Site icon Welcome to CYBER MITHRA

2025: ಸೈಬರ್ ಸುರಕ್ಷತೆಯ ವರ್ಷ – ಒಂದು ಅವಲೋಕನ

2025

ಡಿಜಿಟಲ್ ಇಂಡಿಯಾದ ಕನಸು ನನಸಾಗುತ್ತಿರುವ ಖುಷಿ ಒಂದು ಕಡೆ ಇದ್ದರೆ ಇನ್ನೊಂದೆಡೆ ಸೈಬರ್ ಅಪರಾಧಗಳ ಪ್ರಮಾಣವು ಹೆಚ್ಚಾಗುತ್ತಿವೆ. 2025ರ ವರ್ಷವು ಭಾರತಕ್ಕೆ ಸೈಬರ್ ಭದ್ರತೆಯ ದೃಷ್ಟಿಯಿಂದ ನಿರ್ಣಾಯಕ ವರ್ಷವಾಗಿತ್ತು. ಒಂದು ಕಡೆ ಸೈಬರ್ ಅಪರಾಧಗಳು ದಾಖಲೆಯ ಮಟ್ಟವನ್ನು ತಲುಪಿದರೆ, ಮತ್ತೊಂದು ಕಡೆ ಸರ್ಕಾರವು ಇದನ್ನು ತಡೆಗಟ್ಟಲು ಅನೇಕ ಪ್ರಮುಖ ಕ್ರಮಗಳನ್ನು ಕೈಗೊಂಡಿತ್ತು. 2025ರಲ್ಲಿ ನಾನು ಗಮನಿಸಿದ ಒಂದು ಪ್ರಮುಖ ಬದಲಾವಣೆಯೆಂದರೆ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಕೇವಲ ‘ಪ್ರತಿಕ್ರಿಯಾತ್ಮಕ’ ಕ್ರಮಗಳಿಗಿಂತ ಹೆಚ್ಚಾಗಿ ‘ಮುನ್ನೆಚ್ಚರಿಕೆ’ ಕ್ರಮಗಳಿಗೆ ಆದ್ಯತೆ ನೀಡಿದ್ದು. ಈ ಲೇಖನದಲ್ಲಿ 2025ರಲ್ಲಿ ಭಾರತ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಪ್ರಮುಖ ಕ್ರಮಗಳು, ಜಾರಿಗೆ ತಂದ ಹೊಸ ಕಾನೂನುಗಳು, ಅದರಿಂದಾದ ಪರಿಣಾಮಗಳು ಹಾಗೂ ಸೈಬರ್ ಕ್ರೈಂ ಅಂಕಿಅಂಶಗಳ ಸಮಗ್ರ ಅವಲೋಕನ ಮಾಡೋಣ.

ಸೈಬರ್ ಅಪರಾಧಗಳ ಅಂಕಿಅಂಶಗಳು : 2024 vs 2025 :-

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಮತ್ತು ಇತರ ಮೂಲಗಳ ಪ್ರಕಾರ, 2024ರಲ್ಲಿ ಸುಮಾರು 22.7 ಲಕ್ಷ ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆದರೆ ನವೆಂಬರ್ 2025ರ ವರಗೆ ಈ ಸಂಖ್ಯೆ ಸುಮಾರು 25 ಲಕ್ಷಕ್ಕೆ ಏರಿಕೆಯಾಗಿದೆ, ಅಂದರೆ ಇದು ಇವರೆಗೆ 10% ಹೆಚ್ಚಳವಾಗಿರುತ್ತದೆ. ಹಣಕಾಸು ನಷ್ಟದ ಬಗ್ಗೆ ಮಾತನಾಡುತ್ತಾ, 2024ರಲ್ಲಿ ಸೈಬರ್ ಅಪರಾಧಗಳಿಂದ ಭಾರತಕ್ಕೆ ಸುಮಾರು ರೂ. 22,845 ಕೋಟಿ ಮತ್ತು ನವೆಂಬರ್ 2025ರವರೆಗೆ ಸುಮಾರು ರೂ. 20,000 ಕೋಟಿ ನಷ್ಟವಾಗಿತ್ತು ಅದು ವರ್ಷದ ಕೋನೆಯವರೆಗೆ 2024ರ ಮಟ್ಟಕ್ಕೆ ಹೋದರು ಹೋಗಬಹುದು. ಕರ್ನಾಟಕದ ಅಂಕಿಅಂಶಗಳು ಹೆಚ್ಚು ಆಶಾದಾಯಕವಾಗಿದ್ದು, ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 2025ರಲ್ಲಿ ಕಡಿಮೆಯಾಗಿದೆ. 2024ರಲ್ಲಿ 22,479 ಪ್ರಕರಣಗಳು ದಾಖಲಾಗಿದ್ದವು, ಆದ ನಷ್ಟ ರೂ. 2,500 ಕೋಟಿಗಿಂತ ಹೆಚ್ಚು. ನವೆಂಬರ್ 2025ರವರೆಗೆ ದಾಖಲಾದ ಪ್ರಕರಣಗಳು 13,599ಕ್ಕೆ ಇಳಿದಿವೆ ಮತ್ತು ನಷ್ಟ ₹2,038 ಕೋಟಿಗೆ ಇಳಿದಿದೆ. ಅಂದರೆ ಪ್ರಕಣಗಳ ಸಂಖ್ಯೆ ಕಡಿಮೆಯಾದರೂ ನಷ್ಟದ ಮೊತ್ತ ತುಂಬಾ ಏನು ಕಡಿಮೆಯಾಗಿಲ್ಲಾ. ಆತಂಕದ ವಿಷಯವೇನೆಂದರೆ  ಮರಳಿ ಪಡೆದ ಮೊತ್ತ ಇನ್ನು ದೇಶವ್ಯಾಪಿ 10-12% ಯಷ್ಟೆಯಾಗಿದೆ.

2025ರಲ್ಲಿ ಭಾರತವನ್ನು ಕಾಡಿದ ಪ್ರಮುಖ ಸೈಬರ್ ಅಪರಾಧಗಳು – ಡಿಜಿಟಲ್ ಅರೆಸ್ಟ್, ಕೃತಕ ಬುದ್ಧಿಮತ್ತೆ (AI) ಬಳಸಿ ನಡೆಸಿದ ಡೀಪ್‌ಫೇಕ್ ಮತ್ತು ವಾಯ್ಸ್ ಕ್ಲೋನಿಂಗ್, ಸ್ಟಾಕ್ ಮಾರ್ಕೆಟ್ ಟ್ರೇಡಿಂಗ್ ಮತ್ತು ಹೂಡಿಕೆ ವಂಚನೆಗಳು, ಯುಪಿಐ ಪಾವತಿ ವಂಚನೆ, ಬ್ರ್ಯಾಂಡ್ ಇಂಪರ್ಸನೇಷನ್ ಮತ್ತು ಸೋಶಿಯಲ್ ಇಂಜಿನಿಯರಿಂಗ್ (ಅಂದರೆ ಸುದ್ದಿಯಲ್ಲಿರುವ ವಿಷಯವನ್ನು ಬಳಸಿ, ನಿಮ್ಮ ನಂಬಿಕೆ ಗಳಿಸಿ ನಂತರ ವಂಚಿಸುವ ವಿವಿಧ ಅಪರಾಧಗಳು).

2025ರಲ್ಲಿ ಭಾರತ ಮತ್ತು ಕರ್ನಾಟಕ ಸರ್ಕಾರ ಕೈಗೊಂಡ ಪ್ರಮುಖ ಕ್ರಮಗಳು :-

2025ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಮುಖ ಕಾನೂನು ಕ್ರಮಗಳು :-

2025ರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮಗಳ ಪರಿಣಾಮಗಳು :-

ಸಾರಾಂಶ ಮತ್ತು 2026ಮುನ್ನೋಟ :-

2025ನೇ ವರ್ಷವು ಭಾರತದ ಡಿಜಿಟಲ್ ಇತಿಹಾಸದಲ್ಲಿ ‘ಸೈಬರ್ ಸಂರಕ್ಷಣಾ ವರ್ಷ’ವಾಗಿ ದಾಖಲಾಗಿದೆ. ಕೇಂದ್ರ ಸರ್ಕಾರದ ಇ-ಝೀರೋ ಎಫ್‌ಐಆರ್, ಸೈಬರ್ ಕಮಾಂಡೋ ಫೋರ್ಸ್ ಮತ್ತು ಕರ್ನಾಟಕ ಸರ್ಕಾರದ ಸೈಬರ್ ಕಮಾಂಡ್ ಸೆಂಟರ್ ಅಂತಹ ಕ್ರಾಂತಿಕಾರಿ ಕ್ರಮಗಳು ವಂಚಕರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ. ಈ ವರ್ಷ ಜಾರಿಯಾದ DPDPA ನಿಯಮಗಳು ಮತ್ತು ದೂರಸಂಪರ್ಕ ತಿದ್ದುಪಡಿ ನಿಯಮಗಳು ಕಾನೂನು ಚೌಕಟ್ಟನ್ನು ಮತ್ತಷ್ಟು ಬಲಪಡಿಸಿವೆ. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. 2026ರಲ್ಲಿ ಸೈಬರ್ ಅಪರಾಧಿಗಳು ಎಐ ತಂತ್ರಜ್ಞಾನವನ್ನು ಹೆಚ್ಚು ಬಳಸಲಿದ್ದು, ಅದನ್ನು ಎದುರಿಸಲು ಸರ್ಕಾರವು ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ತನಿಖಾ ಸಾಧನಗಳನ್ನು ದೊಡ್ಡ ಮಟ್ಟದಲ್ಲಿ ಅಳವಡಿಸಿಕೊಳ್ಳಲಿದೆ. ಕ್ರಿಪ್ಟೋಕರೆನ್ಸಿ ಮತ್ತು ವರ್ಚುಯಲ್ ಡಿಜಿಟಲ್ ಆಸ್ತಿಗಳ ಮೂಲಕ ನಡೆಯುವ ವಂಚನೆಗಳನ್ನು ತಡೆಯಲು ಹೆಚ್ಚಿನ ತಾಂತ್ರಿಕ ನೈಪುಣ್ಯತೆ ಮತ್ತು ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿವೆ. ಸಸ್ಪೆಕ್ಟ್ ರಿಜಿಸ್ಟ್ರಿ ಮತ್ತು ಬ್ಯಾಂಕಿಂಗ್ ವಲಯದ ನಡುವೆ ಹೆಚ್ಚಿನ ಸಮನ್ವಯ ಏರ್ಪಟ್ಟು, ಮ್ಯೂಲ್ ಅಕೌಂಟ್‌ಗಳ ಪತ್ತೆಹಚ್ಚುವಿಕೆ ಇನ್ನು ಕ್ಷಿಪ್ರವಾಗಲಿದೆ ಮತ್ತು ನಿಮ್ಮ ಹಣ ವಂಚಕರ ಪಾಲಿಗೆ ಸಿಗದಂತೆ ತಡೆಯುವ ವ್ಯವಸ್ಥೆ ಇನ್ನು ಬಲಗೊಳ್ಳಲಿದೆ. ಒಟ್ಟಾರೆಯಾಗಿ, 2026ರಲ್ಲಿ ತಂತ್ರಜ್ಞಾನವು ನಾಗರಿಕರ ಸುರಕ್ಷಾ ಕವಚವಾಗಿ ಮತ್ತಷ್ಟು ವಿಕಸನಗೊಳ್ಳಲಿದೆ.

Exit mobile version