ನೀವು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ(incometax.gov.in) ದೂರು ಸಲ್ಲಿಸಬಹುದು. ಸರಿಯಾಗಿ ಪರಿಶೀಲಿಸದೇ ವಂಚನೆಗೆ ಅನುವು ಮಾಡಿಕೊಟ್ಟ ಸರಕಾರಿ ಅಥವಾ ಬೇರೆ ಸಂಸ್ಥೆಗಳಲ್ಲೂ ದೂರು ದಾಖಲಿಸಿ ಹಾಗು ಅವರ ವಿರುದ್ಧ ಕಾನೂನು ಕ್ರಮ ಜರಗಿಸಿ.

ಒಂದು ಪಾನ್(PAN) – ಹಲವು ವಂಚನೆಗಳು. ಹೇಗೇ ಮಾಡುತ್ತಾರೆ, ಹೇಗೇ ರಕ್ಷಿಸಿಕೊಳ್ಳಬಹುದು ಮತ್ತು ಪರಿಹಾರ

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *