Site icon Welcome to CYBER MITHRA

ಸೈಬರ್ ಹಣಕಾಸು ವಂಚನೆಗಳ ವಿರುದ್ಧ RBI ಕ್ರಮಗಳು

RBI

ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೆಚ್ಚುತಿರುವ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ಅನೇಕ ಕ್ರಿಯಾಶೀಲ ಕ್ರಮಗಳನ್ನು ತೆಗೆದುಕ್ಕೊಂಡಿದೆ, ಮತ್ತು ಅದನ್ನು ತಡೆಗಟ್ಟಲು ಇನ್ನು ಕೆಲವು ಕ್ರಮಗಳ ಬಗ್ಗೆ ಇತ್ತೀಚಿಗೆ ಘೋಷಣೆ ಕೂಡ ಮಾಡಿತ್ತು. ಹಿಂದಿನ ಲೇಖನದಲ್ಲಿ ನಾನು ಬ್ಯಾಂಕ್ ಖಾತೆ ಹ್ಯಾಕಿಂಗ್ ಕುರಿತು ತಿಳಿಸಿ ಕೊಟ್ಟಿದ್ದೆ ಮತ್ತು ಅಂತಹ ಸಂದರ್ಭ ದಲ್ಲಿ RBI ಮುಗ್ಧ ಖಾತೆದಾರರ ಕಳೆದುಹೋದ ಹಣದ ಹೊಣೆಗಾರಿಕೆ ಬಗ್ಗೆ ಏನು ಹೇಳುತ್ತದೆ ಅನ್ನುವುದನ್ನು ವಿವರವಾಗಿ ತಿಳಿಸಿದ್ದೆ. ಈ ಅಂಕಣದಲ್ಲಿ ನಾನು RBI ಈ ವರೆಗೆ ಸೈಬರ್ ಹಣಕಾಸು ವಂಚನೆಗಳ ವಿರುದ್ಧ ತೆಗೆದುಕ್ಕೊಂಡಿರುವ ಮತ್ತು ಮುಂದೆ ತೆಗೆದುಕ್ಕೊಳ್ಳುತ್ತಿರುವ ಅನೇಕ ಕ್ರಿಯಾಶೀಲ ಕ್ರಮಗಳ ಬಗ್ಗೆ ಮತ್ತು ಅದನ್ನು ನೀವು ಹೇಗೆ ಬಳಸಬಹುದು ಎಂಬುದರ ಬಗ್ಗೆಯು ತಿಳಿಸಿಕೊಡಲಿದ್ದೇನೆ.

ಸಚೇತ್ :- ಭಾರತೀಯ ರಿಸರ್ವ್ ಬ್ಯಾಂಕ್ (RBI) 2016 ರಲ್ಲಿ ಆನ್‌ಲೈನ್ ಜಾಲತಾಣ ಸಚೇತ್ (www.sachet.rbi.org.in) ಅನ್ನು ಪ್ರಾರಂಭಿಸಿತು. ಅದು ಪೊಂಜಿ ಸ್ಕೀಮ್‌ಗಳನ್ನು ತಡೆಯಲು, ಹಣವನ್ನು ದ್ವಿಗುಣ ಗೊಳಿಸುವ ಅಥವಾ ನಂಬಲು ಅಸಾಧ್ಯವಾದ ಬಡ್ಡಿ ಅಥವಾ ನೆಟ್ ವರ್ಕ್ ಮಾರ್ಕೆಟಿಂಗ್ (MLM) ಯೋಜನೆಗಳನ್ನು ಒದಗಿಸುವ ನೆಪದಲ್ಲಿ ಅಕ್ರಮವಾಗಿ ಹಣವನ್ನು ಸಂಗ್ರಹಿಸುವ ಕಂಪನಿ ಮತ್ತು ಸೊಸೈಟಿಗಳ ಬಗ್ಗೆ ಮಾಹಿತಿಯನ್ನು ಜನರಿಂದ ಪಡೆಯಲು ಮತ್ತು ಸಂಶಯಾಸ್ಪದ ಹೂಡಿಕೆಗಳು ಅಥವಾ ಡೀಫಾಲ್ಟ್ ಕಂಪನಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿರುತ್ತದೆ. ಸಚೇತ್ ಜಾಲತಾಣದಲ್ಲಿ ಯಾರು ಬೇಕಾದರೂ ಮೇಲಿನ ವಿಷಯದಲ್ಲಿ ಮತ್ತು ಯಾವುದಾದರು ಬ್ಯಾಂಕ್, ಸೊಸೈಟಿ ಅಥವಾ ಹಣಕಾಸು ಸಂಸ್ಥೆ ನಿಮ್ಮ ದೂರಿಗೆ ಸೂಕ್ತವಾಗಿ ಪ್ರತಿಕ್ರಿಯಿಸದಿದ್ದರೆ ಅಥವಾ ನಿಮ್ಮ ಹಣವನ್ನು ಸೂಕ್ತ ಸಮಯದಲ್ಲಿ ವಾಪಾಸ್ ಮಾಡದಿದ್ದರೆ ಇಲ್ಲಿ ದೂರು ನೀಡಬಹುದು ಮತ್ತು ನಿಮ್ಮ ದೂರಿನ ಮೇಲೆ ನಡೆಯುವ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳಲ್ಲಿ ಗ್ರಾಹಕರ ಹೊಣೆಗಾರಿಕೆ :-

ಭಾರತೀಯ ರಿಸರ್ವ್ ಬ್ಯಾಂಕ್ (RBI), ತನ್ನ 2017-2018 ರ ವಾರ್ಷಿಕ ವರದಿಯಲ್ಲಿ, ಎಲ್ಲಾ ಅನಧಿಕೃತ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಹಿವಾಟುಗಳ ಸಂದರ್ಭದಲ್ಲಿ ಹಣಕಾಸಿನ ಹೊಣೆಗಾರಿಕೆಯನ್ನು ಯಾರು ಭರಿಸುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿದೆ. ನಷ್ಟವನ್ನು ನೀವು ಭರಿಸುತ್ತೀರಾ ಅಥವಾ ನಿಮ್ಮ ಬ್ಯಾಂಕ್ ಭರಿಸುತ್ತದಾ ಎಂಬುದು ಪ್ರಕರಣದಲ್ಲಿ ಯಾರ ತಪ್ಪು ಅಥವಾ ನಿರ್ಲಕ್ಷ್ಯವನ್ನು ಅವಲಂಬಿಸಿರುತ್ತದೆ ಮತ್ತು ಗ್ರಾಹಕರ ನಷ್ಟದ ಪ್ರಮಾಣವು ಘಟನೆಯನ್ನು ಅವರು ಬ್ಯಾಂಕಿಗೆ ಎಷ್ಟು ಬೇಗನೆ ವರದಿ ಮಾಡಲಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಗ್ರಾಹಕರು ಅಧಿಸೂಚನೆ ನೀಡಿದ ದಿನಾಂಕದಿಂದ 10 ಕೆಲಸದ ದಿನಗಳಲ್ಲಿ ಬ್ಯಾಂಕ್ ಅನಧಿಕೃತ ಎಲೆಕ್ಟ್ರಾನಿಕ್ ವಹಿವಾಟಿನಲ್ಲಿ ಒಳಗೊಂಡಿರುವ ಮೊತ್ತವನ್ನು ಗ್ರಾಹಕರ ಖಾತೆಗೆ ಜಮಾ ಮಾಡಬೇಕಾಗುತ್ತದೆ.

ಇದಲ್ಲದೆ RBI ಬ್ಯಾಂಕ್, ಸೊಸೈಟಿ ಮತ್ತು ಇತರ ಹಣಕಾಸು ಸಂಸ್ಥೆಗಳು ಸೈಬರ್ ಹಣಕಾಸು ಅಪರಾಧಗಳ ವಿರುದ್ಧ ಹೇಗೆ ತಮ್ಮ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಚೌಕಟ್ಟುಗಳು, ಆರ್ಕಿಟೆಕ್ಚರ್, ಪ್ರಕ್ರಿಯೆಗಳು ಮತ್ತು ಕಾರ್ಯವಿಧಾನಗಳನ್ನು ಅಭಿವೃದ್ಧಿ ಪಡಿಸುವ ಹಾಗು ವಂಚನೆಗಳ ವರದಿ ಮಾಡುವ ಬಗ್ಗೆ ಅನೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಇನ್ನು ನಾವು RBI ಈಗ ಸದ್ಯದಲ್ಲೇ ಸೈಬರ್ ಹಣಕಾಸು ಅಪರಾಧಗಳ ವಿರುದ್ಧ ತೆಗೆದುಕೊಳ್ಳಲಿರುವ ಪ್ರಮುಖ ಕ್ರಿಯಾಶೀಲ ಕ್ರಮಗಳ ಬಗ್ಗೆ ತಿಳಿದುಕ್ಕೊಳ್ಳೋಣ.

RBI ಸದ್ಯದಲ್ಲೇ ಸೈಬರ್ ಹಣಕಾಸು ಅಪರಾಧಗಳ ವಿರುದ್ಧ ತೆಗೆದುಕೊಳ್ಳಲಿರುವ ಪ್ರಮುಖ ಕ್ರಿಯಾಶೀಲ ಕ್ರಮಗಳು :-

Exit mobile version