Site icon Welcome to CYBER MITHRA

ಇರಾನ್–ಅಮೆರಿಕಾ ಯುದ್ಧಕ್ಕಿಂತ ಭಯಾನಕ ಈ ಸೈಬರ್ ವಂಚನೆಗಳು

iran us war

ಫೆಬ್ರವರಿ ೨೮, ೨೦೨೬. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿದ ದಿನ. ಆ ರಾತ್ರಿಯೇ, ಮಂಗಳೂರಿನ ಒಬ್ಬ ಸಾಫ್ಟ್‌ವೇರ್ ಉದ್ಯೋಗಿಗೆ ಒಂದು ವಾಟ್ಸ್ಆಪ್ ಸಂದೇಶ ಬಂತು: “ಇರಾನ್ ಯುದ್ಧದಿಂದ ತೈಲ ಬೆಲೆ ಮೂರು ಪಟ್ಟು ಏರಲಿದೆ. ಈಗಲೇ ಈ ಆ್ಯಪ್‌ನಲ್ಲಿ ಕ್ರೂಡ್ ಆಯಿಲ್ ಫ್ಯೂಚರ್ಸ್ ಖರೀದಿಸಿ, ಲಕ್ಷ ಗಳಿಸಿ.” ಆ ಲಿಂಕ್ ಕ್ಲಿಕ್ ಮಾಡಿದ ಆತ ಎರಡು ದಿನಗಳಲ್ಲಿ ₹೩ ಲಕ್ಷ ಕಳೆದುಕೊಂಡ. ಇದು ಒಂದು ಕಾಲ್ಪನಿಕ ಕಥೆಯಲ್ಲ. ಇಂದು ಕರ್ನಾಟಕ ಮತ್ತು ಭಾರತದ ಉದ್ದಗಲಕ್ಕೂ ಇಂತಹ ನೂರಾರು ಪ್ರಕರಣಗಳು ನಡೆಯುತ್ತಿವೆ.
ಅತ್ತ ಇರಾನ್ ಮತ್ತು ಇಸ್ರೇಲ್ /ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚಾಗುತ್ತಿದ್ದರೆ, ಇತ್ತ ನಮ್ಮ ಕರ್ನಾಟಕ ಮತ್ತು ಭಾರತದ ಸಾಮಾನ್ಯ ನಾಗರಿಕರ ಮೇಲೆ ಸೈಬರ್ ಅಪರಾಧಿಗಳು ಇದೆ ಯುದ್ದವನ್ನು ತಮ್ಮ ಬಂಡವಾಳವನ್ನಾಗಿಸಿಕ್ಕೊಂಡು ಅನೇಕ ರೀತಿಯ ಸೈಬರ್ ಅಪರಾಧಗಳನ್ನೆಸಗುತ್ತಿದ್ದಾರೆ. ನಾನು ಈ ಲೇಖನದಲ್ಲಿ ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ವಿವಿಧ ಸೈಬರ್ ವಂಚನೆಗಳು, ಅದರಿಂದ ನೀವು ಹೇಗೆ ನಿಮ್ಮನ್ನು ಕಾಪಾಡಿಕೊಳ್ಳಬಹುದು, ನೀವೇನಾದರು ಈ ಸೈಬರ್ ಅಪರಾಧಕ್ಕೆ ಬಲಿಯಾದರೆ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡಲಿದ್ದೇನೆ.

ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ಪ್ರಮುಖ ಸೈಬರ್ ವಂಚನೆಗಳು:-

ಇಂತಹ ವಂಚನೆಯಿಂದ ಬಚಾವಾಗಲು ನೀವು :-

ನೀವು ಸೈಬರ್ ವಂಚನೆಗೆ ಒಳಗಾಗಿದ್ದರೆ ಏನು ಮಾಡಬಹುದು :-

ನೀವು ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್‌ಸೈಟ್ನಲ್ಲಿ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ನಿಮ್ಮ ಬ್ಯಾಂಕ್‌ಗೆ ತಕ್ಷಣ ಕರೆ ಮಾಡಿ, ನಡೆದ ವಿಷಯ ತಿಳಿಸಿ ಮತ್ತು ನಿಮ್ಮ ಖಾತೆ ಹಾಗೂ ಕಾರ್ಡ್‌ಗಳನ್ನು ತಾತ್ಕಾಲಿಕವಾಗಿ ಬ್ಲಾಕ್ ಮಾಡಿಸಿ ಮತ್ತು ಪಾಸ್ವರ್ಡ್/ಪಿನ್ ಬದಲಾಯಿಸಿ. ನೀವು ಆಧಾರ್ ಕಾರ್ಡ್ ಮಾಹಿತಿ ಅಥವಾ ನಕಲು ಪ್ರತಿಯನ್ನು ಹಂಚಿಕೊಂಡಿದ್ದರೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಆಧಾರ್ ವೆಬ್ಸೈಟ್ ಅಥವಾ mAadhaar ಅಪ್ಲಿಕೇಶನ್ನಲ್ಲಿ ನಿರ್ಬಂಧಿಸಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

Exit mobile version