Site icon Welcome to CYBER MITHRA

ಸ್ಟಾಕ್ ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳು

IPO

ಸ್ಟಾಕ್ ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳು ಈ ನಡುವೆ ತುಂಬ ಜಾಸ್ತಿ ಆಗ್ತಾ ಇದೆ, ಕಳೆದ ವಾರದಲ್ಲೇ ನನಗೆ ಈ ಅಪರಾಧಕ್ಕೆ ಬಲಿಯಾದ ಒಬ್ಬ ವೈದ್ಯ ವಿದ್ಯಾರ್ಥಿ ಮತ್ತು ಕೇರಳದ ತರುಣಿಯೊಬ್ಬಯೊಳು ಕರೆ ಮಾಡಿದ್ದರು. ನಾನು ಈ ಹಿಂದೆ ವಿವಿಧ ಹೂಡಿಕೆ ಸಂಬಂಧಿತ ಸೈಬರ್ ಅಪರಾಧಗಳ ಕುರಿತು ನಾನು ನನ್ನ ಅಂಕಣದಲ್ಲಿ ವಿವರಿಸಿದ್ದೆ, ಅದನ್ನು ನೀವು ಒಮ್ಮೆ ಸಂದರ್ಶಿಸಿ. ಕಳೆದ “ಮನ್ ಕಿ ಭಾತ್” ಕಾರ್ಯಕ್ರಮದಲ್ಲಿ ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಹೂಡಿಕೆ ಸಂಬಂಧಿತ ಸೈಬರ್ ಅಪರಾಧಗಳ ಕುರಿತು ಮಾತಾಡಿದ್ದರು. ಒಂದು ವರದಿಯ ಪ್ರಕಾರ, 2024 ನಲ್ಲಿ ನಮ್ಮ ದೇಶದಲ್ಲಿ ಪ್ರತಿ ನಿಮಿಷ ನಾಲ್ಕು ಸೈಬರ್ ಅಪರಾಧಕ್ಕೆ ಸಂಬಂದಿತ ದೂರು ದಾಖಲಾಗುತ್ತಿದ್ದು ಅದರಲ್ಲಿ ಅರ್ಧಕ್ಕಿಂತ ಹೆಚ್ಚು ದೂರುಗಳು ಹಣಕಾಸು ಸಂಬಂಧಿತವಾಗಿರುತ್ತದೆ. ಇಂದಿನ ಅಂಕಣದಲ್ಲಿ, ನಾನು ಟ್ರೇಡಿಂಗ್ ಮತ್ತು IPO ಸೈಬರ್ ಅಪರಾಧಗಳನ್ನು ಮೇಲಿನ ಪ್ರಕರಣದಲ್ಲಿ ಹೇಗೆ ನಡೆಸಲಾಯಿತು, ಅದರಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು, ಅದರ ಸಂತ್ರಸ್ಥರಿಗಿರುವ ಪರಿಹಾರಗಳ ಬಗ್ಗೆ ತಿಳಿಸಿಕೊಡುವೆ.
ಲಿಲ್ಲಿ(ಹೆಸರು ಬದಲಿಸಿದೆ) ಒಬ್ಬ ಶಿಕ್ಷಕಿ, ಅವರಿಗೆ ಸೆಪ್ಟೆಂಬರ್ ನಲ್ಲಿ ಒಂದು ಕರೆ ಬರುತ್ತದೆ ಮತ್ತು ಅದರಲ್ಲಿ ಅವರಿಗೆ ಹೂಡಿಕೆ ವಿಷಯದಲ್ಲಿ ನಿಶುಲ್ಕ ತರಬೇತಿ ನೀಡುತ್ತೇವೆ, ನಿಮಗೆ ಕಲಿಯಲು ಇಷ್ಟವಿದ್ದರೆ ನಮ್ಮ ಟೆಲಿಗ್ರಾಂ ಚಾನೆಲ್ ಸೇರಿ ಎನ್ನುತ್ತಾರೆ. ಅದರಂತೆ ಲಿಲ್ಲಿ ಸೂಚಿಸಿದ ಟೆಲಿಗ್ರಾಂ ಚಾನೆಲ್ ಸೇರುತ್ತಾರೆ, ಅದರಲ್ಲಿ ಅವರಿಗೆ ಸ್ಟಾಕ್ ಟ್ರೇಡಿಂಗ್ ಕುರಿತಾದ ಕೆಲವು ವಿಷಯಗಳನ್ನು ಹೇಳಿಕೊಡುತ್ತಾರೆ ಮತ್ತು ಟ್ರೇಡ್ ಮಾಡಲು ಪ್ರೇರೆಪಿಸುತ್ತಾರೆ. ಆ ಗುಂಪಿನಲ್ಲಿರುವ ಜನರು ತಮಗೆ ಬಂದ ಲಾಭದ ಬಗ್ಗೆ ಬರೆದಿದ್ದನ್ನು ಕಂಡು ಲಿಲ್ಲಿ ಕೂಡ ಹಣ ಹೂಡುತ್ತಾರೆ ಮತ್ತು ಲಾಭವನ್ನು ಕಾಣುತ್ತಾರೆ. ಅವರಿಗೆ ಗ್ರೂಪ್ ಅಡ್ಮಿನ್ ಕಡೆಯಿಂದ ಕರೆ ಬರುತ್ತದೆ, ನೀವು ಇನ್ನು ಹೆಚ್ಚು ಲಾಭವನ್ನು ಪಡೆಯಲು ಮತ್ತು ಟಿಪ್ಸ್ ಪಡೆಯಲು ಅವರ ಟ್ರೇಡಿಂಗ್ ಆಪ್ ಬಳಸಲು ತಿಳಿಸುತ್ತಾರೆ. ಲಿಲ್ಲ್ಯ್ ಅವರು ತಿಳಿಸಿದ ಟ್ರೇಡಿಂಗ್ ಆಪ್ ನಲ್ಲಿ 11 ಲಕ್ಷ ಹೂಡಿಕೆ ಮಾಡುತ್ತಾರೆ, ಅದು 18 ಲಕ್ಷವಾಗುತ್ತದೆ. ಯಾವಾಗ ಲಿಲ್ಲಿ ತನ್ನ ಹಣವನ್ನು ತೆಗೆಯಲು ಪ್ರಯತ್ನಪಟ್ಟಾಗ ತಾನು ಸೈಬರ್ ಅಪರಾಧಕ್ಕೆ ಬಲಿಯಾಗಿದ್ದೇನೆ ಮತ್ತು 11 ಲಕ್ಷ ಕಳೆದುಕೊಂಡಿದ್ದೇನೆ ಎಂದು ಗೊತ್ತಾಗುತ್ತದೆ.
ಕಿರಣ್(ಹೆಸರು ಬದಲಾಯಿಸಿದೆ) ಅಸ್ಸಾಂನ ಪ್ರತಿಷ್ಠಿತ ಮೆಡಿಕಲ್ ಕಾಲೇಜು ಒಂದರಲ್ಲಿ MD ಓದುತ್ತಿದ್ದಾರೆ. ಈ ವರ್ಷ ಸ್ಟಾಕ್ ಮಾರ್ಕೆಟ್ ಮತ್ತು IPO ನಲ್ಲಿ ಅನೇಕರು ತುಂಬ ಲಾಭ ಸಂಪಾದಿಸಿದ್ದಾರೆ, ಅದರಲ್ಲೂ IPO ನಲ್ಲಿ ಶೇರ್ ಸಿಕ್ಕರೆ ಅದನ್ನು ಕೆಲವೇ ದಿನದಲ್ಲಿ ಮಾರಿ ಜನರು ತುಂಬ ಹಣ ಮಾಡಿದ್ದಾರೆ. ಹಾಗಾಗಿ IPO ನಲ್ಲಿ ಕಂಪನಿಯ ಶೇರ್ ಸಿಗುವುದೇ ಕಷ್ಟ, ಇದನ್ನೇ ಬಳಸಿ ಸೈಬರ್ ಅಪರಾಧಿಗಳು ಕಿರಣ್ ಅನ್ನು 8 ಲಕ್ಷ ವಂಚಿಸಿದರು. ಕಿರಣ್ ಗೆ ಒಂದು ದಿನ ಆಗುಂತಕರಿಂದ “ನಿಮಗೆ IPO ನಲ್ಲಿ ಶೇರ್ ಸಿಗಲು ನಾವು ಸಹಾಯ ಮಾಡುತ್ತೇವೆ” ಎಂದು ವಾಟ್ಸಪ್ಪ್ ಮೆಸೇಜ್ ಬರುತ್ತದೆ. ಕಿರಣ ಕುತೂಹಲದಿಂದ ಅವರು ಸೂಚಿಸಿದ ಫೋನ್ ನಂಬರ್ ಗೆ ಕರೆ ಮಾಡುತ್ತಾರೆ, ಅವರು ನಾವು ಸಾಂಸ್ಥಿಕ(ಇನ್ಸ್ಟಿಟ್ಯೂಷನಲ್) ಹೂಡಿಕೆದಾರರು ಮತ್ತು ನಾವು ವೈಯಕ್ತಿಕ (ರಿಟೇಲ್) ಹೂಡಿಕೆದಾರರಿಗೆ IPO ನಲ್ಲಿ ಶೇರ್ ಸಿಗಲು ಸಹಾಯ ಮಾಡುತ್ತೇವೆ ಎನ್ನುತ್ತಾರೆ. ಅವರ ಮಾತನ್ನು ನಂಬಿ ಕಿರಣ್ ಅವರ ಬಳಿ ಸ್ವಲ್ಪ ಹಣ ಹೂಡುತ್ತಾರೆ, ಅವರ ಮಾತಿನಂತೆ IPO ನಲ್ಲಿ ಪೂರ್ತಿ ಶೇರ್ ಸಿಗುತ್ತದೆ ಮತ್ತು 200% ಲಾಭ ಪಡೆಯುತ್ತಾರೆ. ಇದರಿಂದ ಉತ್ತೇಜನಗೊಂಡ ಕಿರಣ್ ಮುಂದಿನ ಕೆಲವು IPO ನಲ್ಲಿ 5 ಲಕ್ಷ ರೂಪಾಯಿಯನ್ನು ಹೂಡುತ್ತಾರೆ, ಅದರಿಂದ ಬಂದ ಲಾಭವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅವರಿಗೆ 3 ಲಕ್ಷ ಟ್ಯಾಕ್ಸ್ ಕಟ್ಟಲು ತಿಳಿಸಲಾಗುತ್ತದೆ. ಕಿರಣ 3 ಲಕ್ಷ ಕಟ್ಟಿ ಹಣವನ್ನು ತೆಗೆಯಲು ಪ್ರಯತ್ನಪಟ್ಟಾಗ ತಾನು ಸೈಬರ್ ಅಪರಾಧಕ್ಕೆ ಬಲಿಯಾಗಿದ್ದೇನೆ ಮತ್ತು 8 ಲಕ್ಷ ಕಳೆದುಕೊಂಡಿದ್ದೇನೆ ಎಂದು ಗೊತ್ತಾಗುತ್ತದೆ.

ಸ್ಟಾಕ್ ಟ್ರೇಡಿಂಗ್ ಮತ್ತು IPO ಸೈಬರ್ ಹಗರಣಗಳಿಂದ ನಿಮ್ಮನ್ನು ರಕ್ಷಿಸಿಕ್ಕೊಳಲು ನೀವು :-

ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ :-

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಬ್ಯಾಂಕ್/ಬ್ರೋಕರಿಂಗ್ ವೆಬ್ಸೈಟ್ ನಲ್ಲಿ ವರದಿ ಮಾಡಿ, ದೂರು ಸಲ್ಲಿಸಿ ಮತ್ತು ವರ್ಗಾವಣೆಯಾದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ  ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:

Exit mobile version