ಕಳೆದೆರಡು ದಿನದಿಂದ ವಿಶ್ವದ ಬ್ರೇಕಿಂಗ್ ನ್ಯೂಸ್ ಎಂದರೆ ಲೇಬನಾನ್ ದೇಶದಲ್ಲಿ ಸಾವಿರಾರು ಹೆಜಾಬುಲ್ಲಾ ಯೋದ್ದರ ಮೇಲೆ ನಡೆದ ಪೆಜೆರ್ ಮತ್ತು ವಾಕಿಟಾಕಿ ವಿಸ್ಪೋಟಗಳಾಗಿರುತ್ತದೆ. ಈ ಗಾತ್ರದ ಇಂಟರ್ನೆಟ್ ಆಫ್ ಥಿಂಗ್ಸ್ (IoT) /ಇಲೆಕ್ಟ್ರಾನಿಕ್ಸ ಸಾಧನಗಳನ್ನು ಬಳಸಿ ನಡೆಸಿದ ಸೈಬರ್ ಕೈನೆಟಿಕ್ ವಿಸ್ಪೋಟದ ಪರಿಣಾಮ ಮುಂದೆ ಎಲ್ಲಾ ದೇಶಗಳ ಮತ್ತು ನಾಗರಿಕರ ಮೇಲೆ ಅನೇಕ ರೀತಿಯ ಪರಿಣಾಮ ಬೀರಲಿದೆ. ಈ ಲೇಖನದಲ್ಲಿ ಇಲ್ಲಿವರಗೆ ಓಪನ್ ಸೌರ್ಸ್ ಮಾಧ್ಯಮಗಳಲ್ಲಿ ಲಭ್ಯವಿರುವ ಮಾಹಿತಿ ಆಧಾರಿಸಿ ಏನಾಯಿತು, ಯಾರು, ಯಾಕೆ ಮತ್ತು ಹೇಗೆ ಮಾಡಿರಬಹುದು, ಮತ್ತು ಅದರ ಪರಿಣಾಮಗಳ ಬಗ್ಗೆ ತಿಳಿಸಿಕೊಡಲಿದ್ದೇನೆ.
ಈ 17ನೇ ತಾರೀಕು ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ (ಲೆಬೋನನ್ ದೇಶದ ಮಧ್ಯಾನ್ಹ 3.30 ರ ಸುಮಾರಿಗೆ) 5000 ಕ್ಕೂ ಹೆಚ್ಚು ಪೆಜರಗಳು ವಿಸ್ಪೋಟಗೊಂಡು 12 ಜನರ ಸಾವಿಗೆ ಮತ್ತು 3000 ಕ್ಕೂ ಅಧಿಕ ಜನರಿಗೆ ತೀವ್ರ ಗಾಯಕ್ಕೆ ತುತ್ತಾದರು. ಮಾರನೇ ದಿನಾ ಬೆಳಗ್ಗೆ ನೂರಾರು ವಾಕಿಟಾಕಿ ಗಳು ವಿಸ್ಪೋಟಗೊಂಡು 20 ಜನರ ಸಾವು ಮತ್ತು 450 ಜನರ ತೀವ್ರ ಗಾಯಗಳಾಗುವುದಕ್ಕೆ ಕಾರಣವಯಿತು.ಇದಲ್ಲದೆ ಅನೇಕ ಸೋಲಾರ್ , ಬಯೋಮೆಟ್ರಿಕ್ ಸಾಧನಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ವಿಸ್ಪೋಟದ ಸುದ್ದಿಗಳು ವರದಿಯಾದವು. ಅವರೆಲ್ಲಾ ಬಹುತೇಕ ಯುನೈಟೆಡ್ ನೇಷನ್ಸ್ ಘೋಷಿಸಿದ ಹೆಜಾಬುಲ್ಲ ಭಯೋತ್ಪದಕ ಗುಂಪಿಗೆ ಸೇರಿದವರಾಗಿದ್ದರು.
ಇದೆಲ್ಲದರ ಹಿಂದೆ ಇಸ್ರೇಲ್ ದೇಶದ ಬೆಹುಗಾರಿಕೆ ಸಂಸ್ಥೆ ಮೋಸಾದ್ ನಾ ಕೈವಾಡವಿದೆ ಎಂದು ಶಾಂಕಿಸಲಾಗಿದೆ. ಇದಕ್ಕೆ ಕಾರಣ – ಇಸ್ರೇಲ್ ಗೂ ಇರಾನ್ ಬೆಂಬಲಿತ ಹೆಜಾಬುಲ್ಲಾ ಗುಂಪಿಗೂ ದಶಕಗಳ ವೈರತ್ವ ಇದೆ. ಈ ಹೆಜಾಬುಲ್ಲಾ ಗುಂಪು 1982 ರಲ್ಲಿ ಲೇಬನನ್ ಮುಲ್ಲಾಗಳಿಂದ ಇಸ್ರೇಲ್ ವಿರುದ್ಧ ಹೋರಾಡಲು ಸ್ಥಾಪಿಸಲಾಗಿತ್ತು. 1997 ರಲ್ಲಿ ಯುನೈಟೆಡ್ ನೇಷನ್ಸ್ ಹೆಜಾಬುಲ್ಲಾ ಗುಂಪನ್ನು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಿತ್ತು. ಇದರ ಬಳಿ ಈಗ 100000 ಕ್ಕೂ ಅಧಿಕ ಸೈನಿಕರಿದ್ದು 120000 ಕ್ಕೂ ಹೆಚ್ಚು ರಾಕೆಟ್ ಮಿಸ್ಸೈಲ್ಗಳನ್ನು ಹೊಂದಿದೆ ಎನ್ನುತ್ತಾರೆ. ಇದು ಲೇಬನನ್ ದೇಶದ ಆಡಳಿತವನ್ನು ತನ್ನ ಹಿಡಿತದಲಿಟ್ಟುಕೊಂಡಿದೆ ಮತ್ತು ಸಿರಿಯ ದೇಶದ ಆಂತರಿಕ ಯುದ್ಧದಲ್ಲಿ ಇರಾನ್ ಒಡನೆ ಸೇರಿ ಹೊಡೆದಾಡುತ್ತಿದೆ. ಕಳೆದ ಅಕ್ಟೋಬರ್ ನಿಂದ ಇಸ್ರೇಲ್ ದೇಶದ ಉತ್ತರ ಬಾಗದ ಮೇಲೆ ಸಾವಿರಾರು ರಾಕೆಟ್ ದಾಳಿಯನ್ನು ಮಾಡುತಿದ್ದು, ಇದರಿಂದ ಆ ಭಾಗದಲ್ಲಿ ವಾಸಿಸುವ 60000 ಕ್ಕೂ ಹೆಚ್ಚು ಇಸ್ರೇಲ್ ನಾಗರಿಕರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಹೆಜಾಬುಲ್ಲಾ ಗುಂಪಿಗೆ ರಾಕೆಟ್ ದಾಳಿಯನ್ನು ನಿಲ್ಲಿಸಲು ನಡೆಸಿದ ಮಾತುಕತೆ ಪ್ರಯತ್ನಗಳು ವಿಫಲವಾಗಿದ್ದು ಇಸ್ರೇಲ್ ಈಗ ಈ ದಾಳಿಯಿಂದ ಅವರನ್ನು ಒಪ್ಪಿಸಲು ಪ್ರಯತ್ನ ಪಡುತ್ತಿದೆ ಎನ್ನುತ್ತಾರೆ
ಈ ಸೈಬರ್ ಕೈನೆಟಿಕ್ (ಇಂಟರ್ನೆಟ್ ಮತ್ತು ಮಾನವ ಸಾಧನಗಳನ್ನು ಬಳಸಿ ನಡೆಸುವ ದಾಳಿ ) ದಾಳಿಯನ್ನು ಹೇಗೆ ನಡೆಸಲಾಯಿತು?
ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ ಫೋನ್ ಅನ್ನು ಇಸ್ರೇಲ್ ಟ್ರ್ಯಾಕ್ ಮಾಡಿ ಅನೇಕ ಪ್ರಮುಖ ಹೆಜಬುಲ್ಲಾ ಮತ್ತು ಹಮಾಸ್ ಅಧಿಕಾರಿಗಳನ್ನು ಕೊಂದುಹಾಕಿತ್ತು. ಹೀಗಾಗಿ ಸುಮಾರು 6 ತಿಂಗಳ ಹಿಂದೆ ಹೆಜಬುಲ್ಲ ಹಿರಿಯ ಅಧಿಕಾರಿಯೊಬ್ಬರು ಇನ್ನುಮುಂದೆ ಪರಸ್ಪರ ಸಂವಹನಕ್ಕಾಗಿ ಪೆಜರಗಳ್ಳನ್ನು ಬಳಸಲು ಆದೇಶ ಹೊರಡಿಸಿದರು ಮತ್ತು ಹಂಗೇರಿ ಮೂಲದ ಸಂಸ್ಥೆಗೆ 5000 ಪೆಜರ್ ಮತ್ತು ವಾಕಿಟಾಕಿ ಗಳ ಖರೀದಿಗೆ ಕಾಂಟ್ರಾಕ್ಟ್ ನೀಡಿದರು, ಅವರು ಅದನ್ನು ಟೈವಾನ್ ದೇಶದ ಸಂಸ್ಥೆಯೊಂದರಿಂದ ಖರೀದಿಸಿದರು. ಇಸ್ರೇಲ್ ದೇಶದ ಬೆಹುಗಾರಿಕೆ ಸಂಸ್ಥೆ ಹೇಗೋ ಈ ವಿಷಯವನ್ನು ಅರಿತು, ಆ ಎಲ್ಲಾ ಪೆಜರ್ ಮತ್ತು ವಾಕಿಟಾಕಿಗಳ ಲಿತಿಯುಂ ಬ್ಯಾಟರಿಗಳಲ್ಲಿ ಒಂದು ಬ್ಯಾಟರಿಯಲ್ಲಿ PETN ಎಂಬ ಪ್ಲಾಸ್ಟಿಕ್ ವಿಸ್ಪೋಟಕ ವಸ್ತುವನ್ನು ಹುದಗಿಸಿ ಅದನ್ನು ಸಂದೇಶದ ಸಹಾಯದಿಂದ ಆಕ್ಟಿವೆಟ್ ಮಾಡುವ ವ್ಯವಸ್ಥೆಯನ್ನು ಯಾರಿಗೂ ಅನುಮಾನ ಬಾರದಹಾಗೆ ಅಳವಡಿಸಿತು. ಈ ಪೆಜರ್ಗಳನ್ನು ಹೆಜಾಬುಲ್ಲಾ ತನ್ನ ಸೈನಿಕ ಪದಾಧಿಕಾರಿಗಳು ಮತ್ತು ಮುಖ್ಯಸ್ತರಿಗೆ ಹಂಚಿತು. ಈ 17 ರಂದು ಈ ಎಲ್ಲಾ ಪೆಜರಗಳಿಗೆ ಸಂದೇಶವೊಂದನ್ನು ಕಳುಹಿಸಲಾಯಿತು, ಟ್ರಿಗೆರ್ ಸಂದೇಶ ಬಂದ ಕೂಡಲೇ ಪೆಜರ್ ಸದ್ದು ಮಾಡುತ್ತದೆ ಮತ್ತು ತೀವ್ರ ಬಿಸಿಯಾಗಿ ವಿಸ್ಪೋಟಗೊಳ್ಳುತ್ತದೆ.
ಈ ಘಟನೆಯ ಪರಿಣಾಮಗಳೇನು?
1. ಹೆಜಾಬುಲ್ಲ ಮತ್ತು ಇರಾನ್ ದೇಶವು ಇಸ್ರೇಲ್ ದೇಶದ ಮೇಲೆ ಪ್ರತಿ ದಾಳಿ ಮಾಡಬಹುದು ಮತ್ತು ಇದರಿಂದ ತೈಲ ಮೊದಲಗೊಂಡು ಎಲ್ಲದುರ ಬೆಲೆ ಎರಬಹುದು.
2. ಭಯೋತ್ಪಾದಕ ಗುಂಪುಗಳು ಈ ಪದ್ದತಿಯನ್ನು ಜನರಲ್ಲಿ ಭಯ ಮೂಡಿಸಲು ಬಳಸಬಹುದು, PETN ಮೊದಲ ಬಾರಿಗೆ ವಿಮಾನ ವಿಸ್ಪೋಟಿಸಲು ಶೂ ಬಾಂಬೆರ್ ಬಳಸಿದ್ದ, ಆ ಘಟನೆಯ ನಂತರ ನಮಗೆಲ್ಲರಿಗೂ ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲು ಶೂ ಬಿಚ್ಚುವಂತೆ ಮಾಡಲಾಯಿತು.
3. ಜಾಗತಿಕರಣ ಮತ್ತು ಗ್ಲೋಬಲ್ ಸಪ್ಲೈ ಚೈನ್ ಮ್ಯಾನೇಜ್ಮೆಂಟ್ ಗೆ ಇದರಿಂದ ಬಹು ದೊಡ್ಡ ಪೆಟ್ಟು ಬೀಳಲಿದೆ. ನಿಮಗೆಲ್ಲಾ ಗೊತ್ತಿರುವಂತೆ ಚೀನಾ ವಿಶ್ವದ manufacturing hub ಆಗಿದೆ, ಅದು ಎಲೆಕ್ಟ್ರಾನಿಕ್ಸ್, ಬ್ಯಾಟರಿ, ಸೋಲಾರ್ ಕೈಗಾರಿಕೆ ಮತ್ತು ರಫ್ತು ಮಾರುಕಟ್ಟೆಯಲ್ಲಿ 33% ನಿಂದ ಹಿಡಿದು 90% ಮಾರ್ಕೆಟ್ ಶೇರ್ ಹೊಂದಿದ್ದು, ಇನ್ನು ಮುಂದೆ ಎಲ್ಲಾ ದೇಶಗಳು ಸುರಕ್ಷತೆ ದೃಷ್ಟಿಯಿಂದ ಇದನ್ನು ಬದಲಿಸಿ ತಮ್ಮ ದೇಶ ಅಥವಾ ಮಿತ್ರ ದೇಶಗಳಲ್ಲಿ ತಯಾರಾದ ವಸ್ತುಗಳ ಕಡೆಗೆ ಹೋಗಬಹುದು. ಭಾರತ ಕೂಡ ಇಲೆಕ್ಟ್ರಾನಿಕ್ ಸಾಧನಗಳು , ಬ್ಯಾಟರಿ ವಿಷಯದಲ್ಲಿ ಚೀನಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಶೀಘ್ರತೆಯನ್ನು ತೋರಿಸಬೇಕಾಗುತ್ತದೆ.
4. ವಿಮಾನದಲ್ಲಿ ಇನ್ನು ಮುಂದೆ ಸ್ಮಾರ್ಟ್ ಫೋನ್, ಕಂಪ್ಯೂಟರ್ ಮತ್ತಿತರ ಇಲೆಕ್ಟ್ರಾನಿಕ್ ವಸ್ತುಗಳನ್ನು ನಿರ್ಬಂದಿಸಬಹುದು ಅಥವಾ ಅವುಗಳ ಬಳಕೆ ಮತ್ತು ವೈಫೈ ಸೌಲಭ್ಯವನ್ನು ನಿರ್ಬಂದಿಸಬಹುದು.
5. ಹಾರ್ಡ್ವೇರ್(firmware) ಅನ್ನು ಸಾಫ್ಟ್ವೇರ್ ರೀತಿ ಸುಲಭವಾಗಿ ಪರೀಕ್ಷಿಸಲು ಸಾಧ್ಯವಿಲ್ಲಾ, ಹಾಗಾಗಿ ಸುರಕ್ಷತಾ ಸಂಸ್ಥೆಗಳಿಗೆ ಇದೊಂದು ದೊಡ್ಡ ತಲೆನೋವಿನ ವಿಷಯವಾಗಬಹುದು
ನೈಜ ಸೈಬರ್ ವಾರ್ ಹೇಗಿರುತ್ತದೆ ಎಂಬುದನ್ನು ತಿಳಿಯಲು ನನ್ನ ಸೈಬರ್ ವಾರ್ ಅಂಕಣ ಸಂದರ್ಶಿಸಿ.