Site icon

ಸೋಶಿಯಲ್ ಇಂಜಿನಿಯರಿಂಗ್ ಕ್ರೈಂಗೆ ಬಲಿಯಾಗದಿರಿ ನೀವು. ಹುಷಾರ್ !!!

Social Engineering cyber crime

ಸೋಶಿಯಲ್ ಇಂಜಿನಿಯರಿಂಗ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ, ಇತ್ತೀಚೆಗೆ ಆನ್ಲೈನ್ನಲ್ಲಿ ನಿಮ್ಮ ವಿಶ್ವಾಸಗಳಿಸಿ ಮೋಸ ಮಾಡುವುದು ತುಂಬ ಜಾಸ್ತಿಯಾಗಿದೆ. ಉದಾಹರಣೆಗೆ ಮುಂಬೈನ ಬಹುರಾಷ್ಟ್ರೀಯ ಸಂಸ್ಥೆಯ ವೈಸ್ ಪ್ರೆಸಿಡೆಂಟ್ ಒಬ್ಬ ಹಾಗೆ ಸೋಷಿಯಲ್ ಮೀಡಿಯಾನಲ್ಲಿ ಪರಿಚಿತಳಾದ ಮಹಿಳೆಯ ಮಾತಿಗೆ ಮರುಳಾಗಿ ಹೆಚ್ಚಿನ ಲಾಭದಾಸೆಯಿಂದ ಹನ್ನೆರಡು ಲಕ್ಷ ರೂಪಾಯಿಯನ್ನು ಕಳೆದುಕೊಂಡನು. ಇನ್ನೊಂದು ಸುದ್ದಿಯಂತೆ ನಿವೃತ್ತ ಬ್ಯಾಂಕ್ ನೌಕರರೊಬ್ಬಳು ತನ್ನ ಬ್ಯಾಂಕಿಗೆ ಆನ್ಲೈನ್ ಕಂಪ್ಲೇಂಟ್ ಕೊಡಲು ಗೂಗಲ್ ಸರ್ಚ್ ಮುಖಾಂತರ ಬ್ಯಾಂಕ್ ವೆಬ್ಸೈಟ್ ಲಿಂಕ್ ಪಡೆದಳು, ಅದು ನಕಲಿ ವೆಬ್ಸೈಟ್ ಆಗಿದ್ದು ಮತ್ತು ಅದರಲ್ಲಿ ಕೊಟ್ಟ ಮಾಹಿತಿಯಿಂದ ಹತ್ತು ಲಕ್ಷ ರೂಪಾಯಿಗಳನ್ನು ಕಳೆದುಕೊಂಡಳು. ಇನ್ನೊಂದು ಸುದ್ದಿಯ ಪ್ರಕಾರ ಮುಂಬೈ ಉದ್ಯಮಿಯೊಬ್ಬ ಕೊಚ್ಚಿ ವಿಮಾನ ನಿಲ್ದಾಣದಿಂದ ಹೋಟೆಲಿಗೆ ಟ್ಯಾಕ್ಸಿ ಮುಂಚಿತವಾಗಿ ಕಾದಿರಿಸಲು ಗೂಗಲ್ ಸರ್ಚ್ ಮುಖಾಂತರ ದೊರೆತ ಟ್ಯಾಕ್ಸಿ ವೆಬ್ಸೈಟ್ನಲ್ಲಿ ತನ್ನ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಒದಗಿಸಿದ ಎರಡು ನಿಮಿಷದಲ್ಲೇ ಅಡ್ವಾನ್ಸ್ ನೂರು ರೂಪಾಯಿ ಬದಲು ಒಂದೂವರೆ ಲಕ್ಷ ರೂಪಾಯಿಗಳ ಕಡಿತವಾಯಿತು. ಈ ಮೇಲೆ ಉದ್ದರಿಸಿರುವ ಮೂರು ಪ್ರಕರಣಗಳು ಸೋಶಿಯಲ್(ಸಾಮಾಜಿಕ) ಇಂಜಿನಿಯರಿಂಗ್ ಎಂಬ ಸೈಬರ್ ಕ್ರೈಂ ಮಾದರಿಗಳು. ಇಲ್ಲಿ ಮನುಷ್ಯನ ದುರಾಸೆ, ಕುತೂಹಲ, ಸೋಮಾರಿತನ, ಮೂರ್ಖತನ, ಅಹಂಕಾರ ಅಥವಾ ಮುಗ್ಧತೆಯನ್ನೇ ಬಂಡವಾಳವನ್ನಾಗಿ ಉಪಯೋಗಿಸಿ ಆನ್ಲೈನ್(ಇಮೇಲ್, sms, ವಾಟ್ಸಾಪ್ಪ್ ಅಥವಾ ಸೋಶಿಯಲ್ ಮೀಡಿಯಾ)   ಅಥವಾ  ದೂರವಾಣಿ ಮಾಧ್ಯಮದ ಮುಖಾಂತರ ವಂಚನೆಯನ್ನು ಮಾಡುತ್ತಾರೆ, ಹಾಗು ಒಂದು ವರದಿಯ ಪ್ರಕಾರ ಶೇಕಡಾ ಏಪತೈದು ಪ್ರತಿಶತ ಸೈಬರ್ ಕ್ರೈಂಗಳು ಸೋಶಿಯಲ್ ಇಂಜಿನಿಯರಿಂಗ್ ಪದ್ದತಿಯನ್ನೇ ಬಳಸುತ್ತವೆ. ಇಲ್ಲಿ ಒಬ್ಬ ವ್ಯಕ್ತಿಯನ್ನೋ(ಪಿಂಚಣಿ ಅಥವಾ  ಹಣವನ್ನು ನಿರೀಕ್ಷಿಸುತಿರುವ ವಯೋವೃದ್ದ) ಅಥವಾ ಒಂದು ಪ್ರಸ್ತುತ ಸುದ್ದಿಯನ್ನೋ(4G ಇಂದ  5Gಗೆ ನವೀಕರಣ)  ಅಥವಾ ಒಂದು ಅವಶ್ಯಕತೆಯನ್ನೋ(KYC ನವೀಕರಣ) ಕೆಂದ್ರವನ್ನಾಗಿಸಿ ಕಳ್ಳರು ತಮ್ಮ ಬಲೆಯನ್ನು ಬೀಸುತಾರೆ.  

ಸೋಶಿಯಲ್ ಇಂಜಿನಿಯರಿಂಗ್ ಕ್ರೈಂ ಹೇಗೆ ನಡೆಯುತದೆ :– 

ಸೋಶಿಯಲ್ ಇಂಜಿನಿಯರಿಂಗ್ ಪದ್ದತಿಯಲ್ಲಿ ಕಳ್ಳರು ಮೊದಲು ಬಲಿಪಶು ವ್ಯಕ್ತಿಯ ವಿವರ ತಿಳಿದು ಭರವಸೆ ಪಡೆಯುವುದಕ್ಕೆ ಪ್ರಯತ್ನಪಡುತ್ತಾರೆ, ಅದಕ್ಕೆ ಅಸಲು ವೆಬ್ಸೈಟ್ ಮಾದರಿಯಲ್ಲೇ ತಮ್ಮ ವೆಬ್ಸೈಟನ್ನು ತಯಾರಿಸುತ್ತಾರೆ ಅಥವಾ ಬಲಿಪಶು ವ್ಯಕ್ತಿಯೊಂದಿಗೆ ಸ್ನೇಹದಿಂದ ಬಹು ಬಾರಿ ವ್ಯವಹರಿಸುತ್ತಾನೆ, ಒಂದು ಸಾರಿ ಅವನ ನಂಬಿಕೆಗಳಿಸಿದ ಮೇಲೆ ತನ್ನ ವಂಚನೆಯ ಕೆಲಸ ಶುರು ಮಾಡುತ್ತಾನೆ ಅಥವಾ ಕಳ್ಳ ಬಲಿಪಶು ವ್ಯಕ್ತಿಯ ಬಗ್ಗೆ ಆಳವಾದ ಅಧ್ಯಯನ  ಮಾಡಿ ಅವನ ಅವಶ್ಯಕತೆ, ಸಂಕಟ ಅಥವಾ ಆಸೆಯ ಬಗ್ಗೆ ತಿಳಿದುಕೊಳ್ಳುತ್ತಾನೆ ಮತ್ತು ಅದನ್ನು ಮೋಸ ಮಾಡಲು ದಾಳವಾಗಿ ಉಪಯೋಗಿಸುತ್ತಾನೆ ಅಥವಾ ಕಳ್ಳ ಸರಕಾರೀ ಸಂಸ್ಥೆಯಂತೆ ಅಥವಾ ಗೆಳೆಯ ಅಥವಾ ಕುಟುಂಬದ ವ್ಯಕ್ತಿಯಂತೆ ಒಂದು ಪ್ರಸ್ತುತ ವಿಷಯದ ಬಗ್ಗೆ ಸಾಮಾನ್ಯ ಜನರಿಗೆ ಇಮೇಲ್, ವಾಟ್ಸಾಪ್ ಅಥವಾ sms ಮೂಲಕ ತಿಳಿಸುತ್ತಾ ಒಂದು ಮೋಸದ ಹೈಪರ್ ಲಿಂಕ್ ಕಳಿಸುತ್ತಾರೆ, ಅದರಲ್ಲಿ ಮಾಲ್ವೇರ್ ಮುಖಾಂತರ ಅಥವಾ ದೊರೆತ ಮಾಹಿತಿಯಿಂದ ಮೋಸ ಮಾಡುತ್ತಾನೆ ಅಥವಾ ಲಿಂಕಿನಲ್ಲಿ UPIನ ಪೇಮೆಂಟ್ ಲಿಂಕನ್ನು ಹುದಿಗಿಸಿರುತ್ತಾನೆ. ಬಲಿಪಶು ವ್ಯಕ್ತಿಯು ಲಿಂಕನ್ನು ಒತ್ತಿದಾಗ ಕಳ್ಳನ ಮೋಸದ ಕ್ರಿಯೆ ಚಾಲನೆಗೆ ಬರುತ್ತದೆ.

ಸಾಮಾನ್ಯ ಜನರು ಹಾಗು ಸಂಸ್ಥೆಗಳು ಸೋಶಿಯಲ್ ಇಂಜಿನಿಯರಿಂಗ್ ಸೈಬರ್ ಕ್ರೈಂನಿಂದ ತಮ್ಮನ್ನು ರಕ್ಷಿಸಿಕೊಳ್ಳಲು :-

೧. ಯಾವುದೇ ಸಂಶಯಾಸ್ಪದವಾದ ಅಥವಾ ನಂಬಲಾಗದ ಇಮೇಲ್ ಅಥವಾ sms ಮೆಸೇಜನ್ನು ತೆರೆಯದೆ ನಷ್ಟಗೊಳಿಸಿರಿ, ಅಂತಹ ಮೆಸೇಜಿನಲ್ಲಿರುವ ಯಾವುದೇ ಹೈಪರ್-ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.

೨. ನಿಮ್ಮ ಬ್ಯಾಂಕ್ , ಇಮೇಲ್ ಮತ್ತಿತರ ಮುಖ್ಯ ವೆಬ್ಸೈಟುಗಳಲ್ಲಿ ಡಬಲ್ ಫ್ಯಾಕ್ಟರ್ ಆಥೆಂಟಿಕೇಷನ್ ಇದ್ದರೆ ತಕ್ಷಣ ಅದನ್ನು ಅಳವಡಿಸಿ.

೩. ನಿಮ್ಮ ಯೂಸೆರ್ ಐಡಿ, ಪಾಸ್ವರ್ಡ್, ಒಟಿಪಿ ಮತ್ತಿತರ ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

೪. ಬ್ಯಾಂಕಿಂಗ್ ಹಾಗು ಪೇಮೆಂಟ್ ವೆಬ್ಸೈಟ್ಗಳು ಸೆಕ್ಯೂರ್(ಬ್ರೌಸರ್ರ್ನಲ್ಲಿ https ಯಿಂದ ಶುರುವಾಗ್ತಾ ಇದೆಯ ಅಥವಾ ಬೀಗ ಮುದ್ರೆ)  ಇದೆಯ ಎಂದು ಪರೀಕ್ಷಿಸಿ.

೫. ಯಾವುದಾದರು ಅವಕಾಶ ನಂಬಲಾಗದಷ್ಟು ಚೆನ್ನಾಗಿದ್ದರೆ ಅದನ್ನು ಖಂಡಿತಾ ನಂಬಬೇಡಿ.

೬. ನಿಮಗೆ ಕರೆ ಅಥವಾ ಮೆಸೇಜ್ ಬಂದರೆ ಅದು ಅಧಿಕೃತ ಅಥವಾ ನಂಬಲರ್ಹ ಮೂಲ ಅಥವಾ ವ್ಯಕ್ತಿಯಿಂದ ಬಂದಿದೆಯೆಂದು ದೃಡಪಡಿಸಿಕೊಂಡ ನೊಂತರವೇ ಅದನ್ನು ತೆರೆಯಿರಿ.

ನೀವು ಸೋಶಿಯಲ್ ಇಂಜಿನಿಯರಿಂಗ್ ಕ್ರೈಂ ವಂಚನೆಗೆ ಒಳಗಾಗಿದ್ದರೆ:-

ವಂಚನೆ ತಿಳಿದ ತಕ್ಷಣ ೧೯೩೦ ಸೈಬರ್ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ಅಥವಾ cybercrime.gov.in ಜಾಲತಾಣದಲ್ಲಿ ದೂರನ್ನು ದಾಖಲಿಸಿ, ಹಾಗು ನಿಮ್ಮ ಬ್ಯಾಂಕ್ ಸಹಾಯವಾಣಿ ಸಂಖ್ಯೆಗೆ ಕರೆಮಾಡಿ ವಂಚೆನೆಯಲ್ಲಿ ಉಪಯೋಗಿಸಿದ ನಿಮ್ಮ ಅಕೌಂಟನ್ನು, ಡೆಬಿಟ್ ಕಾರ್ಡನ್ನು , ಕ್ರೆಡಿಟ್ ಕಾರ್ಡನ್ನು ಕೂಡಲೇ ಪ್ರತಿಬಂಧಿಸಿ ಹಾಗು ಕೂಡಲೇ ಸಂಭಂದಿತ ಅಕೌಂಟುಗಳ ಪಾಸ್ವರ್ಡ್ ಬದಲಾಯಿಸಿ. 

ಈ ಅಂಕಣ ನಿಮಗೆ ಉಪಯುಕ್ತವೆನ್ನಿಸಿದ್ದರೆ ಇದನ್ನು ನಿಮ್ಮ ಕುಟುಂಬ ಮತ್ತು ಗೆಳೆಯರೊಂದಿಗೇ ಈ ಅಂಕಣವನ್ನೋ ಅಥವಾ ಪೋಸ್ಟರನ್ನೋ ಅಥವಾ ಯೌಟ್ಯೂಬ್ ವೀಡಿಯೋವನ್ನೂ ಹಂಚಿಕೊಳ್ಳಿ.
ಈ ಅಂಕಣದ ಬಗ್ಗೆ ನಿಮ್ಮ ಅನಿಸಿಕೆಯನ್ನು, ಅಭಿಪ್ರಾಯವನ್ನು ಮತ್ತು ನಿಮಗಾದ ಏನಾದರೂ ಇದೆ ತರಹದ ಅನುಭವಗಳನ್ನು ಅಥವಾ ನಿಮಗೆ ಬೇಕಾದ ಯಾವುದಾದರು ವಿಷ್ಯದ ಬಗ್ಗೇ ನಾನು ಬರೆಯ ಬೇಕೆಂದರೆ ಕೆಳಗಿನ ಕಮೆಂಟ್ ಸೆಕ್ಷನ್ ನಲ್ಲಿ ಹಂಚಿಕೊಳ್ಳಿ.

Exit mobile version