Site icon Welcome to CYBER MITHRA

ಸೋಗು ಹಾಕುವಿಕೆ/Impersonation – ಯಾರದೋ ಸೋಗಿನಲ್ಲಿ ನಡೆವ ವಂಚನೆಗಳು

ಇತ್ತೀಚಿನ ಕೆಲವು ಸುದ್ದಿಗನ್ನು ನೋಡೋಣ :

ಇವೆಲ್ಲವೂ impersonation ಅಥವಾ “ಸೋಗು ಹಾಕುವಿಕೆ” ಸೈಬರ್ ಅಪರಾದದ ನಾನಾ ರೀತಿಗಳು.

ಸೋಗು ಹಾಕುವಿಕೆ ವಂಚನೆ ಹೇಗೇ ಮಾಡುತ್ತಾರೆ :-  

ಇಲ್ಲಿ ಸೈಬರ್ ಕಳ್ಳರ ಮೂಲ ಉದ್ದೇಶ, ನಿಮ್ಮ ನಂಬಿಕೆಗಳಿಸಿ ನಿಮ್ಮಿಂದ ಹಣವನ್ನು ಪಡೆಯುವುದು ಅಥವಾ ಅಸಲಿ ವ್ಯಕ್ತಿ/ಸಂಸ್ಥೆಯ ಮಾನಹಾನಿ ಮಾಡುವುದು ಅಥವಾ ನಿಮ್ಮಿಂದ ಗೌಪ್ಯ ಮಾಹಿತಿಯನ್ನು ಪಡೆಯುವುದಾಗಿರುತ್ತದೆ. ಇದಕ್ಕೆ ಅವರು ಮೊದಲು ನಿಮ್ಮ ಹಾಗು ನಿಮ್ಮ ಕುಟುಂಬ ಅಥವಾ ಸಹೋದ್ಯೋಗಿಗಳ ಹಾಗು ನಿಮ್ಮ ನಡವಳಿಕೆ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ನಂತರ ನಿಮ್ಮ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಅಸಲಿ ಪ್ರೊಫೈಲ್ ಹೋಲುವಂತೆ ನಕಲಿ ಪ್ರೊಫೈಲ್ ಅಥವಾ ನಿಮ್ಮ ಅಸಲಿ ಇಮೇಲ್ ನಂತೆ ಕಾಣುವ ನಕಲಿ ಇಮೇಲ್ ಸೃಷ್ಟಿಸುತ್ತಾರೆ. ಅದನ್ನು ಬಳಸಿ ನಿಮ್ಮ ಕುಟುಂಬದವರಿಗೆ ಅಥವಾ ಸಹೋದ್ಯೋಗಿಗಳಿಗೇ “ತಾನು ಬ್ಯುಸಿಯಾಗಿದ್ದೇನೆ ಅಥವಾ ತೊಂದರೆಯಲ್ಲಿದೇನೆ, ನೀವು ಕೂಡಲೇ ಬ್ಯಾಂಕ್/ವಾಲೆಟ್/ಮೊಬೈಲ್ ನಂಬರಿಗೇ ಹಣ ಕಳುಹಿಸುವುದು” ಎಂದು ಸಂದೇಶ ಕಳುಹಿಸುತ್ತಾರೆ, ಕುಟುಂಬದವರು ಅಥವಾ ಸಹೋದ್ಯೋಗಿಗಳು ಕಳ್ಳರು ಕಳಿಸಿದ ಸಂದೇಶ ನಿಜವೆಂದು ನಂಬಿ ವಿಚಾರಿಸದೆ ಹಣ ಕಳಿಸುತ್ತಾರೆ ಅಥವಾ ಅವರು ಕೇಳಿದ ವಿವರಗಳನ್ನು ಕೊಡುತ್ತಾರೆ.

ಸೋಗು ಹಾಕುವಿಕೆ ವಂಚನೆಯಿಂದ ಹೇಗೆ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬಹುದು :-     

ನೀವು ಸೋಗು ಹಾಕುವಿಕೆ ವಂಚನೆಗೆ ಒಳಗಾಗಿದ್ದರೆ :-

ಕೂಡಲೇ ನೀವು 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರು ದಾಖಲಿಸಿ. ನಕಲಿ ಖಾತೆ ಅಥವಾ ಪ್ರೊಫೈಲ್ ಬಗ್ಗೆ ಆಯಾ ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ನಲ್ಲಿ ಹಾಗು ನಕಲಿ ಜಾಲತಾಣಗಳ ಬಗ್ಗೆ ಅದರ ಹೋಸ್ಟಿಂಗ್ ಸೇವಾ ಪೂರೈಕೆದಾರರೊಂದಿಗೆ ದೂರು ನೀಡಿ ಮತ್ತು ಅದನ್ನು ನಿರ್ಬಂಧಿಸಲು ಹೇಳಿ. ಸಂಬಂದಿತ ಬ್ಯಾಂಕಿಗೆ ಕರೆ ಮಾಡಿ ಹಣವನ್ನು ಫ್ರೀಜ್ ಮಾಡಲು ದೂರು ದಾಖಲಿಸಿ. ನಿಮ್ಮ ಕುಟುಂಬ ಅಥವಾ ಸಹೋದ್ಯೋಗಿಗಳಿಗೆ ವಂಚನೆಯ ಬಗ್ಗೆ ಜಾಗರೂಕರಾಗಿರಲು ತಿಳಿಸಿ. ಸಂಬಂಧಿತ ಸಂದೇಶಗಳು, ವೆಬ್‌ಸೈಟ್ ಪುಟಗಳು ಮತ್ತು ಯಾವುದೇ ವಿನಿಮಯಗಳು ನಿರ್ಣಾಯಕ ಸಾಕ್ಷ್ಯದ ಭಾಗವಾಗಿರುತ್ತವೆ, ಅದನ್ನು ಅಳಿಸಬೇಡಿ, ಕಾಪಾಡಿಕೊಳ್ಳಿ.

ಮೇಲಿನ impersonation ಅಥವಾ “ಸೋಗು ಹಾಕುವಿಕೆ” ವಂಚನೆಯ ಬಗ್ಗೆ ಪ್ರತಿನಿಧಿ (#pratinidhi) ದಿನ ಪತ್ರಿಕೆಯಲ್ಲಿ ಮುದ್ರಿತವಾದ ನನ್ನ ಅಂಕಣ. ನಿಮಗೇ ಉಪಯುಕ್ತವೆನ್ನಿಸಿದರೆ ಈ ಪೋಸ್ಟರನ್ನು ನಿಮ್ಮ ಕುಟುಂಬ ಹಾಗು ಗೆಳೆಯರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ.

IMPERSONATION – “ಸೋಗು ಹಾಕುವಿಕೆ” ಸೈಬರ್ ಕ್ರೈಂ ನಿಂದ ಬಚಾವಾಗುವುದು ಹೇಗೇ

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Exit mobile version