Site icon Welcome to CYBER MITHRA

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್‌ಗಳ ಬಗ್ಗೆ ಎಚ್ಚರವಿರಲಿ..

Cybercriminals are using ChatGPT ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು ಈ ನಡುವೆ ತುಂಬಾ ಹೆಚ್ಚಿವೆ. ಈ ವಾರದಿಂದ ಪ್ರಾರಂಭಿಸಿ, ನಾನು ಹೇಗೆ ವಿವಿಧ ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI) ನಂತಹ  ತಂತ್ರಜ್ಞಾನವನ್ನು ಬಳಸಿ ಸೈಬರ್ ಖದೀಮರು ಹೇಗೇ ಸೈಬರ್ ವಂಚನೆಗಳನ್ನು ಮಾಡುತ್ತಾರೆ ಎಂಬುದರ ಕುರಿತು ಕೆಲವು ಲೇಖನಗಳನ್ನು ಬರೆಯಲು ನಾನು ಯೋಚಿಸುತ್ತಿದ್ದೇನೆ. ಮೊದಲನೇ ಕಂತಿನಲ್ಲಿ, ನಾನು ಇತ್ತೀಚಿಗೆ ತುಂಬ ಸುದ್ದಿಯಲ್ಲಿರುವ AI ಉಪಕರಣಗಳಲ್ಲೊಂದಾದ ChatGPT ಸೈಬರ್ ಅಪರಾಧಿಗಳಿಗೆ ಹೇಗೇ ಸಹಾಯ ಮಾಡುತ್ತಿವೆ ಎಂಬುದರ ಬಗ್ಗೆ ಇಂದು ತಿಳಿಸುವೆ. ChatGPT, AI ಸಂಶೋಧನಾ ಕಂಪನಿ OPENAI  ಅಭಿವೃದ್ಧಿಪಡಿಸಿದ AI ಚಾಲಿತ ಚಾಟ್‌ಬಾಟ್ ಆಗಿದೆ. ಬಳಕೆದಾರರ ಪ್ರಶ್ನೆಗಳು ಮತ್ತು ಪ್ರಾಂಪ್ಟ್‌ಗಳಿಗೆ ತಕ್ಕ ಪ್ರತಿಕ್ರಿಯೆಗಳನ್ನು ರಚಿಸಲು ಚಾಟ್‌ಬಾಟ್ ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂಬ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ. ಇದರ ಬಗ್ಗೆ

GPT ಎಂದರೆ “ಜನರೇಟಿವ್ ಪ್ರಿ-ಟ್ರೇನ್ಡ್ ಟ್ರಾನ್ಸ್‌ಫಾರ್ಮರ್”, ಇದು ChatGPT ಹೇಗೆ ವಿನಂತಿಗಳನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಪ್ರತಿಕ್ರಿಯೆಗಳನ್ನು ರೂಪಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ChatGPT ಅಥವಾ ಅದನ್ನು ಬಳಸಿಕೊಂಡು ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳು ಪ್ರಬಂಧಗಳು, ಕಥೆಗಳು, ಸಾಫ್ಟ್ವೇರ್ ಕೋಡ್, ಚಿತ್ರಗಳು, ಚಲನಚಿತ್ರಗಳನ್ನು ರಚಿಸುವುದು, ಪಠ್ಯವನ್ನು ಧ್ವನಿಗೆ ಪರಿವರ್ತಿಸುವುದು ಇತ್ಯಾದಿ ಕಾರ್ಯಗಳನ್ನು ಮಾಡುತ್ತದೆ. ChatGPT ಗೆ ಪರ್ಯಾಯಗಳು ಅಥವಾ ಸ್ಪರ್ಧಿಗಳು google ಕಂಪನಿಯ ಬಾರ್ಡ್, ಮೈಕ್ರೋಸಾಫ್ಟ್ ಕಂಪನಿಯ Bing AI ಮತ್ತು ChatSonic ಆಗಿರುತ್ತವೆ. OpenAI ಪ್ರಕಾರ, ನವೆಂಬರ್ 2022 ರಲ್ಲಿ ಪ್ರಾರಂಭವಾದ ChatGPT ಕೇವಲ 5 ದಿನಗಳಲ್ಲಿ 1 ಮಿಲಿಯನ್ ಬಳಕೆದಾರರನ್ನು ಸ್ವಾಧೀನಪಡಿಸಿಕೊಂಡಿದೆ ಮತ್ತು ಈಗ ಅದು 100 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ChatGPT ಪ್ರಕಾರದ AI ಪರಿಕರಗಳನ್ನು ಬಳಸುವುದರಿಂದ ಸಾಕಷ್ಟು ಧನಾತ್ಮಕ ಮತ್ತು ಆರ್ಥಿಕ ಪ್ರಯೋಜನಗಳಿದ್ದರೂ, ಈ ಸುಧಾರಿತ ಬಳಕೆದಾರ ಸ್ನೇಹಿ ತಂತ್ರಜ್ಞಾನದಿಂದ ಸಾಕಷ್ಟು ಹೊಸ ಸೈಬರ್‌ ಸುರಕ್ಷತೆ ಅಪಾಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. OPENAI ನ ಸಹ-ಸಂಸ್ಥಾಪಕರಾಗಿದ್ದ ಎಲೋನ್ ಮಸ್ಕ್ ಅವರು ದುಬೈನಲ್ಲಿ ನಡೆದ ವಿಶ್ವ ಸರ್ಕಾರದ ಶೃಂಗಸಭೆಯಲ್ಲಿ ಭಾಗವಹಿಸಿದವರಿಗೆ ಹೇಳಿದರು – “ನಾಗರಿಕತೆಯ ಭವಿಷ್ಯಕ್ಕೆ AI ಎಂಬುದು ಒಂದು ದೊಡ್ಡ ಅಪಾಯವಾಗಿದೆ” ಇದಕ್ಕೆ ಸಿಇಒ ಮತ್ತು ಇತರ ಸಹ ಸಂಸ್ಥಾಪಕರಾಗಿದ್ದ ಸಾಮ್ ಆಲ್ಟ್‌ಮನ್ – “AI ದೊಡ್ಡ ಸೈಬರ್ ಸುರಕ್ಷತೆ ಅಪಾಯವನ್ನು ತಂದೊಡ್ಡಲಿದೆ” ಎಂದು ಒಪ್ಪಿಕೊಂಡರು.

ಸೈಬರ್ ಅಪರಾಧಿಗಳು ಮಾಲ್‌ವೇರ್ ಕಾರ್ಯಕ್ರಮಗಳನ್ನು ಬರೆಯಲು, ಫಿಶಿಂಗ್ ಮಾಡಲು, ತದ್ರೂಪು ನಕಲಿಗಳನ್ನು ರಚಿಸಲು, ಸುಲಿಗೆ ಮಾಡಲು, ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಯನ್ನು ಸೃಷ್ಟಿಸಲು ಮತ್ತು ಸಮಾಜದಲ್ಲಿ ಗಲಭೆಗಳು ಅಥವಾ ಘರ್ಷಣೆಗಳಿಗೆ ChatGPT ಅನ್ನು ಬಳಸಲು ಪ್ರಾರಂಭಿಸಿದ್ದಾರೆ. ಆ ಮೂಲಕ ChatGPT ಸಾಮಾನ್ಯ ಸಣ್ಣ ಸೈಬರ್ ಅಪರಾಧಿಗಳಿಗೆ ಅತ್ಯಾಧುನಿಕ ಸೈಬರ್ ಅಪರಾಧಗಳನ್ನು ಮಾಡಲು ಅವರಿಗೇ ಮೀರಿದ ತಂತ್ರಜ್ಞಾನ ಮತ್ತು ಅತ್ಯಾಧುನಿಕತೆಯನ್ನು ಸುಲಭವಾಗಿ ದಕ್ಕುವಂತೆ ಮಾಡುತ್ತದೆ.

ಸೈಬರ್ ಅಪರಾಧಿಗಳು ChatGPT ಅನ್ನು ಹೇಗೆ ಬಳಸುತ್ತಿದ್ದಾರೆ:-

ವಂಚಕರು ಚಾಟ್‌ಜಿಪಿಟಿಯನ್ನು ಬಳಸಿಕೊಂಡು ಬಳಕೆದಾರರ ಸಾಧನಗಳಿಂದ ವೈಯಕ್ತಿಕ ಮತ್ತು ಆರ್ಥಿಕವಾಗಿ ಸೂಕ್ಷ್ಮ ಡೇಟಾವನ್ನು ಕದಿಯಲು ಪ್ರಯತ್ನಿಸುತ್ತಾರೆ ಮತ್ತು ನಂತರ ಅದನ್ನು ಬಳಸಿ ಸೈಬರ್‌ಕ್ರೈಮ್‌ಗಳನ್ನು ಮಾಡಲು ಅಥವಾ ಸುಲಿಗೆ ಅಥವಾ ಭಯೋತ್ಪಾದನೆಗಾಗಿ ಚಾಟ್‌ಜಿಪಿಟಿಯನ್ನು ಕೆಳಗಿನ ವಿಧಾನಗಳಲ್ಲಿ ಒಂದನ್ನು ಬಳಸುತ್ತಾರೆ:

ಅಂತಹ ಅಪರಾಧಗಳಿಂದ ನೀವು ನಿಮನ್ನು ಹೇಗೆ ರಕ್ಷಿಸಿಕೊಳ್ಳುವುದು:-

ನೀವು ವಂಚನೆಗೆ ಒಳಗಾಗಿದ್ದರೆ:-

ತಕ್ಷಣವೇ 1930 ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ cybercrime.gov.in ನಲ್ಲಿ ದೂರು ಸಲ್ಲಿಸಿ. ಹಣವನ್ನು ಫ್ರೀಜ್ ಮಾಡಲು ಸಂಬಂಧಿಸಿದ ಬ್ಯಾಂಕ್‌ಗೆ ಕರೆ ಮಾಡಿ ದೂರು ನೀಡಿ. ನೀವು ಯಾರೊಂದಿಗಾದರೂ ಆಧಾರ್ ಅನ್ನು ಹಂಚಿಕೊಂಡಿದ್ದರೆ, uidai.gov.in ನಲ್ಲಿ ನಿಮ್ಮ ಆಧಾರ್ ಕಾರ್ಡ್ ಅನ್ನು ಲಾಕ್ ಮಾಡಿ. ಬಹಿರಂಗಗೊಂಡ ಬ್ಯಾಂಕಿಂಗ್ ಖಾತೆಗಳ ಬಳಕೆದಾರ ಪಾಸ್‌ವರ್ಡ್‌ಗಳು/ಪಿನ್‌ಗಳನ್ನು ಬದಲಾಯಿಸಿ. QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ ಮಾಲ್‌ವೇರ್/ವೈರಸ್ ದಾಳಿಯ ಬಗ್ಗೆ ನಿಮಗೆ ಸಂದೇಹವಿದ್ದರೆ, ಸಾಧನವನ್ನು ಫಾರ್ಮಾಟ್ ಮಾಡಿ ಅಥವಾ ಫ್ಯಾಕ್ಟರಿ ರಿಸೆಟ್ ಮಾಡಿ.

ChatGPT ಬಳಸಿ ನಡೆಯುವ ಸೈಬರ್ ಕ್ರೈಂಗಳು, ಇತ್ತೀಚಿನ ಟ್ರೆಂಡ್ಗಳ ಬಗ್ಗೆ ಎಚ್ಚರವಿರಲಿ..

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Exit mobile version