Site icon

ಸೆಕ್ಸ್‌ಟಿಂಗ್(SEXTING): ನೀವು ತಿಳಿದುಕೊಳ್ಳಲೇ ಬೇಕಾದದ್ದು

ಸೆಕ್ಸ್ಟಿಂಗ್

ಸಂದೀಪ್ ಎಂಬ ಅಧ್ಯಯನಶೀಲ ಇಂಜಿನಿಯರಿಂಗ್ ವಿದ್ಯಾರ್ಥಿಯ ಪೋಷಕರು, ತಮ್ಮ ಮಗ ಕಳೆದ ಕೆಲವು ವಾರಗಳಿಂದ ತನ್ನ ಅಧ್ಯಯನದಲ್ಲಿ ಆಸಕ್ತಿ ಕಳೆದುಕೊಂಡಿರುವುದು, ತುಂಬ ಮೂಡ್​ಸ್ವಿಂಗ್ ಮತ್ತು ಅಂತರ್ಮುಖಿ ಆಗುತಿರುವುದನ್ನು ಗಮನಿಸಿದರು. ಅವನೊಡನೆ ಮಾತಾಡಿದಾಗ ತಿಳಿಯುತ್ತದೆ, ಸಂದೀಪ್ ಮೋಜಿಗಾಗಿ ಸೋಶಿಯಲ್ ಮೀಡಿಯಾ ಒಂದರಲ್ಲಿ ಪರಿಚಯವಾದ ಹುಡುಗಿಯೊಂದಿಗೆ ಸೆಕ್ಸ್‌ಟಿಂಗ್ ಮಾಡುತ್ತಿದ್ದ, ಅದರಲ್ಲಿ ಹಂಚಿಕೊಂಡ ಚಿತ್ರಗಳನ್ನು ಬಳಸಿ ಆ ಹುಡುಗಿ ಅವನನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ ಎಂದು.

ಒಂದು ಅಧ್ಯಯನದ ಪ್ರಕಾರ, ಭಾರತದಲ್ಲಿ ನಾಲ್ಕು ಹದಿಹರೆಯದವರಲ್ಲಿ ಒಬ್ಬರು ಸೆಕ್ಸ್‌ಟಿಂಗ್ ಸಂದೇಶ ಸ್ವೀಕರಿಸಿರುತ್ತಾರೆ ಮತ್ತು ಏಳರಲ್ಲಿ ಒಬ್ಬರು ಬೇರೊಬ್ಬರಿಗೆ ಸೆಕ್ಸ್‌ಟಿಂಗ್ ಮಾಡಿರುತ್ತಾರೆ. ಸೆಕ್ಸ್‌ಟಿಂಗ್ ಎನ್ನುವುದು ಸ್ಮಾರ್ಟ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಲ್ಲಿ, ಸಾಮಾಜಿಕ ಮಾಧ್ಯಮ (WhatsApp, Facebook, Instagram ಇತ್ಯಾದಿ), ಆಟಗಳು ಚಾಟ್ ವಿಂಡೋಗಳು, ಡೇಟಿಂಗ್ ಅಪ್ಲಿಕೇಶನ್‌ಗಳ ಮೂಲಕ ಅಶ್ಲೀಲ(ನಗ್ನ ಅಥವಾ ಭಾಗಶಃ ನಗ್ನ ಫೋಟೋ/ವೀಡಿಯೊ) ಸಂದೇಶಗಳನ್ನು ಕಳುಹಿಸುವುದು, ಸ್ವೀಕರಿಸುವುದು ಅಥವಾ ಫಾರ್ವರ್ಡ್ ಮಾಡುವುದು ಆಗಿರುತ್ತದೆ. ಸೆಕ್ಸ್‌ಟಿಂಗ್ ಕೆಲವರಿಗೆ ತಮಾಷೆಯಾಗಿ ಕಾಣಿಸಬಹುದು, ಆದರೆ ಇದು ಪ್ರಮುಖ ಕಾನೂನು ಮತ್ತು ಸಾಮಾಜಿಕ/ಮಾನಸಿಕ ಪರಿಣಾಮಗಳನ್ನು ಉಂಟುಮಾಡಬಹುದು, ವಿಶೇಷವಾಗಿ ಅದರಲ್ಲಿ ಒಬ್ಬರು ಅಪ್ರಾಪ್ತರಾಗಿದ್ದಾಗ ಅಥವಾ ಚಿತ್ರ/ವೀಡಿಯೊ ಲೈಂಗಿಕತೆಯು ಅಪ್ರಾಪ್ತರ ಒಪ್ಪಿಗೆಯೊಂದಿಗೆ ಅಥವಾ ಇಲ್ಲದೆಯೋ ಕಳುಹಿಸುವುದು/ಸ್ವೀಕರಿಸುವುದು ಅಥವಾ ಸಂಗ್ರಹಿಸುವುದು ಕಾನೂನುಬಾಹಿರವಾಗಿದೆ ಮತ್ತು ಜೈಲು ಶಿಕ್ಷೆಗೂ ಕಾರಣವಾಗಬಹುದು. ಅದಲ್ಲದೆ ರಿವೆಂಜ್ ಪೋರ್ನ್, ಸೈಬರ್‌ಬುಲ್ಲಿಯಿಂಗ್, ಸೈಬರ್‌ಗ್ರೂಮಿಂಗ್, ಸೆಕ್ಸ್‌ಟಾರ್ಶನ್ ಇತ್ಯಾದಿ ಸೈಬರ್‌ಕ್ರೈಮ್‌ಗಳಿಗೆ ಸೆಕ್ಸ್‌ಟಿಂಗ್ ಕಾರಣವಾಗಬಹುದು ಅಥವಾ ಖಾಸಗಿಯಾಗಿ ಹಂಚಿಕೊಂಡ ಚಿತ್ರಗಳು ಅಥವಾ ವೀಡಿಯೊಗಳು ಲೀಕಾಗಿ ಸಾರ್ವಜನಿಕ ಪೋರ್ನ್ ವೆಬ್‌ಸೈಟ್‌ಗಳು ಮತ್ತು ಫೋರಮ್‌ಗಳಲ್ಲಿ ಪೋಸ್ಟ್ ಆಗಬಹುದು.

ಸೈಬರ್ ಕ್ರೈಮ್‌ಗೆ ಬಲಿಯಾಗುವುದರ ಹೊರತಾಗಿ, ಸೆಕ್ಸ್‌ಟಿಂಗ್ ಮಕ್ಕಳ ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ಮತ್ತು ಲೈಂಗಿಕ ನಡವಳಿಕೆಗಳ ಮೇಲೂ ಪ್ರಭಾವ ಬೀರಬಹುದು ಎಂದು ಅಧ್ಯಯನಗಳು ತಿಳಿಸಿವೆ. ಅದರ ಪ್ರಕಾರ  ಸೆಕ್ಸ್‌ಟಿಂಗ್ ಮಾಡದವರಿಗೆ ಹೋಲಿಸಿದರೆ, ಸೆಕ್ಸ್‌ಟಿಂಗ್ ಮಾಡುವವರು ತಪ್ಪಿತಸ್ಥ ಭಾವನೆ, ಖಿನ್ನತೆ ಮತ್ತು/ಅಥವಾ ಆತಂಕದಿಂದ ಬಳಲುತ್ತಿದ್ದಾರೆ, ಹಾಗೆಯೆ ಮಾದಕ ದ್ರವ್ಯಗಳು, ಮದ್ಯಪಾನ ಇತ್ಯಾದಿಗಳಲ್ಲಿ ತೊಡಗುತ್ತಾರೆ ಅಥವಾ ಅನಾರೋಗ್ಯಕರ ಮತ್ತು/ಅಥವಾ ಅನೇಕ ಪಾಲುದಾರರೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಾರೆ ಎಂದು ತಿಳಿಸುತ್ತದೆ. ಪೋಷಕರು ತಮ್ಮ ಮಕ್ಕಳಲ್ಲಿ ಗಮನಹರಿಸಬೇಕಾದ ಕೆಲವು ಎಚ್ಚರಿಕೆಯ ಚಿಹ್ನೆಗಳು ಯಾವುದೆಂದರೆ – ಆತಂಕ, ಖಿನ್ನತೆ, ಬಲವಾದ ಪ್ರತಿಕ್ರಿಯೆಗಳು ಅಥವಾ ಮೊಬೈಲ್ ತಪಾಸಣೆಯ ನಂತರ ಅಥವಾ ಆ ಸಮಯದಲ್ಲಿ ಗಂಭೀರವಾದ ಮನಸ್ಥಿತಿ ಬದಲಾವಣೆಗಳು ಅಥವಾ ತನ್ನನ್ನು ಪ್ರತ್ಯೇಕಿಸಿಕೊಳ್ಳುವುದು ಮತ್ತು ಅಧ್ಯಯನ/ಆಹಾರದಲ್ಲಿ ಆಸಕ್ತಿ ಕಳೆದುಕೊಳ್ಳುವುದು ಇತ್ಯಾದಿ. ಮಕ್ಕಳು ಸೆಕ್ಸ್‌ಟಿಂಗ್‌ನಲ್ಲಿ ತೊಡಾಗಿಕ್ಕೊಳಲು ಅವರ ಹದಿಹರೆಯದ ಹಾರ್ಮೋನುಗಳು, ಕುತೂಹಲ, ತ್ವರಿತ ತೃಪ್ತಿ/ಮಜಾಕ್ಕಾಗಿ, ಅನಾಮಧೇಯತೆ ಮತ್ತು ಗೆಳೆಯರ ಒತ್ತಡ ಇತ್ಯಾದಿ ಆಗಿರಬಹುದು.

ಸೆಕ್ಸ್‌ಟಿಂಗ್ ತಡೆಯಲು ಪೋಷಕರು ತೆಗೆದುಕೊಳ್ಳಬಹುದಾದ ಕ್ರಮಗಳು:-

ನಿಮ್ಮ ಮಗು ಅಂತಹ ವಂಚನೆಗೆ ಬಲಿಯಾಗಿದ್ದರೆ :-

ತಕ್ಷಣವೇ ಸೈಬರ್ ಸಹಾಯವಾಣಿ ಸಂಖ್ಯೆ 1930 ಅಥವಾ ಅವರ ವೆಬ್‌ಸೈಟ್ www.cybercrime.gov.in ಅನ್ನು ಸಂಪರ್ಕಿಸುವ ಮೂಲಕ ದೂರು ಸಲ್ಲಿಸಿ ಅಥವಾ ಮಕ್ಕಳ ಅಪರಾಧ ನಿರ್ದಿಷ್ಟ ಪೊಲೀಸ್ ಠಾಣೆಗೆ ಭೇಟಿ ನೀಡಿ ಮತ್ತು ಎಫ್‌ಐಆರ್ ದಾಖಲಿಸಿ ಮತ್ತು ಅವರ ಸಲಹೆಯನ್ನು ಪಡೆಯಿರಿ. ಎಲ್ಲಾ ಸಂಭಾಷಣೆಗಳ ಮತ್ತು ಇತರ ಘಟನೆಗಳಿಗೆ ಸಂಬಂಧ ಪಟ್ಟ ವಿವರಗಳ ಬ್ಯಾಕಪ್ ತೆಗೆದುಕೊಳ್ಳಿ ಏಕೆಂದರೆ ಅವುಗಳು ಅಪರಾಧಿಯನ್ನು ಅಪರಾಧಿ ಎಂದು ನಿರ್ಣಯಿಸಲು ಪುರಾವೆಗಾಗಿ ಬೇಕಾಗುತ್ತವೆ. ನಿಮ್ಮ ಮಗು ಅಥವಾ ಬಲಿಪಶುವನ್ನು ಸಾಂತ್ವನಗೊಳಿಸಿ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಪರಿಣಾಮಗಳ ಮೇಲೆ ಕೆಲಸ ಮಾಡಲು ಚಿಕಿತ್ಸಕರ ಸಹಾಯವನ್ನು ತೆಗೆದುಕೊಳ್ಳಿ.

ಸಂತ್ರಸ್ತರಿಗೆ ಕಾನೂನುಬದ್ಧವಾಗಿ(ಭಾರತದಲ್ಲಿ) ಲಭ್ಯವಿರುವ ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಮತ್ತು ಸೆಕ್ಷನ್ಗಳ ಅಡಿಯಲ್ಲಿ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಬಹುದು :

Exit mobile version