Site icon

ಎಥಿಕಲ್ ಹ್ಯಾಕರ್ ಆಗುವುದು ಹೇಗೆ? ಸಂಬಳ ಮತ್ತು ಅವಕಾಶಗಳು

ಎಥಿಕಲ್

ಕಳೆದ ವಾರ, ಹ್ಯಾಕಿಂಗ್ ಎಂದರೇನು ಮತ್ತು ವಿವಿಧ ರೀತಿಯ ಹ್ಯಾಕರ್‌ಗಳ ಬಗ್ಗೆ ನಾನು ಸಂಕ್ಷಿಪ್ತವಾಗಿ ಚರ್ಚಿಸಿದ್ದೆ. ಹ್ಯಾಕರ್ ಗಳಲ್ಲಿ ಒಂದು ವಿಧ ವೈಟ್ ಹ್ಯಾಟ್ ಹ್ಯಾಕಿಂಗ್, ಅದನ್ನು ಎಥಿಕಲ್  ಅಥವಾ ನೈತಿಕ ಅಥವಾ ಕಾನೂನುಬದ್ಧ ಹ್ಯಾಕಿಂಗ್ ಎಂದೂ ಕರೆಯಲಾಗುತ್ತದೆ. ಎಥಿಕಲ್ ಹ್ಯಾಕಿಂಗ್ ಎನ್ನುವುದು ಕಂಪ್ಯೂಟರ್ ಸಿಸ್ಟಮ್, ಅಪ್ಲಿಕೇಶನ್ ಅಥವಾ ಡೇಟಾಗೆ ಅನಧಿಕೃತ ಪ್ರವೇಶವನ್ನು ಪಡೆಯುವ ಅಧಿಕೃತ ಪ್ರಯತ್ನವನ್ನು ಒಳಗೊಂಡಿರುತ್ತದೆ. ಎಥಿಕಲ್ ಹ್ಯಾಕ್ ಅನ್ನು ನಡೆಸುವುದು ದುರುದ್ದೇಶಪೂರಿತ ದಾಳಿಕೋರರ ತಂತ್ರಗಳು ಮತ್ತು ಕ್ರಮಗಳನ್ನು ನಕಲಿ ಮಾಡುವುದಾಗಿರುತ್ತದೆ.

ಎಥಿಕಲ್ ಹ್ಯಾಕಿಂಗ್ ಭದ್ರತಾ ದೋಷಗಳನ್ನು ಗುರುತಿಸಲು ಸಹಾಯ ಮಾಡುತ್ತದೆ, ಮತ್ತು ದುರುದ್ದೇಶಪೂರಿತ ಹ್ಯಾಕರ್ ಗಳು ಅವುಗಳನ್ನು ಬಳಸಿಕೊಳ್ಳುವ ಅವಕಾಶವನ್ನು ಉಪಯೋಗಿಸುವ ಮೊದಲು ಅದನ್ನು ಪರಿಹರಿಸಿ ಆಗುವ ನಷ್ಟವನ್ನು ತಡೆಯಬಹುದು. ಭಾರತದಲ್ಲಿ ಸೈಬರ್ ಅಪರಾಧಗಳು ಮತ್ತು ಒಬ್ಬರು ಅನುಸರಿಸಬೇಕಾದ ಕಾನೂನು ನಿಯಮಗಳ ಭಾರೀ ಹೆಚ್ಚಳದೊಂದಿಗೆ, ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಸಾರ್ವಜನಿಕರಿಗೆ ಬಿಡುಗಡೆ ಮಾಡುವ ಮೊದಲು ತಮ್ಮ ಹೊಸ ಸಾಧನ ಅಥವಾ ಸಾಫ್ಟ್‌ವೇರ್‌ನ ಭದ್ರತಾ ದೋಷಗಳನ್ನು ಪರಿಶೀಲಿಸಲು, ಶಾಶ್ವತ ಮತ್ತು ಸಲಹಾ ಅಥವಾ ಅರೆಕಾಲಿಕ ಹುದ್ದೆಗಳಿಗೆ ಎಥಿಕಲ್ ಹ್ಯಾಕರ್‌ಗಳ ಭಾರಿ ಅವಶ್ಯಕತೆಗಳಿವೆ.

ಸರಿಯಾದ ಮಾರ್ಗದರ್ಶನ, ಸಮರ್ಪಣೆ ಮತ್ತು ನಿರ್ದಿಷ್ಟ ತರಬೇತಿ ಹೊಂದಿರುವ ಯಾರಾದರೂ ಎಥಿಕಲ್ ಹ್ಯಾಕರ್ ಆಗಬಹುದು, ಕಂಪ್ಯೂಟರ್ ಅಥವಾ ನೆಟ್‌ವರ್ಕ್ ಎಂಜಿನಿಯರಿಂಗ್‌ನಲ್ಲಿ ಪದವಿ ಅಥವಾ ಡಿಪ್ಲೊಮಾ ಹೊಂದಿದ್ದರೆ ಉತ್ತಮ. ಎಥಿಕಲ್ ಹ್ಯಾಕರ್‌ಗೆ ಅಗತ್ಯವಿರುವ ಕೆಲವು ಪ್ರಮುಖ ಕೌಶಲ್ಯಗಳು ಯಾವುದೆಂದರೆ : ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಜ್ಞಾನ, ವಿವಿಧ ಆಪರೇಟಿಂಗ್ ಸಿಸ್ಟಮ್‌ಗಳು, ಪ್ರೋಗ್ರಾಮಿಂಗ್, ಸ್ಕ್ರಿಪ್ಟಿಂಗ್, ಕ್ರಿಪ್ಟೋಗ್ರಫಿ ಮತ್ತು ಡೇಟಾಬೇಸ್ ಜ್ಞಾನ, ರಿವರ್ಸ್ ಎಂಜಿನಿಯರಿಂಗ್ ಮತ್ತು ಸಮಸ್ಯೆ ಪರಿಹಾರ ಕೌಶಲ. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ(ಶಾಲೆಗಳಲ್ಲಿ) ಸಾಕಷ್ಟು ಉಚಿತ ಮತ್ತು ಪೇಯ್ಡ್ ಕೋರ್ಸ್‌ಗಳು ಲಭ್ಯವಿವೆ, ಎಥಿಕಲ್ ಹ್ಯಾಕಿಂಗ್‌ನ ಮೂಲಭೂತ ಅಂಶಗಳನ್ನು ಕಲಿಯಲು ಮತ್ತು ಪ್ರಾಯೋಗಿಕ ಪರಿಣತಿಯನ್ನು ಪಡೆಯಲು ಅದನ್ನು ಬಳಸಬಹುದು.

ಕೆಲವು ಪ್ರಮುಖ ಎಥಿಕಲ್ ಹ್ಯಾಕರ್‌ಗಳ ಅಗತ್ಯತೆಗಳು  ಮತ್ತು ಸರ್ಟಿಫಿಕೇಷನ್ ಗಳು  ಇಂತಿವೆ : EC ಕೌನ್ಸಿಲ್‌ನ ಪ್ರಮಾಣೀಕೃತ ಎಥಿಕಲ್ ಹ್ಯಾಕರ್ (CEH), CompTIA PenTest+, CISCO CCNA ಮತ್ತು SANS GIAC. ಪೆನೇಟ್ರೇಷನ್(ಪೆನ್) ಪರೀಕ್ಷೆ (ಕಂಪನಿ ವ್ಯವಸ್ಥೆಗಳಿಗೆ ಅನಧಿಕೃತ ಪ್ರವೇಶವನ್ನು ಪಡೆಯುವ ದುರುದ್ದೇಶಪೂರಿತ ಹ್ಯಾಕರ್‌ಗಳ ಮಾರ್ಗಗಳನ್ನು ಅನುಕರಿಸುವುದು), ದುರ್ಬಲತೆಯ ಮೌಲ್ಯಮಾಪನಗಳು, ಮಾಲ್‌ವೇರ್ ವಿಶ್ಲೇಷಣೆ ಮತ್ತು ಅಪಾಯ ನಿರ್ವಹಣೆ ನೀತಿ ವ್ಯಾಖ್ಯಾನಿಸಿ, ಅದನ್ನು ತಯಾರಿಸಿ ಸ್ಥಾಪಿಸಲು ಮತ್ತು ಸಹಾಯ ಮಾಡಲು ಎಥಿಕಲ್ ಹ್ಯಾಕರ್ ಜವಾಬ್ದಾರನಾಗಿರುತ್ತಾನೆ.

ಪೆನೇಟ್ರೇಷನ್ ಪರೀಕ್ಷಕ, ದುರ್ಬಲತೆ ಮೌಲ್ಯಮಾಪಕ, ಮಾಹಿತಿ ಭದ್ರತಾ ವಿಶ್ಲೇಷಕ, ಭದ್ರತಾ ವಿಶ್ಲೇಷಕ, ಪ್ರಮಾಣೀಕೃತ ಎಥಿಕಲ್ ಹ್ಯಾಕರ್ (CEH), ಎಥಿಕಲ್ ಹ್ಯಾಕರ್, ಭದ್ರತಾ ಸಲಹೆಗಾರ, ಭದ್ರತಾ ಇಂಜಿನಿಯರ್/ಆರ್ಕಿಟೆಕ್ಟ್, ಮತ್ತು ಮಾಹಿತಿ ಭದ್ರತಾ ವ್ಯವಸ್ಥಾಪಕರು, ಎಥಿಕಲ್ ಹ್ಯಾಕಿಂಗ್ ಕ್ಷೇತ್ರದಲ್ಲಿ ಸಾಮಾನ್ಯ ಉದ್ಯೋಗ ಶೀರ್ಷಿಕೆಗಳಾಗಿವೆ. naukri.com ನಲ್ಲಿ ಮಾಡಿದ ಎಥಿಕಲ್ ಹ್ಯಾಕರ್‌ ಕೆಲಸದ ಹುಡುಕಾಟದಲ್ಲಿ 4921 ಮುಕ್ತ ಸ್ಥಾನಗಳನ್ನು ತೋರಿಸಿದೆ. glassdoor.com ಜಾಲತಾಣದ ಪ್ರಕಾರ, ಒಬ್ಬ ಎಥಿಕಲ್ ಹ್ಯಾಕರ್‌ನ ಸರಾಸರಿ ವೇತನವು ತಿಂಗಳಿಗೆ 25,000 ರಿಂದ 1,50,000 ರೂಪಾಯಿಗಳವರೆಗೆ ಇರುತ್ತದೆ.

ಎಥಿಕಲ್ ಹ್ಯಾಕಿಂಗ್‌ನ ಪ್ರಯೋಜನಗಳು :-

ದುರುದ್ದೇಶಪೂರಿತ ಹ್ಯಾಕರ್‌ಗಳಿಗಿಂತ ಎಥಿಕಲ್ ಹ್ಯಾಕರ್‌ಗಳು ಹೇಗೆ ಭಿನ್ನರಾಗಿದ್ದಾರೆ?

Exit mobile version