ಆನ್ಲೈನ್ ಕ್ರೀಡೆಗಳು ನಿಮಗೆ ಎಷ್ಟು ಹಾನಿಕರ ಗೊತ್ತ?
ಆನ್ಲೈನ್ ಕ್ರೀಡೆಗಳು ಇತೀಚಿಗೆ ನಿಮ್ಮೆಗೆಲ್ಲ ತಿಳಿದಿರುವ ಹಾಗೆ ತುಂಬಾ ಸುದ್ದಿಯಾಗಿದೆ, ನಿಮ್ಮಲ್ಲೂ ಸಾಕಷ್ಟು ಜನರು ಒಂದಾದರೊ ಆನ್ಲೈನ್ ಗೇಮ್ ಆಡೆ ಇರುತ್ತಿರಾ. ಕೊರೋನಾ ಲಾಕ್ಡೌನ್ ಹಾಗು ನಂತರದಲ್ಲಿ ತುಂಬ ಜನರು ಈ ಆನ್ಲೈನ್ ಗೇಮ್ ಮೋಹಕ್ಕೆ ಮಾರುಹೋಗಿ ವಂಚನೆಗೀಡಾಗಿ ತಮ್ಮ ಹಣ, ಆಸ್ತಿ ಮತ್ತು ನೆಮ್ಮದಿಯನ್ನು ಕಳೆದುಕೊಂಡು ಸಾಲಗಾರರಾಗಿ ಅಥವಾ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ “ಬೆಟ್ಟಿಂಗ್ ಮತ್ತು ಜೂಜು” ಬಗ್ಗೆ ನಮ್ಮ ಸಂವಿಧಾನದಲ್ಲಿ ಕಾನೂನು ರಚಿಸುವ ಜವಾಬ್ದಾರಿಯನ್ನು ರಾಜ್ಯಗಳಿಗೆ ನೀಡಲಾಗಿದೆ. ತಮಿಳುನಾಡು,ಕೇರಳ, ಕರ್ನಾಟಕ ಮತ್ತಿತರ ರಾಜ್ಯಗಳು ಈ ಆನ್ಲೈನ್ ಗೇಮ್ಗಳನ್ನು ನಿಷೇಧಿಸಲು ಕಾನೂನು ತಂದಿದ್ದರು ಆದರೆ ಅಲ್ಲಿನಾ ರಾಜ್ಯ ನ್ಯಾಯಾಲಯಗಳು ಆ ಕಾನೂನು ತಿದ್ದುಪಡಿಯನ್ನು ಕಾನೂನು ಬಾಹಿರವೆಂದು ಘೋಷಿಸಿ ನಿಷೇಧವನ್ನು ತೆರವುಗೊಳಿಸಿವೆ, ಸದ್ಯದಲ್ಲಿ ಇದು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇದೆ.
ಆನ್ಲೈನ್ ಕ್ರೀಡೆಗಳ ವಂಚನೆ ಹೇಗೇ ಮಾಡುತ್ತಾರೆ :-
ಆನ್ಲೈನ್ ಗೇಮ್ಗಳು ನಮ್ಮನ್ನು ಕೆಳಗೆ ಉದ್ಧರಿಸಿರುವ ರೀತಿಯಲ್ಲಿ ವಂಚಿಸುತ್ತವೆ –
- ಆನ್ಲೈನ್ ಗೇಮ್ನಲ್ಲಿ ಹುದಗಿಸಿರುವ ಮಾಲ್ವೇರ್ ಅಥವಾ ಹ್ಯಾಕಿಂಗ್ ಮುಖಾಂತರ ನಮ್ಮ ಮೊಬೈಲಿನಲ್ಲಿರುವ ಖಾಸಗಿ ಮಾಹಿತಿಯನ್ನು ಕಳ್ಳತನ ಮಾಡಿ ನಮ್ಮ ಹಣವನ್ನು ದೋಚುತ್ತಾರೆ ಅಥವಾ ಆ ಮಾಹಿತಿಯನ್ನು ಉಪಯೋಗಿಸಿ ನಮ್ಮಗೆ ಬ್ಲಾಕ್ಮೇಲ್ ಮಾಡುತ್ತಾರೆ.
- ಈ ಆನ್ಲೈನ್ ಗೇಮ್ಗಳು ನಮ್ಮನ್ನು ಆಕರ್ಷಿಸಿ, ಮೊದಮೊದಲು ಗೆಲ್ಲಲು ಬಿಟ್ಟು ವ್ಯಸನಿಗಳಾಗಿ ಮಾಡಿ ನಂತರ ದೊಡ್ಡ ಮೊತ್ತ ಪಣಕ್ಕಿಟ್ಟಾಗ ಸೋಲುವಂತೆ ಮಾಡುತ್ತಾರೆ, ಆಟಗಾರ ಸೋತಿರುವ ಹಣ ವಾಪಸ್ ಪಡೆಯಲು ಇನ್ನೂ ಹೆಚ್ಚು ಮೊತ್ತಕ್ಕೆ ಪಣ ವೊಡ್ಡುತ್ತಾನೆ ಮತ್ತು ಸೋತು ತನ್ನ ಉಳಿತಾಯ, ಆಸ್ತಿ ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಇನ್ನು ಕೆಲವು ಗೇಮ್ಗಳು ನೀವು ದೊಡ್ಡ ಹಣ ಗೆದ್ದಾಗ ನಿಮ್ಮ ಅಕೌಂಟನ್ನು ಅಳಿಸಿ ಹಾಕುತ್ತಾರೆ ಅಥವಾ ನಿಷ್ಕ್ರಿಯಗೊಳಿಸುತ್ತಾರೆ.
- ಕೆಲವು ಆನ್ಲೈನ್ ಗೇಮ್ಗಳು, ಅದರಲ್ಲೂ ಮುಖ್ಯವಾಗಿ ಬೇರೇ ಜೊತೆಗಾರರೊಂದಿಗೆ ಆಡಬಹುದಾದ ಆನ್ಲೈನ್ ಗೇಮ್ಗಳು ನಿಮಗೆ ಎದುರಾಳಿ ಗೇಮೆರ್ಸ್ಗಿಂತ ಮುಂದಿರಲು ಅನಕೂಲವಾಗುವಂತ ಪರಿಕರಗಳಾದ ಹ್ಯಾಕುಗಳು ಅಥವಾ ಕೀಲಿಗಳು ಅಥವಾ ಅಸ್ತ್ರಗಳು ಅಥವಾ ಆಟದ ನಕ್ಷೆ ಮುಂತಾದವುಗಳ್ಳನ್ನು ಹಣಕ್ಕೆ ಕೊಳ್ಳುವಂತೆ ಪ್ರೇರೇಪಿಸುತ್ತಾರೆ, ಇಲ್ಲಿ ನಿಮ್ಮ ಅಹಂಗೇ ಪೆಟ್ಟುಕೊಟ್ಟು ಅಥವಾ ಪ್ರೋತ್ಸಾಹಿಸಿ ಹಣ ದೋಚುತ್ತಾರೆ.
- ಸೈಬರ್ ಕಳ್ಳರು ಆನ್ಲೈನ್ ಮಲ್ಟಿಪ್ಲೇಯರ್ ಗೇಮ್ ಆಡುವ ಮಕ್ಕಳ್ಳನ್ನು ಮೊದಲು ಸಹ ಗೇಮರಾಗಿ ಪರಿಚಯಿಸಿಕೊಂಡು, ಗೆಳೆತನ ಬೆಳಸಿ ಮಕ್ಕಳಿಂದ ನಿಮ್ಮ ಬ್ಯಾಂಕ್ ಅಕೌಂಟ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಪಡೆದು ಅಥವಾ ಮಾಲ್ವೇರ್ ಹುದಿಗಿಸಿರುವ ಆಪ್ ಇನ್ಸ್ಟಾಲ್ ಮಾಡಿಸಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕ್ಕೊಂಡು ಹಣ ದೋಚುತಾರೆ ಅಥವಾ ಮಾಹಿತಿಯನ್ನು ಕದಿಯುತ್ತಾರೆ.
ಆನ್ಲೈನ್ ಕ್ರೀಡೆಗಳ ವಂಚನೆಯಿಂದ ರಕ್ಷಿಕೊಳ್ಳಲು ಹೀಗೆ ಮಾಡಿ :-
- ಗೇಮಿಂಗ್ ಆಪ್ಗಳ ಪರ್ಮಿಶನ್ಸ್ ಅಥವಾ ಅನುಮತಿಗಳನ್ನು ಪರೀಕ್ಷಿಸಿ, ಅನವಶ್ಯಕ ಅಥವಾ ಸೂಕ್ಷ್ಮವಾದ ಅನುಮತಿಗಳಾದ ಕ್ಯಾಮೆರಾ, ಕಾಂಟ್ಯಾಕ್ಟ್ಸ್, sms, ಗ್ಯಾಲ್ರಿ ಮತ್ತು ನಿಮ್ಮ ಕಡತಗಳ ಅನುಮತಿಯನ್ನು ಕೊಡಬೇಡಿ.
- ನಿಮ್ಮ ಮಕ್ಕಳು ಮೊಬೈಲ್ನಲ್ಲಿ ಯಾವ ರೀತಿಯ ಆನ್ಲೈನ್ ಗೇಮ್ಗಳನ್ನು ಹಾಗು ಯಾರೊಂದಿಗೆ ಆಡುತ್ತಾರೆ ಅನ್ನುವುದನ್ನು ಸೂಕ್ಷ್ಮವಾಗಿ ಗಮನಿಸಿ.
- ನಿಮ್ಮ ಮಕ್ಕಳಿಗೆ ನಿಮ್ಮ ಬ್ಯಾಂಕ್ ಅಕೌಂಟ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳು ಸಿಗದ ಹಾಗೆ ಮುಚ್ಚಿಡಿ ಅಥವಾ ಅವರಿಗೆ ಯಾರಿಗೂ ಯಾವ ಕಾರಣಕ್ಕೂ ಹೇಳದಂತೆ ತಿಳಿಹೇಳಿರಿ ಹಾಗು ಹೇಳಿದರೆ ಆಗುವ ನಷ್ಟದಬಗ್ಗೆ, ಸೈಬರ್ ಕ್ರೈಂ ಬಗ್ಗೆ ವಿವರಿಸಿ.
- ನಿಮ್ಮ ಗೂಗಲ್ ಅಥವಾ ಆಪಲ್ ಪ್ಲೇಸ್ಟೋರಿನಿಂದ ಹಾಗು ಗೂಗಲ್ ಪ್ಲೇ ಸೆರ್ವಿಸ್ಸ್ನಿಂದ ಸಂಗ್ರಹವಾದ ನಿಮ್ಮ ಪೇಮೆಂಟ್ ವಿವರಗಳ್ಳನ್ನು ತೆಗೆಯಿರಿ.
- ಸಾದ್ಯವಾದರೆ ಅಥವಾ ವ್ಯಸನ ತಡೆಯಲಾಗದಿದ್ದರೆ ಆನ್ಲೈನ್ ಗೇಮಗಾಗಿ ಬೇರೆ ಮೊಬೈಲ್, ಯಾವ ಬ್ಯಾಂಕ್ ಅಕೌಂಟಿಗೂ ಲಿಂಕಾಗದ ಮೊಬೈಲ್ ನಂಬರ್ ಹಾಗು ಈ-ಮೇಲ್ ಬಳಸಿ.
- ಅನುಮಾನಾಸ್ಪದ ಅಥವಾ ಗುರುತಿಲ್ಲದ ವ್ಯಕ್ತಿಗಳೊಂದಿಗೆ ಗೇಮ್ ಆಡಬೇಡಿ ಹಾಗು ಅವರೊಂದಿಗೆ ವ್ಯವಹರಿಸಬೇಡಿ ಹಾಗು ಅವರು ಕಳಿಸುವ ಯಾವುದೇ ಲಿಂಕ್ ಅಥವಾ ಆಪ್ಗಳ್ಳನ್ನು ಇನ್ಸ್ಟಾಲ್ ಮಾಡಬೇಡಿ.
ನೀವು ಆನ್ಲೈನ್ ಕ್ರೀಡೆಗಳ ವಂಚನೆಗೆ ಒಳಗಾಗಿದ್ದರೆ :-
ನಿಮಗೆ ವಂಚನೆಯ ಸಂಶಯ ಬಂದರೆ ಅಥವಾ ವಂಚನೆಗೊಳಗಾಗಿದ್ದರೆ, ಕೂಡಲೇ ಸೈಬೆರ್ ಹೆಲ್ಫ್ ಲೈನ್ ಸಂಖ್ಯೆ ೧೯೩೦ ಗೆ ಸಂಪರ್ಕಿಸಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ ಮತ್ತು ಕೂಡಲೇ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬ್ಯಾಕಪ್ ತೆಗೆದುಕೊಂಡು ಫ್ಯಾಕ್ಟರಿ ರೀಸೆಟ್ ಮಾಡಿರಿ. ಆನ್ಲೈನ್ ಗೇಮ್ಗಳ ಪಿಡುಗಿಂದ ಜನರನ್ನು ಕಾಪಾಡಲು ಸರಕಾರ ಕಾಯಿದೆ ಮತ್ತು ನಿಯಂತ್ರಣ ವಿಧಾಯಕಗಳನ್ನೂ ತ್ವರಿತವಾಗಿ ರಚಿಸಬೇಕು ಹಾಗು ಅನುಮಾನಾಸ್ಪದ ಗೇಮ್ಗಳನ್ನು ಬ್ಲಾಕ್ ಮಾಡಬೇಕು ಮತ್ತು ಪ್ಲೇಸ್ಟೋರಿನಿಂದಾ ತೆಗೆಸಬೇಕು.

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.