Site icon

ಹೊಸ ಹೂಡಿಕೆ ಯೋಜನೆ ವಂಚನೆಗಳ ಬಗ್ಗೆ ಎಚ್ಚರದಿಂದಿರಿ

Investment

ಹೋಟೆಲ್ ಉದ್ಯಮಿ ಫ್ರಾನ್ಸಿಸ್ ಗೆ ಒಂದು ದಿನ ತಾವು ವ್ಯವಹರಿಸುವ ಪ್ರತಿಷ್ಠಿತ ಸ್ಟಾಕ್ ಬ್ರೋಕರ್ ಸಂಸ್ಥೆಯ ರಿಲೇಶನ್‌ಶಿಪ್ ಮ್ಯಾನೇಜರ್‌ ಎಂದು ಗುರುತಿಸಿಕೊಳ್ಳುವ ವ್ಯಕ್ತಿಯಿಂದ ಕರೆ ಪಡೆದರು. ಅದರಲ್ಲಿ ಅವರು ಹೊಸ ಯೋಜನೆಯೊಂದರ ಬಗ್ಗೆ ಮಾತನಾಡುತ್ತಾರೆ, ಸಂಸ್ಥೆ ಐಪಿಒಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ ಮತ್ತು ನಂತರ ಆಸಕ್ತಿ ಹೊಂದಿರುವವರು ಅವರಿಂದ ಖಚಿತವಾದ ಸಂಖ್ಯೆಯ ಹೊಸ ಐಪಿಒ ಷೇರುಗಳನ್ನು ಪಡೆಯಬಹುದು. ಫ್ರಾನ್ಸಿಸ್ ಅವರು ಐಪಿಒಗಳಲ್ಲಿ ಸಾಕಷ್ಟು ಹೂಡಿಕೆ ಮಾಡುತ್ತಿದ್ದರಿಂದ, ಅವರು ಖಾತರಿಪಡಿಸಿದ ಹಂಚಿಕೆಯನ್ನು ಪಡೆಯುವುದು ಉತ್ತಮ ವ್ಯವಹಾರವೆಂದು ಭಾವಿಸಿದರು ಮತ್ತು ಅವರು ನಿರ್ದಿಷ್ಟಪಡಿಸಿದ ಖಾತೆಗೆ 10 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿದರು. ವಂಚಕನು ಐಪಿಒ ಹಂಚಿಕೆ ವಿವರಗಳನ್ನು ಪರಿಶೀಲಿಸಲು ಆ್ಯಪ್ ಅನ್ನು ಡೌನ್ಲೋಡ್ ಮಾಡಲು ಹೇಳಿದನು, ಫ್ರಾನ್ಸಿಸ್ ಆ್ಯಪ್ ಅನ್ನು ಡೌನ್ಲೋಡ್ ಮಾಡಿದರು ಮತ್ತು ತನಗೆ ಹಂಚಿಕೆಯಾದ ಜನಪ್ರಿಯ ಐಪಿಒ ನ ಷೇರುಗಳನ್ನು ನೋಡಿ ಸಂತೋಷಪಟ್ಟರು ಮತ್ತು ನಂತರ ಮತ್ತೊಂದು ಐಪಿಒ ಹಂಚಿಕೆಗಾಗಿ ಮತ್ತೊಂದು 50 ಲಕ್ಷಗಳನ್ನು ವರ್ಗಾಯಿಸಿದರು. ಅವರು ಹಂಚಿಕೆ ಮಾಡಿದ ಷೇರುಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದಾಗ, ಅವರು ಸಮಸ್ಯೆಗಳನ್ನು ಎದುರಿಸಿದರು. ಅವರು ತಮ್ಮ ಬ್ರೋಕಿಂಗ್ ಸಂಸ್ಥೆಯ ಗ್ರಾಹಕ ಸಹಾಯವನ್ನು ಸಂಪರ್ಕಿಸಿದರು, ಅವಾಗ ತಿಳಿಯುತ್ತದೆ ತಾವು ಹೂಡಿಕೆ ವಂಚನೆಗೆ 60 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದೇನೆಂದು.

ಅಂತಹ ಅನೇಕ ಹೊಸ ಹೂಡಿಕೆ ವಂಚನೆಗಳು ಈ ನಡುವೆ ಹೆಚ್ಚಾಗಿವೆ, ಅದು ಸುಲಭ/ತ್ವರಿತ/ಭಾರಿ ಆದಾಯದ ಭರವಸೆ ನೀಡುವುದು ಅಥವಾ ವಿರಳ  ಉತ್ಪನ್ನದ ಖಾತರಿಯ ಹಂಚಿಕೆ ಅಥವಾ ಸ್ಟಾಕ್ ಹೂಡಿಕೆಯ ಕುರಿತು ಆದ್ಯತೆಯ ಸಲಹೆಗಳನ್ನು ನೀಡುವುದು ಆಗಿರುತ್ತದೆ. ಸೈಬರ್ ವಂಚಕರು ಕ್ಯುರೇಟೆಡ್ ಟೆಲಿಗ್ರಾಮ್/ವಾಟ್ಸಾಪ್ ಗುಂಪು ಅಥವಾ ನಿಮ್ಮ ಬ್ಯಾಂಕ್/ಬ್ರೋಕಿಂಗ್ ಸಂಸ್ಥೆಯ ರಿಲೇಶನ್ ಶಿಪ್ ಮ್ಯಾನೇಜರ್ ಅಥವಾ ಸೆಲೆಬ್ರಿಟಿ ಸ್ಟಾಕ್ ಟ್ರೇಡರ್ ಎಂದು ಸೋಗು ಹಾಕಿ, ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸ್ಟಾಕ್ಗಳು, ಬಾಂಡ್ಗಳು, ನೋಟುಗಳು, ಸರಕುಗಳು, ಕರೆನ್ಸಿ (ಕ್ರಿಪ್ಟೋಕರೆನ್ಸಿ), ಅಥವಾ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಹೇಳಿ ನಿಮ್ಮನ್ನು ಮೋಸಗೊಳಿಸಬಹುದು. ಕೆಲವು ಸಾಮಾನ್ಯ ಹೂಡಿಕೆ ಹಗರಣಗಳಾದ – ಪೊಂಜಿ (ಹೊಸ ಗ್ರಾಹಕನ ಹಣವನ್ನು ಹಳೆ ಗ್ರಾಹಕನಿಗೆ ಕೊಡುವ ಯೋಜನೆ), ಪಿರಮಿಡ್ (ಉಲ್ಲೇಖದ ಆಧಾರದ ಮೇಲೆ ಹೂಡಿಕೆ), ಪಂಪ್ ಮತ್ತು ಡಂಪ್ (ಸ್ಟಾಕ್ ಮಾರುಕಟ್ಟೆಯಲ್ಲಿ ಇದು ಜನಪ್ರಿಯ ವಂಚನೆ), ಕೋ-ಆಪರೇಟಿವ್ (ಸಾಮಾನ್ಯವಾಗಿ ಹೂಡಿಕೆದಾರರು ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ), ರಿಕವರಿ ಸೇವೆಗಳು (ಕಳೆದುಹೋದ ಹಣವನ್ನು ಮರುಪಡೆಯಲು ನಿಮಗೆ ಸಹಾಯ ಮಾಡುತ್ತೇನೆಂದು ವಂಚಿಸುತ್ತಾರೆ) ಮತ್ತು ಇತರ ಹೆಚ್ಚಿನ ಬಡ್ಡಿ ಹೂಡಿಕೆ ಯೋಜನೆಗಳಾಗಿರುತ್ತವೆ.

ವಿವಿಧ ಹೂಡಿಕೆ ಹಗರಣಗಳಿಂದ ನಿಮ್ಮನ್ನು ರಕ್ಷಿಸಿಕ್ಕೊಳಲು ನೀವು :-

ನೀವು ಅಂತಹ ವಂಚನೆಗೆ ಬಲಿಯಾಗಿದ್ದರೆ:-

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ವೆಬ್ಸೈಟ್ ಅಥವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ವಂಚನೆಯ ಬಗ್ಗೆ ಬ್ಯಾಂಕ್/ಬ್ರೋಕರಿಂಗ್ ವೆಬ್ಸೈಟ್ ನಲ್ಲಿ ವರದಿ ಮಾಡಿ, ದೂರು ಸಲ್ಲಿಸಿ ಮತ್ತು ವರ್ಗಾವಣೆಯಾದ ಮೊತ್ತದ ಮೇಲೆ ಡೆಬಿಟ್ ಫ್ರೀಜ್ ಮಾಡಿ. ನಿಮ್ಮ ಸಾಧನವು ಮಾಲ್ವೇರ್ ಸೋಂಕಿಗೆ ಒಳಗಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ಬ್ಯಾಕಪ್ ತೆಗೆದುಕೊಂಡ ನಂತರ ಫಾರ್ಮ್ಯಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ಸಂತ್ರಸ್ತರಿಗೆ ಲಭ್ಯವಿರುವ ಕಾನೂನು ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಅಡಿಯಲ್ಲಿ  ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಸೆಕ್ಷನ್ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಿಸಬಹುದು:

Exit mobile version