ಸೆಕ್ಸ್‌ಟಾರ್ಷನ್ (ಆನ್ಲೈನ್ ಹನಿಟ್ರ್ಯಾಪ್) ಪ್ರಕರಣಗಳು ಹೆಚ್ಚುತ್ತಿವೆ. ಹುಷಾರಾಗಿರಿ!!!
ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿರುವ ಹೊಸ ಸೈಬರ್ ಕ್ರೈಂ ಸೆಕ್ಸ್‌ಟಾರ್ಷನ್, ಇದನ್ನು ಡಿಜಿಟಲ್ ಹನಿ-ಟ್ರಾಪ್ಪಿಂಗ್ ಅಥವಾ ಆನ್ಲೈನ್ ಹನಿ-ಟ್ರಾಪ್ಪಿಂಗ್ ಅಂತಾನೂ ಕರೀತಾರೆ. ಹಿಂದೆ ಕೇವಲ ಹಣ ಅಥವಾ ಸಮಾಜದಲ್ಲಿ ಘನತೆ ಅಥವಾ ಸರಕಾರಿ/ಸೈನ್ಯದಲ್ಲಿರುವ ಇರುವ ವ್ಯಕ್ತಿಯಿಂದ ಯಾವುದಾದರೂ ಕೆಲಸಗಳನ್ನು ಮಾಡಿಸಿಕೊಳ್ಳುವುದಕ್ಕಾಗಿ ಅಥವಾ ಸೂಕ್ಷ್ಮ ಮಾಹಿತಿ ಪಡಿಯಲು ಇದನ್ನು ಬಳಸಲಾಗುತ್ತಿತ್ತು ಆದರೆ ಈಗ ಸೈಬರ್ ಕ್ರಿಮಿನಲ್ಗಳು ಸಾಮಾನ್ಯ ಜನರಿಂದ ಬ್ಲಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡಲು ತೊಡಗಿದ್ದಾರೆ. ಇಲ್ಲಿ ಸೈಬರ್ ಕ್ರಿಮಿನಲ್ಗಳು ಸಾಮಾಜಿಕ ಜಾಲತಾಣದ ಮಾಧ್ಯಮಗಳಾದ ಫೇಸ್ಬುಕ್, ಇನ್ಸ್ಟಾಗ್ರಾಮ್ , ವಾಟ್ಸಾಪ್ ಅಥವಾ ಡೇಟಿಂಗ್ ಅಥವಾ ಮ್ಯಾಟ್ರಿಮೋನಿಯಾಲ್ ವೆಬ್ಸೈಟುಗಳ್ಳನ್ನು ಬಳಸಿ ತಮ್ಮ ಬಲಿಪಶು ವ್ಯಕ್ತಿಯನ್ನು ಗುರುತಿಸಿ ಅವರೊಂದಿಗೆ ಗೆಳೆತನ ಬೆಳಸಿ ಅವನ ಅಶ್ಲೀಲ ವಿಡಿಯೋ ಅಥವಾ ಚಿತ್ರ ತೋರಿಸಿ ಸೆಕ್ಸ್ ಟಾರ್ಟ್ ಮಾಡುತ್ತಾರೆ, ಅದಕ್ಕೆ ಮರ್ಯಾದೆಗೆ ಅಂಜಿದ ವ್ಯಕ್ತಿ ಕೇಳಿದಷ್ಟು ಹಣ ನೀಡಬೇಕಾಗುತ್ತದೆ .
ಸೆಕ್ಸ್‌ಟಾರ್ಷನ್ ಹೇಗೆ ನಡೆಸಲಾಗುತ್ತದೆ :-
೧. ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಹ್ಯಾಕ್ ಮಾಡಿ ನಿಮ್ಮ ಖಾಸಗಿ ಅಥವಾ ಅಶ್ಲೀಲ ಚಿತ್ರ ಅಥವಾ ವೀಡಿಯೊ ಪಡೆದು ನಿಮ್ಮನ್ನು ಸುಲಿಗೆ ಮಾಡುತ್ತಾರೆ.
೨. ಇದು ಈಗ ತುಂಬ ಚಲತಿಯಲ್ಲಿರುವ ವಂಚನೆ ರೀತಿ, ಮೊದಲು ಬಲಿಪಶು ವಕ್ತಿಗೆ ಗೆಳೆತನದ ಕೋರಿಕೆ ಕಲಿಸುತ್ತಾರೆ, ಆಮೇಲೆ ಮೊಬೈಲ್ ನಂಬರ್ ಬದಲಾಯಿಸಿಕೊಂಡು ಚಾಟ್ ಮಾಡಲು ಶುರು ಮಾಡುತ್ತಾರೆ, ಬಳಿಕ ಈ ಸಂಬಂಧ ವಿಡಿಯೋ ಕಾಲ್‌ಗೂ ಮುಂದುವರಿಯುತ್ತದೆ. ವಿಡಿಯೋ ಕಾಲ್ ರಿಸೀವ್ ಆದ ತಕ್ಷಣ ಸಂಪೂರ್ಣ ಕರೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಆರಂಭಿಸುತ್ತಾರೆ, ಕ್ಯಾಮಾರದ ಮುಂದೆ ಪ್ರೀ ರೆಕಾರ್ಡೆಡ್ ಅಶ್ಲೀಲ ವಿಡಿಯೋ ಅಥವಾ ಮಹಿಳೆ ತನ್ನ ಬಟ್ಟೆ ಬಿಚ್ಚಿ ಅಶ್ಲೀಲವಾಗಿ ನಡೆದುಕೊಳ್ಳುತಾಳೆ. ಕಾಲ್ ಕಟ್ ಮಾಡಿದ ಬಳಿಕ ರೆಕಾರ್ಡ್ ಮಾಡಿದ ವಿಡಿಯೋ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸುತ್ತಾರೆ. ನಿಮ್ಮ ಕಾಂಟ್ಯಾಕ್ಟ್ ನಂಬರ್‌ಗಳ ಮಾಹಿತಿ ಇದೆ ಹಣ ನೀಡದಿದ್ದರೆ ವಿಡಿಯೋವನ್ನು ಎಲ್ಲರಿಗೂ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಾರೆ, ಐದು ಸಾವಿರಕ್ಕಿಂತ ಕಡಿಮೆ ಮೊತ್ತ ಕಳುಹಿಸುವಂತೆ ಪ್ರಾರಂಭದಲ್ಲಿ ಡಿಮ್ಯಾಂಡ್ ಇಡುತ್ತಾರೆ, ಹಣ ವರ್ಗಾವಣೆ ಮಾಡುತ್ತಾರೆ ಎಂದು ಗೊತ್ತಾದರೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ.
ನೀವು ಸೆಕ್ಸ್‌ಟಾರ್ಷನ್ ದಾಳಿಯಿಂದ ಕಾಪಾಡಿಕೊಳ್ಳಲು :-
– ಅಪರಿಚಿತರ ಗೆಳೆತನದ ಕೋರಿಕೆ ಪರಿಶೀಲಿಸದೆ ಮಾನ್ಯ ಮಾಡಬೇಡಿ.
– ಹೊಸದಾಗಿ ಸೃಷ್ಟಿಸಿದ ಅಥವಾ ಪ್ರೊಫೈಲ್ ಲಾಕ್ ಆಗಿರುವ ಅಥವಾ ವ್ಯಕ್ತಿಗೂ ಚಿತ್ರಕ್ಕೂ ಸಂಬಂಧವಿಲ್ಲದಿದ್ದರೆ ಅಥವಾ ಅಶ್ಲೀಲ ಪ್ರೊಫೈಲ್ ಚಿತ್ರವಿದ್ದರೆ ಅಂತ ಅಪರಿಚಿತರ ಗೆಳೆತನದ ಕೋರಿಕೆ ಸ್ವೀಕರಿಸಬೇಡಿ.
– ಯಾವುದೆ ಗೊತಿಲ್ಲದ ಬಂದ sms ಮೆಸೇಜ್ನಲ್ಲಿರುವ ಹೈಪೆರ್ ಲಿಂಕನ್ನು ಅಥವಾ ಇಮೇಲ್ ತೆರೆಯಬೇಡಿ.
– ಅಪರಿಚಿತರೊಂದಿಗೆ ವಿಡಿಯೋ ಕಾಲ್ ಮಾಡಬೇಡಿ, ಮಾಡಿದರೂ ನಿಮ್ಮ ವಿಡಿಯೋ ಆನ್ ಮಾಡಬೇಡಿ.
– ನಿಮ್ಮ ಕಂಪ್ಯೂಟರ್ ಹಾಗು ಸ್ಮಾರ್ಟ್ ಫೋನಿನಲ್ಲಿರುವ ಖಾಸಗಿ ಮಹಿತಿ/ಕಡತ ಅಥವಾ ಅಶ್ಲೀಲ ಚಿತ್ರ ಅಥವಾ ವಿಡಿಯೋವನ್ನು ಪಾಸ್ವರ್ಡ್ನಿಂದ ಸಂರಕ್ಷಿಸಿ.
ನೀವು ಸೆಕ್ಸ್‌ಟಾರ್ಷನ್ ಸೈಬರ್ ದಾಳಿಗೆ ತುತ್ತಾಗಿದ್ದರೆ :-
ಹೆದರಬೇಡಿ, ಸೆಕ್ಸ್ ಟಾರ್ಶನ್ ಮೊದಲ ಬೆದರಿಕೆಯನ್ನು ನಿಮ್ಮ ನಂಬಿಕೆ ಪತ್ರದವರೊಂದಿಗೆ ಅಥವಾ ಪೋಲೀಸರೊಂದಿಗೆ(ಪೊಲೀಸರು ನಿಮ್ಮ ಮನೆಗೆ ಬರುತ್ತಾರೆ ಎಂಬ ಭಯ ಬೇಡ) ಚರ್ಚಿಸಿ, ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ಆ ಬೆದರಿಕೆಗೆ ಸ್ಪಂದಿಸಬೇಡಿ, ಮತ್ತು ಅವರ ಕರೆ ಅಥವಾ ಮೆಸೇಜ್ ತೆರೆಯಬೇಡಿ ಮತ್ತು ಯಾವುದೇ ಕಾರಣಕ್ಕೂ ಹಣವನ್ನು ಕೊಡಬೇಡಿ. ಸೆಕ್ಸ್ ಟಾರ್ಶನ್ ಮಾಡುವ ಸೈಬರ್ ಕ್ರಿಮಿನಲ್ಗಳು ಸುಲಭವಾಗಿ ಸಿಗುವ ಹಣದ ಬಗ್ಗೆ ಹಾಗು ಸುಲಭವಾಗಿ ಹೆದರುವ ಬಲಿಪಶುಗಳಿಗಾಗಿ ಹುಡುಕುತಿರುತ್ತಾರೆ, ಯಾವಾಗ ನೀವು ಸ್ಪಂದಿಸುವುದಿಲ್ಲವೋ ಅವಾಗ ಹೆದರಿಸಲು ನಾನಾ ಮಾರ್ಗದಲ್ಲಿ ಪ್ರಯತ್ನಿಸುತ್ತಾರೆ, ಯಾವಾಗ ನೀವು ಅದಕ್ಕೂ ಸ್ಪಂದಿಸುವುದಿಲ್ಲವೋ ಅವಾಗ ನಿಮ್ಮನ್ನು ಬಿಟ್ಟು ಬೇರೊಬ್ಬ ಬಲಿಪಶುವ ಹಿಂದೆ ಹೋಗುತ್ತಾರೆ. ನಿಮ್ಮ ಸೋಶಿಯಲ್ ಮೀಡಿಯಾ ಅಥವಾ ಯಾವುದೇ ಪ್ರಕರಣಕ್ಕೆ ಸಂಬಂದಪಟ್ಟ ಅಕೌಂಟ್ ಅಥವಾ ಮೆಸೇಜುಗಳ್ಳನ್ನು ಅಳಿಸಬೇಡಿ, ಅದು ನಿಮಗೆ ಅಪರಾದಿಯನ್ನು ಶಿಕ್ಷಿಸಲು ಬೇಕಾಗಿರುವ ಸಾಕ್ಷಿ ಅಥವಾ ಪುರಾವೆಯಾಗಿರುತ್ತದೆ, ಅಷ್ಟು ಭಯವಾದರೆ ಪ್ರೊಫೈಲ್ ಲಾಕ್ ಅಥವಾ ಡಿಆಕ್ಟಿವೇಟ್ ಮಾಡಿ. ನಿಮ್ಮ ಅಪ್ಲೋಡ್ ಆದ ವಿಡಿಯೋ ಪೊಲೀಸ್ ಸಹಾಯದಿಂದ ೨೪-೪೮ ಗಂಟೆ ಒಳಗೆ ಡಿಲೀಟ್ ಮಾಡಿಸಬಹುದು.
ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.