ಸೋಗು ಹಾಕುವಿಕೆ/Impersonation – ಯಾರದೋ ಸೋಗಿನಲ್ಲಿ ನಡೆವ ವಂಚನೆಗಳು
ಸೋಗು ಹಾಕುವಿಕೆ/Impersonation ಸೈಬರ್ ಅಪರಾದಗಳು ತುಂಬ ಸುದ್ದಿ ಮಾಡುತ್ತಿವೆ. ಇತ್ತೀಚಿನ ಕೆಲವು ಸುದ್ದಿಗನ್ನು ನೋಡೋಣ :
- ಕೋವಿಶೀಲ್ಡ್ ತಯಾರಿಸಿದ ಕಂಪನಿಯ ಡೈರೆಕ್ಟರ್ ಒಬ್ಬರಿಗೆ ಅವರ ಸಿಇಒ ಕಡೆಯಿಂದ ಒಂದು ವಾಟ್ಸಪ್ಪ್ ಸಂದೇಶ ಬರುತ್ತದೆ – “ನಾನು ಬ್ಯುಸಿಯಾಗಿದ್ದೇನೆ, ಈ ಕೆಳಗಿನ ಬ್ಯಾಂಕ್ ಖಾತೆಗಳಿಗೆ Rs. 1,01,01,554 ಹಣವನ್ನು ಹಾಕುವುದು”, ಹಣ ಟ್ರಾನ್ಸ್ಫರ್ ಆದ ನಂತರ ಗೊತ್ತಾಗತ್ತೆ ಅದು ನಕಲಿ ಸಂದೇಶವೆಂದು.
- ಭಾರತೀಯ ಕಾಂಗ್ರೆಸ್ ಪಕ್ಷವು ತಮ್ಮ ಅಧಿಕೃತ ಜಾಲತಾಣದ ರೀತಿಯಲ್ಲೇ ಇರುವ ನಕಲಿ ಜಾಲತಾಣ ಕಾಂಗ್ರೆಸ್ ಮುಖಂಡರ ಕುರಿತು ಅಪಪ್ರಚಾರ ಮಾಡುತ್ತಿದೆ ಎಂದು ದೂರು ದಾಖಲಿಸಿತು.
- ಭಾರತೀಯ ಸರ್ವೋಚ್ಚ ನ್ಯಾಯಾಲಯ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಇಮೇಲ್ ಸೃಷ್ಟಿಸಿ ವ್ಯಕ್ತಿಯೊಬ್ಬ ಕಕ್ಷಿದಾರರಿಗೆ ತಪ್ಪು ಪ್ರಭಾವ ಬೀರಲು ನೋಡಿದ್ದ.
- ಚಿತ್ರನಟ ಹೃತಿಕ್ ರೋಷನ್ ಹೆಸರಿನಲ್ಲಿ ವ್ಯಕ್ತಿಯೊಬ್ಬ ನಕಲಿ ಇಮೇಲ್ ಸೃಷ್ಟಿಸಿ ಚಿತ್ರನಟಿ ಕಂಗನಾ ರನೌತ್ ಗೆ ಕಳಿಸಿ ವಿವಾದ ಸೃಷ್ಟಿಸಿದ.
ಇವೆಲ್ಲವೂ impersonation ಅಥವಾ “ಸೋಗು ಹಾಕುವಿಕೆ” ಸೈಬರ್ ಅಪರಾದದ ನಾನಾ ರೀತಿಗಳು.
ಸೋಗು ಹಾಕುವಿಕೆ ವಂಚನೆ ಹೇಗೇ ಮಾಡುತ್ತಾರೆ :-
ಇಲ್ಲಿ ಸೈಬರ್ ಕಳ್ಳರ ಮೂಲ ಉದ್ದೇಶ, ನಿಮ್ಮ ನಂಬಿಕೆಗಳಿಸಿ ನಿಮ್ಮಿಂದ ಹಣವನ್ನು ಪಡೆಯುವುದು ಅಥವಾ ಅಸಲಿ ವ್ಯಕ್ತಿ/ಸಂಸ್ಥೆಯ ಮಾನಹಾನಿ ಮಾಡುವುದು ಅಥವಾ ನಿಮ್ಮಿಂದ ಗೌಪ್ಯ ಮಾಹಿತಿಯನ್ನು ಪಡೆಯುವುದಾಗಿರುತ್ತದೆ. ಇದಕ್ಕೆ ಅವರು ಮೊದಲು ನಿಮ್ಮ ಹಾಗು ನಿಮ್ಮ ಕುಟುಂಬ ಅಥವಾ ಸಹೋದ್ಯೋಗಿಗಳ ಹಾಗು ನಿಮ್ಮ ನಡವಳಿಕೆ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ನಂತರ ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸಲಿ ಪ್ರೊಫೈಲ್ ಹೋಲುವಂತೆ ನಕಲಿ ಪ್ರೊಫೈಲ್ ಅಥವಾ ನಿಮ್ಮ ಅಸಲಿ ಇಮೇಲ್ ನಂತೆ ಕಾಣುವ ನಕಲಿ ಇಮೇಲ್ ಸೃಷ್ಟಿಸುತ್ತಾರೆ. ಅದನ್ನು ಬಳಸಿ ನಿಮ್ಮ ಕುಟುಂಬದವರಿಗೆ ಅಥವಾ ಸಹೋದ್ಯೋಗಿಗಳಿಗೇ “ತಾನು ಬ್ಯುಸಿಯಾಗಿದ್ದೇನೆ ಅಥವಾ ತೊಂದರೆಯಲ್ಲಿದೇನೆ, ನೀವು ಕೂಡಲೇ ಬ್ಯಾಂಕ್/ವಾಲೆಟ್/ಮೊಬೈಲ್ ನಂಬರಿಗೇ ಹಣ ಕಳುಹಿಸುವುದು” ಎಂದು ಸಂದೇಶ ಕಳುಹಿಸುತ್ತಾರೆ, ಕುಟುಂಬದವರು ಅಥವಾ ಸಹೋದ್ಯೋಗಿಗಳು ಕಳ್ಳರು ಕಳಿಸಿದ ಸಂದೇಶ ನಿಜವೆಂದು ನಂಬಿ ವಿಚಾರಿಸದೆ ಹಣ ಕಳಿಸುತ್ತಾರೆ ಅಥವಾ ಅವರು ಕೇಳಿದ ವಿವರಗಳನ್ನು ಕೊಡುತ್ತಾರೆ.
ಸೋಗು ಹಾಕುವಿಕೆ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-
- ಯಾವಾಗಲೂ ಎಲ್ಲಾ ಡಿಜಿಟಲ್ ವಹಿವಾಟುಗಳಿಗೆ, ‘ತಾಳ್ಮೆ, ಶೂನ್ಯ ವಿಶ್ವಾಸ ಮತ್ತು ದೃಢೀಕರಣ’ ತತ್ವವನ್ನು ಅನುಸರಿಸಿ.
- ಸಂದೇಹವಿದ್ದಲ್ಲಿ, ನೀವು ಪಡೆಯುವ ಸಂದೇಶವನ್ನು ಕಳುಹಿಸುವವರೊಂದಿಗೆ, ಅವರ ತಿಳಿದಿರುವ ಫೋನ್ ಸಂಖ್ಯೆ ಅಥವಾ ಅವರ ನಿಕಟ ಸಂಬಂಧಿ ಅಥವಾ ಸ್ನೇಹಿತರಲ್ಲಿ ಪರಿಶೀಲಿಸಿ.
- ನಿಮಗೆ ಜಾಲತಾಣದ URL ಅಥವಾ ಮುಖಪುಟದಲ್ಲಿ ಏನಾದರೂ ಸಂಶಯ ಬಂದರೆ, ಕೂಡಲೇ ಸೂಕ್ಷ್ಮವಾಗಿ ಇದು ಅಸಲಿ ಜಾಲತಾಣವೇ ಎಂದು ಪರೀಕ್ಷಿಸಿ.
- ಫೇಸ್ಬುಕ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನಿಮಗೆ ಬಂದಿರುವ ಸಂದೇಶದ ಪ್ರೊಫೈಲ್ ಪರಿಶೀಲಿಸಿ, ಅದು ಹೊಸದಾಗಿದ್ದರೆ ಅಥವಾ ಯಾವುದೇ ಸಂದೇಶಗಳು ಅಥವಾ ಕಾಮೆಂಟ್ಗಳು ಇಲ್ಲದಿದ್ದರೆ ಅದು ಬಹುಶಃ ನಕಲಿಯಾಗಿರಬಹುದು.
- ಹೊಸ ಫೋನ್ ಸಂಖ್ಯೆಗಳಿಂದ ಸ್ವೀಕರಿಸಿದ ಸಂದೇಶಗಳನ್ನು ಎಚ್ಚರಿಕೆಯಿಂದ ನೋಡಬೇಕು ಮತ್ತು ಕಾರ್ಯನಿರ್ವಹಿಸುವ ಮೊದಲು ಪರಿಶೀಲಿಸಬೇಕು.
ನೀವು ಸೋಗು ಹಾಕುವಿಕೆ ವಂಚನೆಗೆ ಒಳಗಾಗಿದ್ದರೆ :-
ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ನಕಲಿ ಖಾತೆ ಅಥವಾ ಪ್ರೊಫೈಲ್ ಬಗ್ಗೆ ಆಯಾ ಸಾಮಾಜಿಕ ಮಾಧ್ಯಮ ವೆಬ್ಸೈಟ್ನಲ್ಲಿ ಹಾಗು ನಕಲಿ ಜಾಲತಾಣಗಳ ಬಗ್ಗೆ ಅದರ ಹೋಸ್ಟಿಂಗ್ ಸೇವಾ ಪೂರೈಕೆದಾರರೊಂದಿಗೆ ದೂರು ನೀಡಿ ಮತ್ತು ಅದನ್ನು ನಿರ್ಬಂಧಿಸಲು ಹೇಳಿ. ಸಂಬಂದಿತ ಬ್ಯಾಂಕಿಗೆ ಕರೆ ಮಾಡಿ ಹಣವನ್ನು ಫ್ರೀಜ್ ಮಾಡಲು ದೂರು ದಾಖಲಿಸಿ. ನಿಮ್ಮ ಕುಟುಂಬ ಅಥವಾ ಸಹೋದ್ಯೋಗಿಗಳಿಗೆ ವಂಚನೆಯ ಬಗ್ಗೆ ಜಾಗರೂಕರಾಗಿರಲು ತಿಳಿಸಿ. ಸಂಬಂಧಿತ ಸಂದೇಶಗಳು, ವೆಬ್ಸೈಟ್ ಪುಟಗಳು ಮತ್ತು ಯಾವುದೇ ವಿನಿಮಯಗಳು ನಿರ್ಣಾಯಕ ಸಾಕ್ಷ್ಯದ ಭಾಗವಾಗಿರುತ್ತವೆ, ಅದನ್ನು ಅಳಿಸಬೇಡಿ, ಕಾಪಾಡಿಕೊಳ್ಳಿ.
ಮೇಲಿನ impersonation ಅಥವಾ “ಸೋಗು ಹಾಕುವಿಕೆ” ವಂಚನೆಯ ಬಗ್ಗೆ ಪ್ರತಿನಿಧಿ (#pratinidhi) ದಿನ ಪತ್ರಿಕೆಯಲ್ಲಿ ಮುದ್ರಿತವಾದ ನನ್ನ ಅಂಕಣ. ನಿಮಗೇ ಉಪಯುಕ್ತವೆನ್ನಿಸಿದರೆ ಈ ಪೋಸ್ಟರನ್ನು ನಿಮ್ಮ ಕುಟುಂಬ ಹಾಗು ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ.PlayIMPERSONATION – “ಸೋಗು ಹಾಕುವಿಕೆ” ಸೈಬರ್ ಕ್ರೈಂ ನಿಂದ ಬಚಾವಾಗುವುದು ಹೇಗೇ
ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.