Site icon

Identity Theft – ಗುರುತಿನ ಕಳ್ಳರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ

Identity Theft

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(NCRB) ಪ್ರಕಾರ “Identity Theft” ಅಥವಾ “ಗುರುತಿನ ಕಳ್ಳತನ” ಸೈಬರ್ ಕ್ರೈಂ ಪ್ರಕರಣಗಳ ಸಂಖ್ಯೆಯಲ್ಲಿ ದೇಶದಲ್ಲೇ  ನಮ್ಮ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಸೈಬರ್ ಅಪರಾಧಿಗಳು ನಿಮ್ಮ ವೈಯಕ್ತಿಕ ಮಾಹಿತಿಗಳಾದ ಹೆಸರು, ಹುಟ್ಟಿದ ದಿನ, ಆಧಾರ್, ಪಾನ್ ಸಂಖ್ಯೆ, ಬ್ಯಾಂಕ್ ಅಕೌಂಟ್, ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದಿಯುತ್ತಾರೆ ಮತ್ತು ಅದನ್ನು ಹೊಸ ಖಾತೆಗಳನ್ನು ತೆರೆಯಲು, ಖರೀದಿಗಳನ್ನು ಮಾಡಲು ಅಥವಾ ಇತರ ರೀತಿಯ ವಂಚನೆ ಮಾಡಲು ಈ ಮಾಹಿತಿಯನ್ನು ಬಳಸುತ್ತಾರೆ. ನಿಮ್ಮ ಹೆಸರಿನಲ್ಲಿ ಕಳ್ಳನು ಮಾಡುವ ಯಾವುದೇ ಸಾಲಗಳು ಅಥವಾ ಆರೋಪಗಳಿಗೆ ಸಹ ನೀವು ಜವಾಬ್ದಾರರಾಗಿರುತ್ತೀರಿ. ಹಣಕಾಸಿನ ಪರಿಣಾಮಗಳ ಜೊತೆಗೆ, ಗುರುತಿನ ಕಳ್ಳತನವು ನಿಮ್ಮ ಭಾವನಾತ್ಮಕ ಮತ್ತು ಮಾನಸಿಕ ಪರಿಣಾಮಗಳ ಜೊತೆ ನಿಮ್ಮ ಕ್ರೆಡಿಟ್ ಸ್ಕೋರ್(CIBIL) ಹಾಗು ಸಾಮಾಜಿಕ ಘನತೆಯನ್ನು ಹಾನಿ ಉಂಟುಮಾಡಬಹುದು. ಗುರುತಿನ ಕಳ್ಳತನದ ಬಲಿಪಶುಗಳು ಉಲ್ಲಂಘನೆ, ಕೋಪ ಮತ್ತು ಹತಾಶೆಯ ಭಾವನೆಗಳನ್ನು ಅನುಭವಿಸಬಹುದು. ಗುರುತಿನ ಕಳ್ಳತನದ ಪ್ರಮುಖ ವಿಧಗಳು ಯಾವುದೆಂದರೆ  ಕ್ರೆಡಿಟ್ ಕಾರ್ಡ್/ಸಾಲದ ವಂಚನೆ, ತೆರಿಗೆ ಅಥವಾ ಪ್ರಯೋಜನಗಳ ವಂಚನೆ, ಉದ್ಯೋಗ ವಂಚನೆ ಮತ್ತು ATM ಸ್ಕಿಮ್ಮಿಂಗ್. ನಾನು ಹಿಂದೆ ಸೋಗು ಹಾಕುವಿಕೆ/Impersonation ಬಗ್ಗೆ ಬರೆದಿದ್ದೆ, “Identity Theft” ಅಥವಾ “ಗುರುತಿನ ಕಳ್ಳತನ” ಅದರ ಒಂದು ಆಧುನಿಕ ರೂಪ.

ಗುರುತಿನ ಕಳ್ಳತನ ವಂಚನೆ ಹೇಗೇ ಮಾಡುತ್ತಾರೆ :-  

ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಈ ಮೂಲಕ ಪಡೆದುಕೊಳ್ಳುತ್ತಾರೆ:

ನಂತರ ಕಳ್ಳರು ಇದನ್ನು ಬಳಸಿ ಮೇಲೆ ಹೇಳಿದ ಅಪರಾಧಗಳನ್ನು ಮಾಡುತ್ತಾರೆ.

ಗುರುತಿನ ಕಳ್ಳತನ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-     

ನೀವು ಗುರುತಿನ ಕಳ್ಳತನ ವಂಚನೆಗೆ ಒಳಗಾಗಿದ್ದರೆ :-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ಆಧಾರ್ ಹಂಚಿಕೊಂಡಿದ್ದರೆ ನಿಮ್ಮ ಆಧಾರ್ ಕಾರ್ಡನ್ನು uidai.gov.in ಜಾಲತಾಣದಲ್ಲಿ ಲಾಕ್ ಮಾಡಿ. ಅಕೌಂಟ್ ತೆರೆದ ಅಥವಾ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕಿನಲ್ಲೂ ದೂರು ದಾಖಲಿಸಿ ಹಾಗು ಕಾನೂನು ಕ್ರಮ ಜರಗಿಸಿ.

Identity Theft – ಗುರುತಿನ ಕಳ್ಳರಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Exit mobile version