aadhaar frauds

ಆಧಾರ್ ವಂಚನೆಗಳು: ಒಂದು ಆಧಾರ್ – ಹಲವು ವಂಚನೆಗಳು !!! ನಿಮಗೆಷ್ಟು ಗೊತ್ತು??

ಈ ಅಂಕಣ ಆಧಾರ್ ಉಪಯೋಗಿಸಿ ನಡೆಸುವ ಹೊಸ ಸೈಬರ್ ಕ್ರೈಂ ಕುರಿತಾಗಿದ್ದು, ಇದು ಹೇಗೇ ನಡೆಸುತ್ತಾರೆ, ಹೇಗೇ ನಿಮ್ಮನ್ನು ಕಾಪಾಡಿಕೊಳ್ಳಬಹುದು ಮತ್ತು ಪರಿಹಾರದ ಬಗ್ಗೆ ವಿವರಿಸಲಾಗಿದೆ

ಕಳೆದ ಆಧಾರ್-ಪಾನ್ ಲಿಂಕ್ ಅಂಕಣದ ನಂತರ ಸುಮಾರು ಓದುಗರು ಆಧಾರ್ ಮತ್ತು ಪಾನ್ ವಂಚನೆಗಳ ಬಗ್ಗೆ ವಿಸ್ತಾರವಾಗಿ ಬರೆಯಲು ಇಚ್ಛಿಸಿದರು, ಹೀಗಾಗಿ ನಾನು ಈ ವಾರ ಆಧಾರ್ ಮತ್ತು ಮುಂದಿನ ವಾರ ಪಾನ್ ಸಂಖ್ಯೆಯನ್ನು ಬಳಸಿ ನಡೆಯುವ ಸೈಬರ್ ಕ್ರೈಂಗಳ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಡುತ್ತೇನೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗಂತೂ ಪ್ರತಿಯೊಬ್ಬ ಭಾರತದ ಪ್ರಜೆಯ ಹತ್ತಿರ ಆಧಾರ್ ಕಾರ್ಡ್ ಇರಲೇಬೇಕು,  ಅದೊಂದು ಮಹತ್ವದ ಗುರುತಿನ ಚೀಟಿ ಆಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ದರವರೆಗೆ ಎಲ್ಲರೂ ಸರಕಾರದ ಯೋಜನೆಗಳ ಪ್ರಯೋಜನ ಪಡೆಯುವುದರಿಂದ ಹಿಡಿದು ಏನೇ ವ್ಯವಹಾರ ಮಾಡಲು ಆಧಾರ್ ಕಾರ್ಡೇ ಆಧಾರವಾಗಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ಆಧಾರ್ ಸುರಕ್ಷತೆಗಾಗಿ ಅನೇಕ ಕ್ರಮಗಳನ್ನು ಕೈಗೊಂಡಿದ್ಧರೊ, ಸೈಬರ್ ಖದೀಮರು ಜನರ ಹಾಗು ಸಂಸ್ಥೆಗಳ ಬೇಜವಾಬ್ಧಾರಿತನ, ಸೋಂಬೇರುತನ, ಉದಾಸೀನತೆ ಹಾಗು ಅಜ್ಞಾನವನ್ನು ಬಂಡವಾಳವನ್ನಾಗಿಸಿಕೊಂಡು ಆಧಾರ್ ಗುರುತಿನ ಚೀಟಿಯನ್ನು ಮಾಧ್ಯಮವನ್ನಾಗಿಸಿ ಅನೇಕ ಸೈಬರ್ ಕ್ರೈಂ ಎಸಗಿದ್ದಾರೆ.

ಆಧಾರ್ ವಂಚನೆಗಳು ಹೇಗೇ ಮಾಡುತ್ತಾರೆ :-

ಯಾವುದಾದರು ಸರಕಾರಿ ಯೋಜನೆಯ ಪ್ರಯೋಜನಕ್ಕಾಗೋ, ಹೋಟೆಲ್ ರೂಮ್, ಕೆಲಸ, ಬ್ಯಾಂಕ್ ಖಾತೆ ಅಥವಾ ಸಾಲ ಮಂಜೂರಾತಿಗೋ ಅಥವಾ KYC ಗಾಗಿ ನಿಮ್ಮ ಹೆಸರು, ವಯಸ್ಸು ಮತ್ತು ವಿಳಾಸ ದೃಡೀಕರಣೆಗಾಗೋ ನಿಮ್ಮಿಂದ ಆಧಾರ್ ಕಾರ್ಡಿನ ಫೋಟೋ ಅಥವಾ ಸ್ಕ್ಯಾನ್ ಅಥವಾ ಜೆರಾಕ್ಸ್ ಪ್ರತಿಯನ್ನು ಅಥವಾ ನಿಮ್ಮ ಬೆರಳಚ್ಚನ್ನು ನಿಮ್ಮಿಂದ ಪಡೆಯುತ್ತಾರೆ. ಆ ಪ್ರತಿಯನ್ನು ಬಳಸಿ ಈ ಕೆಳಗಿನ ವಂಚನೆಗಳನ್ನು ಮಾಡುತ್ತಾರೆ :

  • ನಿಮ್ಮ ಆಧಾರ್ ಕಾರ್ಡಿನ ಮೇಲೇ ವೈಯಕ್ತಿಕ ಸಾಲ ಪಡೆಯುತ್ತಾರೆ, ನೀವು ಸಾಲವನ್ನು ತೀರಿಸಬೇಕಾಗುತ್ತದೆ. 
  • ನಿಮಗೆ ಬರಬೇಕಾದ ಸರಕಾರಿ ಸವಲತ್ತುಗಳನ್ನು ತಮ್ಮ ಖಾತೆಗೆ ಬರುವಂತೆ ಮಾಡುತ್ತಾರೆ.
  • ಕೋರ್ಟಿನಲ್ಲಿ ನಿಮ್ಮ ಆಧಾರನ್ನು ಕೊಟ್ಟು ಬೇಲ್ಗೆ ಜಾಮೀನು ಪಡೆಯುತ್ತಾರೆ, ಅಪರಾಧಿ ಪರಾರಿಯಾದರೆ ನೀವೇ ಹೊಣೆಯಾಗುತ್ತೀರಿ.      
  • ನಿಮ್ಮ ಆಧಾರ್ ಪ್ರತಿಯನ್ನು ಬಳಸಿ ನಿಮ್ಮ ಜಮೀನನ್ನೇ ಪರಭಾರೆ ಮಾಡಿಸಿಕೊಂಡಿರುವುದು ವರದಿಯಾಗಿದೆ.
  • ಆಧಾರ್ ಆಧಾರಿತ ಪೇಮೆಂಟ್ಸ್ ಸಿಸ್ಟಮ್ ಮುಖಾಂತರ ನಿಮ್ಮ ಬೆರಳಚ್ಚನ್ನು ಉಪಯೋಗಿಸಿ ನಿಮ್ಮ ಖಾತೆಯಿಂದ ಹಣವನ್ನು ಪಡೆಯುತ್ತಾರೆ.

ಆಧಾರ್ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು:-

  • ಯಾರೊಂದಿಗೂ ನಿಮ್ಮ ಆಧಾರ್ ಕಾರ್ಡಿನ ಚಿತ್ರವನ್ನು ಹಂಚಿಕೊಳ್ಳಬೇಡಿ, ಹಾಗೊಂದು ರೀತಿ ಕೊಡಲೇಬೇಕಾದರೆ ಅದರ ಜೆರಾಕ್ಸ್ ಕಾಪಿಯ ಚಿತ್ರವನ್ನು ಕೊಡಿ ಮತ್ತು ಯಾವ ಕಾರಣಕ್ಕೆ ಕೊಡುತ್ತಿರುವಿರೆಂದು ದಿನಾಂಕದೊಂದಿಗೆ ಬರೆಯಿರಿ.
  • ನಿಮ್ಮ ಹೆಸರು, ವಯಸ್ಸು ಅಥವಾ ವಿಳಾಸದ ದೃಢೀಕರಣಕ್ಕಾಗಿ ಆಧಾರ್ ಬದಲು ಡ್ರೈವಿಂಗ್ ಲೈಸನ್ಸ್ ಅಥವಾ ವೋಟರ್ ID ಬಳಸಿ.
  • ನಿಮ್ಮ ಆಧಾರ್ ಕಾರ್ಡಿನ ಬಯೋಮೆಟ್ರಿಕ್ ದೃಡೀಕರಣವನ್ನು ಆಧಾರ್ ಜಾಲತಾಣದಲ್ಲಿ ಲಾಕ್ ಮಾಡಿ, ಬೇಕೆಂದಾಗ ಅನ್ಲಾಕ್ ಮಾಡಿ.
  • ನೀವು ಆಧಾರ್ ಕಾರ್ಡಿನ ವರ್ಚುಯಲ್ ID ಯನ್ನು ಬೇಕೆಂದಾಗ ಆಧಾರ್ ಜಾಲತಾಣದಲ್ಲಿ ಸೃಷ್ಟಿಸಿ ದೃಡೀಕರಣಕ್ಕಾಗಿ ಬಳಸಿ ನಂತರ ಬದಲಿಸಿ.
  • ನಿಮ್ಮ ಆಧಾರ್ ಯಾವಾಗಲು ನಿಮ್ಮ ಪ್ರಸ್ತುತ ಮೊಬೈಲ್ ಸಂಖ್ಯೆ ಮತ್ತು ಈ-ಮೇಲ್ ಅಡ್ದ್ರೆಸ್ಸನ್ನು ಹೊಂದಿರುವಂತೆ ನೋಡಿಕೊಳ್ಳಿ.
  • ನೀವು ಮಾಸ್ಕೇಡ್ ಆಧಾರ್ ಪ್ರತಿಯನ್ನು UIDAI ಜಾಲತಾಣದಿಂದ ಡೌನ್ಲೋಡ್ ಮಾಡಿ ದೃಡೀಕರಣೆಗಾಗಿ ಬಳಸಬಹುದು.
  • ನೀವು ಆಧಾರ್ ದೃಢೀಕರಣ ಇತಿಹಾಸವನ್ನು, ನಿಮ್ಮ ಆಧಾರ್ ದುರ್ಬಳಕೆಯಾಗಿದೆಯಾ ಎಂದು ತಿಳಿಯಲು ಆಗಾಗ ಪರಿಶೀಲಿಸುತ್ತಿರಿ.

ನೀವು ಆಧಾರ್ ವಂಚನೆಗೆ ಒಳಗಾಗಿದ್ದರೆ :-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ನಿಮ್ಮ ಆಧಾರ್ ಕಾರ್ಡನ್ನು uidai.gov.in ಜಾಲತಾಣದಲ್ಲಿ ಲಾಕ್ ಮಾಡಿ ಮತ್ತು ಅಲ್ಲೂ ಒಂದು ದೂರು ದಾಖಲಿಸಿ. ಸರಿಯಾಗಿ ಪರಿಶೀಲಿಸದೇ ವಂಚನೆಗೆ ಅನುವು ಮಾಡಿಕೊಟ್ಟ ಸರಕಾರಿ ಅಥವಾ ಬೇರೆ ಸಂಸ್ಥೆಗಳಲ್ಲೂ ದೂರು ದಾಖಲಿಸಿ ಹಾಗು ಅವರ ವಿರುದ್ಧ ಕಾನೂನು ಕ್ರಮ ಜರಗಿಸಿ.

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Leave a Reply

Your email address will not be published. Required fields are marked *