Site icon Welcome to CYBER MITHRA

E-Courts ನಿಂದ AI ವರೆಗೆ: ಭಾರತದ ನ್ಯಾಯ ವ್ಯವಸ್ಥೆಯ ಹೊಸ AI ಯುಗ

E-Courts

ಭಾರತದ ನ್ಯಾಯಾಂಗ ವ್ಯವಸ್ಥೆಯು ವಿಶ್ವದಲ್ಲೇ ಅತಿ ದೊಡ್ಡ ಮತ್ತು ಸಂಕೀರ್ಣ ವ್ಯವಸ್ಥೆಗಳಲ್ಲಿ ಒಂದಾಗಿದೆ ಮತ್ತು ಭಾರತದ ನ್ಯಾಯಾಲಯಗಳಲ್ಲಿ ಲಕ್ಷಾಂತರ ಪ್ರಕರಣಗಳು ವಿಚಾರಣೆಗಾಗಿ ಕಾಯುತ್ತಿದ್ದು, ನ್ಯಾಯ ವಿಳಂಬವು ಒಂದು ದೊಡ್ಡ ಸವಾಲಾಗಿದೆ. ಸಾಮಾನ್ಯ ಜನರಿಗೆ ಕೋರ್ಟ್‌ಗೆ ಹೋಗುವುದು ಅಂದರೆ ದೀರ್ಘಕಾಲದ ನಿರೀಕ್ಷೆ, ಸಮಯ ಹಾಗೂ ಹಣದ ವ್ಯಯ ಎಂಬ ಕಲ್ಪನೆ ಇದೆ. ಇಂತಹ ಸಂದರ್ಭದಲ್ಲಿ ತಂತ್ರಜ್ಞಾನ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (Artificial Intelligence – AI), ಒಂದು ದೊಡ್ಡ ಸಹಾಯಗಾರನಾಗಿ ಹೊರಹೊಮ್ಮಿದೆ. ತಂತ್ರಜ್ಞಾನದ ಆಗಮನವು ಜಗತ್ತಿನ ಎಲ್ಲಾ ಕ್ಷೇತ್ರಗಳನ್ನು ಪರಿವರ್ತಿಸಿದಂತೆ, ಭಾರತೀಯ ನ್ಯಾಯಾಲಯ ವ್ಯವಸ್ಥೆಯನ್ನು ಕ್ರಾಂತಿಕಾರಿ ಮಾದರಿಯಲ್ಲಿ ಒಳ್ಳೆಯದಕ್ಕಾಗಿ ಬದಲಾಯಿಸುತ್ತಿದೆ. ಕೃತಕ ಬುದ್ಧಿಮತ್ತೆ (AI) ಮತ್ತು ತಂತ್ರಜ್ಞಾನವು ಭಾರತದ ನ್ಯಾಯವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ದಕ್ಷ ಮತ್ತು ಸುಲಭವಾಗಿ ಒದಗಿಸುವ ದಿಕ್ಕಿನಲ್ಲಿ ಸಾಗುತ್ತಿದೆ. E-Courts ಯೋಜನೆ, AI ಆಧಾರಿತ ಪ್ರಯೋಗಗಳಾದ SUPACE (Supreme Court Portal for Assistance in Courts Efficiency) ಮತ್ತು SUVAS (Supreme Court Vidhik Anuvaad Software) ನಂತಹ ತಾಂತ್ರಿಕ ಆವಿಷ್ಕಾರಗಳು ನ್ಯಾಯಾಲಯಗಳ ಕಾರ್ಯನಿರ್ವಹಣೆಯನ್ನು ಸುಧಾರಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿವೆ.

ನಾನು ಕಳೆದ ಕೆಲವು ವಾರಗಳಿಂದ ಡಿಜಿಟಲ್ ತಂತ್ರಜ್ಞಾನ ಮತ್ತು AI – ಭಾರತದ ನ್ಯಾಯಾಂಗ ವ್ಯವಸ್ಥೆ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಮೇಲೆ ಮಾಡುತ್ತಿರುವ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟಿದ್ದೆ, ಹೆಚ್ಚಿನ ಮಾಹಿತಿಗಾಗಿ ಅದನ್ನೊಮ್ಮೆ ಸಂದರ್ಶಿಸಿ ಓದಿ. ಈ ಲೇಖನದಲ್ಲಿ ನಾನು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮೊದಲ ದೊಡ್ಡ ಮಟ್ಟದ ಡಿಜಿಟಲ್ ಪ್ರಯೋಗವಾದ E-Courts ಅಪ್ಲಿಕೇಶನ್, ಭಾರತೀಯ ನ್ಯಾಯಾಂಗದಲ್ಲಿ AIಯ ಪಾತ್ರ, SUPACE ಮತ್ತು SUVAS ಎಂಬ ಎರಡೂ ಪ್ರಮುಖ ವ್ಯವಸ್ಥೆಗಳ ಅವಲೋಕನ, SUPACE ಮತ್ತು SUVAS ನಲ್ಲಿ AIಯ ಪಾತ್ರ ಹಾಗು ಜನಸಾಮಾನ್ಯರು, ವಕೀಲರು ಮತ್ತು ನ್ಯಾಯಾಧೀಶರು ಅವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಸಿಕೊಡಲಿದ್ದೇನೆ.

E-Courts ಅಪ್ಲಿಕೇಶನ್‌ಕಿರು ಪರಿಚಯ :-

ಒಂದು ವರದಿಯ ಪ್ರಕಾರ, ಭಾರತದ ನ್ಯಾಯಾಲಯಗಳಲ್ಲಿ 5 ಕೋಟಿಗೂ ಹೆಚ್ಚು ಪ್ರಕರಣಗಳು ನ್ಯಾಯ ತೀರ್ಮಾನಕ್ಕಾಗಿ ಇನ್ನು ಕಾಯುತ್ತಿವೆ. ಈ ಬಾಕಿ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ಮತ್ತು ನ್ಯಾಯದಾನವನ್ನು ತ್ವರಿತಗೊಳಿಸಲು E-Courts ಯೋಜನೆಯನ್ನು 2005ರಲ್ಲಿ ಆರಂಭಿಸಲಾಯಿತು. ಈ ಯೋಜನೆಯ ಮೂರನೇ ಹಂತ (2023-2027) ಈಗ ಜಾರಿಯಲ್ಲಿದ್ದು, 7,210 ಕೋಟಿ ರೂಪಾಯಿಗಳ ಬಂಡವಾಳವನ್ನು ಹೊಂದಿದೆ. E-Courts ಅಪ್ಲಿಕೇಶನ್ ಎಂದರೆ ನಮ್ಮ ದೇಶದ ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿನ ಪ್ರಕರಣಗಳ ಮಾಹಿತಿಗಳನ್ನು ನಮ್ಮ ಬೆರಳ ತುದಿಯಲ್ಲಿಯೇ ನೋಡಲು ಇರುವ ಒಂದು ಅಪ್ಲಿಕೇಶನ್ ಆಗಿದ್ದು, ಇದನ್ನು ನೀವು ಮೊಬೈಲ್ ಆಪ್ ಆಗಿ ಅಥವಾ ಜಾಲತಾಣದ ರೂಪದಲ್ಲಿ ಬಳಸಬಹುದು. ಈ ಅಪ್ಲಿಕೇಶನ್‌ನ ಮುಖ್ಯ ಉದ್ದೇಶ – ಸಾಮಾನ್ಯ ಜನ, ವಕೀಲರು ಮತ್ತು ನ್ಯಾಯಾಧೀಶರಿಗೆ ನ್ಯಾಯಾಲಯದ ಕೆಲಸಗಳನ್ನು ಸುಲಭವಾಗಿ, ತ್ವರಿತವಾಗಿ ಮತ್ತು ಪಾರದರ್ಶಕವಾಗಿ ನಿರ್ವಹಿಸಲು ಸಹಾಯ ಮಾಡುವುದಾಗಿರುತ್ತದೆ.

ಸಾಮಾನ್ಯ ಜನರಿಗೆ E-Courts ಆಪ್‌ಉಪಯೋಗ :-

ಸಾಮಾನ್ಯ ಜನರಿಗೆ, ಈ ಆಪ್ ಒಂದು ದೊಡ್ಡ ವರದಾನ. ಒಂದು ಕಾಲದಲ್ಲಿ ಕೋರ್ಟ್‌ಗೆ ಹೋಗಿ, ಗಂಟೆಗಟ್ಟಲೆ ಕಾಯಬೇಕಿತ್ತು, ಕಾಗದದ ದಾಖಲೆಗಳನ್ನು ಒಯ್ಯಬೇಕಿತ್ತು. ಆದರೆ ಈಗ ಇ-ಕೋರ್ಟ್ಸ್ ಆಪ್‌ನಿಂದ ಮನೆಯಿಂದಲೇ ಈ ಕೆಳಗೆ ವಿವರಿಸಿರುವ ಕೆಲಸಗಳನ್ನು ಮಾಡಬಹುದು.

ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ E-Courts ಆಪ್‌ಉಪಯೋಗ :-

ಭಾರತೀಯ ನ್ಯಾಯಾಂಗದಲ್ಲಿ AIಪಾತ್ರ :-

SUPACE ಕಿರು ಪರಿಚಯ :-

2021ರಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾದ ಈ ಪೋರ್ಟಲ್‌ನ ಉದ್ದೇಶ, ನ್ಯಾಯಾಧೀಶರಿಗೆ ಕೇಸ್‌ಗಳ ಅಧ್ಯಯನದಲ್ಲಿ ವೇಗ ಮತ್ತು ಖಚಿತತೆ ತರಿಸುವುದು. ಇದು AI-ಚಾಲಿತ ಸಂಶೋಧನಾ ಪೋರ್ಟಲ್ ಆಗಿದ್ದು, ನ್ಯಾಯಾಧೀಶರು ಮತ್ತು ಕಾನೂನು ಸಂಶೋಧಕರಿಗೆ ಕಾನೂನು ಸಂಶೋಧನೆ ಮತ್ತು ಕೇಸ್ ನಿರ್ವಹಣೆಯಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದು ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯಲ್ಲ, ಬದಲಿಗೆ ನಿರ್ಧಾರ-ಬೆಂಬಲ ವ್ಯವಸ್ಥೆಯಾಗಿದೆ.

SUPACE ಪ್ರಮುಖ ವೈಶಿಷ್ಟ್ಯಗಳು:

SUPACE ನಲ್ಲಿ AI ಪಾತ್ರ :-

SUPACE ನ ಪ್ರಯೋಜನಗಳು ಮತ್ತು ಬಳಕೆಯ ಸಾಧ್ಯತೆಗಳು : –

SUVAS ಕಿರು ಪರಿಚಯ :-

SUVAS ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಅನುವಾದ ಸಾಫ್ಟ್‌ವೇರ್ ಆಗಿದೆ, ಇದನ್ನು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಇಂಗ್ಲಿಷ್‌ನಿಂದ ಭಾರತದ ಪ್ರಾದೇಶಿಕ ಭಾಷೆಗಳಿಗೆ (ಕನ್ನಡ ಸೇರಿದಂತೆ) ಅನುವಾದಿಸಲು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಶೀಘ್ರದಲ್ಲೇ E-Courts ಕಾರ್ಯಕ್ರಮದ ಮೂರನೇ ಹಂತದಲ್ಲಿ ಎಲ್ಲಾ ಹೈ ಕೋರ್ಟುಗಳಲ್ಲೂ ಅಳವಡಿಸುವ ಯೋಜನೆಯಿದೆ.

SUVAS ಕಿರು ಪರಿಚಯ :-

SUVAS ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಅನುವಾದ ಸಾಫ್ಟ್‌ವೇರ್ ಆಗಿದೆ, ಇದನ್ನು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಇಂಗ್ಲಿಷ್‌ನಿಂದ ಭಾರತದ ಪ್ರಾದೇಶಿಕ ಭಾಷೆಗಳಿಗೆ (ಕನ್ನಡ ಸೇರಿದಂತೆ) ಅನುವಾದಿಸಲು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಶೀಘ್ರದಲ್ಲೇ E-Courts ಕಾರ್ಯಕ್ರಮದ ಮೂರನೇ ಹಂತದಲ್ಲಿ ಎಲ್ಲಾ ಹೈ ಕೋರ್ಟುಗಳಲ್ಲೂ ಅಳವಡಿಸುವ ಯೋಜನೆಯಿದೆ.

SUVAS ಪ್ರಮುಖ ವೈಶಿಷ್ಟ್ಯಗಳು :-

SUVAS ನಲ್ಲಿ AI ಪಾತ್ರ :-

SUVAS ಪ್ರಯೋಜನಗಳು ಮತ್ತು ಬಳಕೆಯ ಸಾಧ್ಯತೆಗಳು : –

ಭಾರತೀಯ ನ್ಯಾಯಾಲಯಗಳಲ್ಲಿ AI – ಮುಂದಿನ ಹಾದಿ :-

ಭಾರತೀಯ ನ್ಯಾಯಾಲಯಗಳಲ್ಲಿ AI – ತಂತ್ರಜ್ಞಾನ ಮತ್ತು ನ್ಯಾಯಾಂಗದ ಸಹಯೋಗದ ಒಂದು ಹೊಸ ಅಧ್ಯಾಯವನ್ನು ತೆರೆಯಲಿದೆ. ಈಗಾಗಲೇ E-COURTS, SUVAS ಮತ್ತು SUPACE ನಂತಹ ಯೋಜನೆಗಳು ಯಶಸ್ಸು ಕಂಡಿದ್ದು, ಮುಂದಿನ ಹೆಜ್ಜೆಗಳು ನ್ಯಾಯ ವಿತರಣೆಯನ್ನು ಸಂಪೂರ್ಣವಾಗಿ ಪರಿವರ್ತಿಸಲಿವೆ. ಇದಲ್ಲದೆ AI ಬಳಸಿ ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಮೂಲಕ ಒಂದು ಪ್ರಕರಣ ಎಷ್ಟು ದಿನಗಳಲ್ಲಿ ಮುಗಿಯಬಹುದು ಎಂಬ ಅಂದಾಜು ನೀಡುವ ವ್ಯವಸ್ಥೆ ಬರಬಹುದು. ಇದು ಜನರಿಗೆ ತಮ್ಮ ಪ್ರಕರಣದ ಭವಿಷ್ಯವನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುತ್ತದೆ. AI ಚಾಟ್‌ಬಾಟ್‌ಗಳು ನ್ಯಾಯಾಲಯದ ಮೂಲಭೂತ ಪ್ರಕ್ರಿಯೆಗಳ ಕುರಿತು ತಕ್ಷಣ ಮಾಹಿತಿ ನೀಡಬಹುದು. ಭವಿಷ್ಯದಲ್ಲಿ AI ನಿಂದ ವರ್ಚುಯಲ್ ಕೋರ್ಟ್‌ಗಳು ಹೆಚ್ಚಾಗಿ ನಡೆಯಬಹುದು. AI ಬಳಸಿ ಸಾಕ್ಷ್ಯ ವೀಡಿಯೊಗಳ ವಿಶ್ಲೇಷಣೆ, ಸಾಕ್ಷಿದಾರರ ಹೇಳಿಕೆಗಳಲ್ಲಿ ಸುಳ್ಳು/ಅಸಂಗತತೆಯನ್ನು  ಪತ್ತೆಹಚ್ಚುವುದು, ಕಾನೂನು ಸಂಶೋಧನೆ ಸ್ವಯಂಚಾಲಿತವಾಗುವುದು ಇತ್ಯಾದಿ ಸೌಲಭ್ಯಗಳಿಂದ ಪ್ರಕರಣಗಳು ಬೇಗ ಇತ್ಯರ್ಥವಾಗಿ, ಎಲ್ಲರೂ ಸಮಯ ಹಾಗು ಹಣದ ಉಳಿತಾಯ ಮಾಡಬಹುದು ಹಾಗೂ ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಹೆಚ್ಚಾಗಬಹುದು.

Exit mobile version