Site icon Welcome to CYBER MITHRA

ಸೈಬರ್ ವೋಯರಿಸಂ ಕ್ರೈಮ್: ನೀವು ತಿಳಿಯಲೇಬೇಕಾದ ವಿಷಯ

ಸೈಬರ್ ವೋಯರಿಸಂ

ಇತ್ತೀಚಿನ ಕೆಲವು ಸುದ್ದಿಗಳನ್ನು ನೋಡೋಣ :

ಈ ಮೇಲಿನ ಎಲ್ಲ ಪ್ರಕರಣಗಳು ಸೈಬರ್ ವೋಯರಿಸಂ ಸೈಬರ್ ಅಪರಾಧದ ವಿವಿಧ ಮುಖಗಳು.

ಸರಳ ಪದಗಳಲ್ಲಿ, ಯಾರಾದರೂ ರಹಸ್ಯವಾಗಿ ಆ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅವರ ವಿವಸ್ತ್ರಗೊಳಿಸುವಿಕೆ, ಲೈಂಗಿಕ ಚಟುವಟಿಕೆ ಮತ್ತು ಅದರ ನಿಕಟ ಕ್ರಿಯೆಗಳ ವೀಕ್ಷಣೆಯಿಂದ ಆನಂದವನ್ನು ಪಡೆಯುವಂತಹ ವಿಕೃತ ಮನಸ್ಥಿತಿಗೆ ವೋಯರಿಸಂ ಅನ್ನುತ್ತಾರೆ. ವೋಯರಿಸಂ ಅನ್ನು ಗೌಪ್ಯತೆಗೆ ಒಳನುಗ್ಗುವಿಕೆ ಅಥವಾ ಲೈಂಗಿಕ ದರ್ಶನ ತೃಪ್ತ ಎಂದು ಕೂಡ ಕರೆಯುತ್ತಾರೆ. ಖಾಸಗಿ ಸನ್ನಿವೇಶದಲ್ಲಿ ಅವರ ಸಮ್ಮತಿ ಅಥವಾ ಜ್ಞಾನವಿಲ್ಲದೆ ಅವರ ಚಿತ್ರಗಳನ್ನು ವೀಕ್ಷಿಸುವುದು, ಸೆರೆಹಿಡಿಯುವುದು ಅಥವಾ ವಿತರಿಸುವುದು ಇದರಲ್ಲಿ ಸೇರಿದೆ. ತಂತ್ರಜ್ಞಾನದ ಪ್ರಗತಿಯೊಂದಿಗೆ, ಡಿಜಿಟಲ್ ಕ್ಯಾಮೆರಾಗಳು, ಸ್ಮಾರ್ಟ್ಫೋನ್ಗಳು ಇತ್ಯಾದಿಗಳನ್ನು ವಸ್ತ್ರ ಬದಲಾಯಿಸುವ ಕೊಠಡಿಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಅವರ ಖಾಸಗಿ ಕೊಠಡಿಗಳಾದ ಮಲಗುವ ಕೋಣೆ, ಸ್ನಾನ ಗೃಹ ಅಥವಾ ಎಲ್ಲಿ ವ್ಯಕ್ತಿಗಳು ಸಾಮಾನ್ಯವಾಗಿ ಗೌಪ್ಯತೆಯನ್ನು ನಿರೀಕ್ಷಿಸುತ್ತಾರೋ ಅಂತ ಜಾಗದಲ್ಲಿ ಡಿಜಿಟಲ್ ಕ್ಯಾಮೆರಾ ಮುಖಾಂತರ ಚಿತ್ರ ಅಥವಾ ವಿಡಿಯೋ ಸೆರೆಹಿಡಿಯುವುದಕ್ಕೆ ಸೈಬರ್ ಅಥವಾ ಡಿಜಿಟಲ್ ವಾಯರಿಸಂ ಸೈಬರ್ಕ್ರೈಮ್ ಎನ್ನುತ್ತಾರೆ. ಅಂತಹ ಸೈಬರ್ ಅಪರಾಧಿಗಳ ಉದ್ದೇಶವು ಸುಲಭವಾಗಿ ಹಣ ಸಂಪಾದಿಸುವುದು, ಅಸೂಯೆ, ಗೀಳು, ಸೇಡು ಅಥವಾ ದ್ವೇಷವನ್ನು ಒಳಗೊಂಡಿರಬಹುದು.

ಸೈಬರ್ ವೋಯರಿಸಂ ಸೈಬರ್ ಕ್ರೈಮ್ಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು:-

ನೀವು ಅಂತಹ ಸೈಬರ್ ಅಪರಾಧಕ್ಕೆ ಬಲಿಯಾಗಿದ್ದರೆ :-

ತಕ್ಷಣವೇ 1930 ಸೈಬರ್ ಸಹಾಯವಾಣಿಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ಅಥವಾ ಸೈಬರ್ ಅಥವಾ ಹತ್ತಿರದ  ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿ. ಅಂತಹ ವಂಚಕರು ಮತ್ತು ವಂಚನೆಯ ಬಗ್ಗೆ ಸಂಬಂಧಿತ ಪ್ರಾಧಿಕಾರ ಅಥವಾ ಸಾಮಾಜಿಕ ಮಾಧ್ಯಮ ಜಾಲತಾಣಕ್ಕೆ ದೂರು ನೀಡಿ. ಆ ವಂಚಕ ಬಳಕೆದಾರರನ್ನು ನಿರ್ಬಂಧಿಸಿ ಆದರೆ ಸಂಬಂದಿತ ಯಾವುದೇ ಮಾಹಿತಿಯನ್ನು ಅಳಿಸಬೇಡಿ, ಅದನ್ನು ಅಪರಾಧಿಗಳ ವಿರುದ್ಧ ಪುರಾವೆಯಾಗಿ ಬಳಸಬಹುದು. ಅಪರಿಚಿತರು ಕೊಟ್ಟ ಯಾವುದೇ ಸಾಫ್ಟ್ವೇರ್ ಅನ್ನು ನೀವು ಸ್ಥಾಪಿಸಿದ್ದರೆ ಅಥವಾ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರೆ ಅಥವಾ ಒದಗಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿದ್ದರೆ, ಆ ಸಾಫ್ಟ್ವೇರ್ ಅನ್ನು ಅನ್ಇನ್ಸ್ಟಾಲ್ ಮಾಡಿ. ನಿಮ್ಮ ಎಲ್ಲಾ ಪ್ರಮುಖ ಬ್ಯಾಂಕಿಂಗ್, ಇಮೇಲ್ ಇತ್ಯಾದಿಗಳಂತಹ ಖಾತೆಗಳ ಪಾಸ್ವರ್ಡ್ಗಳು / ಪಿನ್ಗಳನ್ನು ಬದಲಾಯಿಸಿ. ನಿಮ್ಮ ಸಾಧನವನ್ನು ಫ್ಯಾಕ್ಟರಿ ರೀಸೆಟ್ ಅಥವಾ ಫಾರ್ಮ್ಯಾಟ್ ಮಾಡುವುದು ಉತ್ತಮ.

ಸಂತ್ರಸ್ತರಿಗೆ ಕಾನೂನುಬದ್ಧವಾಗಿ(ಭಾರತದಲ್ಲಿ) ಲಭ್ಯವಿರುವ ಪರಿಹಾರಗಳು :-

ನಿಮ್ಮ ಹತ್ತಿರದ ಸೈಬರ್ ಅಥವಾ ಸಾಮಾನ್ಯ ಪೊಲೀಸ್ ಠಾಣೆಯಲ್ಲಿ ನೀವು ಕ್ರಿಮಿನಲ್ ಪ್ರಕರಣವನ್ನು ಈ ಕೆಳಗಿನ ಕಾನೂನು ಮತ್ತು ಸೆಕ್ಷನ್ಗಳ ಅಡಿಯಲ್ಲಿ ಅಥವಾ ನಿಮ್ಮ ಪ್ರಕರಣದ ಆಧಾರದ ಮೇಲೆ ಪೊಲೀಸರು ಸೂಚಿಸಿದ ಸೆಕ್ಷನ್ಗಳ ಅಡಿಯಲ್ಲಿ ದಾಖಲಿಸಬಹುದು :

ಸೈಬರ್ ವೋಯರಿಸಂ ಕ್ರೈಮ್: ನೀವು ತಿಳಿಯಲೇಬೇಕಾದ ವಿಷಯ
Exit mobile version