Site icon Welcome to CYBER MITHRA

ರಾನ್ಸಮ್‌ವೇರ್ ವೈರಸ್ ಬಗ್ಗೆ ಒಂದು ಕಿರು ಪರಿಚಯ

Ransomware attack

ಇತ್ತೀಚಿಗೆ ಭಾರತದ ಮೇಲಿನ ದೊಡ್ಡ ಸೈಬರ್ ದಾಳಿ ಒಂದರಲ್ಲಿ ನಮ್ಮ ದೆಹಲಿಯ AIIMS ಆಸ್ಪತ್ರೆ ಸಾಕಷ್ಟು ತೊಂದರೆ ಅನುಭವಿಸಿತು, ಪ್ರಾಥಮಿಕ ತನಿಖೆಯಿಂದ ಕಂಡುಬಂದಿದ್ದೇನೆಂದರೆ ಇದೊಂದು ಚೀನಾ ಮೂಲದ ಹ್ಯಾಕರ್ಗಳಿಂದ  ಆಯೋಜಿತವಾದ ರಾನ್ಸಮ್‌ವೇರ್ ದಾಳಿಯಾಗಿತ್ತು. ರಾನ್ಸಮ್‌ವೇರ್ ದಾಳಿಗಳು ಈ ನಡುವೆ ತುಂಬ ಜಾಸ್ತಿಯಾಗಿವೆ, ಒಂದು ಮೂಲದ ಪ್ರಕಾರ ೭೦% ಭಾರತದ ಸಂಸ್ಥೆಗಳು ಕಳೆದ ಮೂರು ವರ್ಷದಲ್ಲಿ ಈ ರಾನ್ಸಮ್‌ವೇರ್ ಸಾಫ್ಟ್ವೇರ್ ವೈರಸ್ ದಾಳಿಗೆ ತುತ್ತಾಗಿವೆ ಹಾಗು ಇದರ ಪ್ರಭಾವ ಹಾಗು ಸುಲಿಗೆಯ ಮೊತ್ತ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ. ಇನ್ನೊಂದು ವರದಿಯ ಪ್ರಕಾರ ಕಳೆದ ಎರಡು ಸಾವಿರದ ಇಪ್ಪತ್ತೆರಡನೆ ವರ್ಷದಲ್ಲೇ ಮೂರು ಸಾವಿರದ ತೊಂಬತ್ತು ಭಾರತೀಯ ಸಂಸ್ಥೆಗಳು ರಾನ್ಸಮ್‌ವೇರ್ ದಾಳಿಗೆ ಗುರಿಯಾಗಿವೆ ಮತ್ತು ನೂರೈವತ್ತು ಮಿಲಿಯನ್ ಡಾಲರಿಗಿಂತ ಹೆಚ್ಚು ಸುಲಿಗೆ ಹಣ ಕೊಟ್ಟು ಡೀಕ್ರಿಪ್ಶನ್ ಕೀಲಿಯನ್ನು ಪಡೆದಿರುತ್ತಾರೆ.

ರಾನ್ಸಮ್‌ವೇರ್ ವೈರಸ್ ದಾಳಿ ಹೇಗೆ ನಡೆಯುತ್ತದೆ :-

ರಾನ್ಸಮ್‌ವೇರ್ ಒಂದು ಥರದ ಸಾಫ್ಟ್ವೇರ್ ಪ್ರೋಗ್ರಾಮ್ ಅಥವಾ ಆಪ್ (ಮಾಲ್ವೇರ್), ಅದು ಒಂದು ಸಲ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಹೊಕ್ಕರೆ, ಆ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನಿನಲ್ಲಿ ಇರುವ ಎಲ್ಲಾ ಪತ್ರದ ಕಡತಗಳನ್ನು ಎನ್ಕ್ರಿಪ್ಟ್(ಗೂಢಲಿಪೀಕರಣ) ಮಾಡಿಬಿಡುತ್ತದೆ ಅಥವಾ ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಲಾಕ್ ಮಾಡಿಬಿಡುತ್ತದೆ. ಅದಾದಮೇಲೆ ನೀವು ಆ ಪತ್ರದ ಕಡತಗಳನ್ನು ವೀಕ್ಷಿಸಲು ಅಥವಾ ಲಾಗಿನ್ ಆಗಲು ನೀವು ಆ ಹ್ಯಾಕರ್ಸ್ಗೆ ಅವರು ತಿಳಿಸಿದ ರೀತಿಯಲ್ಲಿ ಹಣ ಕೊಡಬೇಕಾಗುತ್ತದೆ, ಇದು ಕೆಲವು ಸಾವಿರದಿಂದ ಕೆಲವು ಕೋಟಿ ರೂಪಾಯಿ ಮೊತ್ತವಾಗಿರುತ್ತದೆ ಮತ್ತು ಅದು ಬಿಟ್ ಕಾಯಿನ್ ತರಹದ ಕ್ರಿಪ್ಟೋಕರೆನ್ಸಿ ಡಿಜಿಟಲ್ ಹಣದಲ್ಲಿರುತ್ತದೆ. ನೀವು ಹಣ ಸಂದಾಯಿಸಿದರೆ ಅವರು ನಿಮಗೆ ಒಂದು ಡೀಕ್ರಿಪ್ಶನ್ ಕೀಲಿಯನ್ನು ಕೊಡುತ್ತಾರೆ, ಅದರಿಂದ ನೀವು ಪುನ: ನಿಮ್ಮ ಪತ್ರದ ಕಡತಗಳನ್ನು ವೀಕ್ಷಿಸಬಹುದು.

ನೀವು ನಿಮ್ಮ ಸಂಸ್ಥೆ ಹಾಗು ಖಾಸಗಿ ಮಾಹಿತಿಯನ್ನು ರಾನ್ಸಮ್‌ವೇರ್ ವೈರಸ್ ದಾಳಿಯಿಂದ ಕಾಪಾಡಿಕೊಳ್ಳಲು :-

ನೀವು ಅಥವಾ ನಿಮ್ಮ ಸಂಸ್ಥೆ ರಾನ್ಸಮ್‌ವೇರ್ ವೈರಸ್ ದಾಳಿಗೆ ತುತ್ತಾಗಿದ್ದರೆ :-

ಸೈಬರ್ ಕ್ರಿಮಿನಲ್ ಹೇಳಿದಂತೆ ಹಣ ಕೊಟ್ಟು ಡೀಕ್ರಿಪ್ಶನ್ ಕೀಲಿಯನ್ನು ಪಡೆಯುವುದು ಸುಲಭ ಮಾರ್ಗವಾದರೂ, ಅದು ಒಳ್ಳೆಯ ಮಾರ್ಗವಲ್ಲ ಯಾಕೆಂದರೆ ರುಚಿಕಂಡ ಕಳ್ಳರು ನಿಮ್ಮನ್ನು ಪುನಃ ಗುರಿಯಾಗಿಸಬಹುದು ಅಥವಾ ಹಣ ಪಡೆದು ಡೀಕ್ರಿಪ್ಶನ್ ಕೀಲಿಯನ್ನು ಕೊಡದಿರಬಹುದು. ಭಾರತದ CERTIN ಸಂಸ್ಥೆಯು ರಾನ್ಸಮ್‌ವೇರ್ ವೈರಸ್ ಡೇಟಾಬೇಸ್ ಕಾಪಾಡುತ್ತದೆ, ನೀವು ಅವರಿಗೆ ದೂರು ನೀಡಿ  ರಾನ್ಸಮ್‌ವೇರ್ ಹೋಗಲಾಡಿಸಲು ಅವರ ಸಹಾಯ ಪಡೆಯಬಹುದು. www.nomoreransom.org ತರಹದ ಹಲವು ವೆಬ್ಸೈಟ್ಗಳಲ್ಲಿ ನೀವು ಪರಿಹಾರಕ್ಕಾಗಿ ಪ್ರಯತ್ನಿಸಬಹುದು. ಉಳಿದ ಮಾರ್ಗವೆಂದರೆ, ನಿಮ್ಮ ಕಂಪ್ಯೂಟರನ್ನು ಅಳಿಸಿ ಅಥವಾ ನಿಮ್ಮ ಸ್ಮಾರ್ಟ್ ಫೋನನ್ನು ಫ್ಯಾಕ್ಟರಿ ರಿಸೆಟ್ ಮಾಡಿ ನಿಮ್ಮ ಎಲ್ಲಾ ಪತ್ರದ ಕಡತಗಳನ್ನು ನಿಮ್ಮ ಇತ್ತೀಚಿನ ಬ್ಯಾಕಪ್ನಿಂದ ಓದುವ ಸ್ಥಿತಿಗೆ(ರಿಸ್ಟೋರ್) ತರುವುದು, ಯಾವ ವಿಷಯ ಅಥವಾ ಕಡತ ಬ್ಯಾಕಪ್ ಆಗಿಲ್ಲವೋ ಅದನ್ನು ಮಾತ್ರ ಕಳೆದುಕೊಳ್ಳುತೀರಿ.  

7 ನಿಮಿಷಗಳಲ್ಲಿ RANSOMWARE – ಅದು ಏನು, ಹೇಗೆ ಕಾರ್ಯನಿರ್ವಹಿಸುತ್ತದೆ, ಮುನ್ನೆಚ್ಚರಿಕೆಗಳು ಮತ್ತು ಮುಂದಿನ ಕ್ರಮಗಳು

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Exit mobile version