Site icon Welcome to CYBER MITHRA

ಸಂಚಾರ್ ಸಾಥಿ ಮೊಬೈಲ್ ಆಪ್ –  ನಿಮ್ಮ ದೂರವಾಣಿಯ ರಕ್ಷಕ

sanchar saathi mobie app

ನಾನು ಬಹಳ ಹಿಂದೆ ಮೇ 2023ರಲ್ಲಿ ದೂರಸಂಪರ್ಕ ಇಲಾಖೆಯಿಂದ ಬಿಡುಗಡೆಗೊಂಡ ಸಂಚಾರ್ ಸಾಥಿ ಜಾಲತಾಣದ(https://www.sancharsaathi.gov.in/) ಬಗ್ಗೆ ಬರೆದಿದ್ದೆ. ಕಳೆದ ತಿಂಗಳು ಜನವರಿ 17 ರಂದು ಅದರ ಮೊಬೈಲ್ ಆಪ್ ಅನೇಖ ಹೊಸ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಮಾಡಲಾಯಿತು. ಸಂಚಾರ್ ಸಾಥಿ ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ಭಾರತ ಸರಕಾರ ತೆಗೆದುಕೊಂಡಿರುವ ಅನೇಕ ಕಾರ್ಯಕ್ರಮಗಳಲ್ಲಿ ಅತಿ  ಯಶಸ್ವಿಯಾದ ಕಾರ್ಯಕ್ರಮಗಳಲ್ಲೊಂದು ಎಂದರೆ ಅತಿಶಯೋಕ್ತಿಯಾಗಲಾರದು. ಈ  ಸಂಚಾರ್ ಸಾಥಿ ಆಪ್ ಮೊಬೈಲ್ ಬಳಕೆದಾರರು ತಮ್ಮ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಮೇಲ್ವಿಚಾರಣೆ ಮಾಡಲು ಅನುವು ಮಾಡಿಕೊಡುತ್ತದೆ, ಜೊತೆಗೆ ಅನಗತ್ಯ ಸಂಪರ್ಕಗಳನ್ನು ಕಡಿತಗೊಳಿಸುವುದು, ಕಳೆದುಹೋದ/ಕಳ್ಳತನವಾದ ಫೋನ್‌ಗಳನ್ನು ಟ್ರ್ಯಾಕ್ ಮಾಡುವುದು ಮತ್ತು ಹೊಸ ಅಥವಾ ಬಳಸಿದ ಮೊಬೈಲ್ ಖರೀದಿಗಳ ಸಮಯದಲ್ಲಿ ಅದು ಕಳ್ಳತನದ್ದ ಅಥವಾ ನಕಲಿ ಸಾಧನವೇ ಎಂದು ದೃಢೀಕರಿಸಲು/ಪರಿಶೀಲಿಸಲು ಪರಿಕರಗಳನ್ನು ಒದಗಿಸುತ್ತದೆ. ಇದರಲ್ಲಿ  ನೀವು ನಿಮಗೆ ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಬರುವ ವಂಚಕ ಕರೆಗಳ ಸಂಖ್ಯೆಯನ್ನು ವರದಿ ಮಾಡಿ ಅದನ್ನು  ನಿರ್ಬಂಧಿಸಲು ಸಹಾಯ ಮಾಡಬಹುದು. ಸಂಚಾರ್ ಸಾಥಿ ಆಪ್ ಪ್ರತಿಯೊಬ್ಬರಿಗೂ ಟೆಲಿಕಾಂ ನೆಟ್‌ವರ್ಕ್‌ಗಳ ಸುರಕ್ಷತೆ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ಭಾರತ ಸರಕಾರ ತೆಗೆದುಕ್ಕೊಂಡಿರುವ ಒಂದು ಪ್ರಮುಖ ಹೆಜ್ಜೆ. ಇದನ್ನು ಆಂಡ್ರಾಯ್ಡ್ ಮತ್ತು ಆಪಲ್ ಸ್ಟೋರ್ ನಲ್ಲಿ ನೀವು ಡೌನ್ಲೋಡ್ ಮಾಡಬಹುದು.

ಸರಕಾರಿ ಮಾಹಿತಿಯ ಪ್ರಕಾರ ಕಳೆದ ಒಂದೂವರೆ ವರ್ಷದಲ್ಲಿ ಸಂಚಾರ್ ಸಾಥಿ ಜಾಲತಾಣಕ್ಕೆ ಒಂಬತ್ತು ಕೋಟಿ ಜನರು ಭೇಟಿ ನೀಡಿದ್ದು, ಅವರು ಕೊಟ್ಟ ಮಾಹಿತಿ ಮತ್ತು ಇತರ ಮಾಹಿತಿಯ ಸಹಾಯದಿಂದ ಎರಡು ಕೋಟಿ ಎಪ್ಪತೈದು ಲಕ್ಷ ವಂಚನೆ ಮಾಡುತ್ತಿದ್ದ ಮೊಬೈಲ್ ಸಂಪರ್ಕಗಳ ಸಂಪರ್ಕ ಕಡಿತ ಗೊಳಿಸಲಾಗಿದೆ ಮತ್ತು 25 ಲಕ್ಷಕ್ಕೂ ಹೆಚ್ಚು ಕಳೆದುಹೋದ ಅಥವಾ ಕದ್ದ ಮೊಬೈಲ್ ಸಾಧನಗಳನ್ನು ವಾಪಾಸ್ ಹುಡುಕಿ ಕೊಡಲಾಗಿದೆ. ಹೆಚ್ಚುವರಿಯಾಗಿ, ಸೈಬರ್ ಅಪರಾಧಗಳಿಗೆ ಸಂಬಂಧಿಸಿದ 12.38 ಲಕ್ಷ ವಾಟ್ಸಾಪ್ ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಮತ್ತು ಆರ್ಥಿಕ ವಂಚನೆಯನ್ನು ತಡೆಗಟ್ಟಲು 11.6 ಲಕ್ಷ ಮ್ಯೂಲ್(ನಖಲಿ KYC ಮಾಹಿತಿಯುಳ್ಳ) ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.  ಅಲ್ಲದೆ ಇದು ಅಂತರರಾಷ್ಟ್ರೀಯ ಒಳಬರುವ ವಂಚನೆಯ ಕರೆಗಳಲ್ಲಿ 90% ಅನ್ನು ನಿರ್ಬಂಧಿಸಿದೆ, ಅವುಗಳ ಸಂಖ್ಯೆಯನ್ನು 1.35 ಕೋಟಿಯಿಂದ ಕೇವಲ 6 ಲಕ್ಷಕ್ಕೆ ಇಳಿಸಿದೆ. ಈ ಪೂರ್ವಭಾವಿ ಕ್ರಮಗಳು ನಕಲಿ ಡಿಜಿಟಲ್ ಬಂಧನಗಳು, ತೆರಿಗೆ ವಂಚನೆ ಮತ್ತು ಕಾನೂನು ಜಾರಿಯ ಸೋಗು ಮುಂತಾದ ವಂಚನೆಗಳನ್ನು ತಡೆಗಟ್ಟುವಲ್ಲಿ ಬಹಳ ದೂರ ಸಾಗಿವೆ, ಇದರಿಂದಾಗಿ ನಾಗರಿಕರನ್ನು ಸೈಬರ್ ಬೆದರಿಕೆಗಳಿಂದ ರಕ್ಷಿಸುತ್ತಿದೆ.

ಸಂಚಾರ್ ಸಾಥಿ ಮೊಬೈಲ್ ಆಪ್ ನೀಡುವ ವಿವಿಧ ಪ್ರಮುಖ ಸೇವೆಗಳು :-

Exit mobile version