Site icon Welcome to CYBER MITHRA

ಕನ್ನಡದ ಬೆಳವಣಿಗೆಗೆ ಕೃತಕ ಬುದ್ಧಿಮತ್ತೆಯ ಕೊಡುಗೆ

AI

ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತೊಮ್ಮೆ ನಮ್ಮೆಲ್ಲರ ಹೃದಯಗಳಲ್ಲಿ ತುಂಬಿದೆ, ಇದು ಕೆಂಪು–ಹಳದಿ ಧ್ವಜಗಳು ಹಾರಾಡುವ ಕಾಲ, ಕನ್ನಡ ಗೀತೆಗಳು ಎಲ್ಲೆಡೆ ಮೊಳಗುವ ಕಾಲ. ಇದೆ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು “ಮಾಹಿತಿ ತಂತ್ರಜ್ಞಾನದ ಯುಗ ಈಗ ಕೃತಕ ಬುದ್ಧಿಮತ್ತೆಯ(Artificial Intelligence ಅಥವಾ AI)  ಯುಗವಾಗಿ ಪರಿವರ್ತನೆಯಾಗುತ್ತಿದೆ. ಈ ಹೊಸ ತಾಂತ್ರಿಕ ಸವಾಲನ್ನು ಎದುರಿಸಲು ನಾವು ಕನ್ನಡವನ್ನು ಸಿದ್ಧಪಡಿಸಬೇಕು” ಎಂದು ಘೋಷಣೆ ಮಾಡಿದರು. ಇದು ಕೇವಲ ಸಾಂಕೇತಿಕ ಮಾತಲ್ಲ. ಇದು ನಮ್ಮ ಕನ್ನಡದ ಭವಿಷ್ಯದ ಪ್ರಶ್ನೆ. ಈ ಹೊಸ ಯುಗದಲ್ಲಿ, AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ? AI ಅನ್ನು ಕನ್ನಡದ ಬೆಳವಣಿಗೆಗೆ ಹೇಗೆ ಬಳಸಬಹುದು? ಭಾರತ/ಕರ್ನಾಟಕ ಸರಕಾರ ಹಾಗು ಇಲ್ಲಿನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು AI ಅನ್ನು ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ನೋಡೋಣ. ನಾನು AI ತಂತ್ರಜ್ಞಾನದ ಕುರಿತು ಇಪ್ಪತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದೇನೆ, ಅದನ್ನು ನೀವು ನನ್ನ ದ್ವಿಭಾಷಾ ಬ್ಲಾಗ್ www.cybermithra.in ನಲ್ಲಿ ಓದಬಹುದು. 

AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ ?

“AI ಬಂದರೆ ಎಲ್ಲವೂ ಇಂಗ್ಲೀಷ್ ಮಯವಾಗಿಬಿಡುತ್ತದೆ, ಕನ್ನಡ ಸಾಯುತ್ತೆ!”, ಇದು ಹಲವು ಜನರ ಅಭಿಪ್ರಾಯ. ಈ ಆತಂಕ ಸಂಪೂರ್ಣ ಸುಳ್ಳಲ್ಲಾ ಯಾಕೆಂದರೆ :

ಇದರ ಪರಿಣಾಮ – AI ಗೆ ಕನ್ನಡ ಸರಿಯಾಗಿ ಬರುವುದಿಲ್ಲಾ ಎಂದು ಸಾಮನ್ಯ ಜನರು ಡಿಜಿಟಲ್ ವ್ಯವಹಾರಗಳಲ್ಲಿ ಕನ್ನಡ ಬಳಕೆಯಿಂದ ದೂರ ಹೋಗಬಹುದು. ಆದರೆ ಇದೇ AIಯನ್ನು ನಾವು ಸರಿಯಾಗಿ ‘ಟ್ರೈನ್’ ಮಾಡಿದರೆ, ಅದು ಕನ್ನಡಕ್ಕೆ ಅದ್ಭುತವಾಗಿಯೂ ಕೆಲಸ ಮಾಡಬಲ್ಲದು ಮತ್ತು ಕನ್ನಡಕ್ಕೆ ಪೂರಕವೂ ಆಗಬಹುದು, ಹೇಗೆಂದರೆ :

ಈ ಪೂರಕಗಳು ನಿಜವಾಗಬೇಕಾದರೆ ನಾವು, ನೀವು ಮತ್ತು ಸರಕಾರ :

ಹೀಗಾಗಿ ಉತ್ತರ ಸರಳ, AI ಕನ್ನಡಕ್ಕೆ ಮಾರಕವಲ್ಲ, ಪೂರಕವೂ ಆಗಬಹುದು. ನಾವು ಕನ್ನಡಿಗರು ಈ AI ಅನ್ನು ‘ಕನ್ನಡ ಮನಸ್ಸಿನಿಂದ’ ರೂಪಿಸಿದರೆ, ಕನ್ನಡವು ಈ ಹೊಸ ಟೆಕ್ ಯುಗದಲ್ಲಿ ಮತ್ತಷ್ಟು ಶ್ರೀಮಂತವಾಗಿ ಬೆಳೆಯುತ್ತದೆ, ಹೊಸ ಜೀವ ಪಡೆಯುತ್ತದೆ.

ಕನ್ನಡಕ್ಕಾಗಿಯೇ ರಚಿಸಿದ AI ದೊಡ್ಡ ಭಾಷಾ ಮಾದರಿಗಳು(LLM) ಯಾವುವು ?

ಈಗ ಅನೇಕ ಜಾಗತಿಕ ದೊಡ್ಡ ಭಾಷಾ ಮಾದರಿಗಳು(ChatGPT, Gemeni ಇತ್ಯಾದಿ) ಕನ್ನಡ ಭಾಷೆಯಲ್ಲಿ ತರಬೇತಿ ಪಡೆದಿದ್ದು, ಬಹುತೇಕ ಸಾಮಾನ್ಯ ಪ್ರಶ್ನೆಗಳಿಗೆ  ಅದು ಕನ್ನಡಲ್ಲಿಯೇ ಸಮರ್ಪಕವಾಗಿ ಉತ್ತರವನ್ನು ಕೊಡುತ್ತಿದೆ ಮತ್ತು ನೀವು ಅದರೊಂದಿಗೆ ಕನ್ನಡದಲ್ಲೇ ಮಾತುಕತೆ ನಡೆಸಬಹುದು. ಕೇಂದ್ರ ಸರಕಾರ ತನ್ನ ಪ್ರಮುಖ ಭಾಷಾ ಸಂಶೋಧನಾ ಸಂಸ್ಥೆಗಳ ಸಹಾಯದಿಂದಲೋ ಅಥವಾ ಖಾಸಗಿ ಸಂಸ್ಥೆಗಳ ಸಹಯೋಗದಿಂದಲೋ ಭಾರತದ ಪ್ರಮುಖ ಭಾಷೆಗಳಿಗಾಗಿ ನಿರ್ಮಿಸಿರುವ ಭಾಷಿಣಿ, ಸರ್ವಂ, AI4Bharat, ಕೃತಿಮ್ ಮುಂತಾದ ದೊಡ್ಡ ಭಾಷಾ ಮಾದರಿಗಳು ಜಾಗತಿಕ ದೊಡ್ಡ ಭಾಷಾ ಮಾದರಿಗಳಿಗಿಂತ ಕನ್ನಡ ಭಾಷೆಯನ್ನು ಮುಖ್ಯವಾಗಿ ಅದರ ವ್ಯಾಕರಣ, ಉಪಭಾಷೆಗಳು ಮತ್ತು ಬಳಕೆ ವೈವಿಧ್ಯಗಳನ್ನು ಚೆನ್ನಾಗಿ ಅರಿತಿರುವುದರಿಂದ ನಿಮಗೆ ಕನ್ನಡದಲ್ಲೇ ವ್ಯವಹರಿಸಲು ಹೆಚ್ಚು ಅನುಕೂಲಕಾರಿ ಆಗಲಿದೆ. ಕನ್ನಡಕ್ಕಾಗಿಯೇ ವಿಶೇಷವಾಗಿ ನಿರ್ಮಿಸಲಾದ ಅಥವಾ ಮಾರ್ಪಡಿಸಲಾದ ಮತ್ತು ಮುಖ್ಯವಾಗಿ ಕನ್ನಡ ದತ್ತಾಂಶದ ಮೇಲೆ ತರಬೇತಿ ಪಡೆದ ಮಾದರಿಗಳಾದ  ಅಂಬಾರಿ, ಕನ್ನಡಜಿಪಿಟಿ, ಕನ್ನಡ ಲಾಮಾ ಇತ್ಯಾದಿ ಮಾದರಿಗಳು ಇನ್ನು ಬೆಳೆವಣಿಗೆಯ ಹಾದಿಯಲ್ಲಿದ್ದು ಮುಂದೆ ಇವು ನಮಗೆ ಭಾಷಾಂತರ/ಅನುವಾದ, ವ್ಯವಹಾರ, ಸಂಶೋಧನೆ ಇತ್ಯಾದಿ ಕೆಲಸಗಳನ್ನು ಕನ್ನಡದಲ್ಲೇ ನಡೆಸಲು ಅನುವುಮಾಡಿಕೊಡಲಿದೆ. ಆದರೆ ಇವೆಲ್ಲವೂ ಈ ಲೇಖನ ಬರೆಯುವಾಗ ಕೆಲವು ಪ್ರಾಯೋಗಿಕ ಬಳಕೆಯ ಅವಕಾಶ ಬಿಟ್ಟರೆ ಜಾಗತಿಕ ದೊಡ್ಡ ಭಾಷಾ ಮಾದರಿಗಳಂತೆ ಸಾಮಾನ್ಯ ಜನರ ನೇರ ಉಪಯೋಗಕ್ಕೆ ಇನ್ನು ಲಭ್ಯವಿಲ್ಲದಿರುವುದು ವಿಷಾದಕರ ವಿಷಯ.

AI ಅನ್ನು ಬಳಸಿ ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳು :-

ಕೇಂದ್ರ ಮತ್ತು ರಾಜ್ಯ ಸರಕಾರವು  AI ಅನ್ನು ಬಳಸಿ ಕನ್ನಡವನ್ನು ತಂತ್ರಜ್ಞಾನ ಯುಗಕ್ಕೆ ಸಿದ್ಧಗೊಳಿಸುವುದು, ಶಿಕ್ಷಣ ಮತ್ತು ಭಾಷಾ ಬಳಕೆಯಲ್ಲಿ, ಉದ್ಯೋಗ ಹಾಗು ತಮ್ಮ ವೃತ್ತಿಗಳಲ್ಲಿ ಹಿಂದುಳಿದ ವರ್ಗದವರನ್ನು ಸೇರಿಸಿ ಎಲ್ಲರಿಗೂ ಸಮಾನಾವಕಾಶ  ಮತ್ತು ಸೇರ್ಪಡೆ ಕಲ್ಪಿಸುವುದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿ ಕೊಂಡಿವೆ. ಅವುಗಳಲ್ಲಿ ಪ್ರಮುಖವಾದವು.

AI ಅನ್ನು ಬಳಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಹಮ್ಮಿಕೊಂಡ ಯೋಜನೆಗಳು :-

ನ್ಯಾಯಾಂಗ ವ್ಯವಸ್ಥೆಯಲ್ಲಿ AI ಅನ್ನು ಬಳಸಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ/ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಮುಖ್ಯವಾದವು ಇಂಗ್ಲಿಷ್‌ನಲ್ಲಿರುವ ನ್ಯಾಯಾಲಯದ ತೀರ್ಪುಗಳನ್ನು ಮತ್ತು ಕಾನೂನು ದಾಖಲೆಗಳನ್ನು ಕನ್ನಡಕ್ಕೆ ಅನುವಾದಿಸುವುದು, ನ್ಯಾಯಾಲಯ ಸಿಬ್ಬಂದಿಯ ಕೆಲಸಗಳನ್ನು ಆಟೋಮೇಟ್ ಮಾಡುವುದು, ವಾದಗಳನ್ನು ಮತ್ತು ನ್ಯಾಯಾಲಯದ ಸಲ್ಲಿಕೆಗಳನ್ನು ಡಿಜಿಟಲೀಕರಣ ಗೊಳಿಸುವುದು ಇತ್ಯಾದಿ. ಆ ಯೋಜನೆಗಳಲ್ಲಿ ಪ್ರಮುಖವಾದವು ಇಂತಿವೆ :

ಕೊನೆಯ ಮಾತು :-

AI ಕನ್ನಡದ ಬೆಳವಣಿಗೆಗೆ ಕೇವಲ ತಂತ್ರಜ್ಞಾನೀಕರಣವಲ್ಲ, ಅದು ಭಾಷೆಯ ಹೊಸ ಪುನರ್ಜನ್ಮದ ಮಾರ್ಗವಾಗಿದೆ.  ಸರ್ಕಾರ, ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ತಂತ್ರಜ್ಞಾನ ವಲಯ — ಎಲ್ಲರೂ ಸೇರಿ ಕನ್ನಡವನ್ನು ಡಿಜಿಟಲ್ ಯುಗಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಶಿಕ್ಷಣದಿಂದ ನ್ಯಾಯಾಂಗದವರೆಗೆ, ರೈತರಿಂದ ವಿದ್ಯಾರ್ಥಿವರೆಗೆ — AI ಕನ್ನಡದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. “ಕಲಿಕಾ ದೀಪಾ”, “AI ಶ್ರುತಿ”, “ಅದಾಲತ್ AI” ಮುಂತಾದ ಯೋಜನೆಗಳು ಕನ್ನಡದ ತಂತ್ರಜ್ಞಾನೀಕರಣದ ನಿದರ್ಶನಗಳು. ನಾವು AI ಮಾದರಿಗಳಲ್ಲಿ ಕನ್ನಡದಲ್ಲೆ ಹುಡುಕಬೇಕು, ಬರೆಯಬೇಕು, ಮಾತನಾಡಬೇಕು ಮತ್ತು AI ಉಪಕರಣಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು. ಏಕೆಂದರೆ ಬಳಕೆ ಹೆಚ್ಚಿದಂತೆ AI ಕನ್ನಡವನ್ನು ಹೆಚ್ಚು ಕಲಿಯುತ್ತದೆ, ಹೆಚ್ಚು ಬಲಗೊಳ್ಳುತ್ತದೆ ಮತ್ತು ಕನ್ನಡಕ್ಕೆ/ಕನ್ನಡದಲ್ಲಿ ಉತ್ತಮವಾಗಿ ಪ್ರತಿಕ್ರಯಿಸುತ್ತದೆ. ಹೀಗಾಗಿ AI ಕನ್ನಡಕ್ಕೆ ಮಾರಕವಲ್ಲ — ಅದು ಕನ್ನಡದ ಬೆಳವಣಿಗೆಗೆ ಪೂರಕ ಶಕ್ತಿ ಆಗಲಿದೆ.

Exit mobile version